Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಶಮಂತ್​ಗೆ ಕ್ಯಾಪ್ಟನ್ಸಿ ಕೊಟ್ಟಿದ್ದ ನನಗೆ ನಾನೇ ಚಪ್ಪಲ್ಲಿಯಲ್ಲಿ ಹೊಡೆದುಕೊಳ್ಳಬೇಕು’

ಮೊದಲ ವಾರ ಬಿಗ್​ ಬಾಸ್​ ಮನೆಯಲ್ಲಿ ಶಮಂತ್​ ಕ್ಯಾಪ್ಟನ್​ ಆಗಿದ್ದರು. ನಂತರ ಎರಡನೇ ವಾರವೂ ಬಿಗ್​ ಬಾಸ್​ ಮನೆಯಲ್ಲಿ ಶಮಂತ್​ ನಾಯಕನಾಗಿ ಮುಂದುವರಿದಿದ್ದರು.

'ಶಮಂತ್​ಗೆ ಕ್ಯಾಪ್ಟನ್ಸಿ ಕೊಟ್ಟಿದ್ದ ನನಗೆ ನಾನೇ ಚಪ್ಪಲ್ಲಿಯಲ್ಲಿ ಹೊಡೆದುಕೊಳ್ಳಬೇಕು'
ಬಿಗ್​ಬಾಸ್​ ಸ್ಪರ್ಧಿ ಶಮಂತ್​
Follow us
ರಾಜೇಶ್ ದುಗ್ಗುಮನೆ
| Updated By: Skanda

Updated on: Mar 20, 2021 | 10:41 AM

ಬಿಗ್​ ಬಾಸ್​ ಮನೆಯಲ್ಲಿ ಶಮಂತ್​ ತುಂಬಾನೇ ಚರ್ಚೆ ಆದ ಸ್ಪರ್ಧಿ. ಶಮಂತ್​ ಎರಡು ವಾರಗಳ ಕಾಲ ಬಿಗ್​ ಬಾಸ್​ ಮನೆಯಲ್ಲಿ ಕ್ಯಾಪ್ಟನ್​ ಆಗಿದ್ದರು. ಬಿಗ್​ ಬಾಸ್​ ಇತಿಹಾಸದಲ್ಲಿ ಸ್ಪರ್ಧಿಯೋರ್ವ ಈ ರೀತಿ ಎರಡು ವಾರ ಕ್ಯಾಪ್ಟನ್ಸಿ ಪಡೆದುಕೊಂಡಿದ್ದು ಇದೇ ಮೊದಲಂತೆ. ಅವರಿಗೆ ಕ್ಯಾಪ್ಟನ್ಸಿ ನೀಡಿದ ವಿಚಾರ ಮೂರನೇ ವಾರವೂ ಚರ್ಚೆ ಆಗುತ್ತಿದೆ. ಅಷ್ಟೇ ಅಲ್ಲ ಶಮಂತ್​ಗೆ ಕ್ಯಾಪ್ಟನ್ಸಿ ನೀಡಿದ್ದಕ್ಕೆ ಮರುಗಿದ್ದಾರೆ ರಾಜೀವ್​.

