AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WITT 2025: ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತ ಏಕೆ ಸಂಭವಿಸುತ್ತದೆ? ಡಾ. ಮಹೇಶ್ ವಾಧ್ವಾನಿ ಟಿವಿ9 ವೇದಿಕೆಯಲ್ಲಿ ಹೇಳಿದ್ದಿಷ್ಟು

ಫೋರ್ಟಿಸ್ ಆಸ್ಪತ್ರೆಯ ಕಾರ್ಡಿಯೋಥೊರಾಸಿಕ್ ಸರ್ಜರಿ ವಿಭಾಗದ ನಿರ್ದೇಶಕ ಮತ್ತು ಮುಖ್ಯಸ್ಥ ಡಾ. ಮಹೇಶ್ ವಾಧ್ವಾನಿ ಟಿವಿ9 ನ ಜಾಗತಿಕ ಶೃಂಗಸಭೆ WITT 2025 ಅಂದರೆ ‘‘What India Thinks Today’’ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಚಿಕ್ಕ ವಯಸ್ಸಿನಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿರುವುದರ ಕಾರಣಗಳನ್ನು ವಿವರಿಸಿದ್ದು, ವಿವರಗಳಿಗೆ ಮುಂದೆ ಓದಿ.

WITT 2025: ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತ ಏಕೆ ಸಂಭವಿಸುತ್ತದೆ? ಡಾ. ಮಹೇಶ್ ವಾಧ್ವಾನಿ ಟಿವಿ9 ವೇದಿಕೆಯಲ್ಲಿ ಹೇಳಿದ್ದಿಷ್ಟು
ಡಾ. ಮಹೇಶ್ ವಾಧ್ವಾನಿ
Follow us
Ganapathi Sharma
|

Updated on: Mar 29, 2025 | 4:43 PM

ದೇಶದ ಅತಿದೊಡ್ಡ ಸುದ್ದಿ ಜಾಲ ಟಿವಿ9 ನೆಟ್ ವರ್ಕ್​ನ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’ (What India Thinks Today Global Summit 2025) ಕಾರ್ಯಕ್ರಮದಲ್ಲಿ, ಫೋರ್ಟಿಸ್ ಆಸ್ಪತ್ರೆಯ ಕಾರ್ಡಿಯೋಥೊರಾಸಿಕ್ ಶಸ್ತ್ರಚಿಕಿತ್ಸೆ ವಿಭಾಗದ ನಿರ್ದೇಶಕ ಮತ್ತು ಮುಖ್ಯಸ್ಥ ಡಾ. ಮಹೇಶ್ ವಾಧ್ವಾನಿ (Dr. Mahesh Wadhwani) ಭಾಗವಹಿಸಿ ಚಿಕ್ಕ ವಯಸ್ಸಿನವರಲ್ಲಿಯೇ ಹೃದಯಾಘಾತ (Heart Attack) ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಮಾತನಾಡಿದರು. ಸಣ್ಣ ವಯಸ್ಸಿನವರಲ್ಲಿಯೇ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ವಿವರಿಸಿದರು. ಈಗ 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಹೃದಯ ಕಾಯಿಲೆಗಳು ಹೆಚ್ಚಾಗುತ್ತಿರುವುದನ್ನು ಗಮನಿಸಿದ್ದೇವೆ. ನಮ್ಮ ಬಳಿ ಹೃದಯ ಶಸ್ತ್ರಚಿಕಿತ್ಸೆಗೆ ಬರುವ ರೋಗಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಜನರು 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಇದು ಕಳವಳಕಾರಿ ವಿಷಯ ಎಂದು ಅವರು ಹೇಳಿದರು.

ಹೃದಯ ಕಾಯಿಲೆಗಳು ಹೆಚ್ಚಾಗಲು ಅಸಮರ್ಪಕ ಜೀವನಶೈಲಿ ಪ್ರಮುಖ ಕಾರಣ ಎಂದು ಡಾ. ವಾಧ್ವಾನಿ ಹೇಳಿದರು. ಜನರು ಸಮರ್ಪಕವಾಗಿ ನಿದ್ದೆ ಮಾಡುತ್ತಿಲ್ಲ. ನಿದ್ದೆ ಮತ್ತು ಎಚ್ಚರದಲ್ಲಿರುವ ಸಮಯದ ನಡುವೆ ಅಸಮತೋಲನ ಹೆಚ್ಚಾಗಿದೆ ತಡವಾಗಿ ಮಲಗುವ ಅಭ್ಯಾಸವು ದೇಹವನ್ನು ಅಸ್ವಸ್ಥಗೊಳಿಸುತ್ತಿದೆ. ಅಸಮರ್ಪಕ ಜೀವನಶೈಲಿಯ ಜೊತೆಗೆ, ಆಹಾರ ಪದ್ಧತಿಯೂ ಕೆಟ್ಟದಾಗಿ ಪರಿಣಮಿಸಿದೆ. ಜನರು ಈಗ ಫಾಸ್ಟ್ ಫುಡ್ ತಿನ್ನಲು ಹೆಚ್ಚು ಇಷ್ಟಪಡುತ್ತಾರೆ. ಆಹಾರದಲ್ಲಿ ಸಕ್ಕರೆ, ಉಪ್ಪು ಮತ್ತು ಹಿಟ್ಟಿನ ಪ್ರಮಾಣ ಹೆಚ್ಚುತ್ತಿದೆ. ಇದು ಚಿಕ್ಕ ವಯಸ್ಸಿನಲ್ಲಿಯೇ ಹೃದಯ ಕಾಯಿಲೆಗಳಿಗೆ ಕಾರಣವಾಗುತ್ತಿದೆ. ಜನರು ತಮ್ಮ ಜೀವನಶೈಲಿಯನ್ನು ಸುಧಾರಿಸಿಕೊಳ್ಳಬೇಕಾಗಿದೆ, ಆದರೆ ಇದರ ಬಗ್ಗೆ ಯಾವುದೇ ಗಮನ ನೀಡುತ್ತಿಲ್ಲ. ಇದರಿಂದಾಗಿ ರೋಗಗಳ ವ್ಯಾಪ್ತಿ ಹೆಚ್ಚುತ್ತಿದೆ ಎಂದು ಡಾ. ವಾಧ್ವಾನಿ ಹೇಳಿದರು.

ಮಧುಮೇಹದಿಂದ ಹೃದಯದ ಕಾಯಿಲೆ

ಭಾರತದಲ್ಲಿ ಮಧುಮೇಹ ರೋಗಿಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಹೃದಯ ಕಾಯಿಲೆಗೆ ಮಧುಮೇಹವೂ ಒಂದು ಪ್ರಮುಖ ಕಾರಣವಾಗಿದೆ. ಈ ಕಾಯಿಲೆಯಿಂದಾಗಿ ಹೃದಯದ ಮೇಲೂ ಪರಿಣಾಮವಾಗುತ್ತಿದೆ. ಹೃದಯದ ಕಾರ್ಯಕ್ಷಮತೆಗೆ ತೊಂದರೆಯಾಗುತ್ತದೆ. ಇದು ಹೃದಯಾಘಾತಕ್ಕೆ ಕಾರಣವಾಗಬಹುದು ಎಂದು ಡಾ. ವಾಧ್ವಾನಿ ಹೇಳಿದರು.

ಇದನ್ನೂ ಓದಿ
Image
ಸಂತರು ಸೆಲೆಬ್ರಿಟಿಗಳಾಗುತ್ತಿದ್ದಾರೆಯೇ? ಧೀರೇಂದ್ರ ಶಾಸ್ತ್ರಿ ಹೇಳಿದ್ದೇನು?
Image
ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ
Image
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್
Image
ಪ್ರಧಾನಿಗೆ ವೇದಿಕೆಯಲ್ಲಿ ಗೌರವಿಸಿದ ಡಾ. ರಾಮೇಶ್ವರ್ ರಾವ್

