ಬೆಂಗಳೂರು ವಿವಿ ಹಾಸ್ಟೆಲ್ ಅವ್ಯವಸ್ಥೆಯ ಆಗರ: ವಿದ್ಯಾರ್ಥಿನಿಯರ ಗೋಳು ಕೇಳೋರು ಯಾರು?
ಬೆಂಗಳೂರು ವಿಶ್ವವಿದ್ಯಾಲಯದ ಲೆಡೀಸ್ ಹಾಸ್ಟೆಲ್ ಕಟ್ಟಡ ಸ್ವಚ್ಛವಿಲ್ಲದೆ ವಿದ್ಯಾರ್ಥಿನಿಯರು ನರಕಯಾತನೆ ಅನುಭವಿಸುತ್ತಿದ್ದಾರೆ. ಒಂದೊಂದು ರೂಮ್ನಲ್ಲಿ ನಾಲ್ಕರಿಂದ ಐದು ವಿದ್ಯಾರ್ಥಿನಿಯರಿಗೆ ವ್ಯವಸ್ಥೆ ಮಾಡಲಾಗಿದ್ದು ಇದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ.
ಬೆಂಗಳೂರು ವಿಶ್ವವಿದ್ಯಾಲಯದ ಲೆಡೀಸ್ ಹಾಸ್ಟೆಲ್ ಕಟ್ಟಡ ಸ್ವಚ್ಛವಿಲ್ಲದೆ ವಿದ್ಯಾರ್ಥಿನಿಯರು ನರಕಯಾತನೆ ಅನುಭವಿಸುತ್ತಿದ್ದಾರೆ. ಒಂದೊಂದು ರೂಮ್ನಲ್ಲಿ ನಾಲ್ಕರಿಂದ ಐದು ವಿದ್ಯಾರ್ಥಿನಿಯರಿಗೆ ವ್ಯವಸ್ಥೆ ಮಾಡಲಾಗಿದ್ದು ಇದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ.
ಬಿಸಿ ನೀರಿನ ವ್ಯವಸ್ಥೆಯಿಂದ ವಂಚಿತರಾದ ವಿದ್ಯಾರ್ಥಿನಿಯರಿಗೆ ಒಳ್ಳೆಯ ಆಹಾರ ಸಹ ಸಿಗದೆ ಹಾಸ್ಟಲ್ನಲ್ಲಿ ಪರದಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಜೊತೆಗೆ, ಶೌಚಾಲಯಗಳನ್ನು ಹಾಗೂ ಸುತ್ತಮುತ್ತಲಿನ ಆವರಣವನ್ನು ಸ್ವಚ್ಛಗೊಳಿಸಲು ಸಿಬ್ಬಂದಿಯಿಲ್ಲದೆ ಹಾಸ್ಟೆಲ್ನಲ್ಲಿ ವಿದ್ಯಾರ್ಥಿನಿಯರು ನರಕಯಾತನೆ ಅನುಭವಿಸುತ್ತಿದ್ದಾರೆ.
ಹಾಸ್ಟೆಲ್ ತೊರೆಯುತ್ತಿರುವ ವಿದ್ಯಾರ್ಥಿನಿಯರು ವಿದ್ಯಾರ್ಥಿಗಳಿಗೆ ಬಿಸಿ ನೀರು ಹಾಗೂ ಉತ್ತಮ ಊಟದ ವ್ಯವಸ್ಥೆ ಮಾಡಬೇಕು. ಹಾಸ್ಟೆಲ್ ಎಂಟ್ರಿಗೆ ಥರ್ಮಲ್ ಸ್ಕ್ಯಾನರ್ ಅಳವಡಿಸಿ, ಕಟ್ಟಡವನ್ನು ಸ್ಯಾನಿಟೈಸ್ ಮಾಡಬೇಕು. ರೂಮ್ಗಳಲ್ಲಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕು. ಶೌಚಾಲಯ ಕೊಠಡಿಗಳನ್ನು ಸ್ವಚ್ಛಗೊಳಿಸಬೇಕು. ಹಾಸ್ಟೆಲ್ ಪ್ರವೇಶಕ್ಕೆ ಕಡ್ಡಾಯವಾಗಿ ಕೊವಿಡ್ ಪರೀಕ್ಷೆ ಮಾಡಿಸಬೇಕೆಂದು ಸರ್ಕಾರದಿಂದ ಕೆಲವು ಮಾರ್ಗಸೂಚೆ ಬಿಡುಗಡೆಯಾಗಿತ್ತು. ಆದ್ರೆ, ಈ ಯಾವುದೇ ನಿಯಮಗಳು ವಿ.ವಿ ಹಾಸ್ಟೆಲ್ನಲ್ಲಿ ಪಾಲನೆಯಾಗುತ್ತಿಲ್ಲ.
ಸದ್ಯಕ್ಕೆ ಮಾಸ್ಕ್ ಧರಿಸುವುದನ್ನು ಮಾತ್ರ ಕಡ್ಡಾಯ ಮಾಡಿದ್ದು, ಬೇರೆ ಯಾವ ರೂಲ್ಸ್ಗಳತ್ತ ಗಮನ ಹರಿಸಿಲಾಗುತ್ತಿಲ್ಲ. ಆದರೆ, ತಿಂಗಳಿಗೆ 1,200 ರೂ. ಇದ್ದ ಹಾಸ್ಟೆಲ್ ಫೀಸ್ ಈಗ ಏಕಾಏಕಿ 3,200 ರೂ. ಗೆ ಏರಿಕೆ ಮಾಡಿಲಾಗಿದೆ. ಇದನ್ನು, V-Cರವರ ಗಮನಕ್ಕೆ ತರಲು ಹೋದ್ರೆ ಕುಲಪತಿಗಳು ಕೈಗೆ ಸಿಗುತ್ತಿಲ್ಲವೆಂದು ವಿದ್ಯಾರ್ಥಿನಿಯರು ಹೇಳಿದ್ದಾರೆ. ಹಾಗಾಗಿ, ವಿದ್ಯಾರ್ಥಿನಿಯರು ಹಾಸ್ಟೆಲ್ ತೊರೆಯಲು ಮುಂದಾಗಿದ್ದಾರೆ.