BBK8: ತಾಯಿ ಆತ್ಮಹತ್ಯೆ ಮಾಡಿಕೊಂಡಾಗ ರಘು ಮೇಲೆಯೇ ಅನುಮಾನ ಪಟ್ಟಿದ್ದ ಪೊಲೀಸರು! ಇದೆಂಥಾ ವಿಪರ್ಯಾಸ

Bigg Boss Kannada 8 Updates: ಎಲ್ಲರನ್ನೂ ನಗಿಸುವ ರಘು ಜೀವನದಲ್ಲಿ ಮರೆಯಲಾಗದ ನೋವುಗಳಿವೆ. ಅದನ್ನು ಅವರು ಬಿಗ್ ಬಾಸ್​ ಮನೆಯಲ್ಲಿ ಹೇಳಿಕೊಂಡಿದ್ದಾರೆ. ತಾಯಿಯ ದುರಂತ ಸಾವಿನ ಬಗ್ಗೆ ರಘು ಮಾತನಾಡಿದ್ದಾರೆ.

BBK8: ತಾಯಿ ಆತ್ಮಹತ್ಯೆ ಮಾಡಿಕೊಂಡಾಗ ರಘು ಮೇಲೆಯೇ ಅನುಮಾನ ಪಟ್ಟಿದ್ದ ಪೊಲೀಸರು! ಇದೆಂಥಾ ವಿಪರ್ಯಾಸ
ರಘು - ಬಿಗ್ ಬಾಸ್​ ಕನ್ನಡ ಸೀಸನ್​ 8
Follow us
ಮದನ್​ ಕುಮಾರ್​
|

Updated on:Mar 19, 2021 | 11:52 AM

ಲಾಕ್​ಡೌನ್ ಸಮಯದಲ್ಲಿ ಕಾಮಿಡಿ ವಿಡಿಯೋಗಳನ್ನು ಮಾಡಿ, ಎಲ್ಲರನ್ನೂ ನಗಿಸಿದವರು ರಘು. ಆದರೆ ಅವರ ಬದುಕಿನಲ್ಲಿ ನಡೆದ ಘಟನೆಗಳನ್ನು ನೋಡಿದರೆ ಎಂಥವರಿಗೂ ಕಣ್ಣೀರು ಬರುತ್ತದೆ. ಅಷ್ಟು ನೋವುಗಳನ್ನು ಅವರು ತಮ್ಮೊಳಗೆ ಇಟ್ಟುಕೊಂಡಿದ್ದಾರೆ. ಸದ್ಯ ಬಿಗ್​ ಬಾಸ್​ ಕನ್ನಡ ಸೀಸನ್​8ರಲ್ಲಿ ಸ್ಪರ್ಧಿಸುತ್ತಿರುವ ಅವರು ಆ ಕಷ್ಟಗಳನ್ನು ಹೇಳಿಕೊಂಡಿದ್ದಾರೆ.

‘ನಾನು ಚಿಕ್ಕ ವಯಸ್ಸಿನಲ್ಲಿ ಜಾಸ್ತಿ ನೋಡಿದ್ದೇ ನನ್ನ ತಂದೆ ತಾಯಿ ಜಗಳ ಮಾಡೋದನ್ನ. ನನ್ನ ತಂದೆ ಒಳ್ಳೆಯವರಾಗಿದ್ದರೂ ಕೂಡ ಕುಡಿತದ ಚಟ ಜಾಸ್ತಿ. ಫ್ರೆಂಡ್ಸ್​ ಮೇಲೆ ಜಾಸ್ತಿ ಡಿಪೆಂಡ್​ ಆಗಿದ್ದರು. ಫೈನಾನ್ಸ್​ ಮಾಡುತ್ತಾರೆ. ಕಾರಣಾಂತರಗಳಿಂದ ಅದು ಲಾಸ್​ ಆಗುತ್ತೆ. ನಾನು 10ನೇ ವಯಸ್ಸಿನಲ್ಲಿ ಇರುವಾಗ ನನ್ನ ತಂದೆ ಸೂಸೈಡ್​ ಮಾಡಿಕೊಂಡು ಸಾಯುತ್ತಾರೆ. ನಂತರ ಭಯದಲ್ಲಿ ನಮ್ಮ ಅಮ್ಮ ಸಮಾಜದ ಜೊತೆ ಜಾಸ್ತಿ ಬರೆಯುತ್ತಿರಲಿಲ್ಲ. ಊರಿಂದ ಸ್ವಂತ ತಮ್ಮ ಬಂದರೂ ಕೂಡ ಬಾಗಿಲು​ ಓಪನ್​ ಮಾಡಿಕೊಂಡು ಮಾತನಾಡಿಸಿ ಕಳಿಸುತ್ತಿದ್ದರು. ಯಾಕೆಂದರೆ ಸಮಾಜ ಏನು ಅನ್ನುತ್ತೋ ಅನ್ನುವಂತಹ ಭಯ. ಅವರಿಗೆ ಹಾಸ್ಯಪ್ರಜ್ಞೆ ಚೆನ್ನಾಗಿತ್ತು. ಆದರೂ ಒಂಟಿತನ ಕಾಡುತ್ತಿತ್ತು. ಅಪ್ಪ ಮಾಡಿದ ಸಾಲವನ್ನು ನಾವು ಜೀವನ ಪರ್ಯಂತ ತೀರಿಸುತ್ತ ಬಂದ್ವಿ’ ಎಂದಿದ್ದಾರೆ ರಘು.

