ಅಹೋರಾತ್ರ ಮನೆಗೆ ನುಗ್ಗಿ ಸುದೀಪ್​ ಅಭಿಮಾನಿಗಳ ದಾಂಧಲೆ ಆರೋಪ; ಕಿಚ್ಚನನ್ನು ಅರೆಸ್ಟ್​ ಮಾಡಲು ಆಗ್ರಹ

Kichcha Sudeep: ಈ ರೀತಿ ದಾಂಧಲೆ ಮಾಡಿದ್ದು ಕಿಚ್ಚ ಸುದೀಪ್​ ಅಭಿಮಾನಿಗಳು ಎಂದು ಅಹೋರಾತ್ರ ದೂರಿದ್ದಾರೆ. ಅಷ್ಟೇ ಅಲ್ಲ, ಈ ಬಗ್ಗೆ ಲೈವ್​ ವಿಡಿಯೋ ಮಾಡಿ ಹಾಕಿದ್ದಾರೆ.

ಅಹೋರಾತ್ರ ಮನೆಗೆ ನುಗ್ಗಿ ಸುದೀಪ್​ ಅಭಿಮಾನಿಗಳ ದಾಂಧಲೆ ಆರೋಪ; ಕಿಚ್ಚನನ್ನು ಅರೆಸ್ಟ್​ ಮಾಡಲು ಆಗ್ರಹ
ಸುದೀಪ್ ಹಾಗೂ ಅಹೋರಾತ್ರ
Follow us
ರಾಜೇಶ್ ದುಗ್ಗುಮನೆ
|

Updated on:Mar 20, 2021 | 7:51 PM

ಕಿಚ್ಚ ಸುದೀಪ್​ ಅವರ ಬಗ್ಗೆ ಲಘುವಾಗಿ ಮಾತನಾಡಿದ್ದ ಬರಹಗಾರ ಹಾಗೂ ಚಿಂತಕ ಅಹೋರಾತ್ರ ಅವರ ಮನೆಗೆ ಕೆಲವರು ನುಗ್ಗಿ ದಾಂಧಲೆ ಮಾಡಿದ್ದಾರೆ. ಈ ರೀತಿ ದಾಂಧಲೆ ಮಾಡಿದವರನ್ನು ಕಿಚ್ಚ ಸುದೀಪ್​ ಅಭಿಮಾನಿಗಳು ಎಂದು ಅಹೋರಾತ್ರ ದೂರಿದ್ದಾರೆ. ಅಷ್ಟೇ ಅಲ್ಲ, ಈ ಬಗ್ಗೆ ಲೈವ್​ ವಿಡಿಯೋ ಮಾಡಿ ಬೇಸರ ಹೊರಹಾಕಿದ್ದಾರೆ. 

ಇಂದು ಫೇಸ್​ಬುಕ್​ನಲ್ಲಿ ಅಹೋರಾತ್ರ ಲೈವ್​ ಬಂದಿದ್ದಾರೆ. ಈ ವೇಳೆ ಅವರ ಮನೆಗೆ ಒಂದಷ್ಟು ಜನರು ನುಗ್ಗಲು ಪ್ರಯತ್ನಿಸಿದ್ದಾರೆ. ಇದೆಲ್ಲ ಕಿಚ್ಚ ಸುದೀಪ್​ ಅಭಿಮಾನಿಗಳದ್ದೇ ಕೆಲಸ. ಅವರು ನನ್ನನ್ನು ಕೊಲ್ಲಲು ಬಂದಿದ್ದರು. ಕಿಚ್ಚ ಸುದೀಪ್​ ಈಗಲೇ ಅರೆಸ್ಟ್​ ಆಗಬೇಕು ಎಂದು ಆಗ್ರಹಿಸಿದ್ದಾರೆ.

ಕಿಚ್ಚ ಸುದೀಪ್​ ರಮ್ಮಿ ಗೇಮ್​ನ ರಾಯಭಾರಿ ಆಗಿದ್ದರು. ಇದಕ್ಕೆ ಅಹೋರಾತ್ರ ವಿರೋಧ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲ, ಕಿಚ್ಚ ಅವರನ್ನು ಅಹೋರಾತ್ರ ನಿರಂತರವಾಗಿ ಟೀಕಿಸಿದ್ದರು.  ಸುದೀಪ್​ ಮಾಡಿದ್ದು ಸರಿಯಲ್ಲ. ಅನೇಕರು ಆನ್​ಲೈನ್​ ಜೂಜಿನಿಂದ ಮನೆ ಮಠ ಕಳೆದುಕೊಂಡಿದ್ದಾರೆ. ಹೀಗಾಗಿ, ಅವರು ಇದರ ರಾಯಭಾರಿ ಆಗಿರುವುದು ಸರಿಯಲ್ಲ ಎಂದು ಹೇಳಿದ್ದರು. ಇಷ್ಟೇ ಅಲ್ಲ ಸುದೀಪ್​ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು.

ಅಹೋರಾತ್ರ ಅವರ ನಡೆಗೆ ಕಿಚ್ಚನ ಅಭಿಮಾನಿಗಳು ಸಿಟ್ಟಾಗಿದ್ದರು. ಅಷ್ಟೇ ಅಲ್ಲ, ಇದು ಮುಂದುವರೆದರೆ ಸರಿ ಇರುವುದಿಲ್ಲ ಎನ್ನುವ ಎಚ್ಚರಿಕೆಯನ್ನು ಕೂಡ ನೀಡಿದ್ದರು. ಈ ವಿಚಾರದಲ್ಲಿ ಲೈವ್​ ಬಂದು ಮಾತನಾಡಿದ್ದ ಅಹೋರಾತ್ರ, ಕಿಚ್ಚನ ಅಭಿಮಾನಿಗಳು ನನಗೆ ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ ಎಂದು ಏಕವಚನದಲ್ಲೇ ಮಾತನಾಡಿದ್ದರು.

ಸತತವಾಗಿ ಸುದೀಪ್​ ಅವರ ಬಗ್ಗೆ ಹಗುರವಾಗಿ ಮಾತನಾಡುತ್ತಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಸುದೀಪ್​ ಅಭಿಮಾನಿಗಳು ಅಹೋರಾತ್ರ ಅವರ ಮನೆಗೆ ನುಗ್ಗಿ ದಾಂಧಲೆ ಮಾಡಿದ್ದಾರೆ ಎಂಬುದು ಅಹೋರಾತ್ರ ಅವರ ಆರೋಪ. ಸದ್ಯ ಈ ವಿಚಾರ ಪೊಲೀಸ್​ ಠಾಣೆಯ ಮೆಟ್ಟಿಲೇರಿದೆಯಂತೆ.

ಕಿಚ್ಚ ಸುದೀಪ್​ ಸದ್ಯ ಬಿಗ್​ ಬಾಸ್​ ಮನೆಯಲ್ಲಿ ಬ್ಯುಸಿ ಇರುತ್ತಾರೆ. ಹೀಗಾಗಿ, ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅವರು ಈ ಘಟನೆ ಬಗ್ಗೆ ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಸಿಎಂ ಯಡಿಯೂರಪ್ಪ ನಿವಾಸಕ್ಕೆ ತೆರಳಿದ ಕಿಚ್ಚ ಸುದೀಪ್​! ದಿಢೀರ್ ಭೇಟಿಗೆ ಕಾರಣ ಏನು?

Published On - 7:10 pm, Sat, 20 March 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