ಈ ರಾಶಿಯವರು ತಮ್ಮ ವೃತ್ತಿಜೀವನದಲ್ಲಿ ದೊಡ್ಡ ಅವಕಾಶಗಳನ್ನು ಪಡೆಯಬಹುದು
ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಶಿಶಿರ ಋತುವಿನ ಚೈತ್ರ ಮಾಸ ಶುಕ್ಲ ಪಕ್ಷದ ದ್ವಿತೀಯಾ ತಿಥಿ, ಸೋಮವಾರ ನಿಷ್ಪಕ್ಷಪಾತ ಮಾತು, ಶತ್ರುಗಳಿಂದ ಜಯ, ಸ್ಪರ್ಧೆಯಲ್ಲಿ ತೊಡಗುವಿಕೆ, ಅಪಾಯದ ಸೂಚನೆ ಇವೆಲ್ಲ ಈ ದಿನದ ವಿಶೇಷ. ನೂತನ ವರ್ಷದ ಮೊದಲ ದಿನದ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ವಸಂತ, ಸೌರ ಮಾಸ : ಮೀನ ಮಾಸ, ಮಹಾನಕ್ಷತ್ರ : ಉತ್ತರಾಭಾದ್ರ, ಮಾಸ : ಚೈತ್ರ, ಪಕ್ಷ : ಶುಕ್ಲ, ವಾರ : ಸೋಮ, ತಿಥಿ : ದ್ವಿತೀಯಾ / ತೃತೀಯಾ, ನಿತ್ಯನಕ್ಷತ್ರ : ಅಶ್ವಿನೀ, ಯೋಗ : ವೈಧೃತಿ, ಕರಣ : ಬವ, ಸೂರ್ಯೋದಯ – 06:30 am, ಸೂರ್ಯಾಸ್ತ – 06:43 pm, ಇಂದಿನ ಶುಭಾಶುಭಕಾಲ : ರಾಹು ಕಾಲ 08:02 – 09:33, ಯಮಘಂಡ ಕಾಲ 11:05 – 12:37, ಗುಳಿಕ ಕಾಲ 14:09 – 15:40
ಮೇಷ ರಾಶಿ: ಇನ್ನೊಬ್ಬರ ತಪ್ಪು ನಿಮ್ಮ ಮೇಲೆ ಬರಬಹುದು ಅಥವಾ ತಪ್ಪು ತಿಳಿವಳಿಕೆಯಿಂದಲೂ ಇದು ಸಾಧ್ಯವಾದೀತು. ಇಂದು ನಿಮ್ಮ ವ್ಯಾಪಾರದಿಂದ ಖ್ಯಾತಿಯು ಹೆಚ್ಚಾಗಬಹುದು. ಧಾರ್ಮಿಕ ವಿಚಾರವನ್ನು ತಿಳಿಯುವ ಆಸಕ್ತಿ ಹೆಚ್ಚಾಗುವುದು. ಸ್ನೇಹಿತರ ಜೊತೆ ಮಸ್ತಿಯಿಂದ ಸಮಯವನ್ನು ಕಳೆಯುವಿರಿ. ನಿಮ್ಮ ನಡವಳಿಕೆಯು ನಿಮ್ಮನ್ನು ಉನ್ನತ ಸ್ಥಾನಕ್ಕೆ ಕರೆದೊಯ್ಯುವುದು. ಕಛೇರಿಯ ಕೆಲಸಗಳನ್ನು ಯಾವುದೇ ನಿರ್ಬಂಧವಿಲ್ಲದೇ ಮಾಡುವಿರಿ. ಹೂಡಿಕೆಯ ವಿಚಾರವಾಗಿ ಚರ್ಚಿಸುವಿರಿ. ಹಳೆಯ ಪ್ರೇಮಿಗಳ ಅನಿರೀಕ್ಷಿತ ಭೇಟಿ, ಮನದೊಳಗೆ ಆನಂದ. ಸಹಾಯ ಮಾಡಲು ಹೋಗಿ ತೊಂದರೆಯಲ್ಲಿ ಸಿಕ್ಕಿಕೊಳ್ಳುವಿರಿ. ಕೆಲವು ಅಪರಿಪೂರ್ಣವಾದ ಕಾರ್ಯವನ್ನು ಮಾಡಿ ಮುಗಿಸುವಿರಿ. ಹಳೆಯ ಗೃಹದ ಖರೀದಿಯ ಬಗ್ಗೆ ಮಾತುಕತೆ ಬೇಡ. ಯಾವ ವಸ್ತುವನ್ನೂ ಒತ್ತಾಯದಿಂದ ಪಡೆಯಬೇಡಿ. ನಿಮ್ಮ ವೃತ್ತಿಜೀವನದಲ್ಲಿ ದೊಡ್ಡ ಅವಕಾಶಗಳನ್ನು ಪಡೆಯಬಹುದು. ಜಾಣ್ಮೆಯ ವ್ಯವಹಾರದಿಂದ ಇಂದು ವ್ಯಾಪಾರದಲ್ಲಿ ಲಾಭ ಪಡೆಯುವಿರಿ. ಅನಿರೀಕ್ಷಿತವಾಗಿ ಸಿಕ್ಕ ಸಂಪತ್ತನ್ನು ಯಾರಿಗಾದರೂ ಕೊಡುವಿರಿ. ದುರ್ವ್ಯಸನವು ನಿಮ್ಮನ್ನು ಅಂಟಿಕೊಳ್ಳಬಹುದು.
ವೃಷಭ ರಾಶಿ: ನಿಮ್ಮ ಖಾಸಗಿ ವಿಚಾರಗಳು ಊಹಾಪೋಹದಿಂದ ಎಲ್ಲೆಡೆ ಹರಡುವುದು. ಇಂದು ಯಾವುದೇ ಕಾರ್ಯದಲ್ಲಿ ನಿರತರಾಗಿದ್ದರೂ, ನಿಮ್ಮ ಮನಸ್ಸು ಮರ್ಯಾವುದರಮೇಲೋ ಇರಬಹುದು. ಯಾರೊಂದಿಗೂ ಅನಗತ್ಯ ವಿಚಾರಗಳನ್ನು ಚರ್ಚಿಸಬೇಡಿ. ಇತರರ ಕೆಲಸದಲ್ಲಿ ಹಸ್ತಕ್ಷೇಪ ಮಾಡುವುದು ಬೇಡ. ವೈವಾಹಿಕ ಸುಖವು ಕ್ಷೀಣಿಸಬಹುದು. ದಾಂಪತ್ಯದಲ್ಲಿ ಸ್ವಪ್ರತಿಷ್ಠೆಯು ಕಾಣಿಸಿಕೊಳ್ಳಬಹುದು. ಬಂಧುಗಳು ನಿಮ್ಮ ಕಷ್ಟಕ್ಕೆ ನೆರವಾಗುವರು. ಹೊಸ ಪರಿಚಯದಲ್ಲಿ ಆತ್ಮೀಯತೆ ಬೆಳೆಯುವುದು. ಅತಿಯಾದ ಆಸೆಯಿಂದಾಗಿ ದುಃಖಿಸಬೇಕಾದೀತು. ವಿದ್ಯಾರ್ಥಿಗಳು ಶುಭ ಫಲಿತಾಂಶದಿಂದ ಸಂತೋಷಗೊಳ್ಳುವರು. ಬಂಧುಗಳ ವಿಯೋಗದಿಂದ ಇಂದು ಕಷ್ಟವಾಗಲಿದೆ. ಉದ್ಯೋಗದಲ್ಲಿ ಸಿಗುವ ಉನ್ನತ ಸ್ಥಾನಮಾನವನ್ನು ನಿರ್ವಹಣೆ ಸಾಧ್ಯವಾಗದೇ ನಿರಾಕರಿಸುವಿರಿ.. ನಿಮ್ಮ ಅಪೂರ್ಣ ಕಾರ್ಯಗಳನ್ನು ಇಂದು ಪೂರ್ಣಮಾಡಿಕೊಳ್ಳುವಿರಿ. ಪೂರ್ವಪುಣ್ಯವು ನಿಮ್ಮನ್ನು ಕಾಪಾಡಲಿದೆ.
