ಯುವ ನಟರೇ ಯಾಕೆ.. ಹಳೆಬರು ಯಾರೂ ಡ್ರಗ್ಸ್‌ ತೆಗೆದುಕೊಳ್ತಿಲ್ವಾ? ಯುವನಟ ಪ್ರಶ್ನೆ

ಯುವ ನಟರೇ ಯಾಕೆ.. ಹಳೆಬರು ಯಾರೂ ಡ್ರಗ್ಸ್‌ ತೆಗೆದುಕೊಳ್ತಿಲ್ವಾ? ಯುವನಟ ಪ್ರಶ್ನೆ

ಬೆಂಗಳೂರು: ಯುವ ನಟರು ಡ್ರಗ್ಸ್‌ ತೆಗೆದುಕೊಳ್ತಾರೆ ಅನ್ನೋದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಗುಲಾಮಗಿರಿ ಚಿತ್ರದ ನಾಯಕ ಟೈಗರ್ ‌ನಾಗ್​ ಈ ಬಗ್ಗೆ ಕಿಡಿಕಾರಿದ್ದು, ಯಾರು ತಪ್ಪು ಮಾಡಿದ್ದರೋ ಅವರ ವಿರುದ್ದ ಕ್ರಮ ಕೈಗೊಳ್ಳಿ. ಆದ್ರೆ ಯುವ ನಟರು ಅಂತಾ ಪದ ಬಳಸೋದು ಬೇಡ. ಹಳೆಬರು ಯಾರೂ ಡ್ರಗ್ಸ್‌ ತೆಗದುಕೊಳ್ತಿಲ್ವಾ? ಎಂದು ಅವರು ಪ್ರಶ್ನಿಸಿದ್ದಾರೆ.

ಗಾಂಧಿನಗರದ ನಶೆ ಸದ್ದು ನವ ನಟರ ಕನಸುಗಳಿಗೆ ಕೊಳ್ಳಿ ಇಟ್ಟಿದೆ. ಹಲವು ಹೊಸ ಸಿನಿಮಾಗಳ ಕೆಲಸಕ್ಕೆ ಬ್ರೇಕ್ ಹಾಕಿದೆ.

ಸದ್ಯ ನಶೆ ಸುದ್ದಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡೋರನ್ನ ಅನುಮಾನಿಸಿದೆ. ಅರ್ಧಕ್ಕೆ ನಿಂತ ಸಿನಿಮಾಗಳು ಪೂರ್ತಿ ಆಗೋದೂ ಡೌಟ್ ಅಂತಾ ಅವರು ಹತಾಶೆ ವ್ಯಕ್ತಪಡಿಸಿದ್ದಾರೆ.

ಸರ್ ಕನಸು ಕಟ್ಕೊಂಡ್ ..ಬದುಕು ಕಟ್ಕೊಳ್ಳೋಕೆ ಬಂದಿದ್ವಿ. ಆದ್ರೆ ಎಲ್ಲ ಕಡೆ ಸ್ಯಾಂಡಲ್ ವುಡ್ ಗೆ ಡ್ರಗ್ ನಂಟು. ಇತ್ತೀಚೆಗೆ ಎಂಟ್ರಿ ಕೊಟ್ಟ ನಟನಟಿಯರಿಂದ ಹೀಗಾಗಿದೆ ಅಂದಿದ್ದಾರೆ.

ಹೀಗಾಗಿ ನಮ್ಮ ಸಿನಿಮಾ ಅರ್ಧಕ್ಕೆ ನಿಂತಿದೆ. ಕೆಲವು ಸಹ ನಿರ್ಮಾಪಕರು ಹೀಗೆಲ್ಲಾ ಇದೆಯಾ ಅಂತಾ ಸಿನಿಮಾ ಬೇಡ ಅಂತ ಬ್ರೇಕ್ ಹಾಕಿದ್ದರು. ಗುಲಾಮಗಿರಿ ಈಗಾಗಲೇ ಶೇ 75 ಚಿತ್ರೀಕರಣ ಮುಗಿದಿದೆ. ನನ್ನ ಸಿನಿಮಾ ಈಗ ಅರ್ಧಕ್ಕೆ ನಿಲ್ಲುವ ಪರಿಸ್ಥಿತಿ ಎದುರಾಗಿದೆ. ನಮ್ಮಂಥ ಹೊಸಬರನ್ನೇ ಏಕೆ ಟಾರ್ಗೆಟ್ ಮಾಡುತ್ತಿದ್ದೀರಾ..? ಎಂದು ಟೈಗರ್ ‌ನಾಗ್ ಪ್ರಶ್ನಿಸಿದ್ದಾರೆ.

Published On - 9:59 am, Wed, 2 September 20

Click on your DTH Provider to Add TV9 Kannada