Sign In

By signing in or creating an account, you agree with Associated Broadcasting Company's Terms & Conditions and Privacy Policy.

WITT Global Summit 2025 : ನನಗೆ ಭವಿಷ್ಯ ಹೇಳುವುದರಲ್ಲಿ ನಂಬಿಕೆ ಇಲ್ಲ, ಭವಿಷ್ಯ ಸೃಷ್ಟಿಸುವುದರಲ್ಲಿ ನಂಬಿಕೆಯಿದೆ : ಧೀರೇಂದ್ರ ಶಾಸ್ತ್ರಿ

ಡಬ್ಲ್ಯುಐಟಿಟಿ ಶೃಂಗಸಭೆ 2025: ನವದೆಹಲಿಯ ಭಾರತ್ ಮಂಟಪದಲ್ಲಿ ಟಿವಿ9 ನೆಟ್‌ವರ್ಕ್‌ನ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’ (WITT) ಶೃಂಗಸಭೆಯ ಮೂರನೇ ಆವೃತ್ತಿ ಕಾರ್ಯಕ್ರಮವು ನಿನ್ನೆ ಆರಂಭವಾಗಿದೆ. ಈ ಕಾರ್ಯಕ್ರಮದಲ್ಲಿ ರಾಜಕೀಯ, ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ವ್ಯವಹಾರ ಜಗತ್ತಿನ ಪ್ರಮುಖ ವ್ಯಕ್ತಿಗಳು ಸಹ ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಎರಡನೇ ದಿನವಾದ ಇಂದು ಬಾಗೇಶ್ವರ ಧಾಮದ ಧಾರ್ಮಿಕ ಗುರು ಧೀರೇಂದ್ರ ಶಾಸ್ತ್ರಿ ಈ ಶೃಂಗಸಭೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ, ಈ ಕುರಿತಾದ ಮಾಹಿತಿ ಇಲ್ಲಿದೆ.

WITT Global Summit 2025 : ನನಗೆ ಭವಿಷ್ಯ ಹೇಳುವುದರಲ್ಲಿ ನಂಬಿಕೆ ಇಲ್ಲ, ಭವಿಷ್ಯ ಸೃಷ್ಟಿಸುವುದರಲ್ಲಿ ನಂಬಿಕೆಯಿದೆ : ಧೀರೇಂದ್ರ ಶಾಸ್ತ್ರಿ
ಧೀರೇಂದ್ರ ಶಾಸ್ತ್ರಿ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 29, 2025 | 1:14 PM

ನವದೆಹಲಿ, ಮಾರ್ಚ್ 29: ದೇಶದ ಅತಿದೊಡ್ಡ ಸುದ್ದಿ ಜಾಲ ಟಿವಿ9 ನೆಟ್ ವರ್ಕ್ ನ ‘ ವಾಟ್ ಇಂಡಿಯಾ ಥಿಂಕ್ಸ್ ಟುಡೇ (What India Thinks Today Global Summit 2025) ಜಾಗತಿಕ ಶೃಂಗಸಭೆ’ಯ ಮೂರನೇ ಆವೃತ್ತಿಗೆ ಮಾರ್ಚ್ 28 ರಂದು ಚಾಲನೆ ಸಿಕ್ಕಿದೆ. ಇಂದು ದೆಹಲಿ (dehli)ಯ ಭಾರತ್​ ಮಂಟಪ (bharat mantap) ದಲ್ಲಿ ಎರಡನೇ ದಿನದ ಕಾರ್ಯಕ್ರಮವು ನಡೆಯುತ್ತಿದ್ದು, ಬಾಗೇಶ್ವರ ಧಾಮ (bageshwar dham)ದ ಧಾರ್ಮಿಕ ಗುರು ಧೀರೇಂದ್ರ ಶಾಸ್ತ್ರಿ (dhirendra shastri ) ಶೃಂಗಸಭೆಯಲ್ಲಿ ಭಾಗವಹಿಸಿದ್ದು, ವೇದಿಕೆಯಲ್ಲಿ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿ ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ.

