AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada: ದಿವ್ಯಾ ಎದುರಲ್ಲೇ ಕಳಚಿತು ಬಿಗ್ ಬಾಸ್ ಸ್ಪರ್ಧಿಗಳ ಮುಖವಾಡ! ಇವರೆಲ್ಲ ಮಾಡಿದ್ದು ಸರಿಯೇ?

Bigg Boss Kannada 8 Updates (Day 4): ಪ್ರತಿದಿನವೂ ನಾಮಿನೇಷನ್ ತೂಗುಗತ್ತಿ ಒಬ್ಬರಿಂದ ಮತ್ತೊಬ್ಬರಿಗೆ ಪಾಸ್ ಆಗುತ್ತಿದೆ. ಈ ನಡುವೆ ಯಾರು ಅಸಲಿ, ಯಾರು ನಕಲಿ ಎಂಬುದನ್ನು ತಿಳಿಯುವ ಸಂದರ್ಭವೂ ಎದುರಾಗುತ್ತಿದೆ.

Bigg Boss Kannada: ದಿವ್ಯಾ ಎದುರಲ್ಲೇ ಕಳಚಿತು ಬಿಗ್ ಬಾಸ್ ಸ್ಪರ್ಧಿಗಳ ಮುಖವಾಡ! ಇವರೆಲ್ಲ ಮಾಡಿದ್ದು ಸರಿಯೇ?
ಬಿಗ್​ ಬಾಸ್​ 8
Ghanashyam D M | ಡಿ.ಎಂ.ಘನಶ್ಯಾಮ
|

Updated on: Mar 04, 2021 | 10:46 PM

Share

ದಿನದಿಂದ ದಿನಕ್ಕೆ ಬಿಗ್ ಬಾಸ್ ಮನೆಯೊಳಗಿನ ಪೈಪೋಟಿ ಹೆಚ್ಚಾಗುತ್ತಿದೆ. ತಮ್ಮ ತಮ್ಮ ಅಸ್ಥಿತ್ವಕ್ಕಾಗಿ ಎಲ್ಲರೂ ಹಣಾಹಣಿ ನಡೆಸುತ್ತಿದ್ದಾರೆ. ಪ್ರತಿದಿನವೂ ನಾಮಿನೇಷನ್ ತೂಗುಗತ್ತಿ ಒಬ್ಬರಿಂದ ಮತ್ತೊಬ್ಬರಿಗೆ ಪಾಸ್ ಆಗುತ್ತಿದೆ. ಈ ನಡುವೆ ಯಾರು ಅಸಲಿ, ಯಾರು ನಕಲಿ ಎಂಬುದನ್ನು ತಿಳಿಯುವ ಸಂದರ್ಭವೂ ಎದುರಾಗುತ್ತಿದೆ. ಇತ್ತೀಚೆಗೆ ದಿವ್ಯಾ ಸುರೇಶ್ ಅವರಿಗೆ ಮನೆಯ ಇತರೆ ಸದಸ್ಯರ ಅಸಲಿ ಮುಖದ ಬಗ್ಗೆ ಅನುಮಾನ ಮೂಡಿದೆ. ಅದನ್ನು ಅವರು ನೇರವಾಗಿ ಹೇಳಿದ್ದಾರೆ. ಒಂದೇ ಒಂದು ಟಾಸ್ಕ್ ಮೂಲಕ ಅವರಿಗೆ ಸತ್ಯದ ಅರಿವಾಗಿದೆ.

ಈ ಮೊದಲೇ ನಾಮಿನೇಟ್ ಆಗಿದ್ದ ಧನುಶ್ರೀ, ಟಾಸ್ಕ್ ಒಂದರಲ್ಲಿ ತಮ್ಮ ಪ್ರತಿಸ್ಪರ್ಧಿಯಾಗಿ ದಿವ್ಯಾ ಸುರೇಶ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಬಾಸ್ಕೆಟ್ ಆಟದ ರೀತಿ ಇದ್ದ ಆ ಗೇಮ್-ನಲ್ಲಿ ಧನುಶ್ರೀ ಮತ್ತು ದಿವ್ಯಾ ತೀವ್ರ ಹಣಾಹಣಿ ನಡೆಸುತ್ತಿದ್ದರು. ಒಂದು ವೇಳೆ ಈ ಆಟದಲ್ಲಿ ಸೋತರೆ ಮನೆಯಿಂದ ಹೊರಹೋಗಬೇಕಾದ ಸಂದರ್ಭ ಎದುರಾಗಬಹುದು ಎಂಬ ಭಯದಿಂದ ದಿವ್ಯಾ ಕೊಂಚ ಆಕ್ರಮಣಕಾರಿಯಾಗಿಯೇ ಆಟ ಆಡಿದರು. ಈ ಟಾಸ್ಕ್ ನಿಭಾಯಿಸುವ ವೇಳೆ ಅವರ ಕಾಲಿಗೆ ಗಾಯವಾಗಿ ರಕ್ತ ಕೂಡ ಸುರಿಯಲು ಆರಂಭಿಸಿತು. ಹಾಗಿದ್ದರೂ ಅವರು ಛಲ ಬಿಡದೇ ಟಾಸ್ಕ್ ಮುಗಿಸಿ ವಿನ್ ಆದರು. ಹಾಗಿದ್ದರೂ ಅವರ ಮನದಲ್ಲಿ ಒಂದು ಮುಖ್ಯ ವಿಚಾರ ಕೊರೆಯಲು ಆರಂಭಿಸಿತು.

ದಿವ್ಯಾ ಮತ್ತು ಧನುಶ್ರೀ ಹಣಾಹಣಿ ನಡೆಸುವಾಗ ಮನೆಯಲ್ಲಿದ್ದ ಎಲ್ಲರೂ ಕೂಡ ಧನುಶ್ರೀಯನ್ನು ಹುರಿದುಂಬಿಸುತ್ತಿದ್ದರು. ಯಾರೂ ಕೂಡ ತನ್ನ ಹೆಸರನ್ನು ಕೂಗಿ ಹುರಿದುಂಬಿಸುತ್ತಿಲ್ಲ ಎಂಬುದು ದಿವ್ಯಾ ಅವರ ಗಮನಕ್ಕೆ ಬಂತು. ಇದು ಅವರ ಮನಸ್ಸಿಗೆ ತುಂಬ ಬೇಸರ ಉಂಟು ಮಾಡಿತು. ‘ಒಬ್ಬರು ಸಹ ನನ್ನ ಹೆಸರನ್ನು ಹೇಳುತ್ತಿರಲಿಲ್ಲ. ಅದು ನನಗೆ ಸ್ವಲ್ಪ ಬೇಸರ ಆಯ್ತು’ ಎಂದು ಧನುಶ್ರೀ ಬಳಿ ದಿವ್ಯಾ ನೋವು ತೋಡಿಕೊಂಡಿದ್ದಾರೆ.

‘ಆಟ ಆಡುವಾಗ ಯಾರೂ ನನಗೆ ಸಪೋರ್ಟ್ ಮಾಡಲಿಲ್ಲ. ಆದರೆ ನಾನು ಟಾಸ್ಕ್ ಗೆದ್ದ ಬಳಿಕ ಎಲ್ಲರೂ ಓ.. ಎನ್ನಲು ಶುರು ಮಾಡಿದರು’ ಎನ್ನುತ್ತಲೇ ದಿವ್ಯಾ ಭಾವುಕರಾದರು. ಈ ಘಟನೆಯಿಂದ ದಿವ್ಯಾ ಮನಸ್ಸಿಗೆ ತುಂಬ ಬೇಜಾರಾಗಿದೆ. ಮೇಲ್ನೋಟಕ್ಕೆ ತಮ್ಮ ಬಳಿ ಚೆನ್ನಾಗಿ ಮಾತನಾಡುವ ಯಾರೊಬ್ಬರೂ ಕೂಡ ಟಾಸ್ಕ್ ಸಂದರ್ಭದಲ್ಲಿ ತಮಗೆ ಬೆಂಬಲ ನೀಡುವುದಿಲ್ಲ ಎಂಬ ಕಹಿ ಸತ್ಯ ಅವರಿಗೆ ಅರ್ಥ ಆದಂತಿದೆ.

ಒಟ್ಟಾರೆ ಈ ವಾರದ ಹಣಾಹಣಿಯಲ್ಲಿ ಧನುಶ್ರೀ, ರಘು, ವಿಶ್ವನಾಥ್, ಶುಭ ಪೂಂಜಾ ಮತ್ತು ನಿರ್ಮಲಾ ನಾಮಿನೇಟ್ ಆಗಿದ್ದಾರೆ. ಈ ಐವರ ಪೈಕಿ ಯಾರು ಮೊದಲ ವಾರದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಬಿಗ್ ಬಾಸ್ ಮನೆಯಿಂದ ಹೊರಬರುತ್ತಾರೆ ಎಂಬ ಕೌತುಕ ವೀಕ್ಷಕರ ಮನದಲ್ಲಿ ಸೃಷ್ಟಿಯಾಗಿದೆ.

ಇದನ್ನೂ ಓದಿ: BBK8: ಬಿಗ್​ ಬಾಸ್​ ಮೊದಲ ವಾರದಲ್ಲಿ ಹೊರ ಹೋಗೋದು ಶುಭಾ ಪೂಂಜಾ? ಮೂರನೇ ದಿನ ಹೊಸ ಟ್ವಿಸ್ಟ್​

ಇದನ್ನು ಓದಿ: Bigg Boss Kannada Day 3: ಬಿಗ್​ ಬಾಸ್​ ಮನೆಯಲ್ಲಿ ಮಂಜು-ದಿವ್ಯಾ ಪ್ರೇಮಕಥೆ ಎಲ್ಲೆಲ್ಲೋ ಹೋಗ್ತಿದೆ

ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ನನ್ನ ಮದುವೆಯಾದಾಗ ನೀನೂ ಗೌಡ್ತಿಯಾದೆ ಅಂತ ಛೇಡಿಸುತ್ತಿದ್ದರು: ಮಾಲಾಶ್ರೀ
ನನ್ನ ಮದುವೆಯಾದಾಗ ನೀನೂ ಗೌಡ್ತಿಯಾದೆ ಅಂತ ಛೇಡಿಸುತ್ತಿದ್ದರು: ಮಾಲಾಶ್ರೀ
ರಾಜಕಾರಣಿಯಾಗಿರದಿದ್ದರೆ ಪರಮೇಶ್ವರ್ ಹೋಟೆಲ್ ಉದ್ಯಮಿಯಾಗುತ್ತಿದ್ದರೇ?
ರಾಜಕಾರಣಿಯಾಗಿರದಿದ್ದರೆ ಪರಮೇಶ್ವರ್ ಹೋಟೆಲ್ ಉದ್ಯಮಿಯಾಗುತ್ತಿದ್ದರೇ?