AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಡ್ಡ ಬೆಳೆಸಿದ್ರೆ ಸಾಲದು, ಮೆದುಳಲ್ಲಿ ಬುದ್ಧೀನು ಬೆಳೆಸಿರಬೇಕು; ಶಮಂತ್​​ಗೆ ನೇರವಾಗಿ ಹೇಳಿದ ಗೀತಾ

ಬಿಗ್ ಬಾಸ್​ ಮನೆಯಲ್ಲಿ ಶಮಂತ್​ ಕಳಪೆ ಪ್ರದರ್ಶನದ ಬಗ್ಗೆ ಚರ್ಚೆ ಆಗುತ್ತಲೇ ಇರುತ್ತದೆ. ಈಗ ಗೀತಾ ಕೂಡ ಶಮಂತ್​ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.

ಗಡ್ಡ ಬೆಳೆಸಿದ್ರೆ ಸಾಲದು, ಮೆದುಳಲ್ಲಿ ಬುದ್ಧೀನು ಬೆಳೆಸಿರಬೇಕು; ಶಮಂತ್​​ಗೆ ನೇರವಾಗಿ ಹೇಳಿದ ಗೀತಾ
ಬ್ರೋ ಗೌಡ- ಗೀತಾ
ರಾಜೇಶ್ ದುಗ್ಗುಮನೆ
|

Updated on:Mar 20, 2021 | 4:18 PM

Share

ಬಿಗ್​ ಬಾಸ್​ ಮನೆ ಸೇರಿದ್ದ ಅಭ್ಯರ್ಥಿಗಳ ಪೈಕಿ ಇಬ್ಬರು ಎಲಿಮಿನೇಟ್​ ಆಗಿದ್ದಾರೆ. ಬಾಕಿ ಉಳಿದ 15 ಜನರ ಪೈಕಿ ಇಂದು ಒಬ್ಬರು ಬಿಗ್​ ಬಾಸ್​ ಮನೆಯಿಂದ ಹೊರ ಬೀಳುತ್ತಿದ್ದಾರೆ. ಈ ಮಧ್ಯೆ ಮನೆಯಲ್ಲಿರುವ ಶಮಂತ್​ ಬಗ್ಗೆ ಸಾಕಷ್ಟು ಆರೋಪಗಳು ಕೇಳಿ ಬರುತ್ತಿವೆ. ಅವರು ಮನೆಯಲ್ಲಿ ಸರಿಯಾಗಿ ಆಟವಾಡುತ್ತಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಇನ್ನೂ ಕೆಲವರು, ಅವರು ಸರಿಯಾಗಿ ಬೆರೆಯುತ್ತಿಲ್ಲ ಎನ್ನುವ ಆರೋಪ ಮಾಡುತ್ತಿದ್ದಾರೆ. ಈ ಮಧ್ಯೆ ಗೀತಾ ಭಾರತಿ ಭಟ್​ ಶಮಂತ್​ಗೆ ಟಾಂಗ್​ ನೀಡಿದ್ದಾರೆ. ಗಡ್ಡ ಬೆಳೆಸಿದ್ರೆ ಸಾಲದು ಮೆದುಳಲ್ಲಿ ಬುದ್ಧೀನು ಬೆಳೆದಿರಬೇಕು ಎಂದು ನೇರವಾಗಿ ಹೇಳಿದ್ದಾರೆ. ಬಿಗ್ ಬಾಸ್​ ಮನೆಯಲ್ಲಿ ಶಮಂತ್​ ಕಳಪೆ ಪ್ರದರ್ಶನದ ಬಗ್ಗೆ ಚರ್ಚೆ ಆಗುತ್ತಲೇ ಇರುತ್ತದೆ. ಶಮಂತ್​ಗೆ ಏನೂ ಅರ್ಥವಾಗುವುದೇ ಇಲ್ಲ. ಅವನು ಬಿಗ್​ ಬಾಸ್​ ಮನೆಗೆ ಬಂದಿದ್ದಾನೆ ಎನ್ನುವುದು ಅರ್ಥವಾಗಿಲ್ಲ ಅನಿಸುತ್ತದೆ ಎಂದು ದಿವ್ಯಾ ಸುರೇಶ್ ಶುಕ್ರವಾರ (ಮಾರ್ಚ್​​ 19) ಹೇಳಿದ್ದರು​. ಈ ವೇಳೆ ಅಲ್ಲಿದ್ದ ರಾಜೀವ್​, ಶಮಂತ್​ಗೆ ಎರಡು ವಾರಗಳ ಕಾಲ ಕ್ಯಾಪ್ಟನ್ಸಿ ನೀಡಿದ್ದಕ್ಕೆ ನನ್ನ ಚಪ್ಪಲಿಯಲ್ಲಿ ನಾನೇ ಹೊಡೆದುಕೊಳ್ಳಬೇಕು ಎಂದು ಮರುಗಿದ್ದರು.

