ಈ ಹಾಸ್ಟೆಲ್​ನ ನೀರಿನ ಟ್ಯಾಂಕ್​ ನೋಡಿಬಿಟ್ಟರೆ ಬೆಚ್ಚಿ ಬೀಳೋದು ಗ್ಯಾರಂಟಿ: ಇಲ್ಲಿನ ವಿದ್ಯಾರ್ಥಿಗಳಿಗೆ ಆರೋಗ್ಯದ ಚಿಂತೆ

ಸಮಸ್ಯೆ ಇರುವುದು ಇದೊಂದೇ ಹಾಸ್ಟೆಲ್​ನಲ್ಲಿ ಅಲ್ಲ. ಈ ವಿಶ್ವವಿದ್ಯಾಲಯ ವ್ಯಾಪ್ತಿಯ ಇನ್ನೂ ಅನೇಕ ಹಾಸ್ಟೆಲ್ ನಲ್ಲಿ ಇದಕ್ಕಿಂತಲೂ ಘೋರ ಸಮಸ್ಯೆಗಳಿವೆ. ಆದರೆ ವಿದ್ಯಾರ್ಥಿಗಳು ಅವುಗಳನ್ನು ಹೇಳಿಕೊಳ್ಳಲು ಭಯಪಡುತ್ತಾರೆ.

ಈ ಹಾಸ್ಟೆಲ್​ನ ನೀರಿನ ಟ್ಯಾಂಕ್​ ನೋಡಿಬಿಟ್ಟರೆ ಬೆಚ್ಚಿ ಬೀಳೋದು ಗ್ಯಾರಂಟಿ: ಇಲ್ಲಿನ ವಿದ್ಯಾರ್ಥಿಗಳಿಗೆ ಆರೋಗ್ಯದ ಚಿಂತೆ
ಗಲೀಜು ತುಂಬಿರುವ ನೀರಿನ ಟ್ಯಾಂಕ್​
Follow us
Lakshmi Hegde
|

Updated on:Jan 07, 2021 | 7:16 PM

ಧಾರವಾಡ: ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯ ಗೋದಾವರಿ ವಿದ್ಯಾರ್ಥಿಗಳ ವಸತಿ ನಿಲಯ ಪ್ರಾರಂಭವಾಗಿ ಕೆಲವು ತಿಂಗಳುಗಳು ಕಳೆದಿವೆ. ವಿದ್ಯಾರ್ಥಿಗಳೂ ಬಂದು ವಾಸವಾಗಿದ್ದಾರೆ. ಆದರೆ ಇಲ್ಲಿನ ವ್ಯವಸ್ಥೆ ಮಾತ್ರ ಘನಘೋರವಾಗಿದೆ.

ಕೊರೊನಾ ಹಾವಳಿ ಕಡಿಮೆಯಾಗುತ್ತಿರುವ ಬೆನ್ನಲ್ಲೇ ಈಗೀಗ ಶಾಲಾ ಕಾಲೇಜುಗಳು ಓಪನ್ ಆಗುತ್ತಿವೆ. ಕೊವಿಡ್​-19 ನಿಯಂತ್ರಣಾ ನಿಯಮಗಳನ್ನು ರೂಪಿಸಿ ರಾಜ್ಯ ಸರ್ಕಾರ ಶಾಲಾ-ಕಾಲೇಜುಗಳನ್ನು ಆರಂಭ ಮಾಡಿದೆ. ಇದಕ್ಕೂ ಮೊದಲೇ ರಾಜ್ಯದ ವಿಶ್ವವಿದ್ಯಾಲಯಗಳ ವ್ಯಾಪ್ತಿಯ ಕೆಲವು ವಸತಿ ನಿಲಯಗಳು ಪ್ರಾರಂಭವಾಗಿವೆ. ಆದರೆ ಕೊರೊನಾ ಕಾಲದಲ್ಲಿ ಮುಚ್ಚಿದ್ದ ಹಾಸ್ಟೆಲ್​ಗಳನ್ನು ತೆರೆಯುವ ಮೊದಲು, ಅಲ್ಲಿನ ಸ್ವಚ್ಛತೆಗೆ ಆದ್ಯತೆ ನೀಡಿಲ್ಲ. ಅದಕ್ಕೊಂದು ನಿದರ್ಶನವೆಂದರೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯ ಗೋದಾವರಿ ಹಾಸ್ಟೆಲ್​. ಇಲ್ಲಿನ ನೀರಿನ ಟ್ಯಾಂಕ್​ಗಳನ್ನು ನೋಡಿಬಿಟ್ಟರೆ ಭಯವಾಗುವುದು ಗ್ಯಾರಂಟಿ.

