ಜಗ್ಗೇಶ್​ ನಟನಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದ ಗುರುಗಳ ನಿಧನ! ಕಂಬನಿ ಮಿಡಿದ ನವರಸ ನಾಯಕ

Jaggesh: ನಟ ಜಗ್ಗೇಶ್ ಅವರು ಅಭಿಮಾನಿಗಳ ಜೊತೆ ಆಗಾಗ ತಮ್ಮ ಖಾಸಗಿ ಜೀವನದ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಾರೆ. ಈಗ ಅವರೊಂದು ಬೇಸರದ ಸಂಗತಿ ತಿಳಿಸಿದ್ದಾರೆ.

ಜಗ್ಗೇಶ್​ ನಟನಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದ ಗುರುಗಳ ನಿಧನ! ಕಂಬನಿ ಮಿಡಿದ ನವರಸ ನಾಯಕ
ಜಗ್ಗೇಶ್​​
Follow us
|

Updated on: Mar 19, 2021 | 2:15 PM

ನಟ ಜಗ್ಗೇಶ್​ ಓರ್ವ ಅಪ್ರತಿಮ ಕಲಾವಿದ ಎಂಬುದರಲ್ಲಿ ಅನುಮಾನವೇ ಇಲ್ಲ. ಕನ್ನಡ ಚಿತ್ರರಂಗದಲ್ಲಿ ಅವರು ಮೂರು ದಶಕಗಳ ಹಿಂದೆಯೇ ತಮ್ಮ ಸಾಮರ್ಥ್ಯ ಏನು ಎಂಬುದನ್ನು ಸಾಬೀತು ಪಡಿಸಿದರು. ಈಗಲೂ ಬಹುಬೇಡಿಕೆಯ ಕಲಾವಿದನಾಗಿ ಸ್ಯಾಂಡಲ್​ವುಡ್​ನಲ್ಲಿ ಸಕ್ರಿಯರಾಗಿದ್ದಾರೆ. ಆದರೆ ಅವರು ಬಾಲ್ಯದಲ್ಲಿ ಇದ್ದಾಗಲೇ ಅವರೊಳಗಿನ ಕಲಾವಿದನನ್ನು ಗುರುತಿಸಿದ್ದು ಯಾರು ಎಂಬ ಬಗ್ಗೆ ಜಗ್ಗೇಶ್​ ಈಗ ಮಾಹಿತಿ ನೀಡಿದ್ದಾರೆ. ತೀವ್ರ ನೋವಿನೊಂದಿಗೆ ಅವರು ಆ ವಿಚಾರವನ್ನು ನೆನಪು ಮಾಡಿಕೊಂಡಿದ್ದಾರೆ.

ಹೌದು, ಜಗ್ಗೇಶ್​ ಅವರು ಪ್ರೌಡಶಾಲಾ ವಿದ್ಯಾರ್ಥಿ ಆಗಿದ್ದಾಗಲೇ ಅವರೊಳಗಿನ ಕಲಾವಿದನ್ನು ಒಬ್ಬರು ಶಿಕ್ಷಕರು ಗುರುತಿಸಿದ್ದರು. ಅವರ ಹೆಸರು ಎಂ. ರಾಮಮೂರ್ತಿ. ಆದರೆ ಇಂದು ಅವರು ನಮ್ಮೊಂದಿಗಿಲ್ಲ. ಗುರುವಾರ ರಾತ್ರಿ 8.40ಕ್ಕೆ ಇಹಲೋಕ ತ್ಯಜಿಸಿದರು. ಟ್ವಿಟರ್​ ಮೂಲಕ ಈ ಬೇಸರದ ಸುದ್ದಿಯನ್ನು ಜಗ್ಗೇಶ್​ ತಿಳಿಸಿದ್ದಾರೆ. ತಮ್ಮ ನೆಚ್ಚಿನ ಶಿಕ್ಷಕರನ್ನು ಅವರು ನೆನಪು ಮಾಡಿಕೊಂಡಿದ್ದಾರೆ.

‘ನನಗೆ ಗಣಿತ – ವಿಜ್ಞಾನ ಪಾಠ ಮಾಡಿ ಹಾಗು ಒಂದಲ್ಲಾ ಒಂದು ದಿನ ಇವನು ಕಲಾವಿದ ಆಗುತ್ತಾನೆ ಎಂದು ನಾನು 8ನೇ ಕ್ಲಾಸಿನಲ್ಲಿ ಇರಬೇಕಾದರೆ ಭವಿಷ್ಯ ನುಡಿದಿದ್ದ ಗುರುಗಳು. ಮಾರ್ಚ್​ 18ರಂದು ಶಿವನಲ್ಲಿ ಲೀನವಾದರು. ನಮ್ಮ #MRM SIR.. #BPIHS ಶಾಲೆ ಮಲ್ಲೇಶ್ವರದ ಹೆಮ್ಮೆಯ ಪ್ರಾಧ್ಯಾಪಕರ ಆತ್ಮಕ್ಕೆ ಶಾಂತಿ ಕೋರುವ ನಿಮ್ಮ ತುಂಟ ವಿದ್ಯಾರ್ಥಿ ಈಶ್ವರ ಗೌಡ. ಓಂಶಾಂತಿ…’ ಎಂದು ಜಗ್ಗೇಶ್​ ಟ್ವೀಟ್​ ಮಾಡಿದ್ದಾರೆ. ಎಂ. ರಾಮಮೂರ್ತಿ ಅವರಿಗೆ ಜಗ್ಗೇಶ್​ ರೀತಿಯೇ ಅನೇಕ ವಿದ್ಯಾರ್ಥಿಗಳು ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ.

ಎಂ. ರಾಮಮೂರ್ತಿ ನಿಧನದ ಬಗ್ಗೆ ಅವರ ಪುತ್ರ ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿದ್ದಾರೆ. 60 ವರ್ಷಗಳ ಕಾಲ ಗಣಿತ ಮತ್ತು ವಿಜ್ಞಾನ ಪಾಠ ಮಾಡಿದ ಅನುಭವ ರಾಮಮೂರ್ತಿ ಅವರದ್ದಾಗಿತ್ತು. ಲಕ್ಷಾಂತರ ವಿದ್ಯಾರ್ಥಿಗಳಿಗೆ ಅವರು ಪಾಠ ಮಾಡಿದ್ದರು. ಬಿ.ಪಿ. ಇಂಡಿಯನ್​ ಪಬ್ಲಿಕ್​ ಸ್ಕೂಲ್​ ಮತ್ತು ನಾಗಸೇನಾ ವಿದ್ಯಾಲಯದಲ್ಲಿ ಸೇವೆ ಸಲ್ಲಿಸಿದ್ದರು. ಜಗ್ಗೇಶ್​ ಒಬ್ಬ ಕಲಾವಿದನಾಗುತ್ತಾರೆ ಎಂಬುದನ್ನು ಚಿಕ್ಕ ವಯಸ್ಸಿನಲ್ಲಿಯೇ ರಾಮಮೂರ್ತಿ ಅವರು ಗುರುತಿಸಿದ್ದರು.

ಇದನ್ನೂ ಓದಿ: ನವರಸ ನಾಯಕ ಜಗ್ಗೇಶ್​ಗೆ ಹ್ಯಾಪಿ ಬರ್ತ್​​ಡೇ ಹೇಳಿದ ಚಾಲೆಂಜಿಂಗ್​ ಸ್ಟಾರ್​ ದರ್ಶನ್!

Darshan Interview | ಜಗ್ಗೇಶ್​ ವಿವಾದಕ್ಕೆ ತೆರೆ: ಅಭಿಮಾನಿಗಳ ಪರವಾಗಿ ಕ್ಷಮೆ ಕೇಳಿದ ನಟ ದರ್ಶನ್​