ಥಿಯೇಟರ್ ಗಾಜು ಒಡೆದು ಹಾಕಿದ ಪವನ್ ಕಲ್ಯಾಣ್ ಫ್ಯಾನ್ಸ್! ಕಾರಣ ಚಿಕ್ಕದೊಂದು ಟ್ರೇಲರ್

Pawan Kalyan: ಟಾಲಿವುಡ್ ಸಿನಿಪ್ರಿಯರು ಸ್ಟಾರ್ ನಟರನ್ನು ಆರಾಧಿಸುತ್ತಾರೆ. ಕೆಲವೊಮ್ಮೆ ಅದು ಅತಿರೇಕ ಆಗುವುದೂ ಉಂಟು! ಅದಕ್ಕೆ ಈಗೊಂದು ಲೇಟೆಸ್ಟ್ ಉದಾಹರಣೆ ಸಿಕ್ಕಿದೆ.

ಥಿಯೇಟರ್ ಗಾಜು ಒಡೆದು ಹಾಕಿದ ಪವನ್ ಕಲ್ಯಾಣ್ ಫ್ಯಾನ್ಸ್! ಕಾರಣ ಚಿಕ್ಕದೊಂದು ಟ್ರೇಲರ್
ಪವರ್ ಸ್ಟಾರ್ ಪವನ್ ಕಲ್ಯಾಣ್
Follow us
ಮದನ್​ ಕುಮಾರ್​
| Updated By: ರಾಜೇಶ್ ದುಗ್ಗುಮನೆ

Updated on: Mar 30, 2021 | 4:08 PM

ನಟ ಪವನ್ ಕಲ್ಯಾಣ್ ಅವರು ಆಂಧ್ರ ಮತ್ತು ತೆಲಂಗಾಣ ಮಾತ್ರವಲ್ಲದೆ, ದೇಶಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ರಾಜಕೀಯ ಮತ್ತು ಸಿನಿಮಾದಲ್ಲಿ ತೊಡಗಿಕೊಂಡಿರುವ ಪವನ್ ಕಲ್ಯಾಣ್ ಈ ಎರಡೂ ಕ್ಷೇತ್ರದಲ್ಲೂ ಅಪಾರ ಬೆಂಬಲಿಗರನ್ನು ಹೊಂದಿದ್ದಾರೆ. ಇತ್ತೀಚೆಗೆ ಅವರ ಅಭಿಮಾನಿಗಳು ಚಿತ್ರಮಂದಿರದ ಗಾಜುಗಳನ್ನು ಪುಡಿ ಮಾಡಿದ್ದಾರೆ. ಅದಕ್ಕೆ ಕಾರಣ ಆಗಿರುವುದು ‘ವಕೀಲ್ ಸಾಬ್’ ಸಿನಿಮಾದ ಟ್ರೇಲರ್!

ಪವನ್ ಕಲ್ಯಾಣ್ ಅಭಿನಯದ ಯಾವುದೇ ಸಿನಿಮಾ ಬಿಡುಗಡೆಯಾದರೂ ಮೊದಲ ದಿನ ಚಿತ್ರಮಂದಿರಲ್ಲಿ ಸಿಕ್ಕಾಪಟ್ಟೆ ನೂಕುನುಗ್ಗಲು ಆಗುವುದು ಸಹಜ. ಆದರೆ ಈಗ ಕೇವಲ ಒಂದು ಟ್ರೇಲರ್ ನೋಡಲು ಕೂಡ ಅವರ ಅಭಿಮಾನಿಗಳು ಥಿಯೇಟರ್ಗೆ ಮುಗಿಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಚಿತ್ರಮಂದಿರಕ್ಕೆ ಹಾನಿ ಮಾಡಲಾಗಿದೆ. ಅದರ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಪವನ್ ಕಲ್ಯಾಣ್ ನಟನೆಯ ಬಹುನಿರೀಕ್ಷಿತ ವಕೀಲ್ ಸಾಬ್ಸಿನಿಮಾದ ಟ್ರೇಲರ್ ಸೋಮವಾರ (ಮಾ.29) ಬಿಡುಗಡೆ ಆಗಿದೆ. ಆಂಧ್ರ ಮತ್ತು ತೆಲಂಗಾಣದ ಕೆಲವು ಚಿತ್ರಮಂದಿರಗಳಲ್ಲಿ ಈ ಟ್ರೇಲರ್ ಅನ್ನು ಬಿತ್ತರಿಸಲಾಯಿತು. ಆ ವೇಳೆ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಎಷ್ಟರಮಟ್ಟಿಗೆಂದರೆ, ಥಿಯೇಟರ್​​ನ ಗಾಜಿನ ಬಾಗಿಲುಗಳನ್ನು ಒಡೆದ ಹಾಕಿ ನುಗ್ಗಿದ್ದಾರೆ. ಚಿಕ್ಕದೊಂದು ಟ್ರೇಲರ್ ನೋಡಲು ಅಭಿಮಾನಿಗಳು ಈ ಪರಿ ಮುಗಿಬಿದ್ದಿರುವುದು ಅಚ್ಚರಿ. ಇನ್ನು ಸಿನಿಮಾ ರಿಲೀಸ್ ಆದರೆ ಏನ್ ಕಥೆ?

ವಕೀಲ್ ಸಾಬ್ ಸಿನಿಮಾದಲ್ಲಿ ಪವನ್ ಕಲ್ಯಾಣ್ ಅವರು ಲಾಯರ್ ಪಾತ್ರ ಮಾಡಿದ್ದಾರೆ. ಅಂದಹಾಗೆ, ಇದು ಹಿಂದಿಯ ‘ಪಿಂಕ್’ ಸಿನಿಮಾದ ರಿಮೇಕ್. ಮೂಲ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಮಾಡಿದ ಪಾತ್ರವನ್ನು ಈಗ ಪವನ್ ಕಲ್ಯಾಣ್ ನಿಭಾಯಿಸಿದ್ದಾರೆ. ಅನ್ಯಾಯಕ್ಕೆ ಒಳಗಾದ ಮೂವರು ಯುವತಿಯರಿಗೆ ಕಥಾನಾಯಕ ನ್ಯಾಯ ಕೊಡಿಸುವ ಕೋರ್ಟ್ ರೂಮ್ ಡ್ರಾಮಾವನ್ನು ಈ ಸಿನಿಮಾ ಒಳಗೊಂಡಿದೆ. ಏ.9ರಂದು ‘ವಕೀಲ್ ಸಾಬ್’ ಬಿಡುಗಡೆ ಆಗಲಿದೆ. ನಿವೇತಾ ಥಾಮಸ್, ಅಂಜಲಿ, ಅನನ್ಯಾ, ಪ್ರಕಾಶ್ ರೈ ಮುಂತಾದವರು ಮುಖ್ಯಪಾತ್ರಗಳನ್ನು ನಿಭಾಯಿಸಿದ್ದಾರೆ.

ಇದನ್ನೂ ಓದಿ: ನೆಚ್ಚಿನ ನಟ ಪವನ್ ಕಲ್ಯಾಣ್‌ ಹುಟ್ಟುಹಬ್ಬಕ್ಕೆ ಪೋಸ್ಟರ್ ಹಾಕಲು ಹೋಗಿ ಮೂವರ ಸಾವು

ನೆಚ್ಚಿನ ನಟ ಪವನ್ ಕಲ್ಯಾಣ್‌ ಹುಟ್ಟುಹಬ್ಬಕ್ಕೆ ಪೋಸ್ಟರ್ ಹಾಕಲು ಹೋಗಿ ಮೂವರ ಸಾವು

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