ಸುದೀಪ್ ಅಭಿಮಾನಿಗಳ ವಿರುದ್ಧ ಕಂಪ್ಲೆಂಟ್ ಕೊಡುವಾಗ ಪೊಲೀಸರು ಸರಿಯಾಗಿ ನಡೆದುಕೊಂಡಿಲ್ಲ; ಅಹೋರಾತ್ರ ಆರೋಪ
ಈ ಬಗ್ಗೆ ಇಂದು (ಮಾರ್ಚ್ 21) ಫೇಸ್ಬುಕ್ ಲೈವ್ನಲ್ಲಿ ಬಂದು ಮಾತನಾಡಿರುವ ಅಹೋರಾತ್ರ, ಕಿಚ್ಚ ಸುದೀಪ್ ಅಭಿಮಾನಿಗಳು ನಿನ್ನೆ ಸಂಜೆ (ಮಾರ್ಚ್ 20) ನನ್ನ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಿದ್ದಾರೆ.
ಕಿಚ್ಚ ಸುದೀಪ್ ಅವರ ಬಗ್ಗೆ ಲಘುವಾಗಿ ಮಾತನಾಡಿದ್ದ ಬರಹಗಾರ ಹಾಗೂ ಚಿಂತಕ ಅಹೋರಾತ್ರ ಅವರ ಮನೆಗೆ ಶನಿವಾರ ಕೆಲವರು ನುಗ್ಗಿ ದಾಂಧಲೆ ಮಾಡಿದ್ದರು. ಈ ರೀತಿ ದಾಂಧಲೆ ಮಾಡಿದ್ದು ಕಿಚ್ಚ ಸುದೀಪ್ ಅಭಿಮಾನಿಗಳು ಎಂದು ಅಹೋರಾತ್ರ ಆರೋಪಿಸಿದ್ದರು. ಇದಕ್ಕೆ ಸಂಬಂಧಿಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಆದರೆ, ದೂರು ನೀಡುವಾಗ ಪೊಲೀಸರು ನಮ್ಮ ಜತೆ ಸರಿಯಾಗಿ ನಡೆದುಕೊಂಡಿಲ್ಲ ಎಂದು ಅಹೋರಾತ್ರ ಆರೋಪಿಸಿದ್ದಾರೆ. ಈ ಬಗ್ಗೆ ಇಂದು ಫೇಸ್ಬುಕ್ ಲೈವ್ನಲ್ಲಿ ಬಂದು ಮಾತನಾಡಿರುವ ಅಹೋರಾತ್ರ, ಕಿಚ್ಚ ಸುದೀಪ್ ಅಭಿಮಾನಿಗಳು ನಿನ್ನೆ ಸಂಜೆ (ಮಾರ್ಚ್ 20) ನನ್ನ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಿದ್ದಾರೆ. ಸುದೀಪ್ ಅಭಿಮಾನಿ ಸಂಘದ ರಾಜ್ಯಾಧ್ಯಕ್ಷ ನವೀನ್ ಗೌಡ, ಅನೇಕರನ್ನು ಕರೆದುಕೊಂಡು ಬಂದು ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ.
ನನಗೆ ರಾಜ್ಯಾದ ಜನರಿಂದ ಬೆಂಬಲ ಸಿಗುತ್ತಿದೆ. ಸಾರ್ವಜನಿಕರಿಂದ ಸಿಕ್ಕಷ್ಟು ಬೆಂಬಲ ಪೊಲೀಸರಿಂದ ಸಿಕ್ಕಿಲ್ಲ ಅನ್ನೋದು ಬೇಸರದ ಸಂಗತಿ. ನನಗೆ ಅನಾರೋಗ್ಯ ಇದ್ದ ಕಾರಣ ದೂರು ನೀಡಲು ಹೋಗಲು ಸಾಧ್ಯವಾಗಿಲ್ಲ. ನನ್ನ ಸಂಬಂಧಿಕರು ಪೊಲೀಸ್ ಠಾಣೆಗೆ ಹೋಗಿದ್ದರು. ಈ ವೇಳೆ ಪೊಲೀಸರು ನಮ್ಮ ಜತೆ ಗೌರವಯುತವಾಗಿ ನಡೆದುಕೊಂಡಿಲ್ಲ, ಎಂದು ಅಹೋರಾತ್ರ ಬೇಸರ ಹೊರ ಹಾಕಿದ್ದಾರೆ.
