ಅವಧಿ ಮುಗಿದಿದ್ದರೂ.. ಹಾಸ್ಟೆಲ್​ನಲ್ಲಿಯೇ ಸೀನಿಯರ್ಸ್​ ಊಟ! ‘ಮುಸುರೆ ಎಂಜಲು ತಿನ್ನಲು ಬರಬೇಡಿ’ ಎಂದು ಅನಿವಾರ್ಯವಾಗಿ ನೋಟಿಸ್ ಹಾಕಿದ ವಾರ್ಡನ್..

ಕಾಲೇಜಿನಲ್ಲಿ ಕೋರ್ಸ್​ ಮುಗಿದಿದ್ದರೂ ವಿದ್ಯಾರ್ಥಿಗಳು ಹಾಸ್ಟೆಲ್​ನಲ್ಲಿಯೇ ಠಿಕಾಣಿ ಹೂಡಿದ್ದಾರೆ. ಇದನ್ನು ತಡೆಯುವುದಕ್ಕೆ ವಾರ್ಡ​ನ್ ಈ ರೀತಿಯಾಗಿ ಅನಿವಾರ್ಯವಾಗಿ, ನೋಟಿಸ್​ ಅಂಟಿಸಿದ್ದಾರೆ!

ಅವಧಿ ಮುಗಿದಿದ್ದರೂ.. ಹಾಸ್ಟೆಲ್​ನಲ್ಲಿಯೇ ಸೀನಿಯರ್ಸ್​ ಊಟ! ‘ಮುಸುರೆ ಎಂಜಲು ತಿನ್ನಲು ಬರಬೇಡಿ’ ಎಂದು ಅನಿವಾರ್ಯವಾಗಿ ನೋಟಿಸ್ ಹಾಕಿದ ವಾರ್ಡನ್..
ಸೂಚನಾ ಫಲಕ
shruti hegde

|

Mar 04, 2021 | 2:05 PM

ತುಮಕೂರು: ಹಿರಿಯ ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿ ಇರಬಾರದು. ಮುಸುರೆ ಎಂಜಲು ತಿನ್ನುವುದಕ್ಕಾಗಿ ಇಲ್ಲಿ ಬರಬಾರದು, ಬಾಕ್ಸ್ ಕೊಂಡೊಯ್ಯುವುದು ಸದುದ್ದೇಶದ, ಉತ್ತಮ ವ್ಯವಸ್ಥೆಗೆ ಮಾರಕ ಎಂದು ತುಮಕೂರು ವಿಶ್ವವಿದ್ಯಾಲಯದ ಪಿಜಿ ಹಾಸ್ಟೆಲ್ ವಾರ್ಡನ್ ಜಯಶಂಕರ್ ಅವರು​ ನೋಟಿಸ್​ ಅಂಟಿಸಿದ್ದಾರೆ. ಕಾಲೇಜಿನಲ್ಲಿ ಕೋರ್ಸ್​ ಮುಗಿದಿದ್ದರೂ ವಿದ್ಯಾರ್ಥಿಗಳು ಹಾಸ್ಟೆಲ್​ನಲ್ಲಿಯೇ ಠಿಕಾಣಿ ಹೂಡಿದ್ದಾರೆ. ಇದನ್ನು ತಡೆಯುವುದಕ್ಕೆ ವಾರ್ಡ​ನ್ ಈ ರೀತಿಯಾಗಿ ಅನಿವಾರ್ಯವಾಗಿ, ನೋಟಿಸ್​ ಅಂಟಿಸಿದ್ದಾರೆ!

ಸೀನಿಯರ್ ವಿದ್ಯಾರ್ಥಿಗಳ ಹಾಸ್ಟೆಲ್ ಅವಧಿ ಹಾಗೂ ಕೋರ್ಸ್ ಮುಗಿದಿದ್ದರೂ, ಪ್ರತಿದಿನ ಹಾಸ್ಟೆಲ್​ಗೆ ಬಂದು ಊಟ ತಿನ್ನುವುದು ಹಾಗೂ ಬಾಕ್ಸ್​ಗಳಿಗೆ ಹಾಕಿಕೊಂಡು ಹೋಗುತ್ತಿದ್ದರು. ಈ ಕುರಿತಾಗಿ, ಮುಸುರೆ ಮತ್ತು ಎಂಜಲು ತಿನ್ನಲು ಬರಬೇಡಿ. ಈ ಮೂಲಕ ಎಲ್ಲಾ ಸೀನಿಯರ್ ವಿದ್ಯಾರ್ಥಿಗಳಿಗೆ ತಿಳಿಸುವುದೇನೆಂದರೆ, ಯಾವುದೇ ಕಾರಣಕ್ಕೂ ವಿದ್ಯಾರ್ಥಿ ನಿಲಯದಲ್ಲಿ ವಾಸ್ತವ್ಯ ಇರಬಾರದು. ಮುಸುರೆ ಮತ್ತು ಎಂಜಲು ತಿನ್ನಲು ಬರಬಾರದು. ಅನವಶ್ಯಕವಾಗಿ ಬಾಕ್ಸ್ ತೆಗೆದುಕೊಂಡೊಯ್ಯುವುದು ಉತ್ತಮ ವ್ಯವಸ್ಥೆಗೆ ಮಾರಕವಾಗಿದೆ. ವಿದ್ಯಾರ್ಥಿಗಳು ಇದನ್ನ ನಿಲ್ಲಿಸಬೇಕೆಂದು ತಿಳಿಸಲಾಗಿದೆ ಎಂದು ಹಾಸ್ಟೆಲ್​ ವಾರ್ಡನ್ ಜಯಶಂಕರ್ ಸೂಚನಾ ಫಲಕ ಅಂಟಿಸಿದ್ದಾರೆ.

ವಿವಿ ಉಪಕುಲಪತಿ ಪ್ರೊ.ಸಿದ್ದೇಗೌಡ ಈ ಕುರಿತು ಸ್ಪಷ್ಟನೆ ನೀಡಿದ್ದು, ವಾರ್ಡನ್​, ಹಾಸ್ಟೆಲ್ ವ್ಯವಸ್ಥೆ ಸರಿಪಡಿಸಲು ನೋಟಿಸ್ ಹಾಕಿದ್ದಾರೆ. ಆದ್ರೆ ನೋಟಿಸ್ ಬೋರ್ಡ್‌ನಲ್ಲಿ ಹಾಕುವುದು ಸರಿಯಲ್ಲ. ವಿದ್ಯಾರ್ಥಿಗಳಿಗೆ ಮೌಖಿಕವಾಗಿ ಇದನ್ನ ಹೇಳಬಹುದಿತ್ತು. ಈ ಬಗ್ಗೆ ವಾರ್ಡನ್ ಜತೆ ಚರ್ಚೆ ಮಾಡಲಾಗುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಈ ಹಾಸ್ಟೆಲ್​ನ ನೀರಿನ ಟ್ಯಾಂಕ್​ ನೋಡಿಬಿಟ್ಟರೆ ಬೆಚ್ಚಿ ಬೀಳೋದು ಗ್ಯಾರಂಟಿ: ಇಲ್ಲಿನ ವಿದ್ಯಾರ್ಥಿಗಳಿಗೆ ಆರೋಗ್ಯದ ಚಿಂತೆ

ಇದನ್ನೂ ಓದಿ: ಬೆಂಗಳೂರು ವಿವಿ ಹಾಸ್ಟೆಲ್​ ಅವ್ಯವಸ್ಥೆಯ ಆಗರ: ವಿದ್ಯಾರ್ಥಿನಿಯರ ಗೋಳು ಕೇಳೋರು ಯಾರು?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada