ಆನ್ಲೈನ್ ಕ್ಲಾಸ್ ಅಂತಾ ಅಪ್ಪನ ಮೊಬೈಲ್ ಪಡೆದ ಮಗಳಿಗೆ ಕಂಡಿದ್ದು ಪಾಠ ಅಲ್ಲ.. ಪಲ್ಲಂಗದ ಆಟ
ಎಂದಿನಂತೆ ಕ್ಲಾಸ್ ಕೇಳ್ತಾ ಇದ್ದ ಮಗಳು ಅಪ್ಪನ ಮೊಬೈಲ್ನ ಜಾಲಾಡಿದ್ದಾಳೆ.. ಹಾಗೇ ಸುಮ್ಮನೆ! ಆ ಸಂದರ್ಭದಲ್ಲಿ ತನ್ನ ಪಿತಾಶ್ರೀಯವರ ರಾಸಲೀಲೆಯ ವೀಡಿಯೋ ಒಂದು ಈಕೆ ಕಣ್ಣಿಗೆ ಬಿದ್ದಿದೆ.

ಮಂಡ್ಯ: ಕೊರೊನಾ ಬಂದ್ಮೇಲೆ ಮಕ್ಕಳಿಗೆ ಮನೆಯೇ ಪಾಠಶಾಲೆಯಾಗಿದ್ದು ಮೊಬೈಲ್ನಲ್ಲೇ ತಮ್ಮ ಟೀಚರ್ನ ನೋಡೋ ಪರಿಸ್ಥಿತಿ. ಮೊಬೈಲ್ ಮುಟ್ಟಿದ್ರೆ ಬೈತಾ ಇದ್ದ ಅಪ್ಪ ಅಮ್ಮಂದಿರು ಈಗ ತಾವೇ ಮಕ್ಕಳಿಗೆ ಮೊಬೈಲ್ ಕೊಟ್ಟು ಕೂರಿಸ್ತಾ ಇದ್ದಾರೆ. ಇದೇ ರೀತಿ, ಇಲ್ಲೊಬ್ಬ ತನ್ನ ಮಗಳ ಆನ್ಲೈನ್ ಕ್ಲಾಸ್ಗಾಗಿ ತನ್ನ ಮೊಬೈಲ್ ಕೊಟ್ಟು ದೊಡ್ಡ ಫಜೀತಿಗೆ ಸಿಲುಕಿದ್ದಾನೆ. ತನ್ನ ಮೊಬೈಲ್ನಲ್ಲಿ ಸೇವ್ ಮಾಡಿದ್ದ ಮಂಚದಾಟ ಇದೀಗ ಬಯಲಾಗಿದ್ದು ತಾನೇ ಕೋಲು ಕೊಟ್ಟು ಪೆಟ್ಟು ತಿಂದಂತೆ ಆಗಿದೆ.
ಜಿಲ್ಲೆಯ ನಾಗಮಂಗಲ ತಾಲೂಕಿನ ಗ್ರಾಮವೊಂದರ ಕುಮಾರ್ ಎಂಬಾತ ಮಗಳ ಆನ್ಲೈನ್ ಕ್ಲಾಸ್ಗಾಗಿ ತನ್ನ ಮೊಬೈಲ್ ಕೊಟ್ಟಿದ್ದ. ಎಂದಿನಂತೆ ಕ್ಲಾಸ್ ಕೇಳ್ತಾ ಇದ್ದ ಮಗಳು ಅಪ್ಪನ ಮೊಬೈಲ್ನ ಜಾಲಾಡಿದ್ದಾಳೆ.. ಹಾಗೇ ಸುಮ್ಮನೆ! ಆ ಸಂದರ್ಭದಲ್ಲಿ ತನ್ನ ಪಿತಾಶ್ರೀಯವರ ರಾಸಲೀಲೆಯ ವೀಡಿಯೋ ಒಂದು ಈಕೆ ಕಣ್ಣಿಗೆ ಬಿದ್ದಿದೆ.