‘20ನೇ ವಯಸ್ಸಿನಲ್ಲಿ ನನಗೆ ಓದೋಕೆ, ಕೆಲಸ ಮಾಡೋಕೆ ಇಷ್ಟ ಇರಲಿಲ್ಲ. ಬೇರೆ ಪ್ರತಿಭೆ ಕೂಡ ಇರಲಿಲ್ಲ. ಎಲ್ಲರೂ ಆಡಿಕೊಳ್ಳುತ್ತಿದ್ದರು. ಆಗಲೇ ನನಗೆ ಡಿಪ್ರೆಷನ್​ ಶುರು ಆಯಿತು. ಸಾಯುತ್ತೇನೆ, ಓಡಿ ಹೋಗುತ್ತೇನೆ ಅಂತ ಹೇಳ್ತಿದ್ದೆ. ಒಂದಿನ ಅಮ್ಮ ನನ್ನನ್ನು ಕರೆದುಕೊಂಡು ಹೋಗಿ ಒಂದು ಸೇತುವೆ ಮೇಲೆ ನಿಲ್ಲಿಸಿದರು. ನಾನು ಎಲ್ಲವೂ ನೋಡಿದ್ದೇನೆ. ನಾನು ಸತ್ತರೂ ಚಿಂತೆ ಇಲ್ಲ. ನೀನು ಒಮ್ಮೆ ಯೋಚನೆ ಮಾಡು ಅಂದ್ರು. ಕೆಳಗೆ ನೀರು ನೋಡಿದಾಗ ಒಂದು ಕ್ಷಣ ನನ್ನ ಜೀವನ ಕಣ್ಣಮುಂದೆ ಬಂದು ಹೋಯ್ತು. ತಕ್ಷಣ ಅಮ್ಮನ ಕಾಲು ಹಿಡಿದುಕೊಂಡೆ’ ಎಂದು ಭಾವುಕರಾಗಿ ರಘು ವಿವರಿಸಿದ್ದಾರೆ.

’ನಂತರ ಒಂದು ಕಡೆ ಕೆಲಸಕ್ಕೆ ಸೇರಿಕೊಂಡೆ. ಆದರೆ 2014ರ ಜನವರಿಯಿಂದ ನಮ್ಮ ಅಮ್ಮ ಡಿಪ್ರೆಷನ್​ಗೆ ಒಳಗಾದರು. ಹಲವು ಸಲ ಆತ್ಮಹತ್ಯೆ ಮಾಡಿಕೊಳ್ಳೋಕೆ ಪ್ರಯತ್ನಿಸಿದರು. ನಂತರ 3 ತಿಂಗಳು ನನ್ನ ಜೀವನದಲ್ಲಿ ನೋಡಿದ ಅತ್ಯಂತ ಕೆಟ್ಟ ದಿನಗಳು. ಆಫೀಸ್​ನಲ್ಲಿ ಇದ್ದಾಗ ಸಡನ್ನಾಗಿ ಅಮ್ಮ ಸಾಯುತ್ತೀನಿ ಅಂದಾಗ ಮನೆಗೆ ಓಡಿ ಹೋಗಬೇಕಿತ್ತು. ಫ್ಯಾಮಿಲಿಯವರು ಬಂದ್ರು. ಆದರೆ ದಿನ ಸಾಯೋರಿಗೆ ಅಳೋರು ಯಾರು ಅಂತ ಅವರೂ ಹೋದರು. ಮಾ.22ರಂದು ಅಮ್ಮ ಸೂಸೈಡ್​ ಮಾಡಿಕೊಂಡರು’ ಎಂದು ರಘು ಕಣ್ಣೀರು ಹಾಕಿದ್ದಾರೆ.