ಈಗ ಗೀತಾ ಕೂಡ ಶಮಂತ್​ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ. ಬಿಗ್​ ಬಾಸ್​ ಮನೆ ಸೇರಿದಾಗಿನಿಂದಲೂ ಗೀತಾ ಹಾಗೂ ಶಮಂತ್​ ಒಟ್ಟಾಗಿದ್ದರು. ಆರಂಭದ ದಿನಗಳಲ್ಲಿ ಶಮಂತ್​ ಎಲ್ಲಾ ಗುಟ್ಟುಗಳನ್ನು ಗೀತಾ ಬಳಿ ಹೇಳಿಕೊಳ್ಳುತ್ತಿದ್ದರು. ಆದರೆ, ಶಮಂತ್​ ಒಬ್ಬರ ಹತ್ತಿರ ಒಂದೊಂದು ರೀತಿ ಮಾತನಾಡುತ್ತಾನೆ ಎನ್ನುವ ಬೇಸರ ಗೀತಾಗೆ ಇದೆ. ಈ ಬಗ್ಗೆ ಅವರು ನೇರವಾಗಿ ಶಮಂತ್​ ಬಳಿಯೇ ಹೇಳಿಕೊಂಡಿದ್ದಾರೆ. ಶಮಂತ್​ ನೀನು ನಿನಗೆ ಬೇಕಾದಾಗ ಅಕ್ಕಾ ಅಕ್ಕಾ ಎಂದು ಕರೆಯುತ್ತೀಯಾ. ಆದರೆ, ನಿನಗೆ ಬೇಡ ಎಂದಾಗ ಬಿಗ್​ ಬಾಸ್​ ಬಳಿ ಹೋಗಿ ನನ್ನ ಬಗ್ಗೆಯೇ ದೂರು ನೀಡುತ್ತೀಯಾ ಎಂದಿದ್ದಾರೆ ಗೀತಾ. ಇದಕ್ಕೆ ಶಮಂತ್​ ಇಲ್ಲಾ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ನನ್ನ ಬಗ್ಗೆ ಏನನ್ನಿಸುತ್ತದೆ ಎಂಬುದನ್ನು ಹೇಳಿ ಎಂದು ಕೋರಿದ್ದಾರೆ.

ಆಗ ನಗುನಗುತ್ತಲೇ ಗೀತಾ ತನಗೆ ಏನನ್ನಿಸಿತೋ ಅದನ್ನು ಹೇಳಿದ್ದಾರೆ. ತಲೇಲಿ ಕೂದಲು ಬೆಳೆದಿದೆ. ಆದರೆ, ತಲೆ ಒಳಗಡೆ ಬ್ರೇನ್​ ಬೆಳೆದಿಲ್ಲ. ಗಡ್ಡ ಬೆಳೆಸಿದ್ರೆ ಸಾಲದು. ಮೆದುಳಲ್ಲಿ ಬುದ್ಧೀನೂ ಬೆಳೆಸಿರಬೇಕು. ಒಟ್ನಲ್ಲಿ ನೀನು ಚೈಲ್ಡ್​ ಎಂದಿದ್ದಾರೆ.

ಇದನ್ನೂ ಓದಿ: ಶಮಂತ್​ಗೆ ಕ್ಯಾಪ್ಟನ್ಸಿ ಕೊಟ್ಟಿದ್ದ ನನಗೆ ನಾನೇ ಚಪ್ಪಲ್ಲಿಯಲ್ಲಿ ಹೊಡೆದುಕೊಳ್ಳಬೇಕು 

