Bigg Boss Kannada: ಕರುನಾಡಿನ ಜನತೆ ಎದುರು ಬಹಿರಂಗ ಆಯ್ತು ಬಿಗ್​ ಬಾಸ್​ ರಘು ವೀಕ್​ನೆಸ್​! ಇನ್ಮುಂದೆ ಕಷ್ಟ ಇದೆ

ಲಾಕ್​ಡೌನ್​ ಸಮಯದಲ್ಲಿ ಕಾಮಿಡಿ ವಿಡಿಯೋಗಳ ಮೂಲಕ ಫೇಮಸ್​ ಆದ ರಘು ಅವರು ತಮ್ಮ ವೀಕ್​ನೆಸ್​ ಬಗ್ಗೆ ಬಾಯಿ ಬಿಟ್ಟಿದ್ದಾರೆ. ಅದರಿಂದ ಅವರಿಗೆ ಹಿನ್ನಡೆ ಆಗುವ ಸಾಧ್ಯತೆ ಹೆಚ್ಚಿದೆ.

Bigg Boss Kannada: ಕರುನಾಡಿನ ಜನತೆ ಎದುರು ಬಹಿರಂಗ ಆಯ್ತು ಬಿಗ್​ ಬಾಸ್​ ರಘು ವೀಕ್​ನೆಸ್​! ಇನ್ಮುಂದೆ ಕಷ್ಟ ಇದೆ
ರಘು ಗೌಡ - ಬಿಗ್​ ಬಾಸ್
Follow us
ಮದನ್​ ಕುಮಾರ್​
|

Updated on: Mar 10, 2021 | 3:48 PM

ಸೋಶಿಯಲ್​ ಮೀಡಿಯಾದಲ್ಲಿ ಖ್ಯಾತಿ ಪಡೆದು, ಬಿಗ್​ ಬಾಸ್​ ಮನೆಯೊಳಗೆ ಕಾಲಿಡುವ ಅವಕಾಶ ಗಿಟ್ಟಿಸಿಕೊಂಡ ರಘು ಮೇಲೆ ಅವರ ಅಭಿಮಾನಿಗಳಿಗೆ ಭಾರಿ ನಿರೀಕ್ಷೆ ಇದೆ. ಆದರೆ ಟಾಸ್ಕ್​ಗಳಲ್ಲಿ ಅವರು ಹಿನ್ನಡೆ ಅನುಭವಿಸುವುದು ಖಚಿತ ಎನಿಸುತ್ತಿದೆ. ಹಾಗಂತ ಇದು ಅಂತೆ-ಕಂತೆ ಅಲ್ಲ. ಸ್ವತಃ ರಘು ಅವರೇ ಈ ಸಾಧ್ಯತೆ ಬಗ್ಗೆ ಬಾಯಿ ಬಿಟ್ಟಿದ್ದಾರೆ. ತಮ್ಮ ವೀಕ್​ನೆಸ್​ ಏನು ಎಂಬುದನ್ನು ಹೇಳಿಕೊಂಡಿದ್ದಾರೆ.

ಸಿಕ್ಕಾಪಟ್ಟೆ ದೈಹಿಕ ಸಾಮರ್ಥ್ಯ ಬೇಡುವ ಟಾಸ್ಕ್​ಗಳನ್ನು ಈಗ ಬಿಗ್​ ಬಾಸ್​ ನೀಡುತ್ತಿದ್ದಾರೆ. ಅದು ರಘು ಆತಂಕಕ್ಕೆ ಕಾರಣ ಆಗಿದೆ. ಇತ್ತೀಚೆಗೆ ವೈರಸ್​ ವರ್ಸಸ್​ ಮನುಷ್ಯರು ಎಂಬ ಟಾಸ್ಕ್​ನಲ್ಲಿ ಅದು ರಘು ಗಮನಕ್ಕೆ ಬಂದಿದೆ. ಟಾಸ್ಕ್​ ನಡುವಿನ ಬಿಡುವಿನಲ್ಲಿ ತಮ್ಮ ದೌರ್ಬಲ್ಯದ ಬಗ್ಗೆ ಹಿರಿಯ ನಟ ಶಂಕರ್​ ಅಶ್ವತ್​ ಬಳಿ ರಘು ಬಾಯಿ ಬಿಟ್ಟಿದ್ದಾರೆ. ಅದಕ್ಕೆ ತಮ್ಮ ಅನುಭವದ ಆಧಾರದ ಮೇಲೆ ಶಂಕರ್​ ಅಶ್ವತ್ಥ್​​ ಕೆಲವು ಸಲಹೆ ನೀಡಿದ್ದಾರೆ.

