Myanmar Earthquake: ಮ್ಯಾನ್ಮಾರ್, ಥೈಲ್ಯಾಂಡ್ ಭೂಕಂಪಗಳಲ್ಲಿ 1,000ಕ್ಕೂ ಹೆಚ್ಚು ಜನ ಸಾವು; ಆಪರೇಷನ್ ಬ್ರಹ್ಮದಡಿ ಭಾರತ ಸಹಾಯಹಸ್ತ
ಮ್ಯಾನ್ಮಾರ್ ಮಿಲಿಟರಿ ನಾಯಕರ ಪ್ರಕಾರ, ಪ್ರಬಲ ಭೂಕಂಪದಿಂದ ಸಾವನ್ನಪ್ಪಿದವರ ಸಂಖ್ಯೆ 1,000 ಮೀರಿದೆ. ಯುಎಸ್ ಏಜೆನ್ಸಿಯೊಂದು ಸಾವಿನ ಸಂಖ್ಯೆ 10,000 ಮೀರಬಹುದು ಎಂದು ಎಚ್ಚರಿಸಿದೆ. ಮೇಘಾಲಯ ಮತ್ತು ಮಣಿಪುರ ಸೇರಿದಂತೆ ಭಾರತದ ಕೆಲವು ಭಾಗಗಳಲ್ಲಿಯೂ ಭೂಕಂಪದ ಅನುಭವವಾಗಿದೆ. ಹಾಗೆಯೇ ಬಾಂಗ್ಲಾದೇಶದಲ್ಲಿ ಅದರಲ್ಲೂ ವಿಶೇಷವಾಗಿ ಢಾಕಾ, ಚಟ್ಟೋಗ್ರಾಮ್‌ನಲ್ಲಿ ಮತ್ತು ಚೀನಾದಲ್ಲಿಯೂ ಬಲವಾದ ಕಂಪನಗಳು ಕಂಡುಬಂದಿವೆ. ಈ ಭೂಕಂಪವು ಎಷ್ಟು ಪ್ರಬಲವಾಗಿತ್ತೆಂದರೆ, 900 ಕಿಲೋಮೀಟರ್ ದೂರದಲ್ಲಿರುವ ಬ್ಯಾಂಕಾಕ್ ಕೂಡ ಅದರ ಪ್ರಭಾವವನ್ನು ಅನುಭವಿಸಿತು. ಇದರಿಂದಾಗಿ ಹಲವಾರು ಐತಿಹಾಸಿಕ ಕಟ್ಟಡ ಮತ್ತು ಸೇತುವೆಗಳು ಕುಸಿದವು.

ಮ್ಯಾನ್ಮಾರ್, ಮಾರ್ಚ್ 29: ಭೂಕಂಪ ಪೀಡಿತ ಮ್ಯಾನ್ಮಾರ್‌ನಲ್ಲಿ (Myanmar Earthquake) ಪರಿಹಾರ ಮತ್ತು ರಕ್ಷಣಾ ಕಾರ್ಯಕ್ಕಾಗಿ ಭಾರತವು 80 ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ತುಕಡಿಯನ್ನು ನಿಯೋಜಿಸಲು ನಿರ್ಧರಿಸಿದೆ. ಹಾಗೇ, ಈಗಾಗಲೇ ನೆರೆಯ ದೇಶಕ್ಕೆ ಸಹಾಯ ಮಾಡಲು ‘ಆಪರೇಷನ್ ಬ್ರಹ್ಮ’ ಅಡಿಯಲ್ಲಿ ಭಾರತ ನೇಪಾಳಕ್ಕೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಳುಹಿಸಿದೆ. “80 ಎನ್‌ಡಿಆರ್‌ಎಫ್ ಸಿಬ್ಬಂದಿಯ ತಂಡವನ್ನು ಮ್ಯಾನ್ಮಾರ್‌ಗೆ ಕಳುಹಿಸಲಾಗುತ್ತಿದೆ. ತಂಡವು ಇಂದು ಸಂಜೆಯ ವೇಳೆಗೆ ಮ್ಯಾನ್ಮಾರ್‌ಗೆ ತಲುಪುವ ನಿರೀಕ್ಷೆಯಿದೆ” ಎಂದು ಮೂಲಗಳು ತಿಳಿಸಿವೆ. ಕಮಾಂಡೆಂಟ್ ಶ್ರೇಣಿಯ ಅಧಿಕಾರಿಯೊಬ್ಬರು ಅವರನ್ನು ಮುನ್ನಡೆಸಲಿದ್ದಾರೆ.
ಮ್ಯಾನ್ಮಾರ್ ಮತ್ತು ನೆರೆಯ ಥೈಲ್ಯಾಂಡ್ ಶುಕ್ರವಾರ (ಮಾರ್ಚ್ 28) ಸಂಭವಿಸಿದ ತೀವ್ರ ಭೂಕಂಪದಿಂದ ನಲುಗಿಹೋಗಿದ್ದು, ಕಟ್ಟಡಗಳು, ಸೇತುವೆಗಳು ಮತ್ತು ಇತರ ಮೂಲಸೌಕರ್ಯಗಳು ನಾಶವಾಗಿವೆ. ಮ್ಯಾನ್ಮಾರ್‌ನಲ್ಲಿ ಕನಿಷ್ಠ 1,002 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಭಾರತವು ಹಿಂದಿನ ಎರಡು ಸಂದರ್ಭಗಳಲ್ಲಿ ವಿದೇಶಗಳಲ್ಲಿ ಎನ್‌ಡಿಆರ್‌ಎಫ್ ಅನ್ನು ನಿಯೋಜಿಸಿತ್ತು. 2015ರ ನೇಪಾಳದ ಭೂಕಂಪ ಮತ್ತು 2023ರ ಟರ್ಕಿಯೆ ಭೂಕಂಪದ ಸಮಯದಲ್ಲಿ ಎನ್‌ಡಿಆರ್‌ಎಫ್ ಅನ್ನು ಭಾರತ ನಿಯೋಜಿಸಿತ್ತು.
