ನೆಚ್ಚಿನ ನಟ ಪವನ್ ಕಲ್ಯಾಣ್‌ ಹುಟ್ಟುಹಬ್ಬಕ್ಕೆ ಪೋಸ್ಟರ್ ಹಾಕಲು ಹೋಗಿ ಮೂವರ ಸಾವು

  • Updated On - 7:53 am, Wed, 2 September 20
ನೆಚ್ಚಿನ ನಟ ಪವನ್ ಕಲ್ಯಾಣ್‌ ಹುಟ್ಟುಹಬ್ಬಕ್ಕೆ ಪೋಸ್ಟರ್ ಹಾಕಲು ಹೋಗಿ ಮೂವರ ಸಾವು
ನಟ ಪವನ್ ಕಲ್ಯಾಣ್

ಹೈದರಾಬಾದ್: ನಟ ಪವನ್ ಕಲ್ಯಾಣ್‌ಗೆ ಇಂದು ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಪೋಸ್ಟರ್ ಹಾಕಲು ಹೋಗಿದ್ದ ಮೂವರು ಅಭಿಮಾನಿಗಳು ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕಲಮಲದೊಡ್ಡಿ ಗ್ರಾಮದಲ್ಲಿ ನಡೆದಿದೆ.

ತಡರಾತ್ರಿ ಈ ಘಟನೆ ನಡೆದಿದೆ. ಜನ್ಮದಿನದ ಬ್ಯಾನರ್ ಕಟ್ಟಲು‌ ಏಳು ಅಭಿಮಾನಿಗಳು ಹೋಗಿದ್ದರು. ಕುಪ್ಪಂ‌- ಪಲಮನೇರು ರಾಷ್ಟ್ರೀಯ ಹೆದ್ದಾರಿಯಲ್ಲಿ 25ಅಡಿ ಬ್ಯಾನರ್‌ ಕಟ್ಟುವಾಗ ವಿದ್ಯುತ್ ತಂತಿ ಸ್ಪರ್ಶಿಸಿ ಮೂವರು ಮೃತಪಟ್ಟಿದ್ದು, ಉಳಿದ ನಾಲ್ವರಿಗೆ ಗಾಯಗಳಾಗಿವೆ. ಅವರನ್ನು ಕುಪ್ಪಂ PES ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತರನ್ನು ಸೋಮಶೇಖರ್‌, ರಾಜೇಂದ್ರ, ಅರುಣಾಚಲಂ ಎಂದು ಗುರುತಿಸಲಾಗಿದೆ. ಮೃತರ ಸಾವಿಗೆ ನಟ, ಜನಸೇನಾ ಮುಖ್ಯಸ್ಥ ಪವನ್‌ ಕಲ್ಯಾಣ್ ಮನ ಮಿಡಿದಿದ್ದು, ಮೃತರ ಕುಟುಂಬಕ್ಕೆ‌ ಸಾಂತ್ವಾನ ಹೇಳಿದ್ದಾರೆ. ಪ್ರತಿ ಕುಟುಂಬಕ್ಕೆ 2ಲಕ್ಷ‌ ಪರಿಹಾರ ಪ್ರಕಟಿಸಿದ್ದಾರೆ.

Published On - 7:51 am, Wed, 2 September 20

Click on your DTH Provider to Add TV9 Kannada