ಡ್ರಗ್​ ಕೇಸ್​ನಲ್ಲಿ ಮಾಜಿ ಬಿಗ್​ ಬಾಸ್​ ಸ್ಪರ್ಧಿ ಅರೆಸ್ಟ್​; ಎನ್​​ಸಿಬಿಯಿಂದ ವಿಚಾರಣೆ

ಅಜಾಝ್​ರನ್ನು ಬಂಧಿಸಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಫೇಸ್ಬುಕ್​ನಲ್ಲಿ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದಕ್ಕಾಗಿ ಅವರನ್ನು ಬಂಧಿಸಲಾಗಿತ್ತು.

ಡ್ರಗ್​ ಕೇಸ್​ನಲ್ಲಿ ಮಾಜಿ ಬಿಗ್​ ಬಾಸ್​ ಸ್ಪರ್ಧಿ ಅರೆಸ್ಟ್​; ಎನ್​​ಸಿಬಿಯಿಂದ ವಿಚಾರಣೆ
ಅಜಾಝ್​ ಖಾನ್
Follow us
ರಾಜೇಶ್ ದುಗ್ಗುಮನೆ
|

Updated on:Mar 30, 2021 | 9:28 PM

ಬಾಲಿವುಡ್​ನಲ್ಲಿ ಸಂಚಲನ ಸೃಷ್ಟಿಸಿರುವ ಡ್ರಗ್​ ಕೇಸ್​ನಲ್ಲಿ ಸಾಕಷ್ಟು ಜನರು ಬಂಧನಕ್ಕೆ ಒಳಗಾಗಿದ್ದಾರೆ. ಕೆಲ ಪ್ರಮುಖ ಹೀರೋ-ಹೀರೋಯಿನ್​ಗಳನ್ನು ವಿಚಾರಣೆ ಮಾಡಲಾಗಿದೆ. ಈಗ ಹಿಂದಿ ಬಿಗ್​ ಬಾಸ್​ 7ನೇ ಸೀಸನ್​ ಸ್ಪರ್ಧಿ ಅಜಾಝ್​ ಖಾನ್​ ಅವರನ್ನು ಮಾದಕವಸ್ತು ನಿಯಂತ್ರಣ ದಳ (ಎನ್​ಸಿಬಿ) ಬಂಧಿಸಿದೆ. ಅವರನ್ನು ವಿಚಾರಣೆ ಮಾಡಲಾಗುತ್ತಿದ್ದು, ಪ್ರಮುಖ ಮಾಹಿತಿ ಹೊರ ಬೀಳುವ ಸಾಧ್ಯತೆ ಇದೆ. ಈ ಮೊದಲು ಎನ್​ಸಿಬಿ ಶದಾಬ್​ ಬತಾತಾ ಎಂಬ ಡ್ರಗ್​ ಪೆಡ್ಲರ್​ನನ್ನು ಬಂಧಿಸಿತ್ತು. ಆತ ವಿಚಾರಣೆ ವೇಳೆ ಅಜಾಝ್​ ಹೆಸರನ್ನು ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ. ಹೀಗಾಗಿ, ಮಂಗಳವಾರ (ಮಾರ್ಚ್​ 30)ಮುಂಬೈನ ಅಂಧೇರಿ ಮತ್ತು ಲೋಖಂಡ್​​ವಾಲಾದಲ್ಲಿರುವ ಮನೆ ಮೇಲೆ ಎನ್​ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಅಜಾಝ್​ ರಾಜಸ್ಥಾನದಲ್ಲಿದ್ದರು. ಅವರು, ಮುಂಬೈಗೆ ಬರುತ್ತಿದ್ದಂತೆ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ಅಜಾಝ್​ರನ್ನು ಬಂಧಿಸಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಫೇಸ್ಬುಕ್​ನಲ್ಲಿ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದಕ್ಕಾಗಿ ಅವರನ್ನು ಬಂಧಿಸಲಾಗಿತ್ತು. ಆ ವೇಳೆ, ಸೆಕ್ಷನ್ 153 ಎ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿತ್ತು.

ಇದಕ್ಕೂ ಮೊದಲು 2018ರಲ್ಲಿ ಡ್ರಗ್​ ಕೇಸ್​ ಒಂದರಲ್ಲಿ ಅಜಾಝ್​ರನ್ನು ಅರೆಸ್ಟ್​ ಮಾಡಲಾಗಿತ್ತು. ಬೇಲಾಪುರ್​ನಲ್ಲಿರುವ ಹೋಟೆಲ್​ ಒಂದರಲ್ಲಿ ಇವರು ಬಂಧನಕ್ಕೆ ಒಳಗಾಗಿದ್ದರು. ಅವರ ಬಳಿ 2.2 ಲಕ್ಷ ರೂಪಾಯಿ ಮೌಲ್ಯದ ಡ್ರಗ್​ ಟ್ಯಾಬ್ಲೆಟ್​ಗಳು ಇದ್ದವು ಎನ್ನಲಾಗಿದೆ.

View this post on Instagram

A post shared by Ajaz Khan (@imajazkhan)

ಸುಶಾಂತ್​ ಸಿಂಗ್ ಸಾವಿನ ನಂತರ ಡ್ರಗ್​ ಕೇಸ್​ ವಿಚಾರ ಬೆಳಕಿಗೆ ಬಂದಿತ್ತು. ಸಾಕಷ್ಟು ಜನರು ಈ ಪ್ರಕರಣದಲ್ಲಿ ಬಂಧನಕ್ಕೆ ತುತ್ತಾಗಿದ್ದರು. ದೀಪಿಕಾ ಪಡುಕೋಣೆ ಸೇರಿದಂತೆ ಸಾಕಷ್ಟು ಕಲಾವಿದರು ವಿಚಾರಣೆಗೆ ಒಳಪಟ್ಟಿದ್ದರು. ಈಗ ಎನ್​ಸಿಬಿ ಈ ಪ್ರಕಣದಲ್ಲಿ ಆಳಕ್ಕೆ ಹೋದಂತೆ ಹಲವು ಜನರು ಸಿಕ್ಕಿ ಬೀಳುತ್ತಿದ್ದಾರೆ.

View this post on Instagram

A post shared by Ajaz Khan (@imajazkhan)

ಇದನ್ನೂ ಓದಿ: Drug Case​: ಡ್ರಗ್​ ಕೇಸ್​ನಲ್ಲಿ CCB ಬಿಜಿಯಾಗಿದ್ದಾಗ ಸ್ಟಾರ್ ಹೋಟೆಲ್​ನಲ್ಲಿ ನಡೆಯುತ್ತಿತ್ತು ಹೈಫೈ ಡ್ರಗ್​ ಪಾರ್ಟಿಗಳು! 5 ಮಂದಿ ಅರೆಸ್ಟ್

Published On - 8:27 pm, Tue, 30 March 21