’ಎಫ್​ಐಆರ್​ ಫೈಲ್​ ಮಾಡಲು ಪೊಲೀಸ್​ ಸ್ಟೇಷನ್​ಗೆ ಹೋದಾಗ ಪೊಲೀಸರು ಕೆಟ್ಟದಾಗಿ ಬೈಯ್ದರು. ನಾಟಕ ಮಾಡಬೇಡ. ಏನ್​ ಮಾಡಿದೀಯ ಹೇಳು ಅಂದರು. ನನ್ನ ಕೈಯಲ್ಲಿ ಟ್ಯಾಟೂ, ಮುಖದಲ್ಲಿ ಗಡ್ಡ, ಕಿವಿಯಲ್ಲಿ ಓಲೆ ಇದೆ. ಜಗತ್ತು ಅಷ್ಟೇ ನನ್ನನ್ನು ನೋಡಿರೋದು. ಎಲ್ಲರ ಪಾಲಿಗೆ ನಾನು ಚಪ್ಪರ್​. ಇವನೇ ಏನೋ ಮಾಡಿದಾನೆ ಅಂದುಕೊಂಡರು. ಆದಾದ ಮೇಲೆ ತುಂಬ ಸಲ ನಾನು ಸಾಯಬೇಕು ಅಂದುಕೊಂಡೆ. ಆದರೆ ಧೈರ್ಯ ಇಲ್ಲ. ನಾನೂ ಸತ್ತರೆ ಇವರ ಇಡೀ ಫ್ಯಾಮಿಲಿ ಸೂಸೈಡ್​ ಮಾಡಿಕೊಳ್ತು ಅಂತಾರೆ. ಹಾಗೆ ಆಗುವುದು ನನಗೆ ಇಷ್ಟ ಇರಲಿಲ್ಲ. ಹೆಂಡತಿ ಬಂದ ಬಳಿಕ ಜೀವನ ಸರಿ ಆಯ್ತು’ ಎಂದು ಕಷ್ಟದ ದಿನಗಳನ್ನು ರಘು ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ: Bigg Boss Kannada: ರಘುಗೆ ವೋಟ್​ ಹಾಕಿ ಅಂತಿದ್ದಾರಾ ದ್ರಾವಿಡ್​, ಶಿವಣ್ಣ, ಪುನೀತ್​, ಡಾಲಿ? ಇದಪ್ಪಾ ಕ್ರಿಯೇಟಿವಿಟಿ ಅಂದ್ರೆ!

Bigg Boss Kannada: ಕರುನಾಡಿನ ಜನತೆ ಎದುರು ಬಹಿರಂಗ ಆಯ್ತು ಬಿಗ್​ ಬಾಸ್​ ರಘು ವೀಕ್​ನೆಸ್​! ಇನ್ಮುಂದೆ ಕಷ್ಟ ಇದೆ

