ಭಾರತ ಉತ್ತಮ ಪ್ರಧಾನಿಯನ್ನು ಪಡೆದಿದೆ, ಮೋದಿ ತುಂಬಾ ಬುದ್ಧಿವಂತ ವ್ಯಕ್ತಿ, ಮತ್ತೊಮ್ಮೆ ಹಾಡಿ ಹೊಗಳಿದ ಡೊನಾಲ್ಡ್ ಟ್ರಂಪ್
ಭಾರತದ ಒಳ್ಳೆಯ ಪ್ರಧಾನಿಯನ್ನು ಹೊಂದಿದೆ, ಪ್ರಧಾನಿ ಮೋದಿ ಒಬ್ಬ ಬುದ್ಧಿವಂತ ವ್ಯಕ್ತಿ ಎಂದು ಅಮೆರಿಕದ ಅಧ್ಯಕ್ಷ ಹಾಡಿ ಹೊಗಳಿದ್ದಾರೆ. ನಾವು ಯಾವಾಗಲೂ ಉತ್ತಮ ಸ್ನೇಹಿತರಾಗಿದ್ದೇವೆ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಸುಂಕ ವಿಧಿಸುವ ರಾಷ್ಟ್ರಗಳಲ್ಲಿ ಒಂದಾಗಿದೆ. ತುಂಬಾ ಬುದ್ಧಿವಂತರು ಎಂದೆಲ್ಲ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಮೆರಿಕಕ್ಕೆ ಭೇಟಿ ನೀಡಿದಾಗ ನಾವು ತುಂಬಾ ಒಳ್ಳೆಯ ಮಾತುಕತೆ ನಡೆಸಿದ್ದೇವೆ. ಭಾರತ ಮತ್ತು ನಮ್ಮ ದೇಶದ ನಡುವೆ ಇದು ಚೆನ್ನಾಗಿ ಕೆಲಸ ಮಾಡುತ್ತದೆ ಎಂದು ಹೇಳಿದ್ದಾರೆ.

ಅಮೆರಿಕ, ಮಾ.29: ಭಾರತದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯ (Narendra Modi) ನಾಯಕತ್ವ ಹಾಗೂ ಕೆಲಸವನ್ನು ಅನೇಕ ದೇಶದ ನಾಯಕರು ಒಪ್ಪಿಕೊಂಡು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದೀಗ ಅಮೆರಿಕದ ಅಧ್ಯಕ್ಷ ಟ್ರಂಪ್ ಸರದಿ, ಹೌದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump )ಅವರು ಪ್ರಧಾನಿ ಮೋದಿ ಅವರನ್ನು ಹಾಡಿ ಹೊಗಳಿದ್ದಾರೆ. ಶುಕ್ರವಾರ (ಮಾ. 28) ಯಂದು ಶ್ವೇತಭವನದ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ಮೋದಿ ಅವರನ್ನು ಅತ್ಯಂತ ಬುದ್ಧಿವಂತ ಹಾಗೂ ಮಹಾನ್ ಸ್ನೇಹಿತ ಎಂದು ಹೇಳಿದ್ದಾರೆ. ಈ ವೇಳೆ ಭಾರತದ ಹೆಚ್ಚಿನ ಸುಂಕಗಳ ಕುರಿತು ತಮ್ಮ ನಿಲುವನ್ನು ಪುನರುಚ್ಚರಿಸಿದರು.
ಪ್ರಧಾನಿ ಮೋದಿ ಇತ್ತೀಚೆಗೆ ಇಲ್ಲಿಗೆ ಬಂದಿದ್ದರು, ಮತ್ತು ನಾವು ಯಾವಾಗಲೂ ಉತ್ತಮ ಸ್ನೇಹಿತರಾಗಿದ್ದೇವೆ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಸುಂಕ ವಿಧಿಸುವ ರಾಷ್ಟ್ರಗಳಲ್ಲಿ ಒಂದಾಗಿದೆ. ತುಂಬಾ ಬುದ್ಧಿವಂತರು ಎಂದು ಟ್ರಂಪ್ ಹೇಳಿದರು. ಅವರು ತುಂಬಾ ಬುದ್ಧಿವಂತ ವ್ಯಕ್ತಿ ಮತ್ತು ನನ್ನ ಉತ್ತಮ ಸ್ನೇಹಿತ. ಅವರು ಅಮೆರಿಕಕ್ಕೆ ಭೇಟಿ ನೀಡಿದಾಗ ನಾವು ತುಂಬಾ ಒಳ್ಳೆಯ ಮಾತುಕತೆ ನಡೆಸಿದ್ದೇವೆ. ಭಾರತ ಮತ್ತು ನಮ್ಮ ದೇಶದ ನಡುವೆ ಇದು ಚೆನ್ನಾಗಿ ಕೆಲಸ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ. ಮತ್ತು ನೀವು (ಭಾರತ) ಉತ್ತಮ ಪ್ರಧಾನಿಯನ್ನು ಹೊಂದಿದ್ದೀರಿ ಎಂದು ಹೇಳಿದರು.
ಏಪ್ರಿಲ್ 2 ರಿಂದ ಭಾರತ ಸೇರಿದಂತೆ ಹಲವಾರು ದೇಶಗಳ ಮೇಲೆ ಪರಸ್ಪರ ಸುಂಕಗಳನ್ನು ಜಾರಿಗೆ ತರಲು ಅಮೆರಿಕ ಸಿದ್ಧತೆ ನಡೆಸುತ್ತಿದೆ. ಭಾರತದ ವ್ಯಾಪಾರ ನೀತಿಗಳನ್ನು ಟ್ರಂಪ್ ನಿರಂತರವಾಗಿ ಟೀಕಿಸುತ್ತಾ, ಅದನ್ನು ‘ಸುಂಕದ ರಾಜ’ ಎಂದು ಕರೆದಿದ್ದಾರೆ ಮತ್ತು ಅದರ ಆಮದು ಸುಂಕಗಳನ್ನು ‘ತುಂಬಾ ಅನ್ಯಾಯ ಮತ್ತು ಬಲವಾದ’ ಎಂದು ಬಣ್ಣಿಸಿದ್ದಾರೆ. ಭಾರತದೊಂದಿಗೆ ನನಗೆ ಉತ್ತಮ ಸಂಬಂಧವಿದೆ, ಆದರೆ ಭಾರತದೊಂದಿಗೆ ನನಗಿರುವ ಏಕೈಕ ಸಮಸ್ಯೆ ಎಂದರೆ ಅವರು ವಿಶ್ವದ ಅತಿ ಹೆಚ್ಚು ಸುಂಕ ವಿಧಿಸುವ ರಾಷ್ಟ್ರಗಳಲ್ಲಿ ಒಂದಾಗಿದೆ. ಅವರು ಬಹುಶಃ ಆ ಸುಂಕಗಳನ್ನು ಗಣನೀಯವಾಗಿ ಕಡಿಮೆ ಮಾಡಲಿದ್ದಾರೆ ಎಂದು ನಾನು ನಂಬುತ್ತೇನೆ, ಆದರೆ ಏಪ್ರಿಲ್ 2 ರಂದು, ಅವರು ನಮಗೆ ವಿಧಿಸುವ ಅದೇ ಸುಂಕಗಳನ್ನು ನಾವು ಅವರಿಗೆ ವಿಧಿಸುತ್ತೇವೆ ಎಂದು ಟ್ರಂಪ್ ಹೇಳಿದ್ದಾರೆ.
ಇದನ್ನೂ ಓದಿ: ಮೋದಿ ಆಹ್ವಾನ ಸ್ವೀಕರಿಸಿದ ಪುಟಿನ್; ಶೀಘ್ರದಲ್ಲೇ ಭಾರತಕ್ಕೆ ರಷ್ಯಾ ಅಧ್ಯಕ್ಷ ಭೇಟಿ
ಫೆಬ್ರವರಿ 12-13 ರಂದು ಪ್ರಧಾನಿ ಮೋದಿ ಅವರ ಅಮೆರಿಕ ಭೇಟಿಯ ಸಂದರ್ಭದಲ್ಲಿ, ಭಾರತ ಮತ್ತು ಅಮೆರಿಕ ಎರಡೂ ದೇಶಗಳು ನ್ಯಾಯಯುತತೆ, ರಾಷ್ಟ್ರೀಯ ಭದ್ರತೆ ಮತ್ತು ಉದ್ಯೋಗ ಸೃಷ್ಟಿಯನ್ನು ಖಚಿತಪಡಿಸುವ ಬೆಳವಣಿಗೆಯನ್ನು ಉತ್ತೇಜಿಸಲು ದ್ವಿಪಕ್ಷೀಯ ವ್ಯಾಪಾರ ಸಂಬಂಧವನ್ನು ಗಾಢವಾಗಿಸಲು ನಿರ್ಧರಿಸಿವೆ ಎಂದು ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಹೇಳಿದರು. ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ದ್ವಿಪಕ್ಷೀಯ ವ್ಯಾಪಾರ ‘ಮಿಷನ್ 500’ ಗುರಿಯನ್ನು ಹೊಂದಿದ್ದಾರೆ. 2030 ರ ವೇಳೆಗೆ ಒಟ್ಟು ದ್ವಿಪಕ್ಷೀಯ ಸರಕು ಮತ್ತು ಸೇವೆಗಳ ವ್ಯಾಪಾರವನ್ನು $500 ಶತಕೋಟಿಗೆ ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದ್ದಾರೆ.
ಎರಡು ರಾಷ್ಟ್ರದ ನಾಯಕರು ಕೂಡ ಉತ್ತಮ ಮಾತುಕತೆಯನ್ನು ನಡೆಸಿದ್ದಾರೆ. ಈ ಮಾತುಕತೆಯಂತೆ ಮುಂದಿನ ದಿನಗಳಲ್ಲಿ ಬಿಟಿಎಗೆ ಚೌಕಟ್ಟನ್ನು ನಿರ್ಮಿಸಲು ಸಕ್ರಿಯವಾಗಿ ಕೆಲಸ ಮಾಡುತ್ತಿವೆ, ಇದು ಸರಕು ಮತ್ತು ಸೇವಾ ವಲಯದಾದ್ಯಂತ ವ್ಯಾಪಾರವನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ, ಅದೇ ಸಮಯದಲ್ಲಿ ಮಾರುಕಟ್ಟೆ ಪ್ರವೇಶವನ್ನು ಹೆಚ್ಚಿಸುವುದು, ಸುಂಕ ಮತ್ತು ಸುಂಕ ರಹಿತ ತಡೆಗಳನ್ನು ಕಡಿಮೆ ಮಾಡುವುದು ಮತ್ತು ಪೂರೈಕೆ-ಸರಪಳಿ ಏಕೀಕರಣವನ್ನು ಆಳಗೊಳಿಸುವತ್ತ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ವಿದೇಶಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:13 am, Sat, 29 March 25