Are You A Virgin ಎಂದು ಕೇಳಿದ್ರು ನಟ ಪವನ್​ ಕಲ್ಯಾಣ್​!

ಇಂದು ಸಂಜೆ ಚಿತ್ರದ ವಕೀಲ್​ ಸಾಬ್​ ಚಿತ್ರದ ಟ್ರೇಲರ್​ ರಿಲೀಸ್​ ಆಗಿದೆ. ಮಹಿಳೆಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ದಬ್ಬಾಳಿಕೆ, ಅತ್ಯಾಚಾರ, ಕಿರುಕುಳದ ಬಗ್ಗೆ ಹೇಗೆ ಧ್ವನಿ ಎತ್ತ ಬೇಕು ಎನ್ನುವ ಬಗ್ಗೆ ಹೇಳಲಾಗುತ್ತಿದೆ.

Are You A Virgin ಎಂದು ಕೇಳಿದ್ರು ನಟ ಪವನ್​ ಕಲ್ಯಾಣ್​!
ನಟ ಪವನ್ ಕಲ್ಯಾಣ್
Follow us
ರಾಜೇಶ್ ದುಗ್ಗುಮನೆ
| Updated By: ganapathi bhat

Updated on: Mar 29, 2021 | 9:13 PM

2018ರಲ್ಲಿ ತೆರೆಕಂಡ ‘ಅಜ್ಞಾತವಾಸಿ’ ಸಿನಿಮಾ ನಂತರ ಪವನ್​ ಕಲ್ಯಾಣ್​ ಚಿತ್ರರಂಗದಿಂದ ದೂರವೇ ಉಳಿದುಕೊಂಡಿದ್ದರು. ಈಗ ಅವರು ಚಿತ್ರರಂಗಕ್ಕೆ ಮತ್ತೆ ಕಂಬ್ಯಾಕ್​ ಮಾಡುತ್ತಿದ್ದಾರೆ. ಅವರ ನಟನೆಯ ‘ವಕೀಲ್​ ಸಾಬ್​’ ಸಿನಿಮಾದ ಟ್ರೇಲರ್​ ಕೂಡ ರಿಲೀಸ್​ ಆಗಿದ್ದು, ಪವನ್​ ಕಲ್ಯಾಣ್​ ವಕೀಲರಾಗಿ ಕಾಣಿಸಿಕೊಂಡಿದ್ದಾರೆ. ಇಂದು ಸಂಜೆ ವಕೀಲ್​ ಸಾಬ್​ ಚಿತ್ರದ ಟ್ರೇಲರ್​ ರಿಲೀಸ್​ ಆಗಿದೆ. ಮಹಿಳೆಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ದಬ್ಬಾಳಿಕೆ, ಅತ್ಯಾಚಾರ, ಕಿರುಕುಳದ ಬಗ್ಗೆ ಹೇಗೆ ಧ್ವನಿ ಎತ್ತಬೇಕು ಎನ್ನುವ ಬಗ್ಗೆ ಈ ಸಿನಿಮಾದಲ್ಲಿ ಹೇಳಲಾಗುತ್ತಿದೆ ಎಂಬುದನ್ನು ಟ್ರೇಲರ್​ನಲ್ಲಿ ಸೂಕ್ಷ್ಮವಾಗಿ ಹೇಳಲಾಗಿದೆ.

ಮೂರು ಯುವತಿಯರು ಯುವಕರ ಜತೆ ಪಾರ್ಟಿಗೆ ತೆರಳುತ್ತಾರೆ. ಅಲ್ಲಿ ಅವರು ಲೈಂಗಿಕ ಕಿರುಕುಳ ಎದುರಿಸುತ್ತಾರೆ. ಈ ಪ್ರಕರಣ ಕೋರ್ಟ್​ ಮೆಟ್ಟಿಲೇರುತ್ತದೆ. ಸಂತ್ರಸ್ತೆಯರ ಪರವಾಗಿ ಪವನಲ್​ ಕಲ್ಯಾಣ್​ ವಾದ ಮಂಡಿಸುತ್ತಾರೆ. ಇದಿಷ್ಟು ವಿಚಾರಗಳನ್ನು ಟ್ರೇಲರ್​ ಕಟ್ಟಿಕೊಡುತ್ತಿದೆ.

ಪವನ್​ ಕಲ್ಯಾಣ್​ ಖಡಕ್​ ವಕೀಲರಾಗಿ ಕಾಣಿಸಿಕೊಂಡಿದ್ದಾರೆ. ಅವರ ಚಿತ್ರ ಎಂದರೆ ಆ್ಯಕ್ಷನ್​ಗಳಿಗೆ ಬರ ಇರುವುದಿಲ್ಲ. ಈ ಸಿನಿಮಾದಲ್ಲೂ ಸಾಕಷ್ಟು ಆ್ಯಕ್ಷನ್​ಗಳು ಇರಲಿವೆ ಎನ್ನಲಾಗಿತ್ತು. ಟ್ರೇಲರ್​ನಲ್ಲಿ ಈ ಬಗ್ಗೆ ಮಾಹಿತಿ ಸಿಕ್ಕಿದೆ. ಸಂತ್ರಸ್ತೆಗೆ ಪ್ರತಿವಾದಿ ವಕೀಲರು Are You A Virgin ಎಂದು ಕೇಳಿರುತ್ತಾರೆ. ಅದೇ ರೀತಿ, ಕಿರುಕುಳ ನೀಡಿದ ಆರೋಪಿಗೆ ಇದೇ ಪ್ರಶ್ನೆ ಕೇಳಿದ್ದಾರೆ ಪವನ್​ ಕಲ್ಯಾಣ್​. ಟ್ರೇಲರ್ ರಿಲೀಸ್​ ಆದ ಎರಡೇ ಗಂಟೆಗೆ  ಸುಮಾರು 15 ಲಕ್ಷ ವೀಕ್ಷಣೆ ಕಂಡಿರುವುದು ವಿಶೇಷ.

ಹಿಂದಿಯಲ್ಲಿ ತೆರೆಕಂಡಿದ್ದ ಪಿಂಕ್​ ಸಿನಿಮಾದ ರಿಮೇಕ್​ ವಕೀಲ್​ ಸಾಬ್​ ಚಿತ್ರ. ಅಮಿತಾಭ್​ ಮುಖ್ಯಭೂಮಿಕೆ ನಿರ್ವಹಿಸಿದ್ದ ಈ ಚಿತ್ರವನ್ನು ವೇಣು ಶ್ರೀರಾಮ್​ ತೆಲುಗಿಗೆ ರಿಮೇಕ್​ ಮಾಡಿದ್ದಾರೆ. ಪವನ್​ ಕಲ್ಯಾಣ್​ ಹಾಗೂ ಪ್ರಕಾಶ್​ ರೈ ವಕೀಲರಾಗಿ ಕಾಣಿಸಿಕೊಂಡಿದ್ದಾರೆ. ಏಪ್ರಿಲ್​ 09ರಂದು ಸಿನಿಮಾ ತೆರೆಗೆ ಬರುತ್ತಿದೆ. ಸದ್ಯ ಟ್ರೇಲರ್​ಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ: ನೆಚ್ಚಿನ ನಟ ಪವನ್ ಕಲ್ಯಾಣ್‌ ಹುಟ್ಟುಹಬ್ಬಕ್ಕೆ ಪೋಸ್ಟರ್ ಹಾಕಲು ಹೋಗಿ ಮೂವರ ಸಾವು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