ಪಬ್​ಗಳಲ್ಲಿ ಕನ್ನಡ ಹಾಡು ಹಾಕಿ ಅಂದಿದ್ದಕ್ಕೆ ಸಪೋರ್ಟ್​ ಮಾಡಿದ್ದು ಎಷ್ಟು ಸಾವಿರ ಜನ? ಪಕ್ಕಾ ಲೆಕ್ಕ ಇಲ್ಲಿದೆ!

Kannada Hit Songs: ಕರ್ನಾಟಕದಲ್ಲಿಯೇ ಕನ್ನಡವನ್ನು ಕಡೆಗಣಿಸುವ ಜನರು ಇದ್ದಾರೆ. ಕನ್ನಡ ಹಾಡುಗಳನ್ನೂ ಮೂಲೆಗುಂಪು ಮಾಡಲಾಗುತ್ತಿದೆ. ಇದರ ವಿರುದ್ಧ ಆನ್​ಲೈನ್​ ಹೋರಾಟ ಬಲವಾಗಿದೆ.

ಪಬ್​ಗಳಲ್ಲಿ ಕನ್ನಡ ಹಾಡು ಹಾಕಿ ಅಂದಿದ್ದಕ್ಕೆ ಸಪೋರ್ಟ್​ ಮಾಡಿದ್ದು ಎಷ್ಟು ಸಾವಿರ ಜನ? ಪಕ್ಕಾ ಲೆಕ್ಕ ಇಲ್ಲಿದೆ!
Madan Kumar

|

Mar 21, 2021 | 9:29 AM

ಎಲ್ಲ ಭಾಷೆಯ ಜನರಿಗೂ ಬೆಂಗಳೂರು ಆಶ್ರಯ ನೀಡಿದೆ. ಪರರಾಜ್ಯದ ಜನರು ಮಾತ್ರವಲ್ಲದೆ ವಿದೇಶಿಗರು ಕೂಡ ಉದ್ಯೋಗ ಅರಸಿಕೊಂಡು ಬೆಂಗಳೂರಿಗೆ ಬರುತ್ತಾರೆ. ಎಲ್ಲರನ್ನೂ ಸ್ವಾಗತಿಸುವುದು ಕನ್ನಡಿಗರ ಗುಣ. ಪರ ಊರಿನವರ ಭಾಷೆ, ಸಂಸ್ಕೃತಿಯನ್ನು ಕರುನಾಡು ಗೌರವಿಸುತ್ತದೆ. ಆದರೆ ಇಲ್ಲಿಗೆ ಬಂದು ನೆಲೆಕಂಡುಕೊಂಡ ಮೇಲೆ ಪರಭಾಷೆ ಮಂದಿ ಅದೇಕೋ ಗೊತ್ತಿಲ್ಲ ಕನ್ನಡವನ್ನೇ ಕಡೆಗಣಿಸುತ್ತಾರೆ. ಕನ್ನಡ ಹಾಡುಗಳು ಎಂದರೆ ಮೂಗು ಮುರಿಯುತ್ತಾರೆ. ಪಬ್​ಗಳಲ್ಲಿ ಕನ್ನಡ ಹಾಡು ಹಾಕಿ ಎಂದು ಕೇಳಿದರೆ ಅಸಡ್ಡೆ ಮಾಡುತ್ತಾರೆ. ಅದರ ವಿರುದ್ಧ ಆನ್​ಲೈನ್​ನಲ್ಲಿ ಆರಂಭ ಆಗಿರುವ ಹೋರಾಟಕ್ಕೆ ಅನೇಕರು ಬೆಂಬಲ ಸೂಚಿಸಿದ್ದಾರೆ.