ಮೊದಲ ವಾರ ಬಿಗ್​ ಬಾಸ್​ ಮನೆಯಲ್ಲಿ ಶಮಂತ್​ ಕ್ಯಾಪ್ಟನ್​ ಆಗಿದ್ದರು. ಮೊದಲ ವಾರ ಪೂರ್ಣಗೊಳ್ಳುವಾಗ ಸ್ಪರ್ಧಿಗಳಿಗೆ ಬಿಗ್​ ಬಾಸ್​ ಒಂದು ಆಯ್ಕೆ ನೀಡಿದ್ದರು. ಎರಡನೇ ವಾರವೂ ಶಮಂತ್​ ಕ್ಯಾಪ್ಟನ್​ ಆಗಿ ಮುಂದುವರಿಯಬೇಕೇ ಬೇಡವೇ ಎಂಬುದನ್ನು ನಿರ್ಧರಿಸಲು ವೋಟಿಂಗ್ ಮಾಡಲಾಗಿತ್ತು​ . ಮೊದಲಿಗೆ 8 ಜನ ‘ಬೇಡ’ ಎಂದು, ಇನ್ನುಳಿದ 8 ಜನರು ‘ಬೇಕು’ ಎಂದು ವೋಟ್​ ಮಾಡಿದ್ದರು. ಸರಿಯಾಗಿ ಇನ್ನೊಮ್ಮೆ ಯೋಚಿಸಿನೋಡಿ ಎಂದು ಬಿಗ್ ಬಾಸ್​ ಹೇಳಿದಾಗ ನಿರ್ಮಲಾ ಚೆನ್ನಪ್ಪ ಮನಸ್ಸು ಬದಲಾಯಿಸಿ ‘ಬೇಕು’ ಎಂದು ವೋಟ್​ ಮಾಡಿದ್ದರು. ಹಾಗಾಗಿ ಎರಡನೇ ವಾರವೂ ಕ್ಯಾಪ್ಟನ್​ ಆಗುವ ಅವಕಾಶ ಶಮಂತ್​ಗೆ ಸಿಕ್ಕಿತ್ತು.

ಈ ವಿಚಾರ ಮೂರನವೇ ವಾರವೂ ಚರ್ಚೆ ಆಗುತ್ತಿದೆ. ಶಮಂತ್​ಗೆ ಏನೂ ಅರ್ಥವಾಗುವುದೇ ಇಲ್ಲ. ಅವನು ಬಿಗ್​ ಬಾಸ್​ ಮನೆಗೆ ಬಂದಿದ್ದಾನೆ ಎನ್ನುವುದು ಅರ್ಥವಾಗಿಲ್ಲ ಅನಿಸುತ್ತದೆ ಎಂದರು ದಿವ್ಯಾ ಸುರೇಶ್​. ಈ ವೇಳೆ ಅಲ್ಲಿದ್ದ ರಾಜೀವ್​ ಈ ಬಗ್ಗೆ ಮಾತನಾಡಿದ್ದಾರೆ. ಶಮಂತ್​ಗೆ ಎರಡು ಕಾಲ ಕ್ಯಾಪ್ಟನ್ಸಿ ನೀಡಿದ್ದಕ್ಕೆ ನನ್ನ ಚಪ್ಪಲ್ಲಿಯಲ್ಲಿ ನಾನೇ ಹೊಡೆದುಕೊಳ್ಳಬೇಕು ಎಂದು ಮರುಗಿದ್ದಾರೆ.

ಇದನ್ನೂ ಓದಿ: Bigg Boss Kannada: ಕಾಯಿಲೆ ಬಿದ್ದ ತಂದೆ ಜೊತೆ 2 ವರ್ಷದಿಂದ ಮಾತನಾಡಿಲ್ಲ ಬಿಗ್​ ಬಾಸ್​ ರಾಜೀವ್​! ಕಾರಣ ಏನು?

ಬಿಗ್ ಬಾಸ್ ಧನುಶ್ರೀ ಗೆ ಸಿನಿಮಾ ಆಫರ್ ಗಳು ಹರಿದು ಬರುತ್ತಿವೆಯಂತೆ..!

ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ
ಈಗ ಮತಾಂತರ ಮಾಡಲಾಗಲ್ಲ, ಹಾಗಾಗೇ ಮುಸ್ಲಿಮೇತರರನ್ನು ಕೊಲ್ಲೋದು: ರವಿ
ಈಗ ಮತಾಂತರ ಮಾಡಲಾಗಲ್ಲ, ಹಾಗಾಗೇ ಮುಸ್ಲಿಮೇತರರನ್ನು ಕೊಲ್ಲೋದು: ರವಿ