ಕೆಟ್ಟ ಗಲೀಜಾಗಿದೆ ಟ್ಯಾಂಕ್​..! ಹಾಸ್ಟೆಲ್​ ಆವರಣದಲ್ಲಿ ಅಳವಡಿಸಲಾಗಿರುವ ಈ ನೀರಿನ ಟ್ಯಾಂಕ್​ನೊಳಗೆ ಒಮ್ಮೆ ಇಣುಕಿಬಿಟ್ಟರೆ ಬೆಚ್ಚಿ ಬೀಳುವಂತಾಗುತ್ತದೆ. ಟ್ಯಾಂಕ್​ನ ತುಂಬೆಲ್ಲ ಗಲೀಜು ತುಂಬಿಕೊಂಡಿದೆ. ಮೊದಲನೇದಾಗಿ ಯಾವ ಟ್ಯಾಂಕ್​ಗಳಿಗೂ ಮುಚ್ಚಳವೇ ಇಲ್ಲ. ಇದರಲ್ಲಿ ಬಿದ್ದ ಎಲೆಗಳು ಕೊಳೆತು ಹೋಗಿವೆ. ಇನ್ನು ಹಲ್ಲಿ, ಓತಿಕ್ಯಾತಗಳೂ ಕಾಣಿಸುತ್ತವೆ. ತಳದಲ್ಲಂತೂ ಮಣ್ಣು, ಕೆಸರಿನ ರಾಶಿಯೇ ತುಂಬಿಕೊಂಡಿದೆ. ಈ ನೀರು ಕುಡಿದ ವಿದ್ಯಾರ್ಥಿಗಳ ಆರೋಗ್ಯ ಕೆಡುವುದು ನಿಶ್ಚಿತ ಎನ್ನುತ್ತಿದ್ದಾರೆ ಸ್ಥಳೀಯರು. ಇನ್ನು ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಬಿ.ಗುಡಸಿ ಬಳಿ ಕೇಳಿದರೆ, ನಾನು ಇಂಥ ಟ್ಯಾಂಕ್​ಗಳನ್ನೆಲ್ಲ ನೋಡುತ್ತ ಕೂರಲು ಆಗತ್ತಾ ಎಂದು ಪ್ರಶ್ನಿಸಿದ್ದಾರೆ. ಇವರು ಅಧಿಕಾರ ಸ್ವೀಕರಿಸಿ ಅರ್ಧವರ್ಷವೇ ಕಳೆಯುತ್ತ ಬಂದರೂ ಇಲ್ಲಿನ ಪರಿಸ್ಥಿತಿಯ ಬಗ್ಗೆ ಅರಿವೇ ಇಲ್ಲದಂತೆ ಇದ್ದದ್ದು ಆಶ್ಚರ್ಯ ಎನ್ನುತ್ತಾರೆ ಶಿಕ್ಷಣ ಪ್ರೇಮಿಗಳು.

ಇದೊಂದೇ ಹಾಸ್ಟೆಲ್ ಅಲ್ಲ  ಇನ್ನು ಇಂಥ ಸಮಸ್ಯೆ ಇರುವುದು ಇದೊಂದೇ ಹಾಸ್ಟೆಲ್​ನಲ್ಲಿ ಅಲ್ಲ. ಈ ವಿಶ್ವವಿದ್ಯಾಲಯ ವ್ಯಾಪ್ತಿಯ ಇನ್ನೂ ಅನೇಕ ಹಾಸ್ಟೆಲ್ ನಲ್ಲಿ ಇದಕ್ಕಿಂತಲೂ ಘೋರ ಸಮಸ್ಯೆಗಳಿವೆ. ಆದರೆ ವಿದ್ಯಾರ್ಥಿಗಳು ಅವುಗಳನ್ನು ಹೇಳಿಕೊಳ್ಳಲು ಭಯಪಡುತ್ತಾರೆ. ಕುಡಿಯುವ ನೀರನ್ನೇ ಸರಿಯಾಗಿ ನೀಡಲು ಸಾಧ್ಯವಾಗದ ಹಾಸ್ಟಲ್​ ಸಿಬ್ಬಂದಿಯಿಂದ ಒಳ್ಳೆಯ ಆಹಾರ ನಿರೀಕ್ಷೆ ಮಾಡಲಾದರೂ ಹೇಗೆ ಸಾಧ್ಯ ಎಂಬುದು ಬಹುತೇಕ ವಿದ್ಯಾರ್ಥಿಗಳ ಪ್ರಶ್ನೆ.

ಹು-ಧಾ ಪಾಲಿಕೆಗೆ ಹರಿದು ಬಂತು ಭರ್ಜರಿ ತೆರಿಗೆ! ಕೊರೊನಾ ಹಾವಳಿಯಿಂದ ತತ್ತರಿಸಿದ್ದರೂ.. ತೆರಿಗೆ ಕಟ್ಟುವಲ್ಲಿ ಜನ ಹಿಂದೆ ಬಿದ್ದಿಲ್ಲ

Published On - 6:20 pm, Thu, 7 January 21

ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