Operation Brahma: ಮ್ಯಾನ್ಮಾರ್ ಭೂಕಂಪಕ್ಕೆ ಸಹಾಯ ಮಾಡುವ ಆಪರೇಷನ್ಗೆ ಮೋದಿ ಸರ್ಕಾರ ಹಿಂದೂ ದೇವರ ಹೆಸರಿಟ್ಟಿದ್ದೇಕೆ?
ಮ್ಯಾನ್ಮಾರ್ ಮತ್ತು ಥೈಲ್ಯಾಂಡ್ನಲ್ಲಿ ನಡೆದ ಭೂಕಂಪದಲ್ಲಿ 1,000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಇದೀಗ ಭೂಕಂಪಪೀಡಿತ ಮ್ಯಾನ್ಮಾರ್ಗೆ ಸಹಾಯ ಮಾಡಲು ಭಾರತ ಸರ್ಕಾರ ಆಪರೇಷನ್ ಬ್ರಹ್ಮ ಮೂಲಕ ಮೂಲಸೌಕರ್ಯದ ಕಿಟ್ ಮತ್ತು ಮೆಡಿಕಲ್ ಕಿಟ್ಗಳನ್ನು ನೀಡಿದೆ. ಮ್ಯಾನ್ಮಾರ್ಗೆ ಸಹಾಯಹಸ್ತ ಚಾಚಲು ಭಾರತ ಇದೇ ಹೆಸರನ್ನು ಏಕೆ ಆಯ್ಕೆ ಮಾಡಿತು? ಎಂಬ ಬಗ್ಗೆ ವಿದೇಶಾಂಗ ಸಚಿವಾಲಯ ನೀಡಿದ ವಿವರಣೆ ಇಲ್ಲಿದೆ. ಯಾವುದೇ ನೆರೆಯ ದೇಶಕ್ಕೆ ಯಾವುದೇ ವಿಪತ್ತು ಸಂಭವಿಸಿದಾಗ ಭಾರತವು ಮೊದಲು ಪ್ರತಿಕ್ರಿಯಿಸುತ್ತದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿದ್ದಾರೆ. ಚಂಡಮಾರುತ ಅಪ್ಪಳಿಸಿದಾಗಲೂ ಮ್ಯಾನ್ಮಾರ್ ದೇಶಕ್ಕೆ ಭಾರತ ನೀಡಿದ ಸಹಕಾರವನ್ನು ಅವರು ಒತ್ತಿ ಹೇಳಿದರು. ಆ ಸಮಯದಲ್ಲಿ ಭಾರತವೂ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು.
ನವದೆಹಲಿ, ಮಾರ್ಚ್ 29: ಮ್ಯಾನ್ಮಾರ್‌ನಲ್ಲಿ 1 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ಮತ್ತು ದೇಶದಲ್ಲಿ ಹಲವಾರು ಕಟ್ಟಡಗಳನ್ನು ನಾಶಪಡಿಸಿದ ವಿನಾಶಕಾರಿ ಭೂಕಂಪದ ನಂತರ ಮ್ಯಾನ್ಮಾರ್ ಸಂಕಷ್ಟಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ನೆರೆಯ ದೇಶಕ್ಕೆ ಸಹಾಯ ಮಾಡಲು ಭಾರತ ಇಂದು ‘ಆಪರೇಷನ್ ಬ್ರಹ್ಮ’ವನ್ನು ಪ್ರಾರಂಭಿಸಿತು. ಆಪರೇಷನ್ ಬ್ರಹ್ಮದ (Operation Brahma) ಅಡಿಯಲ್ಲಿ 15 ಟನ್ ಪರಿಹಾರ ಸಾಮಗ್ರಿಗಳನ್ನು ಹೊತ್ತ ವಿಮಾನವು ಹಿಂಡನ್ ವಾಯುಪಡೆಯ ನೆಲೆಯಿಂದ ಇಂದು ಬೆಳಗಿನ ಜಾವ 3 ಗಂಟೆಗೆ ಹೊರಟಿತು. ಅದು ಭಾರತೀಯ ಕಾಲಮಾನ ಬೆಳಿಗ್ಗೆ 8 ಗಂಟೆಗೆ ಯಾಂಗೋನ್ ತಲುಪಿತು. ಪರಿಹಾರ ಸಾಮಗ್ರಿಗಳನ್ನು ಸ್ವೀಕರಿಸಲು ಹಾಜರಿದ್ದ ಮ್ಯಾನ್ಮಾರ್‌ನಲ್ಲಿರುವ ಭಾರತೀಯ ರಾಯಭಾರಿ ಅದನ್ನು ಯಾಂಗೋನ್ ಮುಖ್ಯಮಂತ್ರಿಗೆ ಹಸ್ತಾಂತರಿಸಿದರು. ಆದರೆ, ಈ ಕಾರ್ಯಾಚರಣೆಗೆ ಆಪರೇಷನ್ ಬ್ರಹ್ಮ ಎಂಬ ಹೆಸರನ್ನು ಆಯ್ಕೆ ಮಾಡಿದ್ದು ಏಕೆ? ಎಂಬ ಬಗ್ಗೆ ಭಾರತದ ವಿದೇಶಾಂಗ ಸಚಿವಾಲಯ (MEA) ಇಂದು ತಿಳಿಸಿದೆ. ವಿನಾಶದ ನಂತರ ತಮ್ಮ ದೇಶವನ್ನು ಪುನರ್ನಿರ್ಮಿಸಲು ನಾವು ಮ್ಯಾನ್ಮಾರ್ ಸರ್ಕಾರ ಮತ್ತು ಮ್ಯಾನ್ಮಾರ್ ಜನರಿಗೆ ಸಹಾಯ ಹಸ್ತ ಚಾಚುತ್ತಿರುವ ಸಮಯದಲ್ಲಿ ಬ್ರಹ್ಮ ಸೃಷ್ಟಿಯ ದೇವರಾದ ಕಾರಣದಿಂದ ಈ ಕಾರ್ಯಾಚರಣೆಗೆ ಆಪರೇಷನ್ ಬ್ರಹ್ಮ ಎಂಬ ಹೆಸರಿಡಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಶಾಸಕರ ಹೆಸರು ಎಫ್ಐಅರ್ನಲ್ಲಿ ಬಂದ ನಂತರವೇ ವಿನಯ್ ಅಂತ್ಯ ಸಂಸ್ಕಾರ: ಪ್ರತಾಪ

ಮೈಗೆ ದೂರಿನ ಪತ್ರ ಕಟ್ಟಿ ತೆವಳುತ್ತಾ ಸರ್ಕಾರಿ ಕಚೇರಿಗೆ ತೆರಳಿದ ವ್ಯಕ್ತಿ

ಥೈಲ್ಯಾಂಡ್ ಪ್ರವಾಸ ಮುಗಿಸಿ, ಶ್ರೀಲಂಕಾಗೆ ತೆರಳಿದ ಪ್ರಧಾನಿ ಮೋದಿ

ಶಾಸಕರಾದ ಪೊನ್ನಣ್ಣ, ಮಂಥರ್ಗೌಡ ಹೆಸರು ನಾಪತ್ತೆಯಾಗಿವೆ: ವಿನಯ್ ಸಹೋದರ
