ಬಿಗ್ ಬಾಸ್ ಮನೆ ಸೇರಿರುವ ಮಂಜು ಪಾವಗಡ ಹಾಗೂ ದಿವ್ಯಾ ಉರುಡಗ ನಡುವೆ ಏನೋ ನಡೆಯುತ್ತಿದೆ ಎನ್ನುವ ಮಾತು ಕೇಳಿ ಬಂದಿತ್ತು. ಇದು ಈಗ ಮಿತಿ ಮೀರಿದೆ. ಕೇವಲ ಮೂರನೇ ದಿನಕ್ಕೆ ಇವರ ಪ್ರೇಮ ಕಥೆ ಬೇರೆ ಬೇರೆ ದಿಕ್ಕನ್ನು ಪಡೆದುಕೊಳ್ಳುತ್ತಿದೆ.
ಮೂರನೇ ದಿನ ಬಿಗ್ ಬಾಸ್ ಮನೆಯಲ್ಲಿ ದಿವ್ಯಾ ಕೂತಿದ್ದರು. ಈ ವೇಳೆ ಮಂಜು ಹತ್ತಿರ ಬಂದಿದ್ದರು. ಆಗ ಕಣ್ಣು ಹೊಡೆದು ದಿವ್ಯಾ ಕರೆದಿದ್ದಾರೆ. ಈ ವೇಳೆ ಪಕ್ಕದಲ್ಲಿ ಹೋಗಿ ಕುಳಿತ ಮಂಜು ಕರಗಿ ನೀರಾಗಿದ್ದಾರೆ. ಸ್ವಲ್ಪ ಹೊತ್ತಿನ ನಂತರ ದಿವ್ಯಾ,ಮಂಜು ಮನೆ ಸದಸ್ಯರ ಜತೆ ಕೂತಿದ್ದರು. ಆಗ ದಿವ್ಯಾರನ್ನೇ ಮಂಜು ನೋಡುತ್ತಾ ದಿಟ್ಟಿಸಿ ಕೂತಿದ್ದಾರೆ. ಇದು ಕೂಡ ಬಿಗ್ ಬಾಸ್ ಮನೆಯ ಮೂರನೇ ದಿನದಲ್ಲಿ ಹೈಲೈಟ್ ಆಗಿ ಕಾಣಿಸಿದೆ.
ಪ್ರತಿ ಮನೆ ಸದಸ್ಯರು ಮತ್ತೋರ್ವ ಸದಸ್ಯರ ಒಳ್ಳೆಯತನ ಬಗ್ಗೆ ಹೇಳಬೇಕಿತ್ತು. ಆಗ ಮಂಜು, ದಿವ್ಯಾ ಬಗ್ಗೆ ಒಂದಷ್ಟು ವಿಚಾರಗಳನ್ನು ಹೇಳಿದ್ದಾರೆ. ದಿವ್ಯಾ ತುಂಬಾನೇ ಒಳ್ಳೆಯವರು. ಅವರನ್ನು ನಾನು ಎಷ್ಟೇ ಇರಿಟೇಷನ್ ಮಾಡಿದರೂ ಬೇಸರ ಮಾಡಿಕೊಳ್ಳುತ್ತಿಲ್ಲ. ಹೊರಗೆ ಜನರು ನನ್ನನ್ನು ನೋಡುತ್ತಿದ್ದಾರೆ ಎನ್ನುವುದು ಗೊತ್ತಿದ್ದೂ, ಮೈ ಮರೆತು ನನ್ನನ್ನು ಪ್ರೀತಿ ಮಾಡುತ್ತಿದ್ದಾರೆ ಎಂದು ಖುಷಿ ವ್ಯಕ್ತಪಡಿಸಿದರು.
ಇದನ್ನೂ ಓದಿ: Bigg Boss Kannada Day 3: ಧನುಶ್ರೀ ಮೇಕಪ್ ತೆಗೆಯೋಕೆ ಒಂದು ವರ್ಷ ಸ್ನಾನ ಮಾಡಬೇಕು ಎಂದ ಪ್ರಶಾಂತ್ ಸಂಬರಗಿ