ಬೆಂಗಳೂರಿನ ಪಬ್​ಗಳಲ್ಲಿ ಮನವಿ ಮಾಡಿಕೊಂಡರೂ ಕೂಡ ಕನ್ನಡ ಹಾಡುಗಳನ್ನು ಹಾಕುವುದಿಲ್ಲ ಎಂದು ರ‍್ಯಾಪ್​ ಗಾಯಕರಾದ ಅಲೋಕ್​ ಬಾಬು, ಚಂದನ್​ ಶೆಟ್ಟಿ ಮುಂತಾದವರು ಅಸಮಾಧಾನ ಹೊರಹಾಕಿದ್ದಾರೆ. ಪಬ್​ನವರ ಈ ವರ್ತನೆ ವಿರುದ್ಧ ಗಾಯಕ ಅಲೋಕ್​ ಬಾಬು (ಆಲ್​ ಓಕೆ) ಇತ್ತೀಚೆಗೆ ಆನ್​ಲೈನ್​ ಅಭಿಯಾನ ಕೂಡ ಶುರು ಮಾಡಿದ್ದರು. Change.org ಮೂಲಕ ಸಹಿ ಸಂಗ್ರಹಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಅದಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಈವರೆಗೂ ಈ ಸಹಿ ಸಂಗ್ರಹದಲ್ಲಿ ಎಷ್ಟು ಜನ ಭಾಗಿ ಆಗಿದ್ದಾರೆ? ಪಬ್​ಗಳಲ್ಲಿ ಕನ್ನಡ ಹಾಡು ಬೇಕು ಎಂಬುದಕ್ಕೆ ಎಷ್ಟು ಮಂದಿ ಸಮ್ಮತಿ ನೀಡಿದ್ದಾರೆ? 80 ಸಾವಿರಕ್ಕೂ ಹೆಚ್ಚು! ಹೌದು, Change.org ವೆಬ್​ಸೈಟ್​ನಲ್ಲಿ ಮಾ.21ರ ಬೆಳಗ್ಗೆ 9.25ರವರೆಗೆ 81,921 ಜನರು ಸಹಿ ಮಾಡಿದ್ದು, ಬೆಂಗಳೂರಿನ ಪಬ್​ಗಳಲ್ಲಿ ಕನ್ನಡ ಸಾಂಗ್ಸ್​ ಪ್ಲೇ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಕನ್ನಡ ಹಾಡುಗಳಿಗೆ ಡಿಮ್ಯಾಂಡ್​ ಇದೆ ಎಂಬುದಕ್ಕೆ ಇದು ಸಾಕ್ಷಿ ಒದಗಿಸುತ್ತಿದೆ. ಪಬ್​ ಮಾಲೀಕರು ಕನ್ನಡದ ಗೀತೆಗಳನ್ನು ಕಡೆಗಣಿಸುವ ಕಾಲ ಇನ್ನಾದರೂ ಕೊನೆಯಾಗಲಿದೆ ಎಂಬ ಭರವಸೆ ಮೂಡುತ್ತಿದೆ.

ಕನ್ನಡದ ಆಲ್ಬಂ ಗೀತೆಗಳು ಮಾತ್ರವಲ್ಲದೆ, ಸಿನಿಮಾ ಹಾಡುಗಳಿಗೂ ಪಬ್​ಗಳಲ್ಲಿ ಬೇಡಿಕೆ ಇದೆ. ಅನೇಕ ಹಾಡುಗಳು ಸೂಪರ್​ ಹಿಟ್​ ಆಗುತ್ತಿವೆ. ಗ್ರಾಹಕರು ಮನವಿ ಮಾಡಿಕೊಂಡರೂ ಕೂಡ ಕನ್ನಡ ಸಾಂಗ್​ ಪ್ಲೇ ಮಾಡದೇ ಇರುವುದು ಕನ್ನಡಿಗರ ಕೋಪಕ್ಕೆ ಕಾರಣ ಆಗಿರುವ ವಿಚಾರ. ಇದನ್ನು ಮನದಟ್ಟು ಮಾಡಿಸಲು ಕೆಲವು ದಿನಗಳ ಹಿಂದೆ ಚಂದನ್​ ಶೆಟ್ಟಿ ಅವರು ಒಂದು ವಿಡಿಯೋ ಮೂಲಕ ಸಾಕ್ಷಿ ಒದಗಿಸಿದ್ದರು. ಅಲ್ಲದೆ, ಸೋಷಿಯಲ್​ ಮೀಡಿಯಾ ಮೂಲಕ ಹೋರಾಟ ಆರಂಭಿಸಿದ್ದರು.

ಇದನ್ನೂ ಓದಿ: ‘ಪಬ್‌ಗಳಲ್ಲಿ ಕನ್ನಡ ಹಾಡು ಹಾಕೋದಿಲ್ಲ, ಅಸಲಿಗೆ ಅವ್ರೆಲ್ಲ ಕನ್ನಡದವ್ರೇ ಅಲ್ಲ.. ಆದ್ರೂ ಪಬ್ ನಡೆಸೋಕೆ ಇಲ್ಲಿ ಜಾಗ ಬೇಕು’

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada