ಭೀಕರ ರಸ್ತೆ ಅಪಘಾತ: ನಜ್ಜುಗುಜ್ಜಾದ ಕಾರು, ಖ್ಯಾತ ಗಾಯಕ ಸ್ಥಳದಲ್ಲೇ ಸಾವು
ಮಂಗಳವಾರ (ಮಾ.30) ಮುಂಜಾನೆ ಬೆಳಗ್ಗೆ ಅಮೃತ್ಸರದಿಂದ ಕರ್ತಾಪುರ್ನಲ್ಲಿರುವ ತಮ್ಮ ನಿವಾಸಕ್ಕೆ ದಿಲ್ಜಾನ್ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಂತಿದ್ದ ಟ್ರಕ್ಗೆ ಡಿಕ್ಕಿ ಗುದ್ದಿದೆ.
ಅಮೃತ್ ಸರದ ಜಂಡಿಯಾಲಾ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಖ್ಯಾತ ಪಂಜಾಬಿ ಸಿಂಗರ್ ದಿಲ್ಜಾನ್ (31) ಅವರು ಮೃತಪಟ್ಟಿದ್ದಾರೆ. ಅವರ ಸಾವಿಗೆ ಟ್ವಿಟರ್ನಲ್ಲಿ ಶೋಕ ವ್ಯಕ್ತವಾಗಿದೆ. ಮಂಗಳವಾರ (ಮಾ.30) ಮುಂಜಾನೆ ಬೆಳಗ್ಗೆ ಅಮೃತ್ಸರದಿಂದ ಕರ್ತಾಪುರ್ನಲ್ಲಿರುವ ತಮ್ಮ ನಿವಾಸಕ್ಕೆ ದಿಲ್ಜಾನ್ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಂತಿದ್ದ ಟ್ರಕ್ಗೆ ಡಿಕ್ಕಿ ಗುದ್ದಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು. ದಿಲ್ಜಾನ್ ಹೆಂಡತಿ ಹಾಗೂ ಮಕ್ಕಳು ಕೆನಡಾದಲ್ಲಿ ವಾಸವಾಗಿದ್ದಾರೆ.
ಅಪಘಾತವಾಗಿದ್ದು ಹೇಗೆ? ದಿಲ್ಜಾನ್ ಕರ್ತಾಪುರ್ದಲ್ಲಿ ವಾಸವಾಗಿದ್ದಾರೆ. ಮಂಗಳವಾರ ಮುಂಜಾನೆ ಅಮೃತ್ಸರ-ಜಲಂದರ್ ಜಿಟಿ ರಸ್ತೆಯಲ್ಲಿ ದಿಲ್ಜಾನ್ ತಮ್ಮ ಕಾರಿನಲ್ಲಿ ಸಾಗುತ್ತಿದ್ದರು. ಅಪಘಾತವಾದ ರಭಸಕ್ಕೆ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು ಎನ್ನುವ ಮಾಹಿತಿ ಕೂಡ ಕೇಳಿ ಬಂದಿದೆ. ಈ ಅಪಘಾತಕ್ಕೆ ಕಾರಣವೇನು ಎನ್ನುವ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ದಿಲ್ಜಾನ್ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕೆಲ ವರದಿಗಳ ಪ್ರಕಾರ ಕಾರು ವೇಗವಾಗಿ ಸಾಗುತ್ತಿತ್ತಂತೆ. ಹೀಗಾಗಿ, ಕಾರು ನಿಯಂತ್ರಣ ಕಳೆದುಕೊಂಡು ಲಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗುತ್ತಿದೆ.
ಪಂಜಾಬಿ ಇಂಡಸ್ಟ್ರಿ ಕಂಬನಿ ದಿಲ್ಜಾನ್ ಸಾವಿಗೆ ಪಂಜಾಬಿ ಸಂಗೀತ ಇಂಡಸ್ಟ್ರಿ ಬೇಸರ ಹೊರ ಹಾಕಿದೆ. ಸಾಕಷ್ಟು ಜನರು ಸಾಮಾಜಿಕ ಜಾಲತಾಣದಲ್ಲಿ ಈ ಗಾಯಕನಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
View this post on Instagram
View this post on Instagram
ದಿಲ್ಜಾನ್ ಯಾರು? ದಿಲ್ಜಾನ್ ಪಂಜಾಬ್ನ ಖ್ಯಾತ ಸಿಂಗರ್. ಸುರ್ ಕ್ಷೇತ್ರ (2012) ರಿಯಾಲಿಟಿ ಶೋನ ಸ್ಪರ್ಧಿ ಆಗಿದ್ದರು. ಈ ಕಾರ್ಯಕ್ರಮದ ನಂತರ ಇವರ ಖ್ಯಾತಿ ಹೆಚ್ಚಿತ್ತು. ದಿಲ್ಜಾನ್ ಸಾಕಷ್ಟು ಪಂಜಾಬಿ ಹಾಡುಗಳಿಗೆ ಧ್ವನಿ ಆಗಿದ್ದಾರೆ.
ಇದನ್ನೂ ಓದಿ: Tamil Nadu: ಧಾರಾಪುರಂನಲ್ಲಿ ಕಾರು ಅಪಘಾತ; ತಮಿಳುನಾಡು ವಿಧಾನಸಭೆಯ ಸ್ಪೀಕರ್ ಪಿ.ಧನಪಾಲ್ಗೆ ಗಾಯ
Published On - 6:27 pm, Tue, 30 March 21