ಚಿಕ್ಕಮಗಳೂರಿನಲ್ಲಿ ಪುನೀತ್​ ಸಿಂಪಲ್ ಬರ್ತ್​​ಡೇ; ಫೋಟೋ ಕೇಳಿದ ಅಭಿಮಾನಿಗಳಿಗೆ ಅಪ್ಪು ಕಂಡೀಷನ್

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ನಿಡುವಾಳೆಗೆ ಮಾರ್ಚ್ 16ರ ಸಂಜೆಯೇ ಕುಟುಂಬ ಸಮೇತ ಆಗಮಿಸಿದ್ದ ಪುನೀತ್, ನಿಡುವಾಳೆಯ ಉರ್ವಿಖಾನ್ ಎಸ್ಟೇಟ್​​ನ ಹೋಂ ಸ್ಟೇವೊಂದರಲ್ಲಿ ಉಳಿದುಕೊಂಡಿದ್ದರು.

ಚಿಕ್ಕಮಗಳೂರಿನಲ್ಲಿ ಪುನೀತ್​ ಸಿಂಪಲ್ ಬರ್ತ್​​ಡೇ; ಫೋಟೋ ಕೇಳಿದ ಅಭಿಮಾನಿಗಳಿಗೆ ಅಪ್ಪು ಕಂಡೀಷನ್
ಚಿಕ್ಕಮಗಳೂರಲ್ಲಿ ಪುನೀತ್​ ರಾಜ್​ಕುಮಾರ್
Follow us
ರಾಜೇಶ್ ದುಗ್ಗುಮನೆ
| Updated By: sandhya thejappa

Updated on:Mar 18, 2021 | 6:12 PM

ಚಿಕ್ಕಮಗಳೂರು: ಮಾರ್ಚ್ 17 ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟಿದ ದಿನ. ಅವರಿ ಅದ್ದೂರಿಯಾಗಿ ಹುಟ್ಟಿದ ಹಬ್ಬ ಆಚರಿಸಿಕೊಳ್ತಾರೆ ಅಂದುಕೊಂಡಿದ್ದ ಅಭಿಮಾನಿಗಳಿಗೆ, ಹಿತೈಷಿಗಳಿಗೆ ಪುನೀತ್ ಕೈಗೆ ಸಿಕ್ಕಿರಲಿಲ್ಲ. ಗ್ರ್ಯಾಂಡಾಗಿ ಬರ್ತ್​​ಡೇ ಸೆಲಬ್ರೆಷನ್ ಮಾಡಿಕೊಳ್ಳಲು ಫಾರಿನ್​​ಗೆ ಹಾರಿದ್ರಾ ಎಂದೂ ಕೆಲವರು ಭಾವಿಸಿದ್ದರು. ಆದರೆ, ಎಲ್ಲರ ಊಹಾಪೋಹವನ್ನೂ ಉಲ್ಟಾ ಮಾಡಿರೋ ಯುವರತ್ನ ಸದ್ದಿಲ್ಲದೇ ಕಾಫಿನಾಡಿನಲ್ಲಿ ಸರಳವಾಗಿ ತಮ್ಮ ಬರ್ತ್​​ಡೇ ಆಚರಿಸಿಕೊಂಡಿದ್ದಾರೆ. ದೇವಸ್ಥಾನದಲ್ಲಿ ಪೂಜೆ ಮಾಡಿಸೋ ಮೂಲಕ ಹುಟ್ಟುಹಬ್ಬದ ದಿನವನ್ನ ಸಾರ್ಥಕವಾಗಿಸಿಕೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ನಿಡುವಾಳೆಗೆ ಮಾರ್ಚ್ 16ರ ಸಂಜೆಯೇ ಕುಟುಂಬ ಸಮೇತ ಆಗಮಿಸಿದ್ದ ಪುನೀತ್, ನಿಡುವಾಳೆಯ ಉರ್ವಿಖಾನ್ ಎಸ್ಟೇಟ್​​ನ ಹೋಂ ಸ್ಟೇವೊಂದರಲ್ಲಿ ಉಳಿದುಕೊಂಡಿದ್ದರು. ಬುಧವಾರ ಅದೇ ಗ್ರಾಮದ ರಾಮೇಶ್ವರ ದೇವಾಲಯಕ್ಕೆ ಪತ್ನಿ ಜೊತೆ ತೆರಳಿ ಪೂಜೆ ಮಾಡಿಸಿದ್ದಾರೆ.

