‘ಪಬ್‌ಗಳಲ್ಲಿ ಕನ್ನಡ ಹಾಡು ಹಾಕೋದಿಲ್ಲ, ಅಸಲಿಗೆ ಅವ್ರೆಲ್ಲ ಕನ್ನಡದವ್ರೇ ಅಲ್ಲ.. ಆದ್ರೂ ಪಬ್ ನಡೆಸೋಕೆ ಇಲ್ಲಿ ಜಾಗ ಬೇಕು’
ಪಬ್‌ಗಳಲ್ಲಿ ಕನ್ನಡ ಹಾಡುಗಳನ್ನೇ ಹಾಕುವುದಿಲ್ಲ. ನಾವು ಎಷ್ಟೇ ಕೇಳಿಕೊಂಡರೂ ಹಾಡು ಹಾಕಲ್ಲ. ಪರಿಸ್ಥಿತಿ ಕೈಮೀರುವುದಕ್ಕೆ ಮೊದಲು ಜಾಗೃತರಾಗಬೇಕು ಎಂದು ಕನ್ನಡ ಱಪರ್ ಚಂದನ್ ಶೆಟ್ಟಿ ತಮ್ಮ ನೋವು ತೋಡಿಕೊಂಡಿದ್ದಾರೆ.

ಪಬ್‌ಗಳಲ್ಲಿ ಕನ್ನಡ ಹಾಡುಗಳನ್ನ ಹಾಕೋದಿಲ್ಲ -ಚಂದನ್ ಶೆಟ್ಟಿ ಅಳಲು
ಬೆಂಗಳೂರು: ಪಬ್‌ಗಳಲ್ಲಿ ಕನ್ನಡ ಹಾಡುಗಳನ್ನೇ ಹಾಕುವುದಿಲ್ಲ. ನಾವು ಎಷ್ಟೇ ಕೇಳಿಕೊಂಡರೂ ಹಾಡು ಹಾಕಲ್ಲ. ಪರಿಸ್ಥಿತಿ ಕೈಮೀರುವುದಕ್ಕೆ ಮೊದಲು ಜಾಗೃತರಾಗಬೇಕು ಎಂದು ಕನ್ನಡ ಱಪರ್ ಚಂದನ್ ಶೆಟ್ಟಿ ತಮ್ಮ ನೋವು ತೋಡಿಕೊಂಡಿದ್ದಾರೆ.
ಇದಲ್ಲದೆ, ಪಬ್ ಮಾಲೀಕರ ಧೋರಣೆಯನ್ನ ಖಂಡಿಸಿದ ಚಂದನ್ ಶೆಟ್ಟಿ ಅವರೆಲ್ಲ ಕನ್ನಡದವರೇ ಅಲ್ಲ. ಅವರಿಗೆ ಪಬ್ ನಡೆಸೋಕೆ ಕರ್ನಾಟಕದಲ್ಲಿ ಜಾಗ ಬೇಕು, ಇಲ್ಲಿನ ಎಲ್ಲಾ ಸೌಲಭ್ಯಗಳು ಬೇಕು. ಆದ್ರೆ ಕನ್ನಡ ಮಾತ್ರ ಬೇಡ ಎಂದು ತಮ್ಮ ಸಿಟ್ಟು ಹೊರಹಾಕಿದರು.
ಕನ್ನಡ ಹಾಡುಗಳನ್ನೇ ಹಾಕಿ ಅಂತಾ ನಾವು ಹೇಳುತ್ತಿಲ್ಲ. ಬದಲಿಗೆ ಕನ್ನಡ ಹಾಡುಗಳನ್ನೂ ಹಾಕಿ ಅಂತಾ ಕೇಳ್ತಿದ್ದೀವಿ ಎಂದು ವಿಡಿಯೋ ಮೂಲಕ ಚಂದನ್ ಶೆಟ್ಟಿ ಮಾತನಾಡಿದರು. ಇತ್ತೀಚೆಗೆ ಪಬ್ ಒಂದಕ್ಕೆ ಭೇಟಿ ನೀಡಿದ್ದ ಚಂದನ್ ಶೆಟ್ಟಿ ತಮಗಾದ ಅನುಭವದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ.