ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ವಿವಾದ: ಶಿವಣ್ಣ ನೇತೃತ್ವದಲ್ಲಿ ನಾಳೆ ಚಿತ್ರರಂಗದ ಪ್ರಮುಖರ ಸಭೆ
ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಮಾದಕ ಲೋಕದ ಲಿಂಕ್ ಆರೋಪ ಮಾಡಿದ್ದ ನಿರ್ದೇಶಕ ಹಾಗೂ ಪತ್ರಕರ್ತ ಇಂದ್ರಜಿತ್ ಲಂಕೇಶ್ ಸಿಸಿಬಿಗೆ ಯಾವುದೇ ಪುರಾವೆ ನೀಡದಿರೋ ಹಿನ್ನೆಲೆಯಲ್ಲಿ ಕನ್ನಡ ಚಲನಚಿತ್ರರಂಗದ ಕೆಲ ಗಣ್ಯರು ನಾಳೆ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ಸೇರಲಿದ್ದಾರೆ. ನಟ ಶಿವರಾಜ್‌ಕುಮಾರ್ ಸಾರಥ್ಯವಹಿಸಲಿರೋ ಈ ಸಭೆ ಬೆಳಗ್ಗೆ 11ಗಂಟೆಗೆ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆಯಲಿದೆ. ವಾಣಿಜ್ಯಮಂಡಳಿಯ ಪದಾಧಿಕಾರಿಗಳು ಸೇರಿದಂತೆ ಚಿತ್ರರಂಗದ ಪ್ರಮುಖರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಭೆಯಲ್ಲಿ ಡ್ರಗ್ಸ್ ದಂದೆಯಲ್ಲಿ ಯಾರದ್ದಾದರೂ ಹೆಸರು ಬಂದ್ರೇ ಏನು ಮಾಡಬೇಕು ಎಂದು […]
ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಮಾದಕ ಲೋಕದ ಲಿಂಕ್ ಆರೋಪ ಮಾಡಿದ್ದ ನಿರ್ದೇಶಕ ಹಾಗೂ ಪತ್ರಕರ್ತ ಇಂದ್ರಜಿತ್ ಲಂಕೇಶ್ ಸಿಸಿಬಿಗೆ ಯಾವುದೇ ಪುರಾವೆ ನೀಡದಿರೋ ಹಿನ್ನೆಲೆಯಲ್ಲಿ ಕನ್ನಡ ಚಲನಚಿತ್ರರಂಗದ ಕೆಲ ಗಣ್ಯರು ನಾಳೆ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ಸೇರಲಿದ್ದಾರೆ.
ನಟ ಶಿವರಾಜ್‌ಕುಮಾರ್ ಸಾರಥ್ಯವಹಿಸಲಿರೋ ಈ ಸಭೆ ಬೆಳಗ್ಗೆ 11ಗಂಟೆಗೆ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆಯಲಿದೆ. ವಾಣಿಜ್ಯಮಂಡಳಿಯ ಪದಾಧಿಕಾರಿಗಳು ಸೇರಿದಂತೆ ಚಿತ್ರರಂಗದ ಪ್ರಮುಖರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಸಭೆಯಲ್ಲಿ ಡ್ರಗ್ಸ್ ದಂದೆಯಲ್ಲಿ ಯಾರದ್ದಾದರೂ ಹೆಸರು ಬಂದ್ರೇ ಏನು ಮಾಡಬೇಕು ಎಂದು ಸದ್ಯದ ಬೆಳವಣಿಗೆಗಳ ಕುರಿತು ಚರ್ಚಿಸಲಿದ್ದಾರೆ. ಇದಾದ ನಂತರ 12 ಗಂಟೆಗೆ ಸುದ್ದಿಗೋಷ್ಠಿ ನಡೆಸಿ ಸದ್ಯದ ಬೆಳವಣಿಗೆ ಬಗ್ಗೆ ಮಾತನಾಡಲಿದ್ದಾರೆ ಎಂದು ತಿಳಿದು ಬಂದಿದೆ.