🇮🇳India has dispatched 15 tonnes of relief material to Myanmar following yesterday’s earthquake.
The relief package includes essential supplies such as tents, sleeping bags, blankets, ready-to-eat meals and generator sets. pic.twitter.com/EZucFzgPDV
— All India Radio News (@airnewsalerts) March 29, 2025
ಇದನ್ನೂ ಓದಿ: Myanmar Earthquake: ಮ್ಯಾನ್ಮಾರ್‌ನಲ್ಲಿ ಪ್ರಬಲ ಭೂಕಂಪ; 144 ಜನ ಸಾವು, 730 ಮಂದಿಗೆ ಗಾಯ
ಇಂದು ಭಾರತವು ಮ್ಯಾನ್ಮಾರ್‌ನ ಯಾಂಗೂನ್ ನಗರಕ್ಕೆ ಭಾರತೀಯ ವಾಯುಪಡೆಯ (IAF) C130J ಮಿಲಿಟರಿ ಸಾರಿಗೆ ವಿಮಾನದ ಮೂಲಕ ಸುಮಾರು 15 ಟನ್ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿದೆ. ಭಾರತವು ಸೌರ ದೀಪಗಳು, ಆಹಾರ ಪ್ಯಾಕೆಟ್‌ಗಳು ಮತ್ತು ಅಡುಗೆ ಸೆಟ್‌ಗಳು ಸೇರಿದಂತೆ 15 ಟನ್ ಪರಿಹಾರ ಸಾಮಗ್ರಿಗಳನ್ನು IAF C 130 J ವಿಮಾನದಲ್ಲಿ ಮ್ಯಾನ್ಮಾರ್‌ಗೆ ಕಳುಹಿಸಿತು. ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಈ ಭೂಕಂಪದ ಬಗ್ಗೆ ಕಳವಳ ವ್ಯಕ್ತಪಡಿಸಿ, ಭಾರತವು ಎರಡೂ ದೇಶಗಳಿಗೆ ಸಾಧ್ಯವಿರುವ ಎಲ್ಲಾ ಸಹಾಯವನ್ನು ನೀಡಲು ಸಿದ್ಧವಾಗಿದೆ ಎಂದು ಹೇಳಿದ್ದರು. ಭಾರತವು ಪೂರ್ವ ಭಾಗದಲ್ಲಿ ಮ್ಯಾನ್ಮಾರ್‌ನೊಂದಿಗೆ 1,643 ಕಿಮೀ ಉದ್ದದ ಗಡಿಯನ್ನು ಹಂಚಿಕೊಂಡಿದೆ.
#OperationBrahma gets underway.
First tranche of humanitarian aid from India has reached the Yangon Airport in Myanmar.
🇮🇳 🇲🇲 pic.twitter.com/OmiJLnYTwS
— Dr. S. Jaishankar (@DrSJaishankar) March 29, 2025
ಇದನ್ನೂ ಓದಿ: ಮ್ಯಾನ್ಮಾರ್‌ನಲ್ಲಿ ಮತ್ತೆ ಭೂಕಂಪನ, ಒಟ್ಟು 700ಕ್ಕೂ ಹೆಚ್ಚು ಜನ ಸಾವು, 1,670 ಜನರಿಗೆ ಗಾಯ
ಮ್ಯಾನ್ಮಾರ್‌ನ ಭೂಕಂಪದ ಸಾವಿನ ಸಂಖ್ಯೆ 1,000ಕ್ಕಿಂತ ಹೆಚ್ಚಾಗಿದೆ. ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಪ್ರಬಲ 7.7 ತೀವ್ರತೆಯ ಭೂಕಂಪದ ಅವಶೇಷಗಳಿಂದ ಹೆಚ್ಚಿನ ಶವಗಳನ್ನು ಹೊರತೆಗೆಯಲಾಗುತ್ತಿದ್ದಂತೆ ಸಾವಿನ ಸಂಖ್ಯೆ 1,000ಕ್ಕಿಂತ ಹೆಚ್ಚಾಗಿದೆ. ದೇಶದ ಎರಡನೇ ಅತಿದೊಡ್ಡ ನಗರದ ಬಳಿ ಸಂಭವಿಸಿದಾಗ ಕುಸಿದ ಹಲವಾರು ಕಟ್ಟಡಗಳ ಅವಶೇಷಗಳಿಂದ ಹೆಚ್ಚಿನ ಶವಗಳನ್ನು ಹೊರತೆಗೆಯಲಾಯಿತು. ದೇಶದ ಮಿಲಿಟರಿ ನೇತೃತ್ವದ ಸರ್ಕಾರವು ಹೇಳಿಕೆಯಲ್ಲಿ 1,002 ಜನರು ಈಗ ಸಾವನ್ನಪ್ಪಿದ್ದಾರೆ ಮತ್ತು ಇನ್ನೂ 2,376 ಜನರು ಗಾಯಗೊಂಡಿದ್ದಾರೆ. 30 ಜನರು ಕಾಣೆಯಾಗಿದ್ದಾರೆ ಎಂದು ತಿಳಿಸಿದೆ. ಸಾವಿನ ಸಂಖ್ಯೆಗಳು ಇನ್ನೂ ಹೆಚ್ಚಾಗಬಹುದು ಎನ್ನಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:33 pm, Sat, 29 March 25