ಬಾಬಾ ಬಾಗೇಶ್ವರ ಧೀರೇಂದ್ರ ಶಾಸ್ತ್ರಿ ಅವರಿಗೆ ವೇದಿಕೆಯಲ್ಲಿ, ಒಬ್ಬ ಸಂತರು ಅಥವಾ ಧಾರ್ಮಿಕ ಗುರು ಜನರ ಸಮಸ್ಯೆಗಳಿಗೆ ಪರಿಹಾರಗಳನ್ನು ಹೇಳಲು ತಮ್ಮ ಶಕ್ತಿಯನ್ನು ಬಳಸುತ್ತಾರೆ, ಈ ಬಗ್ಗೆ ನೀವೇನು ಹೇಳುತ್ತೀರಿ ಎನ್ನುವ ಪ್ರಶ್ನೆಗಳನ್ನು ಕೇಳಲಾಗಿದ್ದು ‘ನಾವು ಸನಾತನ ಸಿಪಾಯಿಗಳು. ಸನಾತನ ಧರ್ಮದ ಉಳಿಯುವಿಕೆಗೆ ಏನು ಕೆಲಸವಾಗಬೇಕೋ ಅದನ್ನು ನಾವು ಮಾಡುತ್ತಿದ್ದೇವೆ’ ಎಂದು ಹೇಳಿದರು.

‘ನಮ್ಮ ಹಿಂದಿನ ಸಂಪ್ರದಾಯವನ್ನು ಮುನ್ನಡೆಸಿಕೊಂಡು ಬಂದಿದ್ದೇವೆ. ನಮ್ಮ ಅಜ್ಜ, ಹಾಗೂ ಮುತ್ತಜ್ಜನಿಗೂ ಈ ಸಂಪ್ರದಾಯವನ್ನು ಹೊಂದಿದ್ದರು. ನಾವು ಆ ಸಂಪ್ರದಾಯದ ಒಂದು ಭಾಗವನ್ನು ಸಂರಕ್ಷಿಸಿದ್ದೇವೆ. ನಾವು ಸನಾತನದ ಸಂರಕ್ಷಕರಾಗಿಯೇ ಉಳಿಯಬೇಕೆಂದು ಭಾವಿಸುತ್ತೇವೆ. ನನಗೆ ಭವಿಷ್ಯವನ್ನು ಹೇಳುವುದರಲ್ಲಿ ನಂಬಿಕೆ ಇಲ್ಲ, ಭವಿಷ್ಯವನ್ನು ಸೃಷ್ಟಿಸುವುದನ್ನು ನಾನು ನಂಬುತ್ತೇವೆ’ ಎಂದು ತಿಳಿಸಿದರು.

ಇದನ್ನೂ ಓದಿ
Image
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್
Image
ಬೇರೆ ಮಾಧ್ಯಮಗಳೂ ಇದನ್ನೇ ಅನುಸರಿಸುತ್ತವೆ; ಟಿವಿ9ಗೆ ಪ್ರಧಾನಿ ಮೋದಿ ಶ್ಲಾಘನೆ
Image
ಪ್ರಧಾನಿಗೆ ವೇದಿಕೆಯಲ್ಲಿ ಗೌರವಿಸಿದ ಡಾ. ರಾಮೇಶ್ವರ್ ರಾವ್
Image
ಭಾರತ ಜಾಗತಿಕ ದಕ್ಷಿಣದ ದೇಶಗಳ ಧ್ವನಿಯಾಗುತ್ತಿದೆ; WITT ಶೃಂಗಸಭೆಯಲ್ಲಿ ಮೋದಿ

ಇದನ್ನೂ ಓದಿ: ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ ಮೆಚ್ಚುಗೆ

ಈ ವೇದಿಕೆಯ ಮೇಲೆ, ಬಾಬಾ ಬಾಗೇಶ್ವರ್ ಅವರಿಗೆ ಕಥಾವಾಚಕರು ಅಥವಾ ‘ ಸಂತರು ಸೆಲೆಬ್ರಿಟಿಗಳಾಗುತ್ತಿದ್ದಾರೆಯೇ?’ ಎಂದು ಪ್ರಶ್ನೆ ಕೇಳಿದ್ದು, ‘ಸೆಲೆಬ್ರಿಟಿಗಳು ಎನ್ನುವ ವಿಷಯವೇ ಬೇರೆ. ನಮ್ಮ ಸಂದೇಶವನ್ನು ಜನರಿಗೆ ಮತ್ತು ಜನರ ಮೂಲಕ ದೇಶಕ್ಕೆ ತಲುಪಿಸುವುದು ನಮ್ಮ ಕೆಲಸವಾಗಿದೆ. ನಾವು ದೇಶಕ್ಕೆ ನಮ್ಮ ಸಂದೇಶವನ್ನು ಹೇಗೆ ರವಾನಿಸಬಹುದು? ಅದಕ್ಕಾಗಿ ಟಿವಿ9 ಭಾರತ ವರ್ಷ ಇದೆ’ ಎಂದು ಬಹಳ ಹೆಮ್ಮೆಯಿಂದ ಹೇಳಿಕೊಂಡರು.

WITT ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