Bigg Boss Kannada: ಕಾಯಿಲೆ ಬಿದ್ದ ತಂದೆ ಜೊತೆ 2 ವರ್ಷದಿಂದ ಮಾತನಾಡಿಲ್ಲ ಬಿಗ್​ ಬಾಸ್​ ರಾಜೀವ್​! ಕಾರಣ ಏನು?

Bigg Boss Rajeev: ಬಿಗ್​ ಬಾಸ್​ ಮನೆಯಲ್ಲಿ ಎಲ್ಲರ ಎದುರು ರಾಜೀವ್​ ನೋವು ತೋಡಿಕೊಂಡಿದ್ದಾರೆ. ‘ಇಲ್ಲಿಂದ ನಾನು ಕ್ಷಮೆ ಕೇಳುತ್ತಿದ್ದೇನೆ. ಈ ದೇಹ ಗಟ್ಟಿಯಾಗಿ ಇರುವವರೆಗೆ ನಿಮ್ಮ ಪಾದಕ್ಕೆ ಸಲ್ಲಲಿ’ ಎಂದು ತಂದೆಯ ಬಳಿ ರಾಜೀವ್ ಕ್ಷಮೆ ಕೇಳುತ್ತ ಕಣ್ಣೀರು ಹಾಕಿದ್ದಾರೆ.

Bigg Boss Kannada: ಕಾಯಿಲೆ ಬಿದ್ದ ತಂದೆ ಜೊತೆ 2 ವರ್ಷದಿಂದ ಮಾತನಾಡಿಲ್ಲ ಬಿಗ್​ ಬಾಸ್​ ರಾಜೀವ್​! ಕಾರಣ ಏನು?
ರಾಜೀವ್​ - ಬಿಗ್​ ಬಾಸ್ ಕನ್ನಡ ಸೀಸನ್​ 8
Follow us
ಮದನ್​ ಕುಮಾರ್​
| Updated By: Digi Tech Desk

Updated on:Mar 19, 2021 | 1:28 PM

ಬಿಗ್​ ಬಾಸ್​ ಮನೆಯಲ್ಲಿ ಎಲ್ಲರಿಗಿಂತ ಸ್ಟ್ರಾಂಗ್​ ಸ್ಪರ್ಧಿಯಾಗಿ ರಾಜೀವ್​ ಕಾಣಿಸುತ್ತಾರೆ. ಆದರೆ ಅಷ್ಟು ಬಲವಾಗಿರುವ ಅವರು ಕಣ್ಣೀರು ಹಾಕಿದ್ದಾರೆ. ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವ ತಂದೆಯನ್ನು ನೆನಪು ಮಾಡಿಕೊಂಡು ಗಳಗಳನೆ ಅತ್ತಿದ್ದಾರೆ. ಅಚ್ಚರಿ ವಿಚಾರ ಏನೆಂದರೆ, ಕಳೆದ ಎರಡು ವರ್ಷಗಳಿಂದ ಅವರು ತಂದೆಯ ಜೊತೆ ಮಾತನಾಡುತ್ತಿಲ್ಲ! ಈ ಬಗ್ಗೆ ಅವರು ಬಿಗ್​ ಬಾಸ್​ ಮನೆಯ ಎಲ್ಲ ಸದಸ್ಯರ ಎದುರಿನಲ್ಲಿ ಹೇಳಿಕೊಂಡು ಕಂಬನಿ ಸುರಿಸಿದ್ದಾರೆ.

‘ನಮ್ಮ ಅಪ್ಪನ ಹತ್ತಿರ ನಾನು ಮಾತನಾಡಿ ಎರಡು ವರ್ಷ ಆಯಿತು. ಆದರೆ ನನ್ನ ಜೀವನದ ಮೊದಲನೇ ಹೀರೋ ಅವರೇ. ನಮಗೆ ನೋವೇ ತೋರಿಸದೆ ಬೆಳೆಸಿದ್ದಾರೆ. 1996ರಲ್ಲಿ ಒಂದು ದಿನ ಫ್ಯಾಮಿಲಿ ಫೋಟೋ ತೆಗೆಯೋಕೆ ಕರೆದುಕೊಂಡು ಹೋದರು. ಇದು ನಮ್ಮ ಕೊನೇ ಫೋಟೋ ಆಗಬಹುದು. ಹಾಗಾಗಿ ಚೆನ್ನಾಗಿ ತೆಗೆಯಿರಿ ಅಂತ ಫೋಟೋ ಅಂಗಡಿಯವರಿಗೆ ಹೇಳಿದ್ರು. ನಾನು ಚಿಕ್ಕವನು. ಏನು ಅಂತ ಅರ್ಥ ಆಗಲಿಲ್ಲ. ಮನೆಗೆ ಬಂದಾಗ ಬಾತ್​ ರೂಮ್​ಗೆ ಹೋದರು. ಅವರ ನಂತರ ನಾನು ಹೋಗಿ ನೋಡಿದರೆ ಬಾತ್​ ರೂಮ್​ ಪೂರ್ತಿ ರಕ್ತ! ಅವರಿಗೆ ಅಲ್ಸರ್​ ಕೊಲೈಟಿಸ್​ ಅಂತ ಕಾಯಿಲೆ. ಬ್ಲೆಡ್​ ಮೋಷನ್​ ಹೋಗುತ್ತೆ. ಇದನ್ನು ಯಾರಿಗೂ ಹೇಳಿರಲಿಲ್ಲ’ ಎಂದಿದ್ದಾರೆ ರಾಜೀವ್​.