ಪೋಟೋ ಓಕೆ.. ಆದ್ರೆ ಒಂದು ಕಂಡೀಷನ್..! ಯಾವಾಗ ಪುನೀತ್ ರಾಜಕುಮಾರ್ ದೇವಾಲಯದಲ್ಲಿ ಪೂಜೆ ಮಾಡಿಸಲು ಬಂದ್ರೋ, ಆಗ ಅಲ್ಲಿನ ಸ್ಥಳೀಯರು, ಅಭಿಮಾನಿಗಳು ಪುನೀತ್ ರಾಜ್ ಕುಮಾರ್ ಕಂಡು ಅಚ್ಚರಿಗೊಂಡಿದ್ದಾರೆ. ದೇವಸ್ಥಾನದಲ್ಲಿ ಪುನೀತ್ ಪೂಜೆ ಮಾಡಿಸಿದ ಬಳಿಕ ತಮ್ಮ ನೆಚ್ಚಿನ ಹೀರೋ ಜೊತೆಗೆ ಪೋಟೋ ತೆಗೆಸಿಕೊಳ್ಳೊದಕ್ಕೆ ಅಭಿಮಾನಿಗಳು ಮುಂದಾಗಿದ್ದಾರೆ. ಆ ವೇಳೆ ತನ್ನ ಜೊತೆ ಪೋಟೋ ತೆಗೆಸಿಕೊಳ್ಳಲು ಸಮ್ಮತಿ ಸೂಚಿಸಿದ ಪವರ್ ಸ್ಟಾರ್, ಫ್ಯಾನ್ಸ್​ಗೆ ಕಂಡೀಷನ್ ಹಾಕಿದ್ದಾರೆ. ಅಷ್ಟಕ್ಕೂ ಆ ಷರತ್ತು ಏನೆಂದರೆ, ಯಾರೂ ಕೂಡ ನಾಳೆ (ಮಾರ್ಚ್ 18) ತನಕ ಫೋಟೋವನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಾಕುವಂತಿಲ್ಲ. ಅಲ್ಲದೇ ತಾವು ಇಲ್ಲಿಗೆ ಬಂದಿರೋ ವಿಚಾರವನ್ನು ಯಾರಿಗೂ ಹೇಳಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.

ನನಗೆ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಇಷ್ಟವಿಲ್ಲ. ಅಭಿಮಾನಿಗಳು ಕೇಕ್ ತರೋದು, ಜೈಕಾರ ಕೂಗೋದು ಯಾವುದು ಇಷ್ಟವಿಲ್ಲ ಅಂತಾ ತಿಳಿಸಿದ್ದಾರೆ. ಪವರ್ ಸ್ಟಾರ್ ಮಾತಿಗೆ ಓಕೆ ಅಂದ ಅಭಿಮಾನಿಗಳು ಅಪ್ಪು ಜೊತೆ ಪೋಟೋ ಕ್ಲಿಕ್ಕಿಸಿಕೊಂಡು, ಸೆಲ್ಫಿ ತೆಗೆದುಕೊಂಡು ಸಂತಸಪಟ್ಟಿದ್ದಾರೆ. ಇಂದು ಬೆಳಗ್ಗೆ ಕಾಫಿನಾಡಿನಿಂದ ಪವರ್ ಸ್ಟಾರ್, ಕುಟುಂಬ ಸಮೇತ ಬೆಂಗಳೂರು ಕಡೆಗೆ ತೆರಳಿದ ಮೇಲೆ ಫೋಟೋಗಳನ್ನ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಖುಷಿಪಟ್ಟಿದ್ದಾರೆ.

ವರ್ಷಕ್ಕೊಮ್ಮೆ ಉರ್ವಿನ್ ಖಾನ್ ಎಸ್ಟೇಟ್​​ಗೆ ಪುನೀತ್..!

ಪುನೀತ್ ರಾಜ್ ಕುಮಾರ್ ಕಳೆದ ಕೆಲ ವರ್ಷಗಳಿಂದ ಉರ್ವಿನ್ ಖಾನ್ ಎಸ್ಟೇಟ್​ನಲ್ಲಿರೋ ಈ ಸುಂದರ ರೆಸಾರ್ಟ್​ಗೆ ಬರೋದನ್ನು ಮಿಸ್ ಮಾಡೋದೇ ಇಲ್ಲ. ಸಿನಿಮಾ ಶೂಟಿಂಗ್, ಬೇರೆ ಬೇರೆ ಕಾರ್ಯಕ್ರಮಗಳ ಒತ್ತಡದ ಜೀವನದ ನಡುವೆಯೂ ವರ್ಷಕೊಮ್ಮೆ ಉರ್ವಿನ್ ಖಾನ್ ಎಸ್ಟೇಟ್​​ಗೆ ಬಂದು ರಿಲ್ಯಾಕ್ಸ್ ಆಗಿ ನೆಮ್ಮದಿಯ ಕ್ಷಣಗಳನ್ನ ಕಳೆದು ರಿಫ್ರೆಶ್ ಆಗಿ ಪುನೀತ್ ಬೆಂಗಳೂರಿಗೆ ಹಿಂದಿರುಗುತ್ತಾರೆ. ಅದರಲ್ಲೂ ಈ ಬಾರಿಯಂತೂ ಹುಟ್ಟಿದ ದಿನವನ್ನ ಇಲ್ಲೇ ಕಳೆದು ಸ್ಮರಣೀಯವಾಗಿಸಿಕೊಂಡಿದ್ದಾರೆ.

