ಲಾಂಗು, ಮಚ್ಚಿನಿಂದ ಕೊಚ್ಚಿ ಕೊಚ್ಚಿ ಯುವಕನ ಬರ್ಬರ ಕೊಲೆ.. ಹಂತಕರ ಸುಳಿವು ಬಿಚ್ಚಿಟ್ಟ ಮೂರನೇ ಕಣ್ಣು!
ಹಾಸನದ ಸಾಲಗಾಮೆ ರಸ್ತೆಯ ಅರಳಿಕಟ್ಟೆ ಸಮೀಪ ನಿನ್ನೆ ರಾತ್ರಿ 8ಗಂಟೆ ಸುಮಾರಿಗೆ ಲಾಂಗು ಮಚ್ಚು ಹಿಡಿದು ಬಂದ ಮೂವರು ಹಂತಕರು ರಘು ಎಂಬ ಯುವಕನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.

ಹಾಸನ: ತಡ ರಾತ್ರಿ ಯುವಕನ ಭೀಕರ ಹತ್ಯೆ ನಡೆದಿದೆ. ಹತ್ಯೆ ಮಾಡಿ ಹಂತಕರು ಎಸ್ಕೇಪ್ ಆಗುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ರಘು(26) ಕೊಲೆಯಾದ ಯುವಕ.
ಹಾಸನದ ಸಾಲಗಾಮೆ ರಸ್ತೆಯ ಅರಳಿಕಟ್ಟೆ ಸಮೀಪ ನಿನ್ನೆ ರಾತ್ರಿ 8ಗಂಟೆ ಸುಮಾರಿಗೆ ಲಾಂಗು ಮಚ್ಚು ಹಿಡಿದು ಬಂದ ಮೂವರು ಹಂತಕರು ರಘು ಮೇಲೆ ಹಲ್ಲೆ ನಡೆಸಿದ್ದಾರೆ. ನಡು ರಸ್ತೆಯಲ್ಲಿ ಲಾಂಗು ಮಚ್ಚಿನಿಂದ ಅಟ್ಯಾಕ್ ಮಾಡಿದ ಪರಿಣಾಮ ರಘು ಮೃತಪಟ್ಟಿದ್ದಾನೆ. ಬಳಿಕ ಬೈಕ್ನಲ್ಲಿ ಬಂದ ಸ್ನೇಹಿತ ಆ ಮೂವರು ಹಂತಕರನ್ನು ಕೂರಿಸಿಕೊಂಡು ಎಸ್ಕೇಪ್ ಆಗಿದ್ದಾನೆ.
ಕೈಯಲ್ಲಿ ಲಾಂಗ್ ಹಿಡಿದೇ ನಾಲ್ವರು ಒಂದೇ ಬೈಕ್ನಲ್ಲಿ ಹೋಗ್ತಿರೋ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಇವರು ಹಾಸನದ ಸಾಲಗಾಮೆ ರಸ್ತೆ ಮೂಲಕ ಎಸ್ಕೇಪ್ ಆಗಿದ್ದಾರೆ. ಮೂವರು ಆರೋಪಿಗಳು ಪರಾರಿಯಾಗಲು ಮತ್ತೊಬ್ಬ ಸಹಾಯ ಮಾಡಿದ್ದಾನೆ ಎಂಬುವುದು ಸಿಸಿ ಟಿವಿಯಿಂದ ಸಾಭೀತಾಗುತ್ತೆ. ಸದ್ಯ ಈಗ ಲಭ್ಯವಿರುವ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳನ್ನು ಸೆರೆ ಹಿಡಿಯಲು ಪೊಲೀಸರು ಬಲೆ ಬೀಸಿದ್ದಾರೆ. ನಗರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.