ಮಟಮಟ ಮಧ್ಯಾಹ್ನ, ಸುಡುವ ಬಿಸಿಲು ಮತ್ತು ಮೈನಡುಗಿಸುವ ಭೂಕಂಪ; ಬೆಂಗಳೂರು ನಿವಾಸಿಯ ಬ್ಯಾಂಕಾಕ್ ಅನುಭವ
ಮಧ್ಯಾಹ್ನ ಸುಮಾರು 1.30ಕ್ಕೆ ಭೂಕಂಪ ಶುರುವಾದ ಕೂಡಲೇ ಹೋಟೆಲ್ ನಲ್ಲಿ ಊಟ ಮಾಡುತ್ತಿದ್ದ ರೋಹಿತ್ ಕುಟುಂಬವನ್ನು ಹೋಟೆಲ್ ಸಿಬ್ಬಂದಿಯೇ ಹೊರಗೆ ಕರೆತಂದು ಊಟ ಮತ್ತು ನೀರಿನ ವ್ಯವಸ್ಥೆ ಮಾಡಿತಂತೆ. ಸಾಯಂಕಾಲ 4.30ರವರೆಗೆ ಯಾರೂ ಕಟ್ಟಡಗಳಲ್ಲಿ ಇರಬಾರದು ಎಂದು ಅಲ್ಲಿನ ಸರ್ಕಾರ ಸೂಚನೆ ನೀಡಿದ್ದರಿಂದ ಜನರೆಲ್ಲ ಮನೆ, ಹೋಟೆಲ್, ಆಫೀಸುಗಳಿಂದ ಹೊರಬಂದು ನಿಂತಿದ್ದರಂತೆ.
ಬೆಂಗಳೂರು, ಮಾರ್ಚ್ 29: ಥೈಲ್ಯಾಂಡ್ ನಿಸ್ಸಂದೇಹವಾಗಿ ಅತ್ಯಂತ ಪ್ರೇಕ್ಷಣೀಯ ದೇಶಗಳಲ್ಲಿ ಒಂದು. ಅದರೆ ಈ ವಾರ ಆ ದೇಶದ ರಾಜಧಾನಿಗೆ ಹೋದವರು ಭಯಭೀತರಾಗಿ ಸ್ವದೇಶಕ್ಕೆ ವಾಪಸ್ಸಾಗಿದ್ದಾರೆ. ರಿಕ್ಟರ್ ಸ್ಕೇಲ್ ಮೇಲೆ 7.7 ರಷ್ಟು ತೀವ್ರತೆಯ ಭೂಕಂಪ ಥೈಲ್ಯಾಂಡ್ ಮತ್ತು ಮ್ಯಾನ್ಮಾರ್ ದೇಶಗಳನ್ನು ಅಲ್ಲೋಲಕಲ್ಲೋಲಗೊಳಿಸಿದೆ. 1,000 ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ. ಬೆಂಗಳೂರಿನ ರೋಹಿತ್ ಎನ್ನುವವರು ತಮ್ಮ ಕುಟುಂಬದ ಜೊತೆ ಬ್ಯಾಂಕಾಕ್ಗೆ ಹೋಗಿದ್ದರು ಮತ್ತು ಭೂಕಂಪದ ದೃಶ್ಯವನ್ನು ಕಣ್ಣಾರೆ ಕಂಡಿದ್ದಾರೆ, ಹೋಟೆಲ್ ನಲ್ಲಿ ಕೂತು ಊಟ ಮಾಡುವಾಗ ಕಂಪನವನ್ನು ಅನುಭವಿಸಿದ್ದಾರೆ. ಕೆಐಎನಲ್ಲಿ ಅವರು ನಮ್ಮ ವರದಿಗಾರನೊಂದಿಗೆ ಮಾತಾಡಿದ್ದಾರೆ.
ಇದನ್ನೂ ಓದಿ: ಭೂಕಂಪದಿಂದ 20ಕ್ಕೂ ಹೆಚ್ಚು ಜನ ಸಾವು; ಮ್ಯಾನ್ಮಾರ್, ಥೈಲ್ಯಾಂಡ್ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