ತಲೆಸ್ನಾನದ ಸಂದರ್ಭದಲ್ಲಿ ಮಾಡುವ ಈ ತಪ್ಪುಗಳು ಸಹ ಕೂದಲು ಉದುರಲು ಮುಖ್ಯ ಕಾರಣ
ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವಿಕೆ ಸಾಮಾನ್ಯ ಸಮಸ್ಯೆಯಾಗಿದೆ. ರಾಸಾಯನಿಕಯುಕ್ತ ಕಳಪೆ ಜೀವನಶೈಲಿ, ಆಹಾರ ಮಾತ್ರವಲ್ಲದೆ ತಲೆಸ್ನಾನ ಮಾಡುವ ಸಂದರ್ಭದಲ್ಲಿ ಮಾಡುವ ಕೆಲವು ತಪ್ಪುಗಳು ಸಹ ಈ ಸಮಸ್ಯೆಗೆ ಕಾರಣವಂತೆ. ಈ ತಪ್ಪುಗಳಿಮದಾಗಿ ಕೂದಲು ಬೇಗನೆ ನಿರ್ಜೀವ, ಶುಷ್ಕ, ಸುಕ್ಕುಗಟ್ಟಿದಂತಾಗಿ ಉದುರಿ ಹೋಗುತ್ತದೆ. ಆದ್ದರಿಂದ, ನಿಮ್ಮ ಕೂದಲನ್ನು ಆರೋಗ್ಯಕರವಾಗಿಡಲು, ಕೂದಲು ಉದುರುವುದನ್ನು ತಡೆಯಲು ಈ ಸಲಹೆಯನ್ನು ಪಾಲಿಸಿ.

ಇಂದಿನ ದಿನಗಳಲ್ಲಿ ಕೂದಲು ಉದುರುವಿಕೆ (Hair Fall) ಸಮಸ್ಯೆ ತೀರಾ ಹೆಚ್ಚಿದೆ. ಅದೆಷ್ಟೇ ಕೂದಲ ಆರೈಕೆ ಮಾಡಿದರೂ ಸಹ ಹೆಚ್ಚಿನವರಿಗೆ ಕೂದಲು ಉದುರುವ ಸಮಸ್ಯೆ ಮಾತ್ರ ಕಡಿಮೆ ಆಗ್ತಿಲ್ಲ. ಇದಕ್ಕೆಲ್ಲಾ ನಾವು ತಿನ್ನುವ ಆಹಾರ, ನಮ್ಮ ಜೀವನಶೈಲಿ ಮುಖ್ಯ ಕಾರಣ. ಈ ಕಾರಣದಿಂದಾಗಿ ಎಷ್ಟೇ ಆರೈಕೆ ಮಾಡಿದರೂ ಕೂದಲು ಉದುರುವ ಸಮಸ್ಯೆ ಮಾತ್ರ ಕಡಿಮೆ ಆಗುವುದಿಲ್ಲ. ಇದಲ್ಲದೆ ತಲೆ ಸ್ನಾನ ಮಾಡುವ ಸಂದರ್ಭದಲ್ಲಿ ಮಾಡುವ ಕೆಲವೊಂದು ತಪ್ಪುಗಳ ಸಹ ಕೂದಲು ಉದುರಲು ಮುಖ್ಯ ಕಾರಣವಂತೆ. ಹೌದು ಕೂದಲು ತೊಳೆಯುವಾಗ ಮಾಡುವ ಸಣ್ಣ ತಪ್ಪುಗಳು ಕೂದಲಿನ ಬೇರುಗಳನ್ನು ದುರ್ಬಲಗೊಳಿಸುತ್ತವೆ, ಇದರಿಂದ ಕೂದಲು ಉದುರುತ್ತವೆ. ಹಾಗಾದರೆ ಕೂದಲು ತೊಳೆಯುವಾಗ ಯಾವ ತಪ್ಪುಗಳನ್ನು ಮಾಡಬಾರದು ಎಂಬುದನ್ನು ನೋಡೋಣ ಬನ್ನಿ.