ಹಲ್ಲೆಗೊಳಗಾದವರಿಗೆ ಒಳ್ಳೆಯ ಟ್ರೀಟ್ಮೆಂಟ್ ಸಿಗುತ್ತಿಲ್ಲ. ನಮಗೆ ಅಭದ್ರತೆ ಕಾಡುತ್ತಿದೆ. ಹಲ್ಲೆ ಆದ ನಂತರ ಪೊಲೀಸರು ಏನೂ ಆಗಲ್ಲ ನಾವೀದಿವೀ ಎಂದು ಹೇಳಿದ್ದರು. ಆದರೆ, ರಾತ್ರಿ ಹೊರಗೆ ಹೋಗಿ ನೋಡಿದಾಗ ಯಾವ ಪೊಲೀಸ್ ಕೂಡ ಇರಲಿಲ್ಲ. ನಮಗೆ ಬೆದರಿಕೆ ಕಾಲ್ ಬರುತ್ತಿತ್ತು. ನಾವು ಕಾಲ್ ಮಾಡಿ ಕೇಳಿದ ನಂತರ ಬೀಟ್ ಪೊಲೀಸರು ಬಂದರು. ಬೇಸರದ ವಿಚಾರ ಎಂದರೆ, ಹಲ್ಲೆ ನಡೆಯುವಾಗ ಪೊಲೀಸರು ಕೂಡ ಇದ್ದರು. ಅವರ ಎದುರೇ ಹಲ್ಲೆ ಆಗಿದೆ. ಆದರೆ, ಪೊಲೀಸರು ಇದನ್ನು ತಡೆಯುವ ಪ್ರಯತ್ನವನ್ನೇ ಮಾಡಿಲ್ಲ ಎಂದು ಲೈವ್ನಲ್ಲಿ ಅಹೋರಾತ್ರ ಹೇಳಿದ್ದಾರೆ.
ಏನಿದು ಘಟನೆ?
ಕಿಚ್ಚ ಸುದೀಪ್ ರಮ್ಮಿ ಗೇಮ್ನ ರಾಯಭಾರಿ ಆಗಿದ್ದರು. ಇದಕ್ಕೆ ಅಹೋರಾತ್ರ ವಿರೋಧ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲ, ಕಿಚ್ಚ ಅವರನ್ನು ಅಹೋರಾತ್ರ ನಿರಂತರವಾಗಿ ಟೀಕಿಸಿದ್ದರು. ಸುದೀಪ್ ಮಾಡಿದ್ದು ಸರಿಯಲ್ಲ. ಅನೇಕರು ಆನ್ಲೈನ್ ಜೂಜಿನಿಂದ ಮನೆ ಮಠ ಕಳೆದುಕೊಂಡಿದ್ದಾರೆ. ಹೀಗಾಗಿ, ಅವರು ಇದರ ರಾಯಭಾರಿ ಆಗಿರುವುದು ಸರಿಯಲ್ಲ ಎಂದು ಹೇಳಿದ್ದರು. ಇಷ್ಟೇ ಅಲ್ಲ ಸುದೀಪ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು.
ಅಹೋರಾತ್ರ ಅವರ ನಡೆಗೆ ಕಿಚ್ಚನ ಅಭಿಮಾನಿಗಳು ಸಿಟ್ಟಾಗಿದ್ದರು. ಅಷ್ಟೇ ಅಲ್ಲ, ಇದು ಮುಂದುವರೆದರೆ ಸರಿ ಇರುವುದಿಲ್ಲ ಎನ್ನುವ ಎಚ್ಚರಿಕೆಯನ್ನು ಕೂಡ ನೀಡಿದ್ದರು. ಈ ವಿಚಾರದಲ್ಲಿ ಲೈವ್ ಬಂದು ಮಾತನಾಡಿದ್ದ ಅಹೋರಾತ್ರ, ಕಿಚ್ಚನ ಅಭಿಮಾನಿಗಳು ನನಗೆ ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ ಎಂದು ಏಕವಚನದಲ್ಲೇ ಮಾತನಾಡಿದ್ದರು. ಸತತವಾಗಿ ಸುದೀಪ್ ಅವರ ಬಗ್ಗೆ ಹಗುರವಾಗಿ ಮಾತನಾಡುತ್ತಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಸುದೀಪ್ ಅಭಿಮಾನಿಗಳು ನಮ್ಮ ಮನೆಗೆ ನುಗ್ಗಿ ದಾಂಧಲೆ ಮಾಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Kichcha Sudeep: ಅಹೋರಾತ್ರ ಮನೆಗೆ ಕಿಚ್ಚನ ಫ್ಯಾನ್ಸ್ ಹೋಗಿದ್ದು ಯಾಕೆ? ಕಾರಣ ತಿಳಿಸಿದ ಸುದೀಪ್ ಅಭಿಮಾನಿ ಜಗದೀಶ್!
ಅಹೋರಾತ್ರ ಮನೆಗೆ ನುಗ್ಗಿ ಸುದೀಪ್ ಅಭಿಮಾನಿಗಳ ದಾಂಧಲೆ ಆರೋಪ; ಕಿಚ್ಚನನ್ನು ಅರೆಸ್ಟ್ ಮಾಡಲು ಆಗ್ರಹ