ಮಾ. 28, 29ರಂದು ಟಿವಿ9 WITT 2025 ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ; ನೇರಪ್ರಸಾರದ ಲಿಂಕ್
TV9 WITT 2025: 'ವಾಟ್ ಇಂಡಿಯಾ ಥಿಂಕ್ಸ್ ಟುಡೇ 2025' ನ ಭವ್ಯ ವೇದಿಕೆಯನ್ನು ದೆಹಲಿಯ ಪ್ರಸಿದ್ಧ ಭಾರತ್ ಮಂಟಪದಲ್ಲಿ ಆಯೋಜಿಸಲಾಗುತ್ತಿದೆ. ಈ ಎರಡು ದಿನಗಳ ಕಾರ್ಯಕ್ರಮವು ಮಾರ್ಚ್ 28, 2025 ರಂದ ಪ್ರಾರಂಭವಾಗಲಿದೆ. ಶುಕ್ರವಾರ ಮತ್ತು ಶನಿವಾರ ಎರಡು ದಿನ ನಡೆಯುತ್ತದೆ. ದೇಶದ ಅತಿದೊಡ್ಡ ಸುದ್ದಿ ಜಾಲವಾದ ಟಿವಿ9 ಸಂಸ್ಥೆ ಆಯೋಜಿಸುತ್ತಿರುವ ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸುತ್ತಿದ್ದಾರೆ.

ದೇಶದ ಅತಿದೊಡ್ಡ ಸುದ್ದಿ ಜಾಲವಾದ ಟಿವಿ9 ಸಂಸ್ಥೆ ತನ್ನ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’ (WITT 2025- What India Thinks Today) ಎಂಬ ಜಾಗತಿಕ ಶೃಂಗಸಭೆಯ ಮೂರನೇ ಆವೃತ್ತಿ ನಾಳೆಯಿಂದ, ಅಂದರೆ ಮಾರ್ಚ್ 28, 2025 ರಿಂದ ಆಯೋಜಿಸುತ್ತಿದೆ. ಟಿವಿ9 ನ ಈ ವಾರ್ಷಿಕ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಭಾಗವಹಿಸಲಿದ್ದಾರೆ. ಪ್ರಧಾನಿ ಮೋದಿಯವರಲ್ಲದೆ, ಕೇಂದ್ರ ಸಚಿವರು ಮತ್ತು 5 ರಾಜ್ಯಗಳ ಮುಖ್ಯಮಂತ್ರಿಗಳು ಕೂಡ ಈ ಟಿವಿ9 ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ದೆಹಲಿಯ ಭಾರತ್ ಮಂಟಪದಲ್ಲಿ “ವಾಟ್ ಇಂಡಿಯಾ ಥಿಂಕ್ಸ್ ಟುಡೇ” ಜಾಗತಿಕ ಶೃಂಗಸಭೆ 2025 ಅನ್ನು ಆಯೋಜಿಸಲಾಗುವುದು. ರಾಜಕೀಯದ ಹೊರತಾಗಿ, ವ್ಯಾಪಾರ, ಮನರಂಜನೆ, ಆರೋಗ್ಯ, ಸಂಸ್ಕೃತಿ ಮತ್ತು ಕ್ರೀಡೆ ಸೇರಿದಂತೆ ಹಲವು ಪ್ರಮುಖ ವಿಷಯಗಳನ್ನು ಟಿವಿ9 ನೆಟ್‌ವರ್ಕ್‌ನ ಈ ಮೆಗಾ ವೇದಿಕೆಯಲ್ಲಿ ಆಳವಾಗಿ ಚರ್ಚಿಸಲಾಗುವುದು.
