Chandan – Kavitha: ಏಪ್ರಿಲ್​ 1ಕ್ಕೆ ಹಸೆಮಣೆ ಏರಲಿದ್ದಾರೆ ಚಂದನ್​-ಕವಿತಾ ಲವ್​ ಬರ್ಡ್ಸ್​​! ಕಡೆಗೂ ಅಧಿಕೃತವಾಯಿತು ಇಬ್ಬರ ಪ್ರೀತಿ

Chandan Kumar - Kavitha Gowda Marriage: ಚಂದನ್​ ಹಾಗೂ ಕವಿತಾ ಪ್ರೀತಿಸುತ್ತಿದ್ದಾರೆ ಎನ್ನುವ ವಿಚಾರ ಸ್ಯಾಂಡಲ್​ವುಡ್​ನಲ್ಲಿ ಈ ಮೊದಲಿನಿಂದಲೂ ಹರಿದಾಡುತ್ತಿತ್ತು. ಆದರೆ, ಇದನ್ನು ಯಾರೊಬ್ಬರೂ ಅಧಿಕೃತ ಮಾಡಿರಲಿಲ್ಲ.

Chandan - Kavitha: ಏಪ್ರಿಲ್​ 1ಕ್ಕೆ ಹಸೆಮಣೆ ಏರಲಿದ್ದಾರೆ ಚಂದನ್​-ಕವಿತಾ ಲವ್​ ಬರ್ಡ್ಸ್​​! ಕಡೆಗೂ ಅಧಿಕೃತವಾಯಿತು ಇಬ್ಬರ ಪ್ರೀತಿ
ಚಂದನ್​-ಕವಿತಾ
Follow us
ರಾಜೇಶ್ ದುಗ್ಗುಮನೆ
| Updated By: Digi Tech Desk

Updated on:Mar 31, 2021 | 1:28 PM

ನಟ ಚಂದನ್​ ಕುಮಾರ್​ ಹಾಗೂ ನಟಿ ಕವಿತಾ ಗೌಡ ಪ್ರೀತಿ ಮಾಡುತ್ತಿದ್ದಾರಾ? ಅವರಿಬ್ಬರೂ ಜತೆಯಾಗಿ ಡೇಟಿಂಗ್​ ಮಾಡುತ್ತಿದ್ದಾರಾ? ಇಬ್ಬರೂ ಮದುವೆ ಆಗುತ್ತಾರಾ ಎಂಬಿತ್ಯಾದಿ ಪ್ರಶ್ನೆಗಳನ್ನು ಅಭಿಮಾನಿಗಳು ಕೇಳುತ್ತಲೇ ಇದ್ದರು. ಆದರೆ, ಇದಕ್ಕೆ ಇಬ್ಬರಿಂದಲೂ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಆದರೆ, ಈಗ ಈ ವಿಚಾರ ಅಧಿಕೃತವಾಗಿದೆ.  

ಕನ್ನಡ ಮಾತ್ರವಲ್ಲದೆ ಪರಭಾಷೆಯಲ್ಲೂ ಫೇಮಸ್​ ಆಗಿರುವ ನಟ ಚಂದನ್​ ಕುಮಾರ್ ಇತ್ತೀಚೆಗೆ ಟಿವಿ9 ಕನ್ನಡ ಡಿಜಿಟಲ್​ ಜತೆ ಮದುವೆ ಬಗ್ಗೆ ಮಾತನಾಡಿದ್ದರು. ಆದರೆ, ಹುಡುಗಿ ಯಾರು ಎಂಬುದನ್ನು ಖಚಿತಪಡಿಸಿರಲಿಲ್ಲ. ‘ಸಾವಿತ್ರಮ್ಮಗಾರಿ ಅಬ್ಬಾಯಿ’ ಧಾರಾವಾಹಿಯ 500ಕ್ಕೂ ಹೆಚ್ಚು ಎಪಿಸೋಡ್​ಗಳಲ್ಲಿ ಚಂದನ್​ ನಟಿಸಿದ್ದರು. ಆ ಧಾರಾವಾಹಿಯಲ್ಲಿ ಈಗ ಅವರ ಪಾತ್ರ ಅಂತ್ಯವಾಗುತ್ತಿದೆ. ಅದಕ್ಕೆ ಕಾರಣ ಏನು ಎಂಬ ಬಗ್ಗೆ ಚಂದನ್​ ಮಾಹಿತಿ ನೀಡಿದ್ದರು.  ‘ನಂಗೆ ಸ್ವಲ್ಪ ಫ್ರೀಡಂ ಬೇಕಾಗಿತ್ತು. ಮದುವೆ ಪ್ಲ್ಯಾನ್​ ಕೂಡ ನಡೆಯುತ್ತಿದೆ. ಪರ್ಸನಲ್​ ಜೀವನದ ಕಡೆಗೆ ಗಮನ ಹರಿಸಬೇಕು. ಇದನ್ನು ನಾನು ಧಾರಾವಾಹಿ ಟೀಮ್​ನವರಿಗೆ ಮೊದಲೇ ಹೇಳಿದ್ದೆ. ಅದಕ್ಕೆ ತಕ್ಕಂತೆ ಕಥೆಯಲ್ಲಿ ಬದಲಾವಣೆ ಮಾಡಿಕೊಂಡರು’ ಎಂದು ಚಂದನ್ ಹೇಳಿದ್ದರು.