ಅಷ್ಟಕ್ಕೂ ರಘುಗೆ ಕಾಡುತ್ತಿರುವ ವೀಕ್​ನೆಸ್​ ಏನು? ‘ಇಲ್ಲಿ ನನಗೊಂದು ಸಮಸ್ಯೆ ಆಗುತ್ತಿದೆ. ನಾನು ದೈಹಿಕವಾಗಿ ಅಷ್ಟೊಂದು ಫಿಟ್​ ಆಗಿಲ್ಲ. ಜೀವನದಲ್ಲಿ ಯಾವುದೇ ಫಿಜಿಕಲ್​ ಚಟುವಟಿಕೆಗಳೇ ಇಲ್ಲ. ಎಲ್ಲರೂ ನನ್ನನ್ನು ವೀಕ್​ ಅಂದುಕೊಳ್ಳುತ್ತಾರೆ. ಯಾರಾದರೂ ಬಂದು ನೀನು ಟಾಸ್ಕ್​ನಲ್ಲಿ ವೀಕ್​ ಎಂದರೆ ಬೇಜಾರಾಗುತ್ತದೆ’ ಎಂದು ಮುಖ ಬಾಡಿಸಿಕೊಂಡು ಮಾತನಾಡಿದ್ದಾರೆ ರಘು.

ಅದನ್ನು ಕೇಳಿಸಿಕೊಂಡ ಶಂಕರ್ ಅಶ್ವತ್ಥ್​ ಅವರು ಸಲಹೆ ನೀಡಿದ್ದಾರೆ. ‘ಅದನ್ನೆಲ್ಲ ಮರೆತು ಬಿಡಿ. ನಿಮ್ಮ ಹೈಟ್​ 5.4 ಆಗಿದ್ದರೆ ಏನೇ ಕಷ್ಟಪಟ್ಟರೂ 5.5 ಆಗೋಕೆ ಸಾಧ್ಯ ಇಲ್ಲ. ನಿಮ್ಮ ಕೈಯಲ್ಲಿ ಎಷ್ಟು ಆಗುತ್ತೋ ಅಷ್ಟು ಮಾಡಿ. ತುಂಬಾ ನಿರೀಕ್ಷೆ ಇಟ್ಟುಕೊಳ್ಳಬೇಡಿ. ನಿಮ್ಮ ಪ್ರಯತ್ನ ನೀವೂ ಮಾಡಿ. ಆಗ ಧೈರ್ಯ ಬರುತ್ತದೆ. ಈ ಟಾಸ್ಕ್​ ಅಲ್ಲ ಎಂದರೆ ಮತ್ತೊಂದು ಟಾಸ್ಕ್​ನಲ್ಲಿ ಗೆಲ್ಲುತ್ತೀರಿ’ ಎಂದು ಶಂಕರ್​ ಅಶ್ವತ್ಥ್​ ಧೈರ್ಯ ತುಂಬಿದ್ದಾರೆ.

ಇದನ್ನೂ ಓದಿ: Bigg Boss Kannada : ಶಂಕರ್ ಅಶ್ವತ್ಥ್ ಬಗ್ಗೆ 45 ವರ್ಷದಿಂದ ಅನೇಕರಿಗೆ ಗೊತ್ತಿರದ ರಹಸ್ಯ ಬಿಗ್ ಬಾಸ್​ನಲ್ಲಿ ಬಯಲು!

Bigg Boss Kannada: ದಿವ್ಯಾ ಎದುರಲ್ಲೇ ಕಳಚಿತು ಬಿಗ್ ಬಾಸ್ ಸ್ಪರ್ಧಿಗಳ ಮುಖವಾಡ! ಇವರೆಲ್ಲ ಮಾಡಿದ್ದು ಸರಿಯೇ?