Published On - 11:42 am, Fri, 19 March 21

ವಾಲ್ಮೀಕಿ ಹಗರಣ ವಿರುದ್ಧ ಪಾದಾಯಾತ್ರೆಗೆ ಅನುಮತಿ ಸಿಗಲಿಲ್ಲ: ಯತ್ನಾಳ್
ವಾಲ್ಮೀಕಿ ಹಗರಣ ವಿರುದ್ಧ ಪಾದಾಯಾತ್ರೆಗೆ ಅನುಮತಿ ಸಿಗಲಿಲ್ಲ: ಯತ್ನಾಳ್
ತಿರುಮಲದಲ್ಲಿ 8 ಅಡಿಯ ದೈತ ನಾಗರಹಾವು ಪತ್ತೆ: ವೈರಲ್ ವಿಡಿಯೋ
ತಿರುಮಲದಲ್ಲಿ 8 ಅಡಿಯ ದೈತ ನಾಗರಹಾವು ಪತ್ತೆ: ವೈರಲ್ ವಿಡಿಯೋ
ಅಭಿನಂದನಾ ಕಾರ್ಯಕ್ರಮಕ್ಕೆ ಸಿಎಂರ ಡೇಟ್ ಕೇಳಲು ಬಂದಿದ್ದು ಎಂದ ಯೋಗೇಶ್ವರ್
ಅಭಿನಂದನಾ ಕಾರ್ಯಕ್ರಮಕ್ಕೆ ಸಿಎಂರ ಡೇಟ್ ಕೇಳಲು ಬಂದಿದ್ದು ಎಂದ ಯೋಗೇಶ್ವರ್
ನವೆಂಬರ್ 29ರಿಂದ ರೇಣುಕಾಚಾರ್ಯ ತಂಡದಿಂದಲೂ ಒಂದು ಅಭಿಯಾನ!
ನವೆಂಬರ್ 29ರಿಂದ ರೇಣುಕಾಚಾರ್ಯ ತಂಡದಿಂದಲೂ ಒಂದು ಅಭಿಯಾನ!
ಬಂಡೀಪುರದಲ್ಲಿ ಆನೆ ಮರಿಗೆ ಹೊಂಚು ಹಾಕಿದ್ದ ಹುಲಿಯನ್ನು ಓಡಿಸಿದ ತಾಯಾನೆ
ಬಂಡೀಪುರದಲ್ಲಿ ಆನೆ ಮರಿಗೆ ಹೊಂಚು ಹಾಕಿದ್ದ ಹುಲಿಯನ್ನು ಓಡಿಸಿದ ತಾಯಾನೆ
ಎರಡು ಕಡೆ ಫ್ರ್ಯಾಕ್ಚರ್ ಆಗಿರುವ ಕಾರಣ ಪ್ರಚಾರಕ್ಕೆ ಹೋಗಲಿಲ್ಲ: ರೇವಣ್ಣ
ಎರಡು ಕಡೆ ಫ್ರ್ಯಾಕ್ಚರ್ ಆಗಿರುವ ಕಾರಣ ಪ್ರಚಾರಕ್ಕೆ ಹೋಗಲಿಲ್ಲ: ರೇವಣ್ಣ
ಇಬ್ರಾಹಿಂ ಮತ್ತು ದೇವೇಗೌಡರ ನಡುವೆ ನಡೆದ ಚರ್ಚೆಯೇನು ಅಂತ ಗೊತ್ತಿಲ್ಲ: ಹರೀಶ್
ಇಬ್ರಾಹಿಂ ಮತ್ತು ದೇವೇಗೌಡರ ನಡುವೆ ನಡೆದ ಚರ್ಚೆಯೇನು ಅಂತ ಗೊತ್ತಿಲ್ಲ: ಹರೀಶ್
ದೇವೇಗೌಡ ಮತ್ತು ಕುಮಾರಸ್ವಾಮಿ ಯಾವತ್ತಿಗೂ ನನ್ನ ನಾಯಕರು: ರೇವಣ್ಣ
ದೇವೇಗೌಡ ಮತ್ತು ಕುಮಾರಸ್ವಾಮಿ ಯಾವತ್ತಿಗೂ ನನ್ನ ನಾಯಕರು: ರೇವಣ್ಣ
ಹಿಂದೆ ಯೋಗೇಶ್ವರ್ ಕಾಂಗ್ರೆಸ್ ಶಾಸಕರನ್ನು ಖರೀದಿಸುವ ಮಾತಾಡಿದ್ದರು: ಸುರೇಶ್
ಹಿಂದೆ ಯೋಗೇಶ್ವರ್ ಕಾಂಗ್ರೆಸ್ ಶಾಸಕರನ್ನು ಖರೀದಿಸುವ ಮಾತಾಡಿದ್ದರು: ಸುರೇಶ್
ಯಾದಗಿರಿ ತಲುಪಿ ರೈತರ ಸಂಕಷ್ಟ ಆಲಿಸುತ್ತಿರುವ ಬಸನಗೌಡ ಯತ್ನಾಳ್ ತಂಡ
ಯಾದಗಿರಿ ತಲುಪಿ ರೈತರ ಸಂಕಷ್ಟ ಆಲಿಸುತ್ತಿರುವ ಬಸನಗೌಡ ಯತ್ನಾಳ್ ತಂಡ