BBK8: ಬಿಗ್​ ಬಾಸ್​ ಮೊದಲ ವಾರದಲ್ಲಿ ಹೊರ ಹೋಗೋದು ಶುಭಾ ಪೂಂಜಾ? ಮೂರನೇ ದಿನ ಹೊಸ ಟ್ವಿಸ್ಟ್​

ಈ ಬಾರಿಯ ಬಿಗ್​ ಬಾಸ್​ನಲ್ಲಿ ಎಲಿಮಿನೇಷನ್​ಗೆ ಮೊದಲ ದಿನ ನಾಲ್ಕು ಜನ ನಾಮಿನೇಟ್​ ಆಗಿದ್ದರು. ನಂತರ ಈ ನಾಮಿನೇಷನ್​ ತೂಗುಗತ್ತಿಯಿಂದ ತಪ್ಪಿಸಿಕೊಳ್ಳಲು ಬಿಗ್​ ಬಾಸ್​ ಅವಕಾಶ ನೀಡಿತ್ತು.

BBK8: ಬಿಗ್​ ಬಾಸ್​ ಮೊದಲ ವಾರದಲ್ಲಿ ಹೊರ ಹೋಗೋದು ಶುಭಾ ಪೂಂಜಾ? ಮೂರನೇ ದಿನ ಹೊಸ ಟ್ವಿಸ್ಟ್​
ಬಿಗ್​ ಬಾಸ್​ ಮನೆಯಲ್ಲಿ ಶುಭಾ
Follow us
ರಾಜೇಶ್ ದುಗ್ಗುಮನೆ
|

Updated on:Mar 04, 2021 | 11:11 AM

ಬಿಗ್​ ಬಾಸ್​ ಮನೆಯಲ್ಲಿ ಏನೂ ಬೇಕಾದರೂ ನಡೆಯಬಹುದು ಎನ್ನುವುದು ಪದೇ ಪದೇ ಸಾಬೀತಾಗುತ್ತಲೇ ಇದೆ. ಕನ್ನಡ ಬಿಗ್​ ಬಾಸ್​ ಮನೆಯಲ್ಲಿ ಮೂರನೇ ದಿನ ನಡೆದ ಘಟನೆ ಇದಕ್ಕೆ ತಾಜಾ ಉದಾಹರಣೆ. ಮೂರನೇ ದಿನದಲ್ಲಿ ಬಿಗ್ ಬಾಸ್​ ಮನೆಯಲ್ಲಿ ಅಚ್ಚರಿಯ ಬೆಳವಣಿಗೆಗಳು ನಡೆದವು. ಈ ಬಾರಿಯ ಎಲಿಮಿನೇಷನ್​ಗೆ ನಾಮಿನೇಟ್​ ಆಗಿದ್ದ ನಿಧಿ ಸುಬ್ಬಯ್ಯ ಸೇಫ್​ ಆಗಿದ್ದು, ಶುಭಾ ಪೂಂಜಾ ನಾಮಿನೇಟ್​ ಆಗಿದ್ದಾರೆ! ಈ ಬಾರಿಯ ಬಿಗ್​ ಬಾಸ್​ನಲ್ಲಿ ಎಲಿಮಿನೇಷನ್​ಗೆ ಮೊದಲ ದಿನ ನಾಲ್ಕು ಜನ ನಾಮಿನೇಟ್​ ಆಗಿದ್ದರು. ನಂತರ ಈ ನಾಮಿನೇಷನ್​ ತೂಗುಗತ್ತಿಯಿಂದ ತಪ್ಪಿಸಿಕೊಳ್ಳಲು ಸ್ಪರ್ಧಿಗಳಿಗೆ ಅವಕಾಶ ನೀಡಲಾಯಿತು. ಅದೇನೆಂದರೆ, ಟಾಸ್ಕ್​ನಲ್ಲಿ ಪೈಪೋಟಿ ನೀಡಿ ತಮ್ಮ ಪ್ರತಿಸ್ಪರ್ಧಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಟಾಸ್ಕ್​ನಲ್ಲಿ ಗೆದ್ದರೆ ನಾಮಿನೇಟ್​ ಆದವರು ಸೇಫ್​ ಆದಂತೆ. ಪ್ರತಿ ಸ್ಪರ್ಧಿ ನಾಮಿನೇಟ್​ ಆದಂತೆ.

ನಾಮಿನೇಟ್​ ಆದ ನಿಧಿ, ಶುಭಾ ಅವರನ್ನು ಆಯ್ಕೆ ಮಾಡಿಕೊಂಡರು. ಇಬ್ಬರ ನಡುವೆ ಆಟ ಏರ್ಪಡಿಸಲಾಯಿತು. ಆಗ, ನಿಧಿ ಗೆದ್ದರು, ಶುಭಾ ಸೋತರು. ಈ ಮೂಲಕ ನಿಧಿ ಸುಬ್ಬಯ್ಯ ಸೇಫ್​ ಆದರೆ, ನಾಮಿನೇಟ್ ತೂಗುಗತ್ತಿ ಶುಭಾ ಪಾಲಾಯಿತು. ಸದ್ಯ, ನಾಮಿನೇಷನ್​ ಸಾಲಿನಲ್ಲಿ ನಿರ್ಮಲಾ, ಶುಭಾ, ವಿಶ್ವ ಹಾಗೂ ರಘು ಇದ್ದಾರೆ. ಯಾರಿಗೆ ಕಡಿಮೆ ಮತ ಸಿಗುತ್ತದೆಯೋ ಅವರು ಎಲಿಮಿನೇಷನ್​ ಆಗಲಿದ್ದಾರೆ.

ವಿಶ್ವ ಅವರನ್ನು ನಾಮಿನೇಟ್​ ಮಾಡಿದ್ದ ಪ್ರಶಾಂತ್​:

ನಾಮಿನೇಷನ್​ ತೂಗುಗತ್ತಿಯಿಂದ ತಪ್ಪಿಸಿಕೊಳ್ಳಲು ವಿಶೇಷ ಟಾಸ್ಕ್​ನಲ್ಲಿ ಪ್ರಶಾಂತ್​ ಆಯ್ಕೆ ಮಾಡಿಕೊಂಡಿದ್ದು ವಿಶ್ವನಾಥ್​ ಅವರನ್ನು. ‘ನನ್ನ ಸ್ವಾರ್ಥಕ್ಕಾಗಿ ನಾನು ಒಬ್ಬ ವೀಕ್​ ಸ್ಪರ್ಧಿಯನ್ನು ಆಯ್ಕೆ ಮಾಡಿಕೊಂಡಿದ್ದೇನೆ’ ಎಂದು ಪ್ರಶಾಂತ್​ ಒಪ್ಪಿಕೊಂಡರು. ಅದರಂತೆ ಆಟದಲ್ಲಿ ವಿಶ್ವನಾಥ್​ರನ್ನು ಸೋಲಿಸಿ ತಾವು ಸೇಫ್​ ಆದರು.

ಮಂಜು ಎದುರು ಸಮಬಲದ ಸ್ಪರ್ಧಿ! ಪ್ರಶಾಂತ್​ ಸಂಬರಗಿ ರೀತಿಯೇ ಮಂಜು ಪಾವಗಡ ಅವರಿಗೂ ಬಿಗ್​ ಬಾಸ್​ ಈ ರೀತಿ ಅವಕಾಶ ನೀಡಿದರು. ಆಗ ಮಂಜು ಆಯ್ಕೆ ಮಾಡಿಕೊಂಡಿದ್ದು ರಘು ಅವರನ್ನು. ಈ ಆಯ್ಕೆಗೆ ಮಂಜು ಸೂಕ್ತ ಕಾರಣವನ್ನೂ ನೀಡಿದರು. ‘ರಘು ನನಗೆ ಸರಿಯಾದ ಸ್ಪರ್ಧಿ. ಸಮನಾಗಿ ಸ್ಪರ್ಧಿಸುತ್ತಾರೆ ಎಂದುಕೊಂಡಿದ್ದೇನೆ. ಒಂದು ವೇಳೆ ನಾನು ಸೋತರೂ ಸಮಬಲದ ಸ್ಪರ್ಧಿಯ ಜೊತೆ ಸೋತೆ ಅಂತ ನನಗೆ ಗೌರವ ಸಿಗಬೇಕು ಎಂಬ ಕಾರಣಕ್ಕೆ ಅವರನ್ನು ಆಯ್ಕೆ ಮಾಡಿಕೊಂಡಿದ್ದೇನೆ’ ಎಂದು ಅವರು ನೀಡಿದ ಕಾರಣ ನಿಜಕ್ಕೂ ಮೆಚ್ಚುವಂಥದ್ದು. ಬಿಗ್​ ಬಾಸ್​ ನೀಡಿದ ಟಾಸ್ಕ್​ನಲ್ಲಿ ಮಂಜು ಗೆಲ್ಲುವ ಮೂಲಕ ಸೇಫ್ ಆಗಿದ್ದಾರೆ. ರಘು ಈಗ ಎಲಿಮಿನೇಷನ್​ ಭೀತಿಯಲ್ಲಿದ್ದಾರೆ.

ಇದನ್ನೂ ಓದಿ: Bigg Boss Kannada Day 3: ಬ್ರೋ-ಪ್ರಶಾಂತ್​ ನಡುವೆ ಆರಂಭವಾದ ಜಗಳ ಇಡೀ ಮನೆಗೆ ಹೊತ್ತಿಕೊಳ್ಳುತ್ತಾ?

Published On - 11:07 am, Thu, 4 March 21