ಒತ್ತಡದಿಂದ ಮುಕ್ತರಾಗಲು ಬಯಸಿದರೆ ಗಾರ್ಡನಿಂಗ್ ಹವ್ಯಾಸವನ್ನು ಬೆಳೆಸಿಕೊಳ್ಳಿ
ಅನೇಕರು ತಮ್ಮ ಮನೆಯ ಅಂದವನ್ನು ಹೆಚ್ಚಿಸುವ ಸಲುವಾಗಿ ಬಾಲ್ಕನಿ, ಮನೆಯಂಗಳದಲ್ಲಿ ಸುಂದರವಾದ ಕೈತೋಟಗಳನ್ನು ನಿರ್ಮಿಸುತ್ತಾರೆ. ಇದು ಮನೆಯ ಸೌಂದರ್ಯವನ್ನು ಹೆಚ್ಚಿಸುವುದ ಜೊತೆಗೆ ಒತ್ತಡವನ್ನು ಕಡಿಮೆ ಮಾಡಿ ಮನಸ್ಥಿತಿಯನ್ನೂ ಸುಧಾರಿಸುತ್ತದೆ. ಅಲ್ಲದೆ ಗಾರ್ಡನಿಂಗ್ ಹವ್ಯಾಸ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಸಹ ಹೊಂದಿವೆ. ಈ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ನೋಡಿ.

ಮುಖ್ಯಾಂಶಗಳು
- ಕೈತೋಟಗಳು ಮನೆಯ ಅಂದ ಹೆಚ್ಚಿಸುವುದರ ಜೊತೆಗೆ ಆರೋಗ್ಯವನ್ನು ವೃದ್ಧಿಸುತ್ತದೆ
- ಕೈತೋಟದಲ್ಲಿ ಸಮಯ ಕಳೆಯುವುದರಿಂದ ಒತ್ತಡ ಕಡಿಮೆಯಾಗುತ್ತದೆ
- ಗಾರ್ಡನಿಂಗ್ ಹವ್ಯಾಸ ಮನಸ್ಥಿತಿಯನ್ನು ಸುಧಾರಿಸಿ, ಸಂತೋಷವನ್ನು ನೀಡುತ್ತದೆ
ಗಾರ್ಡನಿಂಗ್ (gardening) ಪ್ರಿಯರು ಬಾಲ್ಕನಿಗಳಲ್ಲಿ, ಮನೆಯ ಅಂಗಳದಲ್ಲಿ ವಿವಿಧ ಬಗೆಯ ಸಸ್ಯಗಳನ್ನು ನೆಡುವು ಮೂಲಕ ಸುಂದರ ಕೈತೋಟಗಳನ್ನು ನಿರ್ಮಿಸುತ್ತಾರೆ. ಜೊತೆಗೆ ಗಿಡಗಳಿಗೆ ನೀರು ಹಾಕುತ್ತಾ, ಗೊಬ್ಬರ ಹಾಕುತ್ತಾ, ಕಳೆಗಳನ್ನು ಕೀಳುತ್ತಾ ಒಂದಷ್ಟು ಸಮಯ ಕೈತೋಟದಲ್ಲಿಯೇ ಕಳೆಯುತ್ತಾರೆ. ತುಂಬಾ ಸಾಮಾನ್ಯವೆನಿಸುವ ಈ ಹವ್ಯಾಸವು ದೇಹ ಮತ್ತು ಮನಸ್ಸನ್ನು ಸಕ್ರಿಯವಾಗಿಡಲು ಸಹಾಯ ಮಾಡುತ್ತದೆ. ಅಲ್ಲದೆ ನಿಯಮಿತ ತೋಟಗಾರಿಕೆ ಒತ್ತಡವನ್ನು ಕಡಿಮೆ ಮಾಡಲು, ಮನಸ್ಥಿತಿಯನ್ನು ಸುಧಾರಿಸಲು ಮತ್ತು ದೇಹವನ್ನು ಸಕ್ರಿಯವಾಗಿಡಲು ಸಹಾಯ ಮಾಡುತ್ತದೆ. ನೀವು ಕೂಡ ಒತ್ತಡದಿಂದ ಮುಕ್ತಿ ಪಡೆಯಲು ಬಯಸಿದರೆ ಮನೆಯಲ್ಲಿ ಕೈತೋಟ ನಿರ್ಮಿಸುವ ಅಭ್ಯಾಸವನ್ನು ಬೆಳೆಸಿಕೊಳ್ಳಿ.
ಗಾರ್ಡನಿಂಗ್ ಹವ್ಯಾಸ ಆರೋಗ್ಯಕ್ಕೆ ಸಖತ್ ಪ್ರಯೋಜನಕಾರಿ:
ಒತ್ತಡವನ್ನು ಕಡಿಮೆ ಮಾಡಲು ಸಹಕಾರಿ: ತೋಟಗಾರಿಕೆ, ಪ್ರತಿನಿತ್ಯ ಸಸ್ಯಗಳಿಗೆ ನೀರು ಹಾಕುವುದು, ಕಳೆಗಳನ್ನು ತೆಗೆಯುವುದು, ಬಗೆಬಗೆಯ ಸಸ್ಯಗಳನ್ನು ನೆಡುವುದು ಹೀಗೆ ಪ್ರತಿನಿತ್ಯ ಕೈತೋಟದ ಬಳಿ ಒಂದಷ್ಟು ಸಮಯ ಕಳೆಯುವುದರಿಂದ ಒತ್ತಡ ಮತ್ತು ಆತಂಕ ಕಡಿಮೆಯಾಗುತ್ತದೆ, ಮನಸ್ಸು ನಿರಾಳವಾಗುತ್ತದೆ ಮತ್ತು ನಿಮಗೆ ಸಂತೋಷವನ್ನು ಕೂಡ ನೀಡುತ್ತದೆ.
ಮನಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ: ಪ್ರತಿನಿತ್ಯ ಸಸ್ಯಗಳು ಬೆಳೆಯುವುದನ್ನು ನೋಡುವುದು ಮತ್ತು ನೀವು ನೆಟ್ಟ ಗಿಡಮರಗಳು ಫಸಲು (ಹೂವುಗಳು, ಹಣ್ಣುಗಳು, ತರಕಾರಿ) ನೀಡುವುದನ್ನು ನೋಡುವುದು ತೃಪ್ತಿಕರ ಅನುಭವ ಮಾತ್ರವಲ್ಲ. ಇವು ಮನಸ್ಥಿತಿಯನ್ನು ಸುಧಾರಿಸಲು ಸಹ ಸಹಾಯ ಮಾಡುತ್ತದೆ.
ಇದನ್ನೂ ಓದಿ: ಜೀವನದಲ್ಲಿ ಸಂತೋಷವಾಗಿರಲು ಈ ಸಿಂಪಲ್ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ
ಸಕ್ರಿಯವಾಗಿರಲು ಸಹಾಯ ಮಾಡುತ್ತದೆ: ತೋಟಗಾರಿಕೆಯನ್ನು ದೈಹಿಕ ಚಟುವಟಿಕೆಯ ಒಂದು ರೂಪವೆಂದು ಪರಿಗಣಿಸಬಹುದು. ಗಿಡಗಳನ್ನು ನೆಡುವುದು, ಮಣ್ಣನ್ನು ಅಗೆಯುವುದು, ಗೊಬ್ಬರ ಹಾಕುವುದು, ಕಳೆಗಳನ್ನು ಕೀಳುವುದು ಇವೆಲ್ಲವೂ ತೋಳುಗಳು ಮತ್ತು ಕಾಲುಗಳಿಗೆ ವ್ಯಾಯಾಮವನ್ನು ನೀಡುತ್ತದೆ. ಇವು ನಿಮ್ಮನ್ನು ಸಕ್ರಿಯವಾಗಿರಲು ಸಹಾಯ ಮಾಡುತ್ತದೆ.
ವಿಟಮಿನ್ ಡಿ ಪಡೆಯಲು ಸಹಾಯ ಮಾಡುತ್ತದೆ: ನಿಮ್ಮ ಕೈತೋಟದಲ್ಲಿ ನೀವು ಸಮಯವನ್ನು ಕಳೆಯುವ ಸಂದರ್ಭದಲ್ಲಿ ನೀವು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುತ್ತೀರಿ. ಆಗ ನಿಮ್ಮ ದೇಹಕ್ಕೆ ನೈಸರ್ಗಿಕವಾಗಿ ವಿಟಮಿನ್ ಡಿ ಸಿಗುತ್ತದೆ. ಈ ವಿಟಮಿನ್ ಡಿ ದೇಹವು ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ಮತ್ತು ಮೂಳೆಯ ಬಲವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




