IPL 2025: ವಾರೆ ವ್ಹಾ, ವಾಟ್ ಎ ಕ್ಯಾಚ್..! ಡೆಲ್ಲಿ ಫಿಲ್ಡರ್ಗೆ ಹೊಡಿರಿ ಚಪ್ಪಾಳೆ; ವಿಡಿಯೋ ನೋಡಿ
IPL 2025: ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಐಪಿಎಲ್ ಪಂದ್ಯದಲ್ಲಿ, ಹೈದರಾಬಾದ್ ತಂಡ 163 ರನ್‌ಗಳಿಗೆ ಆಲೌಟ್ ಆಯಿತು. ಅನಿಕೇತ್ ವರ್ಮಾ 74 ರನ್ ಗಳಿಸಿದರೂ, ಉಳಿದ ಆಟಗಾರರ ಪ್ರದರ್ಶನ ನಿರಾಶಾದಾಯಕವಾಗಿತ್ತು. ಜ್ಯಾಕ್ ಫ್ರೇಸರ್ ಮೆಕ್‌ಗರ್ಕ್ ಅನಿಕೇತ್ ಅವರ ಕ್ಯಾಚ್ ಹಿಡಿದು ಅನಿಕೇತ್ ಅವರ ಸ್ಫೋಟಕ ಇನ್ನಿಂಗ್ಸ್ಗೆ ಅಂತ್ಯ ಹಾಡಿದರು. ಕುಲ್ದೀಪ್ ಯಾದವ್ ಅನಿಕೇತ್ ಅವರನ್ನು ಔಟ್ ಮಾಡಿದ್ದು ಪಂದ್ಯಕ್ಕೆ ಮಹತ್ವದ ತಿರುವು ನೀಡಿತು.
ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವೆ ನಡೆಯುತ್ತಿರುವ ಐಪಿಎಲ್ 10ನೇ ಪಂದ್ಯದಲ್ಲಿ ಹೈದರಾಬಾದ್ ತಂಡ ಕೇವಲ 163 ರನ್‌ಗಳಿಗೆ ಆಲೌಟ್ ಆಗಿದೆ. ತಂಡದ ಪರ ಅನಿಕೇತ್ ವರ್ಮಾ 74 ರನ್ ಬಾರಿಸಿದನ್ನು ಬಿಟ್ಟರೆ ಉಳಿದ ಯಾರಿಂದಲೂ ಹೇಳಿಕೊಳ್ಳುವಂತಹ ಪ್ರದರ್ಶನ ಬರಲಿಲ್ಲ. ಆದಾಗ್ಯೂ ಜ್ಯಾಕ್ ಫ್ರೇಸರ್ ಮೆಕ್‌ಗರ್ಕ್, ಅನಿಕೇತ್ ನೀಡಿದ ಅಮೋಘ ಕ್ಯಾಚ್ ಅನ್ನು ಹಿಡಿಯದಿದ್ದರೆ, ಹೈದರಾಬಾದ್ ತಂಡ ಬೃಹತ್ ಮೊತ್ತ ದಾಖಲಿಸುವ ಅವಕಾಶವಿತ್ತು. ಆದರೆ ಇದಕ್ಕೆ ಕುಲ್ದೀಪ್ ಯಾದವ್ ಅವಕಾಶ ಮಾಡಿಕೊಡಲಿಲ್ಲ.
ಸಿಡಿಲಬ್ಬರದ ಅರ್ಧಶತಕ ಸಿಡಿಸಿ ಮುನ್ನುಗ್ಗುತ್ತಿದ್ದ ಅನಿಕೇತ್ ವರ್ಮಾ ಅವರನ್ನು ಕುಲ್ದೀಪ್ ಯಾದವ್ ಔಟ್ ಮಾಡುವ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಎಂಟನೇ ವಿಕೆಟ್ ನೀಡಿದರು. 40 ಎಸೆತಗಳಲ್ಲಿ 74 ರನ್ ಬಾರಿಸಿ ಆಡುತ್ತಿದ್ದ ಅನಿಕೇತ್, ಕುಲ್ದೀಪ್ ಎಸೆತವನ್ನು ಸಿಕ್ಸರ್ಗಟ್ಟುವ ಯತ್ನದಲ್ಲಿ ಮಿಡ್ ವಿಕೆಟ್ ಕಡೆ ಆಡಿದರು. ಆದರೆ ಅಲ್ಲೆ ಇದ್ದ ಜ್ಯಾಕ್ ಫ್ರೇಸರ್ ಮೆಕ್‌ಗರ್ಕ್ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಪಡೆದರು. ಹೀಗಾಗಿ ಅನಿಕೇತ್ 41 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಆರು ಸಿಕ್ಸರ್‌ಗಳ ಸಹಾಯದಿಂದ 74 ರನ್ ಗಳಿಸಿ ಔಟಾಗಬೇಕಾಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