ಎರಡು ದಿನಗಳಿಂದ ಸ್ಥಳೀಯರು, ಅಭಿಮಾನಿಗಳ ಜೊತೆ ಇದ್ದಾಗ ಅಪ್ಪು ತುಂಬಾ ಸಿಂಪಲ್ಲಾಗಿ ಇದ್ದದ್ದುನ್ನು ಕಂಡು ಖುಷಿಯಾಯಿತು ಅಂತಾ ಸ್ಥಳೀಯರು ರಿಯಲ್ ಹೀರೋ ಬಗ್ಗೆ ಅಭಿಮಾನದ ಮಾತನಾಡಿದ್ದಾರೆ. ಒಟ್ಟಿನಲ್ಲಿ ಕರುನಾಡ ರಾಜಕುಮಾರನ ಸರಳ ನಡತೆ, ಸಿಂಪಲ್ ಮಾತುಕತೆ, ಮಂದಸ್ಮಿತ ನಗು ಕಾಫಿನಾಡ ಜನರ ಹೃದಯವನ್ನ ಗೆದ್ದಿದೆ. ಅಲ್ಲದೇ ಅದ್ದೂರಿ ಬರ್ತ್​​ಡೇ ಸೆಲೆಬ್ರೆಷನ್ ಗೆ ಬೈ ಬೈ ಹೇಳಿ, ಜನಜಂಗುಳಿಯಿಂದಲೂ ದೂರ ಉಳಿದು ಸರಳವಾಗಿ ದೇವಸ್ಥಾನವೊಂದರಲ್ಲಿ ಪೂಜೆ ಮಾಡಿಸಿದ್ದಾರೆ. ದೊಡ್ಡ ಅಭಿಮಾನ ಬಳಗವನ್ನ ಹೊಂದಿದ್ರೂ ಅದ್ಯಾವ್ದೇ ಗರ್ವವನ್ನ ತೋರದೇ ತಾನು ಕೂಡ ನಿಮ್ಮಲ್ಲಿ ಒಬ್ಬನು ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ.

ನಿನ್ನೆಯೇ ಪೋಟೋವನ್ನ ಸೋಶಿಯಲ್ ಮೀಡಿಯಾದಲ್ಲಿ ಹಾಕೋಣ ಅಂತಿದ್ದೆ. ಆದ್ರೆ ಅಪ್ಪು ಸರ್, ನಾನು ಹೋದ ಮೇಲೆ ಪೋಟೋ ಹಾಕಿ, ನಾನಿರುವುದು ಗೊತ್ತಾದ್ರೆ ತುಂಬಾ ಜನರು ಬರಬಹುದು. ಅದ್ದೂರಿ ಬರ್ತ್​​ಡೇ ತನಗೆ ಇಷ್ಟವಿಲ್ಲ ಅಂತಾ ತಿಳಿಸಿದ್ರು. ಹಾಗಾಗೀ ಇಂದು ಪೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದೇನೆ ಎಂದು ಪುನೀತ್ ಅಭಿಮಾನಿ ಪರೀಕ್ಷಿತ್ ಹೇಳಿಕೊಂಡಿದ್ದಾರೆ.

ಉರ್ವಿನ್ ಖಾನ್ ಎಸ್ಟೇಟ್​ನ ಸಂತೋಷ್ ಮಾತನಾಡಿ, ಅಪ್ಪು ಸರ್ ನಮ್ಮ ಮಾಲೀಕರ ಕಾಫಿತೊಟಕ್ಕೆ ಬಂದಿದ್ದು ತುಂಬಾ ಖುಷಿಯಾಯ್ತು. ನನ್ನ ಮಗನನ್ನ ಕರೆದುಕೊಂಡು ಅವರನ್ನ ನೋಡಲು ಹೋಗಿದ್ದೆ. ನನ್ನ ಮಗನನ್ನ ಅವರೇ ಕರೆದುಕೊಂಡು ಪೋಟೋ ತೆಗೆಯಿಸಿಕೊಂಡ್ರು. ಅವರ ಸರಳ ವ್ಯಕ್ತಿತ್ವ, ಜನಸಾಮಾನ್ಯರೊಂದಿಗೆ ಬೆರೆಯುವ ರೀತಿ ತುಂಬಾ ಖುಷಿಯಾಯ್ತು ಎಂದಿದ್ದಾರೆ.

ಇದನ್ನೂ ಓದಿ: Feel the Power Promo: ಡ್ಯಾನ್ಸ್​ನಲ್ಲಿ ಪುನೀತ್​ಗೆ ಯಾರು ಸಾಟಿ? ಪ್ರೋಮೋ ಹಾಡಿನಲ್ಲೇ ಪವರ್​ ತೋರಿಸಿದ ಪವರ್​ ಸ್ಟಾರ್​!

Published On - 4:58 pm, Thu, 18 March 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್