’ಅದೇ ಬಾತ್​ ರೂಮ್​ಗೆ ಮರುದಿನ ಹೋದಾಗ ಅಲ್ಲೊಂದು ಗ್ಲಾಸ್​ ಇತ್ತು. ಅದೇಕೆ ಅಲ್ಲಿದೆ ಎಂದು ಕೇಳೋಕೆ ನಂಗೆ ಧೈರ್ಯ ಇರಲಿಲ್ಲ. ಆಮೇಲೆ ಗೊತ್ತಾಯಿತು. ಅವರ ಮೂತ್ರ ಅವರೇ ಕುಡಿದರೆ ಈ ಕಾಯಿಲೆ ವಾಸಿ ಆಗತ್ತೆ ಅಂತ ಯಾರೋ ಹೇಳಿದ್ರು. ಹಾಗಾಗಿ ಅವರು ಪ್ರತಿ ದಿನ ಕುಡೀತಿದ್ರು. ಆದರೂ ವಾಸಿ ಆಗಲಿಲ್ಲ. ಕಡೆಗೆ ಅವರು ಬದುಕೋದೇ ಇಲ್ಲ ಎನಿಸಿತು. ಈಗ ಎರಡು ವರ್ಷದಿಂದ ನಾನು ಅವರ ಜೊತೆ ಮಾತನಾಡುತ್ತಿಲ್ಲ. ಅದಕ್ಕೆ ನನ್ನ ಯಾವುದೇ ಕಾರಣ ಇರಬಹುದು. ಅವರಿಗೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ. ನನ್ನ ಕೈಯಲ್ಲಿ ಆಗಿದನ್ನು ನಾನು ಮಾಡುತ್ತ ಇದ್ದೇನೆ. ಅಪ್ಪನನ್ನು ಮಿಸ್​ ಮಾಡುತ್ತಿದ್ದೇನೆ’ ಎಂದು ರಾಜೀವ್​ ಮಕ್ಕಳಂತೆ ಅತ್ತಿದ್ದಾರೆ.

‘ನಾನು ಅವರನ್ನು ಡಾ ಅಂತ ಕರೆಯೋದು. ಅವರ ಜೊತೆ ಮಾತನಾಡದೇ ನಾನು ಖುಷಿಯಾಗಿ ಇಲ್ಲ. ನನಗೆ ನನ್ನದೇ ಆದ ನೋವಿದೆ. ಅದನ್ನು ನಾನು ಅವರ ಬಳಿ ಹೇಳಿಕೊಂಡಿಲ್ಲ. ಅದರಿಂದ ಅವರು ಕುಡಿತ ಕೂಡ ಜಾಸ್ತಿ ಮಾಡಿದ್ದಾರೆ. ಅವರಿಗೆ ನಿದ್ದೆ ಬರುತ್ತಿಲ್ಲವೋ ಏನೋ ಗೊತ್ತಿಲ್ಲ. ನನ್ನದು ತಪ್ಪಿದೆ. ಈಗ ಬರುವಾಗಲೂ ಅವರ ಜೊತೆ ಸರಿಯಾಗಿ ಮಾತನಾಡಿಲ್ಲ. ಇಲ್ಲಿಂದ ನಾನು ಕ್ಷಮೆ ಕೇಳುತ್ತಿದ್ದೇನೆ. ಈ ದೇಹ ಗಟ್ಟಿಯಾಗಿ ಇರುವವರೆಗೆ ನಿಮ್ಮ ಪಾದಕ್ಕೆ ಸಲ್ಲಲಿ’ ಎಂದು ತಂದೆಯ ಬಳಿ ರಾಜೀವ್ ಕ್ಷಮೆ ಕೇಳುತ್ತ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ: BBK8: ತಾಯಿ ಆತ್ಮಹತ್ಯೆ ಮಾಡಿಕೊಂಡಾಗ ರಘು ಮೇಲೆಯೇ ಅನುಮಾನ ಪಟ್ಟಿದ್ದ ಪೊಲೀಸರು! ಇದೆಂಥಾ ವಿಪರ್ಯಾಸ

BBK8: ಬಿಗ್​ ಬಾಸ್​ 8 ವಿನ್ನರ್​ ರಾಜೀವ್​, ರನ್ನರ್​ ಅಪ್​ ಮಂಜು; ಹೀಗೆ ಭವಿಷ್ಯ ನುಡಿದವರಾರು?

Published On - 12:37 pm, Fri, 19 March 21