ಮದುವೆ ಹುಡುಗಿ ಕವಿತಾ ಅವರೇ ಎಂದು ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದ ಚಂದನ್​,  ‘ಯೆಸ್​ ಎಂದರೆ ಅದೇ ಸುದ್ದಿ ಹಬ್ಬುತ್ತದೆ. ನೋ ಎಂದರೆ ಮತ್ತಿನ್ಯಾರು ಎಂಬ ಪ್ರಶ್ನೆ ಉದ್ಬವ ಆಗುತ್ತದೆ. ಈ ಎರಡೂ ಬೇಡ’ ಎನ್ನುವ ಮೂಲಕ ಕೌತುಕ ಹೆಚ್ಚಿಸಿದ್ದರು. ಆದರೆ, ಕೊನೆಗೂ ಮದುವೆ ಆಗುತ್ತಿರುವ ಸುದ್ದಿಯನ್ನು ಚಂದನ್ ಅಧಿಕೃತ ಮಾಡಿದ್ದಾರೆ. ಇದೇ ಏಪ್ರಿಲ್​ 1ರಂದು ಈ ಜೋಡಿ ಮದುವೆ ಆಗುತ್ತಿದೆ.

ಚಂದನ್​ ಹಾಗೂ ಕವಿತಾ ಪ್ರೀತಿಸುತ್ತಿದ್ದಾರೆ ಎನ್ನುವ ವಿಚಾರ ಸ್ಯಾಂಡಲ್​ವುಡ್​ನಲ್ಲಿ ಈ ಮೊದಲಿನಿಂದಲೂ ಹರಿದಾಡುತ್ತಿತ್ತು. ಆದರೆ, ಇದನ್ನು ಯಾರೊಬ್ಬರೂ ಅಧಿಕೃತ ಮಾಡಿರಲಿಲ್ಲ. ಆದರೆ, ಈಗ ಈ ವಿಚಾರವನ್ನು ಚಂದನ್​ ಅವರೇ ತಿಳಿಸಿದಂತಾಗಿದೆ.

ಇನ್ನು ಫೇಸ್​ಬುಕ್​ ಪೋಸ್ಟ್​ ನೋಡುತ್ತಿದ್ದಂತೆ ಅಭಿಮಾನಿಗಳು ಸಾಲು ಸಾಲು ಕಮೆಂಟ್​ ಮಾಡಿ ಅಭಿನಂದನೆ ತಿಳಿಸುತ್ತಿದ್ದಾರೆ. ಇನ್ನೂ ಕೆಲವರು, ಕೊನೆಗೂ ಪ್ರೀತಿ ವಿಚಾರ ಅಧಿಕೃತ ಮಾಡಿದಿರಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: Exclusive: ಮದುವೆಗಾಗಿ ಸೀರಿಯಲ್​ ಬಿಟ್ಟುಬಂದ ಚಂದನ್​! ಹುಡುಗಿ ಕವಿತಾನಾ ಅಂತ ಕೇಳಿದ್ದಕ್ಕೆ ಅವರು ಹೇಳಿದ್ದೇನು?

Published On - 10:34 pm, Tue, 30 March 21

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?