ಕೂದಲು ಉದುರಲು ಸ್ನಾನದ ಸಂದರ್ಭದಲ್ಲಿ ಮಾಡುವ ಈ ತಪ್ಪುಗಳೂ ಕಾರಣ:
ವಿವಿಧ ರೀತಿಯ ಶಾಂಪೂ ಬಳಕೆ: ಜನರು ಸಾಮಾನ್ಯವಾಗಿ ವಿವಿಧ ರೀತಿಯ ಶಾಂಪೂಗಳನ್ನು ಪ್ರಯತ್ನಿಸುತ್ತಾರೆ, ತಪ್ಪಾದ ಶಾಂಪೂ ಆಯ್ಕೆ ಕೂದಲನ್ನು ನಿರ್ಜೀವಗೊಳಿಸುತ್ತದೆ. ಇದು ಕೂದಲಿನ ಶುಷ್ಕತೆ ಮತ್ತು ಒಡೆಯುವಿಕೆಯನ್ನು ಹೆಚ್ಚಿಸುತ್ತದೆ. ಇದಲ್ಲದೆ ನೇರವಾಗಿ ಶಾಂಪೂ ಹಚ್ಚುವುದು ಸಹ ತಪ್ಪು. ಇದರಿಂದ ಕೂದಲಿನ ಬೇರುಗಳಲ್ಲಿ ಎಣ್ಣೆ, ಬೆವರು, ಧೂಳು ಹಾಗೆಯೇ ಉಳಿದು ಬಿಡುತ್ತದೆ. ಹಾಗಾಗಿ ಅಂತಹ ಪರಿಸ್ಥಿತಿಯಲ್ಲಿ, ಕೂದಲು ತೊಳೆಯುವ ಮೊದಲು ನಿಮ್ಮ ಕೂದಲನ್ನು ಚೆನ್ನಾಗಿ ಮಸಾಜ್ ಮಾಡಿ, ಇದು ಕೂದಲಿನಲ್ಲಿ ರಕ್ತ ಪರಿಚಲನೆ ಹೆಚ್ಚಿಸುತ್ತದೆ.
ಆತುರದಿಂದ ಕೂದಲು ತೊಳೆಯುವುದು: ನಿಮ್ಮ ಕೂದಲನ್ನು ಆತುರದಿಂದ ತೊಳೆಯುವುದರಿಂದ ಶಾಂಪೂ ಕೂದಲಿನಲ್ಲಿ ಹಾಗೆಯೇ ಉಳಿಯುವ ಸಾಧ್ಯತೆ ಇರುತ್ತದೆ. ಇದು ಕೂದಲನ್ನು ಭಾರವಾಗಿ, ಜಿಡ್ಡು ಮತ್ತು ನಿರ್ಜೀವವಾಗಿ ಕಾಣುವಂತೆ ಮಾಡುತ್ತದೆ. ಹಾಗಾಗಿ ಕೂದಲನ್ನು ಚೆನ್ನಾಗಿ ತೊಳೆಯಬೇಕು. ಇದರಿಂದ ನೆತ್ತಿ ಸ್ವಚ್ಛವಾಗಿರುತ್ತದೆ ಮತ್ತು ಕೂದಲು ಹಗುರ ಮತ್ತು ತಾಜಾವಾಗಿರುತ್ತದೆ.
ಶಾಂಪೂವನ್ನು ನೇರವಾಗಿ ನೆತ್ತಿಯ ಮೇಲೆ ಬಳಸುವುದು: ಶಾಂಪೂವನ್ನು ನೇರವಾಗಿ ನೆತ್ತಿಗೆ ಹಚ್ಚುವುದು ಕೂಡ ತುಂಬಾ ತಪ್ಪು. ಶಾಂಪೂವನ್ನು ಯಾವಾಗಲೂ ನಿಮ್ಮ ಅಂಗೈಯಲ್ಲಿ ಸ್ವಲ್ಪ ನೀರಿನೊಂದಿಗೆ ಬೆರೆಸಿ ಹಚ್ಚಬೇಕು. ಅದೇ ರೀತಿ, ಕೂದಲಿನ ಬೇರುಗಳಿಗೆ ಕಂಡಿಷನರ್ ಅನ್ನು ಎಂದಿಗೂ ಹಚ್ಚಬಾರದು, ಕೂದಲಿನ ಉದ್ದಕ್ಕೆ ಮಾತ್ರ ಹಚ್ಚಬೇಕು. ಕಂಡಿಷನರ್ ಬೇರುಗಳಿಗೆ ಹೋದರೆ, ಅದು ನೆತ್ತಿಯನ್ನು ಜಿಡ್ಡಿನನ್ನಾಗಿ ಮಾಡುತ್ತದೆ ಮತ್ತು ಕೂದಲಿನ ಕಿರುಚೀಲಗಳನ್ನು ಮುಚ್ಚುತ್ತದೆ. ಸ್ನಾನದ ನಂತರ, ನಾವು ನಮ್ಮ ಕೂದಲನ್ನು ಒಣಗಿಸಲು ಟವೆಲ್‌ನಿಂದ ಬಲವಾಗಿ ಉಜ್ಜುತ್ತೇವೆ. ಈ ಘರ್ಷಣೆ ಕೂದಲಿನ ಹೊರಪೊರೆಗಳಿಗೆ ಹಾನಿ ಮಾಡುತ್ತದೆ ಮತ್ತು ಕೂದಲನ್ನು ದುರ್ಬಲಗೊಳಿಸುತ್ತದೆ. ಬದಲಾಗಿ, ಮೃದುವಾದ ಹತ್ತಿ ಬಟ್ಟೆ ಅಥವಾ ಮೈಕ್ರೋಫೈಬರ್ ಟವಲ್ ಬಳಸಿ ಕೂದಲಿನ ನೀರಿನಾಂಶವನ್ನು ತೆಗೆಯಬೇಕು.
ಇದನ್ನೂ ಓದಿ: ಯಾವ ಸಮಯದಲ್ಲಿ ಪಪ್ಪಾಯಿ ಹಣ್ಣು ತಿನ್ನೋದು ಬೆಸ್ಟ್?
ಕೂದಲನ್ನು ಆಗಾಗ್ಗೆ ತೊಳೆಯುವುದು: ನಿಮ್ಮ ಕೂದಲನ್ನು ಆಗಾಗ್ಗೆ ತೊಳೆಯುವುದರಿಂದ ಕೂದಲಿನ ನೈಸರ್ಗಿಕ ಎಣ್ಣೆಗಳು ಕಳೆದುಹೋಗುತ್ತವೆ. ಇದು ನಿಮ್ಮ ಕೂದಲನ್ನು ಒಣಗಿಸುತ್ತದೆ ಮತ್ತು ನಿಮ್ಮ ನೆತ್ತಿಯಲ್ಲಿ ಹೆಚ್ಚು ಎಣ್ಣೆ ಉತ್ಪತ್ತಿಯಾಗುವಂತೆ ಮಾಡುತ್ತದೆ. ಇದರಿಂದಾಗಿ ನಿಮ್ಮ ಕೂದಲು ಬೇಗನೆ ಜಿಡ್ಡಿನಂತಾಗುತ್ತದೆ. ಹಾಗಾಗಿ ವಾರದಲ್ಲಿ ಎರಡು ಅಥವಾ ಮೂರು ಬಾರಿ ಮಾತ್ರ ತಲೆ ಸ್ನಾನ ಮಾಡಿ ಮತ್ತು ಕೂದಲು ತೊಳೆಯಲು ಸೌಮ್ಯವಾದ ಶಾಂಪೂ ಬಳಸಿ. ಈ ಮೂಲಕ ಕೂದಲು ಉದುರುವುದನ್ನು ತಡೆಯಬಹುದು.
ಒದ್ದೆ ಕೂದಲನ್ನು ಬಾಚುವುದು: ಅನೇಕ ಜನರು ಸ್ನಾನ ಮಾಡಿ ಬಂದ ತಕ್ಷಣವೇ ಒದ್ದೆ ಕೂದಲನ್ನು ಬಾಚುತ್ತಾರೆ. ತಜ್ಞರ ಪ್ರಕಾರ, ಕೂದಲು ಒದ್ದೆಯಾಗಿರುವಾಗ ಅತ್ಯಂತ ದುರ್ಬಲವಾಗಿರುತ್ತದೆ. ಈ ಸಮಯದಲ್ಲಿ ಕೂದಲು ಬಾಚಿಕೊಳ್ಳುವುದರಿಂದ ಕೂದಲು ಉದುರುತ್ತದೆ. ಹಾಗಾಗಿ ಮೊದಲು ಕೂದಲನ್ನು ನೈಸರ್ಗಿಕವಾಗಿ ಒಣಗಲು ಬಿಡಬೇಕು ಮತ್ತು ಒಣಗಿದ ನಂತರವೇ ಅಗಲವಾದ ಹಲ್ಲಿನ ಬಾಚಣಿಗೆಯನ್ನು ಬಳಸಿ ಕೂದಲು ಬಾಚಬೇಕು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
