AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಎಂ ಯಡಿಯೂರಪ್ಪ ನಿವಾಸಕ್ಕೆ ತೆರಳಿದ ಕಿಚ್ಚ ಸುದೀಪ್​! ದಿಢೀರ್ ಭೇಟಿಗೆ ಕಾರಣ ಏನು?

ಕಿಚ್ಚ ಸುದೀಪ್​ ರಾಜಕೀಯದಿಂದ ಆದಷ್ಟು ದೂರು ಉಳಿದುಕೊಂಡಿದ್ದಾರೆ. ಆದರೆ ಈಗ ಅವರು ದಿಢೀರ್​ ಅಂತ ಸಿಎಂ ಮನೆಗೆ ಭೇಟಿ ನೀಡಿರುವುದು ಅಚ್ಚರಿ ಮೂಡಿಸಿದೆ.

ಸಿಎಂ ಯಡಿಯೂರಪ್ಪ ನಿವಾಸಕ್ಕೆ ತೆರಳಿದ ಕಿಚ್ಚ ಸುದೀಪ್​! ದಿಢೀರ್ ಭೇಟಿಗೆ ಕಾರಣ ಏನು?
ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಸುದೀಪ್​
ಮದನ್​ ಕುಮಾರ್​
| Edited By: |

Updated on:Mar 18, 2021 | 3:31 PM

Share

ಚಿತ್ರರಂಗದಲ್ಲಿ ನಟ ಕಿಚ್ಚ ಸುದೀಪ್​ ಸಖತ್​ ಬ್ಯುಸಿ ಆಗಿದ್ದಾರೆ. ಅವರು ಇತ್ತೀಚೆಗಷ್ಟೇ ಬಣ್ಣದ ಲೋಕದಲ್ಲಿ 25 ವರ್ಷಗಳನ್ನು ಪೂರೈಸಿದ್ದಾರೆ. ಈ ನಡುವೆ ರಾಜಕೀಯದ ಬಗ್ಗೆ ಅವರು ಗಮನ ಹರಿಸುತ್ತಿದ್ದಾರಾ? ಹಾಗೇನೂ ಇಲ್ಲ. ಆದರೂ ಕೂಡ ಅವರು ಸಿಎಂ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿರುವ ವಿಚಾರ ಹೆಚ್ಚು ಚರ್ಚೆ ಆಗುತ್ತಿದೆ. ಫೋಟೋಗಳು ವೈರಲ್​ ಆಗಿವೆ.

ಗುರುವಾರ (ಮಾ.18) ಸಿಎಂ ಕಾವೇರಿ ನಿವಾಸಕ್ಕೆ ತೆರಳಿದ ಸುದೀಪ್​ ಅವರು ಯಡಿಯೂರಪ್ಪ ಅವರನ್ನು ಭೇಟಿ ಆಗಿದ್ದಾರೆ. ಕೆಲ ಕಾಲ ಮಾತುಕತೆ ನಡೆಸಿದ್ದಾರೆ. ಅಷ್ಟೇ ಅಲ್ಲ, ಮುಖ್ಯಮಂತ್ರಿಗಳನ್ನು ಕಿಚ್ಚ ಸನ್ಮಾನಿಸಿದ್ದಾರೆ. ಈ ಫೋಟೋಗಳು ಸುದೀಪ್​ ಅಭಿಮಾನಿಗಳ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಹರಿದಾಡುತ್ತಿವೆ. ಅಷ್ಟಕ್ಕೂ ಸುದೀಪ್​ ಹೀಗೆ ದಿಢೀರ್​ ಎಂದು ಸಿಎಂ ಭೇಟಿ ಮಾಡಿದ್ದೇಕೆ ಎಂಬ ಪ್ರಶ್ನೆ ಅನೇಕರಿಗೆ ಮೂಡಿದೆ.

ಕಾರಣ ಇಷ್ಟೇ, ಇತ್ತೀಚೆಗಷ್ಟೇ ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ‘ಕೋಟಿಗೊಬ್ಬ 3’ ಸಿನಿಮಾ ತಂಡದಿಂದ ದೊಡ್ಡ ಸಮಾರಂಭ ಮಾಡಲಾಗಿತ್ತು. ಚಿತ್ರರಂಗದಲ್ಲಿ ಸುದೀಪ್​ 25 ವರ್ಷಗಳನ್ನು ಪೂರೈಸಿದ್ದಕ್ಕಾಗಿ ಮುಖ್ಯಮಂತ್ರಿಗಳಿಂದ ಸನ್ಮಾನ ಮಾಡಿಸಲಾಯಿತು. ಆ ವೇಳೆ ತಮ್ಮ ನಿವಾಸಕ್ಕೆ ಬರುವಂತೆ ಸುದೀಪ್​ಗೆ ಸಿಎಂ ಆಹ್ವಾನ ನೀಡಿದ್ದರು ಎನ್ನಲಾಗಿದೆ. ಹಾಗಾಗಿ ಸುದೀಪ್​ ಗುರುವಾರ ಬೆಳಗ್ಗೆ ಸಿಎಂ ಕಾವೇರಿ ನಿವಾಸಕ್ಕೆ ತೆರಳಿ ಭೇಟಿ ಮಾಡಿದ್ದಾರೆ.

ಸುದೀಪ್​ ನಟನೆಯ ‘ಕೋಟಿಗೊಬ್ಬ 3’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಏ.29ರಂದು ಅದ್ದೂರಿಯಾಗಿ ರಿಲೀಸ್​ ಆಗಲಿದೆ. ಅದರ ಜೊತೆಗೆ ‘ವಿಕ್ರಾಂತ್​ ರೋಣ’ ಸಿನಿಮಾದ ಕೆಲಸಗಳಲ್ಲೂ ಸುದೀಪ್​ ಬ್ಯುಸಿ ಆಗಿದ್ದಾರೆ. ಅನೂಪ್​ ಭಂಡಾರಿ ನಿರ್ದೇಶನ ಮಾಡುತ್ತಿರುವ ಆ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆ ಇದೆ. ಸಿನಿಮಾ ಮಾತ್ರವಲ್ಲದೆ, ಬಿಗ್​ ಬಾಸ್​ ಕನ್ನಡ ಸೀಸನ್​ 8 ನಿರೂಪಣೆಯ ಜವಾಬ್ದಾರಿಯನ್ನೂ ಸುದೀಪ್​ ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ.

Kichcha Sudeeep meets CM BS Yediyurappa

ಯಡಿಯೂರಪ್ಪ ಅವರನ್ನು ಸನ್ಮಾನಿಸಿದ ಸುದೀಪ್​

ಇದನ್ನೂ ಓದಿ: ರವಿಚಂದ್ರನ್​ ಸದಾ ಕಪ್ಪು ಬಟ್ಟೆ ಹಾಕೋದು ಯಾಕೆ? ಎಲ್ಲರ ಎದುರು ಗುಟ್ಟು ರಟ್ಟು ಮಾಡಿದ ಸುದೀಪ್​!

ಮುಖ್ಯಮಂತ್ರಿ ಯಡಿಯೂರಪ್ಪ ಬಳಿ ಕನ್ನಡ ಚಿತ್ರರಂಗದ ಪರವಾಗಿ ವಿಶೇಷ ಬೇಡಿಕೆ ಇಟ್ಟ ಕಿಚ್ಚ ಸುದೀಪ್​

Published On - 3:23 pm, Thu, 18 March 21

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More