WITT 2025 ಅನ್ನು ಇಲ್ಲಿ ಲೈವ್ ವೀಕ್ಷಿಸಿ
‘ವಾಟ್ ಇಂಡಿಯಾ ಥಿಂಕ್ಸ್ ಟುಡೇ 2025’ ಕಾರ್ಯಕ್ರಮವನ್ನು TV9 ನೆಟ್‌ವರ್ಕ್‌ನ YouTube ಚಾನಲ್್ಗಳಲ್ಲಿ ವೀಕ್ಷಿಸಬಹುದು. ಟಿವಿ9 ಕನ್ನಡದ ಸೋದರ ವಾಹಿನಿಯಾದ ಹಿಂದಿಯ ಟಿವಿ9 ಭಾರತ್ ವರ್ಷ್ನ ಲೈವ್ ಯೂಟ್ಯೂಬ್ ಲಿಂಕ್ ಇಲ್ಲಿದೆ. ನಾಳೆ ಕಾರ್ಯಕ್ರಮ ಆರಂಭವಾದ ಬಳಿಕ ಈ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿದರೆ ನೇರ ಪ್ರಸಾರ ವೀಕ್ಷಿಸಬಹುದು. ಟಿವಿ9 ಕನ್ನಡದ ಯೂಟ್ಯೂಬ್ನಲ್ಲೂ ನಾಳೆ ನೇರ ಪ್ರಸಾರ ಇರುತ್ತದೆ.
ಪ್ರಧಾನಿ ಮೋದಿ ಅವರಿಂದ ಭಾಷಣ
ಟಿವಿ9 ನೆಟ್‌ವರ್ಕ್‌ನ ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಲಿದ್ದಾರೆ. ದೇಶದ ಪ್ರಗತಿ, ಅಭಿವೃದ್ಧಿ ಹೊಂದಿದ ಭಾರತ ಮತ್ತು ಜಾಗತಿಕ ಮಟ್ಟದಲ್ಲಿ ಭಾರತದ ಪಾತ್ರ ಸೇರಿದಂತೆ ಹಲವು ವಿಷಯಗಳ ಕುರಿತು ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದು.
ಇದನ್ನೂ ಓದಿ: ಟಿವಿ9 ನೆಟ್‌ವರ್ಕ್‌ನ WITT ಶೃಂಗಸಭೆಗೆ ಮತ್ತೆ ವೇದಿಕೆ ಸಿದ್ಧ, ಪ್ರಧಾನಿ ಮೋದಿ ಸೇರಿ ಹಲವು ಗಣ್ಯರು ಭಾಗಿ
ವಿವಿಧ ಸಚಿವರಿಂದ WITT 2025 ಭಾಗಿ
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್ ಮತ್ತು ಕೇಂದ್ರ ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಈ ಬಾರಿ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ 2025’ ಮೆಗಾ ವೇದಿಕೆಯಲ್ಲಿ ಭಾಗವಹಿಸಲಿದ್ದಾರೆ.
ಟಿವಿ9 ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿ
ಟಿವಿ9 ನೆಟ್ವರ್ಕ್ ಪ್ರತೀ ವರ್ಷವೂ ಒಂದಕ್ಕಿಂತ ಹಲವು ಬೇರೆ ಬೇರೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಈ ಕಾರ್ಯಕ್ರಮಗಳು ಭಾರತದ ಭವ್ಯ ಪ್ರಗತಿಯ ಓಟಕ್ಕೆ ಕನ್ನಡಿ ಹಿಡಿಯುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಕೆಲ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದುಂಟು. 2024ರ ಫೆಬ್ರವರಿ 25 ಮತ್ತು 26 ರಂದು ನಡೆದ ವಾಟ್ ಇಂಡಿಯಾ ಥಿಂಕ್ಸ್ ಟುಡೇ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು. ನವೆಂಬರ್ 2024 ರಲ್ಲಿ ಜರ್ಮನಿಯಲ್ಲಿ ಆಯೋಜಿಸಲಅದ ನ್ಯೂಸ್9 ಜಾಗತಿಕ ಶೃಂಗಸಭೆಯಲ್ಲೂ ಪ್ರಧಾನಿಗಳು ಭಾಗಿಯಾಗಿದ್ದುದನ್ನು ಈಗ ಸ್ಮರಿಸಬಹುದು.
ಈಗ ವಾಟ್ ಇಂಡಿಯಾ ಥಿಂಕ್ಸ್ ಟುಡೇಯ ಮೂರನೇ ಆವೃತ್ತಿ ಕಾರ್ಯಕ್ರಮದಲ್ಲೂ ಪ್ರಧಾನಿಗಳು ಪಾಲ್ಗೊಂಡು ಮಾತನಾಡಲಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