AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದ್ರಜಿತ್‌‌ ಡ್ರಗ್ಸ್‌ ಹೇಳಿಕೆ ಠುಸ್ ಪಟಾಕಿಯಾ, ಬಿಟ್ಟಿದ್ದೆಲ್ಲಾ ಬುರುಡೆ? ಏನಂತಿವೆ CCB ಮೂಲ?

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಎಗ್ಗಿಲ್ಲದೇ ಉಪಯೋಗಿಸಲಾಗ್ತಿದೆ ಡ್ರಗ್ಸ್‌ ಎನ್ನುವ ನಿರ್ದೇಶಕ ಮತ್ತು ಹಿರಿಯ ಪತ್ರಕರ್ತ ಇಂದ್ರಜಿತ್‌ ಲಂಕೇಶ್‌ ಹೇಳಿಕೆ ಠುಸ್‌ ಪಟಾಕಿಯಾ? ಹಾಗಂತ ಹೇಳುತ್ತಿವೆ ತನಿಖೆ ನಡೆಸುತ್ತಿರುವ CCB ಮೂಲಗಳು! ಯಾಕಂದ್ರೆ ಸೋಮವಾರ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗಿ ಹೇಳಿಕೆ ನೀಡಿರುವ ಇಂದ್ರಜಿತ್‌ ಲಂಕೇಶ್‌, ಯಾವುದೇ ಸೂಕ್ತ ದಾಖಲಾತಿಗಳನ್ನು ನೀಡಿಲ್ವಂತೆ. ಸಿಸಿಬಿಗೆ ಪೂರ್ಣ ಪ್ರಮಾಣದ ಮಾಹಿತಿ ನೀಡದೇ ಕೇವಲ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಹೀಗಾಗಿರಬಹುದು, ಹಾಗಾಗಿರಬಹುದು ಎಂದು ಮಾಹಿತಿ ನೀಡಿದ್ದಾರಂತೆ. ಅನುಮಾನಗಳನ್ನಷ್ಟೇ ವ್ಯಕ್ತಪಡಿಸಿದ್ದಾರಂತೆ ಲಂಕೇಶ್​ ಪುತ್ರ ತಮ್ಮ […]

ಇಂದ್ರಜಿತ್‌‌ ಡ್ರಗ್ಸ್‌ ಹೇಳಿಕೆ ಠುಸ್ ಪಟಾಕಿಯಾ, ಬಿಟ್ಟಿದ್ದೆಲ್ಲಾ ಬುರುಡೆ? ಏನಂತಿವೆ CCB ಮೂಲ?
Guru
| Edited By: |

Updated on: Sep 01, 2020 | 5:01 PM

Share

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಎಗ್ಗಿಲ್ಲದೇ ಉಪಯೋಗಿಸಲಾಗ್ತಿದೆ ಡ್ರಗ್ಸ್‌ ಎನ್ನುವ ನಿರ್ದೇಶಕ ಮತ್ತು ಹಿರಿಯ ಪತ್ರಕರ್ತ ಇಂದ್ರಜಿತ್‌ ಲಂಕೇಶ್‌ ಹೇಳಿಕೆ ಠುಸ್‌ ಪಟಾಕಿಯಾ? ಹಾಗಂತ ಹೇಳುತ್ತಿವೆ ತನಿಖೆ ನಡೆಸುತ್ತಿರುವ CCB ಮೂಲಗಳು!

ಯಾಕಂದ್ರೆ ಸೋಮವಾರ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗಿ ಹೇಳಿಕೆ ನೀಡಿರುವ ಇಂದ್ರಜಿತ್‌ ಲಂಕೇಶ್‌, ಯಾವುದೇ ಸೂಕ್ತ ದಾಖಲಾತಿಗಳನ್ನು ನೀಡಿಲ್ವಂತೆ. ಸಿಸಿಬಿಗೆ ಪೂರ್ಣ ಪ್ರಮಾಣದ ಮಾಹಿತಿ ನೀಡದೇ ಕೇವಲ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಹೀಗಾಗಿರಬಹುದು, ಹಾಗಾಗಿರಬಹುದು ಎಂದು ಮಾಹಿತಿ ನೀಡಿದ್ದಾರಂತೆ.