ಮಿಥುನ ರಾಶಿ: ಇಂದಿನ ನಿಮ್ಮ ಮನೆ ಕೆಲಸದಲ್ಲಿ ವೇಗವು ಅಧಿಕವಾಗಿದ್ದು, ಕೆಲವನ್ನು ಪುನಃ ಮಾಡಬೇಕಾಗುವುದು. ಧಾರ್ಮಿಕ ಆಚರಣೆಯು ನಿಮಗೆ ಬಾಲಿಶ ಎನಿಸಬಹುದು. ಉನ್ನತ ಶಿಕ್ಷಣದಲ್ಲಿ ಸಾಧನೆ ಮಾಡುವಿರಿ. ಉದ್ಯಮವನ್ನು ಚುರುಕುಗೊಳಿಸುವ ಅಗತ್ಯವಿದೆ. ನಿಮ್ಮ ವ್ಯಕ್ತಿತ್ವ ಮತ್ತು ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಕಿವಿಯಲ್ಲಿ ದೋಷ ಕಾಣಿಸುವುದು. ಆದಾಯದ ಮೂಲಗಳೂ ಬಲಗೊಳ್ಳುತ್ತವೆ. ಇಂದು ನೀವು ಅನುಭವಸ್ಥರ ಮಾರ್ಗದರ್ಶನವನ್ನು ತೆಗೆದುಕೊಳ್ಳಬೇಕು. ನಿಮ್ಮ ಉತ್ಸಾಹಕ್ಕೆ ಹಲವರು ನೀರೆರಚುವರು. ವೈವಾಹಿಕ ಜೀವನದ ಬಗ್ಗೆ ಮಾತನಾಡುತ್ತಾ ಹಳೆಯದನ್ನು ನೆನಪಿಸಿಕೊಳ್ಳುವಿರಿ. ಶಿಸ್ತಿಗೆ ಹೆಚ್ಚು ಗಮನವನ್ನು ಇಂದು ಕೊಡುವಿರಿ. ನಿಮ್ಮ ಪ್ರೇಮಪ್ರಕರಣವು ದುಃಖಾಂತವಾಗಲಿದೆ. ಸೃಜನಾತ್ಮಕ ಕೆಲಸದಿಂದ ಹೆಚ್ಚಿನ ಯಶಸ್ಸನ್ನು ಸಾಧಿಸುವಿರಿ. ಸಂಗಾತಿಗಳಿಬ್ಬರೂ ದೂರಾಗುವ ಯೋಚನೆ ಮಾಡಬಹುದು. ನಿಮ್ಮ ಮಾತು ನಿಷ್ಪಕ್ಷಪಾತದಿಂದ ಇರಲಿ.
ಕರ್ಕಾಟಕ ರಾಶಿ: ಮನೆಗೆ ಬಂದವರನ್ನು ಖಾಲಿ ಕೈಯಲ್ಲಿ ಕಳುಹಿಸಲಾರಿರಿ. ಇಂದು ಪ್ರಯಾಣವು ಕಾರ್ಯಸಿದ್ಧಿಗೆ ಪೂರಕವಾದೀತು. ನಿಮ್ಮ ನಿರ್ಧಾರಗಳು ಇತರರಿಗೆ ಒಪ್ಪಿಗೆಯಾಗದೇ ಹೋಗಬಹುದು. ಮಕ್ಕಳ ಶಿಕ್ಷಣಕ್ಕಾಗಿ ಹಣವನ್ನು ಹೊಂದಿಸಬೇಕಾದೀತು. ಮಾರಾಟದ ಬಗ್ಗೆ ಯೋಜನೆಯನ್ನು ಮಾಡುವಿರಿ, ಆದ್ದರಿಂದ ಇಂದು ಅದು ಫಲಪ್ರದವಾಗುವ ಸಮಯ ಬಂದಿದೆ. ಸಾಲ ಕೊಟ್ಟವರ ಮಾತಿನಿಂದ ಇಂದು ನೆಮ್ಮದಿ ಹಾಳಾಗುವುದು. ನಿಮ್ಮ ತಪ್ಪನ್ನು ಎಲ್ಲರೆದು ಒಪ್ಪಿಕೊಳ್ಳಲು ಆಗದು. ಅಧಿಕ ಆಸ್ತಿಯೇ ನಿಮಗೆ ತೊಂದರೆಯನ್ನು ಉಂಟುಮಾಡಬಹುದು. ಕಠಿಣ ಪರಿಶ್ರಮಕ್ಕೆ ಅನುಗುಣವಾಗಿ ನೀವು ಸರಿಯಾದ ಫಲಿತಾಂಶಗಳನ್ನು ಪಡೆಯಲಿದ್ದೀರಿ. ನೀವು ಹೂಡಿಕೆಯಿಂದ ಆರ್ಥಿಕವಾಗಿ ಬಲವುಳ್ಳವರಾಗಲು ಯೋಚಿಸುವಿರಿ. ಪ್ರೇಮ ಜೀವನದಲ್ಲಿ ಪ್ರೀತಿ ಹೆಚ್ಚಾಗಿ ಉತ್ಸಾಹದಿಂದ ಇರುವಿರಿ. ನಿಮ್ಮ ತಪ್ಪಿಗೆ ಕ್ಷಮೆ ಕೇಳುವವರೆಗೂ ಪರಿಚಿತರು ನಿಮ್ಮನ್ನು ಬಿಡಲಾರರು. ನೀವು ಹೊಸ ವಾಹನವನ್ನು ಸ್ನೇಹಿತರ ಒತ್ತಾಯಕ್ಕೆ ಖರೀದಿ ಮಾಡುವಿರಿ. ಒಂದೇ ತರದ ಜೀವನವು ನಿಮಗೆ ಬೇಸರವಾಗುವುದು.
ಸಿಂಹ ರಾಶಿ: ಆಸ್ತಿಯ ವಿಚಾರವಾಗಿ ಮಕ್ಕಳ ಜೊತೆ ವಿವಾದ. ಇಂದು ನಿಮ್ಮ ಪ್ರೇಮಿಯನ್ನು ವಿವಾಹವಾಗಲು ಕುಟುಂಬದಿಂದ ಒಪ್ಪಿಗೆ ಸಿಗಬಹುದು. ನಿಮ್ಮ ವಿರೋಧಿಗಳು ನಿಮ್ಮ ಸಾಹಸವನ್ನು ಮೆಚ್ಚಬಹುದು. ನಕಾರಾತ್ಮಕ ಆಲೋಚನೆಗಳು ನಿಮ್ಮನ್ನು ಆಳಲು ಬಿಡಬೇಡಿ. ಗೊತ್ತಿಲ್ಲದೆಯೇ ನಿಮ್ಮಿಂದ ಹಸಿದವರಿಗೆ ಆಹಾರ ಸಿಗಲಿದೆ. ಈ ಸಮಯದಲ್ಲಿ ಮಾಡಿದ ಕಠಿಣ ಕೆಲಸವು ಮುಂದಿನ ದಿನಗಳಲ್ಲಿ ಖಚಿತವಾದ ಫಲಿತಾಂಶವನ್ನು ನೀಡಲಿದೆ. ಇಂದು ಕೆಲವು ಕೆಲಸಗಳಲ್ಲಿ ಅನಿರೀಕ್ಷಿತ ಲಾಭದ ಪರಿಸ್ಥಿತಿ ಇದೆ. ನೀವು ಇಂದು ನಿಮ್ಮ ಕುಟುಂಬದ ಜೊತೆ ಸಮಯ ಕಳೆಯಬೇಕು ಎಂದುಕೊಂಡವರು. ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಲು, ಅವರ ಸಾಧನೆಗಾಗಿ ಸಮ್ಮಾನಿಸಬಹುದು. ಒಳ್ಳೆಯ ಸಂಗಾತಿಯನ್ನು ತಪ್ಪಾಗಿ ಭಾವಿಸಿ. ತೆಗಳಿಕೆಗಳನ್ನು ನೀವು ಸಕಾರಾತ್ಮಕವಾಗಿ ಸ್ವೀಕರಿಸಿ. ಸಂಗಾತಿಯ ಮಾತನ್ನು ನಿರ್ಲಕ್ಷಿಸಿದ ಕಾರಣ ಸಿಟ್ಟಾಗಬಹುದು. ಆದಾಯದ ಮೂಲಗಳ ಸಂಖ್ಯೆ ಹೆಚ್ಚುಮಾಡಿಕೊಳ್ಳುವಿರಿ. ಬಹಳ ದಿನಗಳಿಂದ ಮರೆತುಹೋಗಿದ್ದ ಸಂಗತಿಯನ್ನು ಯಾರಾದರೂ ನೆನಪಿಸುವರು.