ಮಧುಮೇಹದಿಂದ ದೇಹದ ಪ್ರತಿ ಅಂಗಕ್ಕೂ ಇದೆ ತೊಂದರೆ: ಡಾ. ಎಸ್​ಕೆ ವಾಂಗ್ನು

ಅಪೋಲೋ ಆಸ್ಪತ್ರೆಯ ಗ್ರಂಥಿಶಾಸ್ತ್ರಜ್ಞ ಮತ್ತು ಮಧುಮೇಹ ತಜ್ಞ ಡಾ. ಎಸ್. ಕೆ. ವಾಂಗ್ನು ಕೂಡ ಕಾರ್ಯಕ್ರಮದಲ್ಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಮಧುಮೇಹವು ಆರಂಭದಲ್ಲಿ ಲಕ್ಷಣಗಳು ಗೋಚರಿಸದ ಕಾಯಿಲೆಯಾಗಿದೆ. ಇದು ದೇಹದ ಬಹುತೇಕ ಪ್ರತಿಯೊಂದು ಭಾಗದ ಮೇಲೆ ಪರಿಣಾಮ ಬೀರುತ್ತದೆ. ಇದು ಹೃದಯದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು.

ಮಧುಮೇಹದ ಬಗ್ಗೆ ನಿಯಮಿತ ತಪಾಸಣೆ ಅಗತ್ಯ: ಡಾ. ಎಸ್​ಕೆ ವಾಂಗ್ನು

ಮಧುಮೇಹದ ಬಗ್ಗೆ ಸರಿಯಾದ ಸಮಯದಲ್ಲಿ ಪರಿಶೀಲಿಸುವುದು ಅವಶ್ಯಕ. ತಿಂಗಳಿಗೆ ಒಂದು ಅಥವಾ ಎರಡು ಬಾರಿ ಪರೀಕ್ಷೆ ಮಾಡಿಸುತ್ತಾ ಇದ್ದರೆ ದೇಹದಲ್ಲಿನ ಸಕ್ಕರೆ ಮಟ್ಟವು ತಿಳಿಯುತ್ತದೆ. ಮಧುಮೇಹವನ್ನು ಗುರುತಿಸಲು Hb1ac ಪರೀಕ್ಷೆಯು ತುಂಬಾ ಒಳ್ಳೆಯದು. ಇದು ನೀವು ಸುಲಭವಾಗಿ ಮಾಡಬಹುದಾದ ಸಾಮಾನ್ಯ ಪರೀಕ್ಷೆ ಎಂದು ಅವರು ಮಾಹಿತಿ ನೀಡಿದರು.

ಇದನ್ನೂ ಓದಿ: ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ ಮೆಚ್ಚುಗೆ

ಮಧುಮೇಹ ಹೊಂದಿರುವ ಕುಟುಂಬ ಸದಸ್ಯರಲ್ಲಿ ಬೊಜ್ಜು ಹೆಚ್ಚುತ್ತಿದೆ ಎಂದು ಡಾ. ವಾಂಗ್ನು ಹೇಳಿದರು. ಜೀವನಶೈಲಿ ಕೆಟ್ಟದಾಗಿದ್ದು, ಧೂಮಪಾನ ಮಾಡುತ್ತಿದ್ದರೆ, ಅಂತಹ ಜನರು ಖಂಡಿತವಾಗಿಯೂ ಈ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಅಂತಹ ಜನರಿಗೆ ಮಧುಮೇಹ ಬರುವ ಅಪಾಯ ಹೆಚ್ಚು. ಈ ಪರೀಕ್ಷೆಯನ್ನು ಮಾಡಿಸಿಕೊಂಡರೆ, ರೋಗವು ಸಮಯಕ್ಕೆ ಸರಿಯಾಗಿ ಪತ್ತೆಯಾಗುತ್ತದೆ. ಔಷಧಿ ಮತ್ತು ಜೀವನಶೈಲಿಯನ್ನು ಸುಧಾರಿಸುವ ಮೂಲಕ ಇದನ್ನು ನಿಯಂತ್ರಿಸಬಹುದು. ಮಧುಮೇಹ ನಿಯಂತ್ರಣದಲ್ಲಿದ್ದರೆ ಹೃದಯ ಕಾಯಿಲೆಯ ಅಪಾಯವೂ ಕಡಿಮೆಯಾಗುತ್ತದೆ ಎಂದು ಅವರು ಹೇಳಿದರು.

WITT ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