ಅನುಮಾನಗಳನ್ನಷ್ಟೇ ವ್ಯಕ್ತಪಡಿಸಿದ್ದಾರಂತೆ ಲಂಕೇಶ್​ ಪುತ್ರ ತಮ್ಮ ಹೇಳಿಕೆಗೆ ಪೂರಕ ಎನ್ನುವಂತೆ ಈ ಹಿಂದೆ ಸೆಲೆಬ್ರಿಟಿಗಳ ಕಾರು ಅಪಘಾತಗಳನ್ನು ಉಲ್ಲೇಖಿಸಿರುವ ಇಂದ್ರಜಿತ್‌, ಕಾರು ಅಪಘಾತದ ಹಿಂದೆ ಡ್ರಗ್ಸ್​ ಕಾರಣವಾಗಿರಬಹುದು. ಕೆಲವೊಂದು ಪಾರ್ಟಿಗಳಲ್ಲಿ ನಡೆದ ಗಲಾಟೆಗಳೂ ಕೂಡಾ ಡ್ರಗ್​ ಸೇವನೆಯಿಂದಾಗಿರಬಹುದು ಎಂದು ಹತ್ತು ಹಲವು ಅನುಮಾನಗಳನ್ನಷ್ಟೇ ವ್ಯಕ್ತಪಡಿಸಿದ್ದಾರಂತೆ ಲಂಕೇಶ್​ ಪುತ್ರ.

ಕೆಲವೊಂದು ನಟ ನಟಿಯರ ಬಗ್ಗೆ ಪ್ರಸ್ತಾಪಿಸಿ ಅವರಿಗೆ ಡ್ರಗ್​ ನಂಟು ಇರಬಹುದು ಎಂಬ ಅನುಮಾನವನ್ನ ಅಧಿಕಾರಿಗಳ ಜತೆಗೆ ಹಂಚಿಕೊಂಡಿದ್ದಾರಂತೆ. ಆದ್ರೆ ನಿಖರವಾಗಿ ಇಂತಹವರೇ ಎಂದು ಎಲ್ಲೂ ಹೇಳಿಕೆ ನೀಡಿಲ್ಲವಂತೆ. ಆದ್ರೆ ಕೆಲವೊಂದು ಪ್ರಮುಖ ಘಟನೆಗಳನ್ನ ಆಧಾರವಾಗಿ ಅನುಮಾನವನ್ನ ವ್ಯಕ್ತಪಡಿಸಿದ್ದು, ಆದ್ರೆ ಆ ಅನುಮಾನಗಳಿಗೆ ಯಾವುದೇ ರೀತಿಯ ಸಾಕ್ಷ್ಯವನ್ನು ಸಿಸಿಬಿಗೆ ಒದಗಿಸಿಲ್ಲವೆಂದು ತಿಳಿದು ಬಂದಿದೆ.

ಚೆಂಡು ಈಗ ಮತ್ತೇ ಇಂದ್ರಜಿತ್‌ ಲಂಕೇಶ್‌ ಅಂಗಳಕ್ಕೆ ಹೀಗಾಗಿ ಇಂದ್ರಜಿತ್‌ ಲಂಕೇಶ್‌ರ ಈ ಅನುಮಾನವನ್ನೇ ಆಧಾರವಾಗಿಟ್ಟುಕೊಂಡು ತನಿಖೆ ನಡೆಸಲು ಅಸಾಧ್ಯ. ಹೀಗಾಗಿ ಮತ್ತೊಮ್ಮೆ ಇಂದ್ರಜಿತ್‌ ಲಂಕೇಶ್​ಗೆ ಅವಕಾಶ ನೀಡಿರುವ ಸಿಸಿಬಿ ಅಧಿಕಾರಿಗಳು, ನಿಮ್ಮಲ್ಲಿ ಸಾಕ್ಷ್ಯಗಳು ಇದ್ರೆ ತಂದು ಕೊಡಿ ಎಂದು ಅವರಿಗೆ ಸೂಚನೆ ನೀಡಿದ್ದಾರೆಂದು ತಿಿಳಿದು ಬಂದಿದೆ.

ಹೀಗಾಗಿ ಚೆಂಡು ಈಗ ಮತ್ತೇ ಇಂದ್ರಜಿತ್‌ ಲಂಕೇಶ್‌ ಅಂಗಳದಲ್ಲಿದ್ದು, ಅವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂದು ಕಾದು ನೋಡಬೇಕಿದೆ.

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?