Sign In

By signing in or creating an account, you agree with Associated Broadcasting Company's Terms & Conditions and Privacy Policy.

WITT Summit 2025: ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ ಮೆಚ್ಚುಗೆ

WITT Summit 2025: ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ ಮೆಚ್ಚುಗೆ

ಸುಷ್ಮಾ ಚಕ್ರೆ
|

Updated on:Mar 29, 2025 | 2:16 PM

"ಟಿವಿ9 ನೆಟ್‌ವರ್ಕ್ ದೊಡ್ಡ ಪ್ರಾದೇಶಿಕ ಪ್ರೇಕ್ಷಕರನ್ನು ಹೊಂದಿರುವುದರ ಜೊತೆಗೆ, ಟಿವಿ9 ಈಗ ಬೆಳೆಯುತ್ತಿರುವ ಜಾಗತಿಕ ವೀಕ್ಷಕರನ್ನು ಸಹ ಆಕರ್ಷಿಸುತ್ತಿದೆ. ಟಿವಿ9 ನೆಟ್‌ವರ್ಕ್ ಅಪಾರ ಪ್ರೇಕ್ಷಕರನ್ನು ಹೊಂದಿದೆ ಮತ್ತು ಜಾಗತಿಕ ಪ್ರೇಕ್ಷಕರು ಈಗ ರೂಪುಗೊಳ್ಳುತ್ತಿದ್ದಾರೆ. ಈ ಶೃಂಗಸಭೆಯಲ್ಲಿ, ಅನೇಕ ದೇಶಗಳಲ್ಲಿನ ಭಾರತೀಯ ವಲಸಿಗರು ನೇರಪ್ರಸಾರದಲ್ಲಿ ಸೇರಿದ್ದಾರೆ" ಎಂದು ಮೋದಿ ಹೇಳಿದರು.

ನವದೆಹಲಿ, ಮಾರ್ಚ್ 28: ಟಿವಿ9 ನೆಟ್‌ವರ್ಕ್‌ನ ವಾಟ್ ಇಂಡಿಯಾ ಥಿಂಕ್ಸ್ ಟುಡೇ (WITT 2025) ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಟಿವಿ9 ನೆಟ್‌ವರ್ಕ್ ಅನ್ನು ಶ್ಲಾಘಿಸಿದ್ದಾರೆ. ಈ ಸಂದರ್ಭದಲ್ಲಿ ಈ ನೆಟ್‌ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ ಎಂದು ಅವರು ಹೇಳಿದರು. ಟಿವಿ9 ನೆಟ್‌ವರ್ಕ್‌ನ ಎಲ್ಲಾ ವೀಕ್ಷಕರನ್ನು ಅಭಿನಂದಿಸಿದರು. ‘ಟಿವಿ9 ನೆಟ್‌ವರ್ಕ್ ಮತ್ತು ನಿಮ್ಮ ಎಲ್ಲಾ ವೀಕ್ಷಕರನ್ನು ನಾನು ಸ್ವಾಗತಿಸುತ್ತೇನೆ ಮತ್ತು ಈ ಶೃಂಗಸಭೆಗೆ ನಿಮ್ಮನ್ನು ಅಭಿನಂದಿಸುತ್ತೇನೆ. ನಿಮ್ಮ ನೆಟ್‌ವರ್ಕ್‌ನ ಜಾಗತಿಕ ಪ್ರೇಕ್ಷಕರು ಸಹ ಸಿದ್ಧರಾಗುತ್ತಿದ್ದಾರೆ. ನಾನು ಇಲ್ಲಿ ಹಲವು ದೇಶಗಳ ಜನರನ್ನು ಸಹ ನೋಡುತ್ತಿದ್ದೇನೆ. ಎಲ್ಲರಿಗೂ ಶುಭ ಹಾರೈಸುತ್ತೇನೆ’ ಎಂದು ಮೋದಿ ಹೇಳಿದ್ದಾರೆ.

ಈ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ, ಟಿವಿ9 ಸಕಾರಾತ್ಮಕ ಉಪಕ್ರಮವನ್ನು ತೆಗೆದುಕೊಂಡಿದೆ. ಹೋಟೆಲ್ ಸಂಪ್ರದಾಯವನ್ನು ಮುರಿದು ಇಂತಹ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ನಾನು ಟಿವಿ9 ಅನ್ನು ಅಭಿನಂದಿಸುತ್ತೇನೆ. ಮುಂಬರುವ ದಿನಗಳಲ್ಲಿ ಇತರ ಮಾಧ್ಯಮ ಸಂಸ್ಥೆಗಳು ಸಹ ಇದನ್ನು ಅನುಸರಿಸಬೇಕಾಗುತ್ತದೆ. ನಿಮ್ಮೆಲ್ಲರೊಂದಿಗೆ, ಭರವಸೆ ನೀಡುವ ಜನರೊಂದಿಗೆ ಫೋಟೋ ತೆಗೆಸಿಕೊಳ್ಳುವ ಅವಕಾಶ ನನಗೆ ಸಿಕ್ಕಿರುವುದು ನನ್ನ ಅದೃಷ್ಟ ಎಂದು ನಾನು ಭಾವಿಸುತ್ತೇನೆ” ಎಂದು ಮೋದಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Mar 28, 2025 08:56 PM