ಬಾಗಲಕೋಟೆಯಲ್ಲಿ ರಸ್ತೆ ಮೇಲೆ ಅಡುಗೆ ಮಾಡಿ ನೇಕಾರರಿಂದ ಪ್ರತಿಭಟನೆ
ಬಾಗಲಕೋಟೆಯಲ್ಲಿ ರಸ್ತೆ ಮೇಲೆ ಅಡುಗೆ ಮಾಡಿ ನೇಕಾರರಿಂದ ಪ್ರತಿಭಟನೆ
ನನಗೆ ಎಲ್ಲ ಧರ್ಮವೂ ಒಂದೇ, ಓಲೈಕೆ ಮಾಡುವವನಲ್ಲ; ಸಿಎಂ ಸಿದ್ದರಾಮಯ್ಯ
ನನಗೆ ಎಲ್ಲ ಧರ್ಮವೂ ಒಂದೇ, ಓಲೈಕೆ ಮಾಡುವವನಲ್ಲ; ಸಿಎಂ ಸಿದ್ದರಾಮಯ್ಯ
6,6,6,6,4... ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ಹಾರ್ದಿಕ್
6,6,6,6,4... ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ಹಾರ್ದಿಕ್
ವಾಲ್ಮೀಕಿ ನಿಗಮ ಹಗರಣದಲ್ಲಿ ಕ್ಲೀನ್ ಚಿಟ್; ನಾಗೇಂದ್ರ ಪುನಃ ಆಗುವರೇ ಮಂತ್ರಿ?
ವಾಲ್ಮೀಕಿ ನಿಗಮ ಹಗರಣದಲ್ಲಿ ಕ್ಲೀನ್ ಚಿಟ್; ನಾಗೇಂದ್ರ ಪುನಃ ಆಗುವರೇ ಮಂತ್ರಿ?
ವಾಲ್ಮೀಕಿ ಹಗರಣ ವಿರುದ್ಧ ಪಾದಾಯಾತ್ರೆಗೆ ಅನುಮತಿ ಸಿಗಲಿಲ್ಲ: ಯತ್ನಾಳ್
ವಾಲ್ಮೀಕಿ ಹಗರಣ ವಿರುದ್ಧ ಪಾದಾಯಾತ್ರೆಗೆ ಅನುಮತಿ ಸಿಗಲಿಲ್ಲ: ಯತ್ನಾಳ್
ತಿರುಮಲದಲ್ಲಿ 8 ಅಡಿಯ ದೈತ ನಾಗರಹಾವು ಪತ್ತೆ: ವೈರಲ್ ವಿಡಿಯೋ
ತಿರುಮಲದಲ್ಲಿ 8 ಅಡಿಯ ದೈತ ನಾಗರಹಾವು ಪತ್ತೆ: ವೈರಲ್ ವಿಡಿಯೋ
ನಿನ್ನದು ನರಿ ಕಣ್ಣೀರು: ಮಹಾರಾಣಿ ಮೋಕ್ಷಿತಾ ಮೇಲೆ ಉರಿದು ಬಿದ್ದ ಮಂಜು
ನಿನ್ನದು ನರಿ ಕಣ್ಣೀರು: ಮಹಾರಾಣಿ ಮೋಕ್ಷಿತಾ ಮೇಲೆ ಉರಿದು ಬಿದ್ದ ಮಂಜು
ಅಭಿನಂದನಾ ಕಾರ್ಯಕ್ರಮಕ್ಕೆ ಸಿಎಂರ ಡೇಟ್ ಕೇಳಲು ಬಂದಿದ್ದು ಎಂದ ಯೋಗೇಶ್ವರ್
ಅಭಿನಂದನಾ ಕಾರ್ಯಕ್ರಮಕ್ಕೆ ಸಿಎಂರ ಡೇಟ್ ಕೇಳಲು ಬಂದಿದ್ದು ಎಂದ ಯೋಗೇಶ್ವರ್
ನವೆಂಬರ್ 29ರಿಂದ ರೇಣುಕಾಚಾರ್ಯ ತಂಡದಿಂದಲೂ ಒಂದು ಅಭಿಯಾನ!
ನವೆಂಬರ್ 29ರಿಂದ ರೇಣುಕಾಚಾರ್ಯ ತಂಡದಿಂದಲೂ ಒಂದು ಅಭಿಯಾನ!
ಬಂಡೀಪುರದಲ್ಲಿ ಆನೆ ಮರಿಗೆ ಹೊಂಚು ಹಾಕಿದ್ದ ಹುಲಿಯನ್ನು ಓಡಿಸಿದ ತಾಯಾನೆ
ಬಂಡೀಪುರದಲ್ಲಿ ಆನೆ ಮರಿಗೆ ಹೊಂಚು ಹಾಕಿದ್ದ ಹುಲಿಯನ್ನು ಓಡಿಸಿದ ತಾಯಾನೆ