ಮಹಾಲಿಂಗಪುರ ಪುರಸಭೆ ಸದಸ್ಯೆಯರ ಘರ್ಷಣೆ: ಶಾಸಕ ಸಿದ್ದು ಸವದಿಗೆ ಕಂಟಕ?
ಮಹಾಲಿಂಗಪುರದಲ್ಲಿ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ವೇಳೆ ಗಲಾಟೆ ನಡೆದಿತ್ತು. ವೋಟ್ ಮಾಡಲು ಪುರಸಭೆ ಒಳಬಾರದಂತೆ ಹೊರಗಡೆ ಕಳಿಸಲು ಸದಸ್ಯರು ಮುಂದಾದಾಗ ಘರ್ಷಣೆ ನಡೆದಿತ್ತು.

ಬಾಗಲಕೋಟೆ: ಮಹಾಲಿಂಗಪುರದಲ್ಲಿ 2020ರ ನವೆಂಬರ್ 9 ರಂದು ನಡೆದ ಪುರಸಭೆ ಸದಸ್ಯೆಯರ ನೂಕಾಟ, ತಳ್ಳಾಟಕ್ಕೆ ಸಂಬಂಧಿಸಿ ತೇರದಾಳ ಬಿಜೆಪಿ ಶಾಸಕ ಸಿದ್ದು ಸವದಿ ಸೇರಿದಂತೆ ಸುಮಾರು 31 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಬಾಗಲಕೋಟೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಈ ಬಗ್ಗೆ ಕೇಸ್ ವಿಚಾರಣೆ ನಡೆಯಲಿದೆ.
ಮಹಾಲಿಂಗಪುರದಲ್ಲಿ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ವೇಳೆ ಗಲಾಟೆ ನಡೆದಿತ್ತು. ವೋಟ್ ಮಾಡಲು ಪುರಸಭೆ ಒಳಬಾರದಂತೆ ಹೊರಗಡೆ ಕಳಿಸಲು ಸದಸ್ಯರು ಮುಂದಾದಾಗ ಘರ್ಷಣೆ ನಡೆದಿತ್ತು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯೆ ಚಾಂದಿನಿ ನಾಯಕ್, ಸವಿತಾ ಹುರಕಡ್ಲಿ ಮತ್ತು ಗೋದಾವರಿ ಬಾಟ್ರವರನ್ನು ತಳ್ಳಿದ್ದರು. ಇದರ ಪರಿಣಾಮ ಮೂರು ತಿಂಗಳ ಗರ್ಭಿಣಿಯಾಗಿದ್ದ ಚಾಂದಿನಿ ನಾಯಕ್ ಅವರಿಗೆ ಗರ್ಭಪಾತವಾಗಿತ್ತು.
ಈ ಸಂಬಂಧ ಚಾಂದಿನಿ ನಾಯಕ್ ತೇರದಾಳ ಶಾಸಕ ಸಿದ್ದು ಸವದಿ ಸೇರಿದಂತೆ ಒಟ್ಟು 31 ಜನರ ವಿರುದ್ಧ ದೂರು ನೀಡಿದ್ದರು. ಶಾಸಕರು ಮತ್ತು ಸದಸ್ಯರ ವಿರುದ್ಧ ಮಹಿಳೆಯ ಘನತೆಗೆ ಧಕ್ಕೆ, ಕಿಡ್ನಾಪ್, ಜೀವ ಬೆದರಿಕೆ, ಜಾತಿ ನಿಂದನೆ ಕೇಸ್ ದಾಖಲು ಮಾಡಲಾಗಿತ್ತು. ಕೋರ್ಟ್ ನಿರ್ದೇಶನದ ಮೇರೆಗೆ ಮಹಾಲಿಂಗಪುರ ಠಾಣೆಯಲ್ಲಿ ಡಿಸೆಂಬರ್ 31ರಂದು ಎಫ್ಐಆರ್ ಕೂಡಾ ದಾಖಲಾಗಿತ್ತು. ಜಮಖಂಡಿ ಉಪವಿಭಾಗದ ಪೊಲೀಸರು ದೂರುದಾರೆ ಚಾಂದಿನಿ ನಾಯಕ್ಗೂ ನೋಟಿಸ್ ನೀಡಿದ್ದರು.
ಘಟನೆಗೆ ಸಂಬಂಧಿಸಿದಂತೆ ಮಹಜರು ಮಾಡಲು ಸ್ಥಳಕ್ಕೆ ಬಂದ ಸಿಬ್ಬಂದಿಗೆ ಸಹಕರಿಸುವಂತೆ ಚಾಂದಿನಿ ನಾಯಕ್ಗೆ ನೋಟಿಸ್ ನೀಡಿದ್ದು, ನಿನ್ನೆ (ಡಿಸೆಂಬರ್ 5) ಸ್ಥಳ ಮಹಜರು ನಡೆಯಿತು. ಘಟನೆ ಬಗ್ಗೆ ಚಾಂದಿನಿ ನಾಯಕ್ರವರಿಂದ ಮಹಲಿಂಗಪುರ ಠಾಣೆ ಪೊಲೀಸರು ವಿವರಣೆ ಪಡೆದರು. ಅಲ್ಲದೇ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಂದಲೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಹಾಲಿಂಗಪುರ ಪುರಸಭೆ ನೂಕಾಟ ಪ್ರಕರಣ: BJP ಸದಸ್ಯೆ ಚಾಂದಿನಿ ನಾಯಕ್ಗೆ ಗರ್ಭಪಾತ