Published On - 4:12 pm, Sat, 20 March 21

Follow Us
ಸರ್ಕಾರದ 100 ದಿನದ ಕಾರ್ಯಕ್ರಮಕ್ಕೆ ಬಂದ ಸಿದ್ದರಾಮಯ್ಯಗೆ ವಿಶೇಷ ಸ್ವಾಗತ
ಸರ್ಕಾರದ 100 ದಿನದ ಕಾರ್ಯಕ್ರಮಕ್ಕೆ ಬಂದ ಸಿದ್ದರಾಮಯ್ಯಗೆ ವಿಶೇಷ ಸ್ವಾಗತ
KSRTC ಬಸ್‌ನ ಸ್ಟೇರಿಂಗ್ ಕಟ್ ಆಗಿ ಪಲ್ಟಿ
KSRTC ಬಸ್‌ನ ಸ್ಟೇರಿಂಗ್ ಕಟ್ ಆಗಿ ಪಲ್ಟಿ
ಮುಂಗಾರಿನಲ್ಲೇ ಹೀಟ್ ವೇವ್! ಬೆಂಗಳೂರಿನಲ್ಲಿ ದಿನೇದಿನೆ ಹೆಚ್ಚಾಗುತ್ತಿದೆ ತಾಪ
ಮುಂಗಾರಿನಲ್ಲೇ ಹೀಟ್ ವೇವ್! ಬೆಂಗಳೂರಿನಲ್ಲಿ ದಿನೇದಿನೆ ಹೆಚ್ಚಾಗುತ್ತಿದೆ ತಾಪ
ಕಲಬುರಗಿ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರ ದಾಳಿ: ಕೈದಿಯಿಂದ ಮೊಬೈಲ್​​ ವಶ
ಕಲಬುರಗಿ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರ ದಾಳಿ: ಕೈದಿಯಿಂದ ಮೊಬೈಲ್​​ ವಶ
ಮಂಡ್ಯದ ವಸತಿಶಾಲೆಯಲ್ಲಿ ಮಕ್ಕಳಿಗೆ ಫುಡ್ ಪಾಯಿಸನ್
ಮಂಡ್ಯದ ವಸತಿಶಾಲೆಯಲ್ಲಿ ಮಕ್ಕಳಿಗೆ ಫುಡ್ ಪಾಯಿಸನ್
‘ಜೈಲಿನಲ್ಲಿ ಖುದ್ದು ಹಾಜರಿ ಬೇಕು’; ಹೈಕೋರ್ಟ್​​ನಲ್ಲಿ ದರ್ಶನ್ ಅರ್ಜಿ
‘ಜೈಲಿನಲ್ಲಿ ಖುದ್ದು ಹಾಜರಿ ಬೇಕು’; ಹೈಕೋರ್ಟ್​​ನಲ್ಲಿ ದರ್ಶನ್ ಅರ್ಜಿ
ಅಸಲಿ ಮುಖ ತೋರಿಸೋಕೆ ಆರಂಭಿಸಿದ ಸೌಂದರ್ಯಾ ಶೆಟ್ಟಿ; ಅಣಕಿಸಿದ ವಿಡಿಯೋ ವೈರಲ್
ಅಸಲಿ ಮುಖ ತೋರಿಸೋಕೆ ಆರಂಭಿಸಿದ ಸೌಂದರ್ಯಾ ಶೆಟ್ಟಿ; ಅಣಕಿಸಿದ ವಿಡಿಯೋ ವೈರಲ್
ಡಿಕೆಶಿ ಸರ್ಕಾರಕ್ಕೆ 100 ದಿನ: ಕೆಆರ್​ಎಸ್ ಡ್ಯಾಂಗೆ ಕಲರ್​ಫುಲ್​ ​ಲೈಟಿಂಗ್
ಡಿಕೆಶಿ ಸರ್ಕಾರಕ್ಕೆ 100 ದಿನ: ಕೆಆರ್​ಎಸ್ ಡ್ಯಾಂಗೆ ಕಲರ್​ಫುಲ್​ ​ಲೈಟಿಂಗ್
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ತಡರಾತ್ರಿ 2 ಗಂಟೆವರೆಗೆ ಇಡಿ ಶೋಧ
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ತಡರಾತ್ರಿ 2 ಗಂಟೆವರೆಗೆ ಇಡಿ ಶೋಧ
ಗುರುಗಳ ಲಹರಿ ಇರುವ ಶುಭ ದಿನ: ಸೆಪ್ಟೆಂಬರ್ 10 ರ ರಾಶಿ ಭವಿಷ್ಯ
ಗುರುಗಳ ಲಹರಿ ಇರುವ ಶುಭ ದಿನ: ಸೆಪ್ಟೆಂಬರ್ 10 ರ ರಾಶಿ ಭವಿಷ್ಯ