ಕನ್ಯಾ ರಾಶಿ: ನಿರೀಕ್ಷಿತ ಜನರಿಂದ ಯಾವುದೇ ರೀತಿಯ ಲಾಭವಾಗದು. ಈ ದಿನದ ಆರಂಭವು ನಿಮಗೆ ನಕಾರತ್ಮಕ ಮಾತಿನಿಂದ ಅಸರಂಭವಾಗಬಹುದು. ಇಂದು ಯಾವುದಾದರೂ ಪ್ರಮುಖ ಕೆಲಸದಲ್ಲಿ ನಿಮ್ಮನ್ನು ತೊಡಗಿಸಿಕೊಂಡು ನಿಶ್ಚಿಂತರಾಗಿ. ನಿಮ್ಮ ಪ್ರಮುಖ ಕೆಲಸಕ್ಕೆ ಸಂಬಂಧಿಸಿದ ರೂಪರೇಖೆಯನ್ನು ಮಾಡಿ. ಮಾತನ್ನು ಕಡಿಮೆ ಮಾಡಿ ಕಾರ್ಯದಲ್ಲಿ ತೋರಿಸಿ. ಅನಪೇಕ್ಷಿತ ವಿಚಾರದ ಬಗ್ಗೆ ಚರ್ಚೆ ಬೇಡ. ನಿಮ್ಮಲ್ಲಿ ಇರುವುದನ್ನು ಹಂಚಿ ಸ್ವೀಕರಿಸಿ. ಸುಮ್ಮನೇ ಸಮಯವನ್ನು ಹಾಳು ಮಾಡಿಕೊಳ್ಳುವಿರಿ. ಉದ್ಯಮದಲ್ಲಿ ಕಡಿಮೆ ಲಾಭವು ಸಮಾಧಾನ ತರದು. ಉದ್ಯೋಗದಲ್ಲಿ ಒತ್ತಡವನ್ನು ನಿಭಾಯಿಸಲು ಒದ್ದಾಡುವಿರಿ. ಯುವಕರು ತಮ್ಮ ಮನಸ್ಸಿಗೆ ಅನುಸಾರವಾಗಿ ಕೆಲವು ರೀತಿಯ ಕೆಲಸವನ್ನು ಮಾಡುವುದರಿಂದ ಪರಿಹಾರವನ್ನು ಪಡೆಯುತ್ತಾರೆ. ಪರೀಕ್ಷೆಯ ಭೀತಿಯಿಂದ ಹೊರಬರುವಿರಿ. ಇತರರ ಬಗ್ಗೆ ಅಸ್ವಾಭಾವಿಕ ಆಲೋಚನೆ ಮಾಡುವುದನ್ನು ಬಿಡಿ. ತಂದೆಯ ಜೊತೆ ಹಣಕಾಸಿನ ವಿಚಾರಕ್ಕೆ ಜಗಳವಾಗಬಹುದು. ಕೋಪದಿಂದ ಶಾಂತವಾಗಲು ಹಲವಾರು ದಾರಿಗಳನ್ನು ಕಂಡುಕೊಳ್ಳುವಿರಿ. ಸ್ತ್ರೀಯರನ್ನು ಅಪರಿಚಿತರು ಕಾಡಬಹುದು.