ಪರಸ್ತ್ರೀಯೊಂದಿಗೆ ಪಲ್ಲಂಗವೇರಿದ ಪತಿರಾಯ ವಿಡಿಯೋವನ್ನು ನೋಡಿದ ಮಗಳು ಸೀದಾ ಅಮ್ಮನ ಬಳಿ ಹೋಗಿ ಮೊಬೈಲ್ ತೋರಿಸಿದ್ದಾಳೆ. ಯಾವಾಗ, ಕುಮಾರನ ಹೆಂಡತಿ ಆ ವಿಡಿಯೋವನ್ನು ನೋಡಿದಳೋ ಅಲ್ಲಿಗೆ ಅವನ ಮುಖವಾಡಗಳೆಲ್ಲಾ ಸಂಪೂರ್ಣವಾಗಿ ಕಳಚಿ ಬಿದ್ದಿದೆ. ಪರಸ್ತ್ರೀಯೊಂದಿಗೆ ಪಲ್ಲಂಗ ಏರಿದ್ದ ಕುಮಾರ ಮೊಬೈಲಿನಲ್ಲಿ ತನ್ನ ಕಾಮದಾಟವನ್ನು ರೆಕಾರ್ಡ್ ಮಾಡಿಟ್ಟುಕೊಂಡು ಈಗ ತಾನೇ ಖೆಡ್ಡಾಗೆ ಬಿದ್ದಿದ್ದಾನೆ.
ಸಂಸಾರದಲ್ಲೀಗ ಬಿರುಗಾಳಿ ರಸಿಕ ಕುಮಾರನ ಅವತಾರವನ್ನು ಕಂಡ ಆತನ ಪತ್ನಿ ಸದ್ಯ ನಾಗಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಜೊತೆಗೆ, ಮಹಿಳಾ ಸಾಂತ್ವನ ಕೇಂದ್ರದ ಮೊರೆ ಹೋಗಿದ್ದು ನ್ಯಾಯಕ್ಕಾಗಿ ಮೊರೆ ಇಟ್ಟಿದ್ದಾಳೆ.
ಮಕ್ಕಳಿಗೆ ಮೊಬೈಲ್ ಕೊಡೋ ಮುನ್ನ ಎಚ್ಚರ! ಇತ್ತ, ಮಗಳ ಕೈಯಲ್ಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಕುಮಾರನ ಅವಸ್ಥೆ ಇರಲಾರದೇ ಇರುವೆ ಬಿಟ್ಟುಕೊಂಡವನಂತೆ ಆಗಿದೆ. ಮಾಡಬಾರದ್ದನ್ನು ಮಾಡಿ, ಬೇಡದೇ ಇರೋದ್ದನ್ನೆಲ್ಲಾ ಮೊಬೈಲ್ನಲ್ಲಿ ಸೇವ್ ಮಾಡಿರೋ ಪುಣ್ಯಾತ್ಮರಿಗೆ ಇದೊಂದು ಪಾಠ. ಹಾಗಾಗಿ, ಮಕ್ಕಳಿಗೆ ಮೊಬೈಲ್ ಕೊಡೋ ಮುನ್ನ ಅದರಲ್ಲಿ ಏನಿದೆ ಅನ್ನೋದನ್ನ ಒಮ್ಮೆ ಗಮನಿಸಿ. ಇಲ್ಲವಾದರೇ, ಕಲಿಯುವ ಮಕ್ಕಳ ಎಳೆ ಮನಸ್ಸಿನ ಮೇಲೆ ಇಂಥ ಕಹಿ ನೆನಪುಗಳು ದುಷ್ಪರಿಣಾಮ ಬೀರುವುದಂತೂ ಗ್ಯಾರಂಟಿ!
Online ಮೂಲಕ ಪಾಠ ಅಲ್ಲ Drugs! ಹೈಸ್ಕೂಲ್ ವಿದ್ಯಾರ್ಥಿಗೆ ಕೊರಿಯರ್ ಮೂಲಕ ಡ್ರಗ್ಸ್ ಸಪ್ಲೈ
Published On - 11:37 am, Sun, 6 December 20