AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rakshita Prem: ‘ನಿಮ್ಮಂತಹ ಸ್ನೇಹಿತರು ಒಮ್ಮೆ ಮಾತ್ರ ಬರುತ್ತಾರೆ’: ರಕ್ಷಿತಾ ಜನ್ಮದಿನಕ್ಕೆ ದರ್ಶನ್​ ವಿಶೇಷ ಮಾತು!

Darshan: ಸುಂಟರಗಾಳಿ, ಮಂಡ್ಯ, ಕಲಾಸಿಪಾಳ್ಯ, ಅಯ್ಯ ಸಿನಿಮಾಗಳಲ್ಲಿ ದರ್ಶನ್​ ಮತ್ತು ರಕ್ಷಿತಾ ಜೊತೆಯಾಗಿ ಮೋಡಿ ಮಾಡಿದ್ದರು. ಅಂದಿನಿಂದಲೂ ಇಬ್ಬರ ನಡುವೆ ಒಳ್ಳೆಯ ಸ್ನೇಹ ಮನೆ ಮಾಡಿದೆ.

Rakshita Prem: ‘ನಿಮ್ಮಂತಹ ಸ್ನೇಹಿತರು ಒಮ್ಮೆ ಮಾತ್ರ ಬರುತ್ತಾರೆ’: ರಕ್ಷಿತಾ ಜನ್ಮದಿನಕ್ಕೆ ದರ್ಶನ್​ ವಿಶೇಷ ಮಾತು!
ದರ್ಶನ್​ - ರಕ್ಷಿತಾ ಪ್ರೇಮ್​
ಮದನ್​ ಕುಮಾರ್​
|

Updated on: Mar 31, 2021 | 11:28 AM

Share

ನಟಿ ರಕ್ಷಿತಾ ಪ್ರೇಮ್​ ಅವರಿಗೆ ಇಂದು (ಮಾ.31) ಜನ್ಮದಿನದ ಸಂಭ್ರಮ. ಅಭಿಮಾನಿಗಳು, ಸ್ನೇಹಿತರು ಮತ್ತು ಅನೇಕ ಸೆಲೆಬ್ರಿಟಿಗಳು ರಕ್ಷಿತಾಗೆ ವಿಶ್​ ಮಾಡುತ್ತಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಅವರಿಗೆ ಶುಭಾಶಯಗಳ ಮಹಾಪೂರ ಹರಿದುಬಂದಿದೆ. ಅದರಲ್ಲಿ ಹೆಚ್ಚು ಗಮನ ಸೆಳೆಯುತ್ತಿರುವುದು ‘ಚಾಲೆಂಜಿಂಗ್​ ಸ್ಟಾರ್​’ ದರ್ಶನ್​ ಮಾಡಿರುವ ವಿಶ್​. ತಮ್ಮ ಸ್ನೇಹಿತೆಗೆ ತುಂಬ ಪ್ರೀತಿಪೂರ್ವಕ ಮಾತುಗಳಿಂದ ‘ಡಿ ಬಾಸ್​’ ಶುಭಾಶಯ ಕೋರಿದ್ದಾರೆ.

‘ಹುಟ್ಟುಹಬ್ಬದ ಶುಭಾಶಯಗಳು. ಪ್ರತಿವರ್ಷ ಜನ್ಮದಿನಗಳು ಬರುತ್ತವೆ. ಆದರೆ ನಿಮ್ಮಂತಹ ಸ್ನೇಹಿತರು ಒಮ್ಮೆ ಮಾತ್ರ ಬರುತ್ತಾರೆ. ನಿಮಗೆ ಹುಟ್ಟುಹಬ್ಬದ ಶುಭಾಶಯಗಳು ಕ್ರೇಜಿ ಕ್ವೀನ್’ ಎಂದು ದರ್ಶನ್​ ಟ್ವೀಟ್​ ಮಾಡಿದ್ದಾರೆ. ರಕ್ಷಿತಾ ಜೊತೆಗಿರುವ ಒಂದು ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ. ಸದ್ಯ ಈ ಪೋಸ್ಟ್​ ವೈರಲ್​ ಆಗುತ್ತಿದೆ.

ದರ್ಶನ್​ ಮಾಡಿರುವ ಈ ಟ್ವೀಟ್​ ಕಂಡು ರಕ್ಷಿತಾ ಪ್ರೇಮ್​ ಸಖತ್​ ಖುಷಿ ಆಗಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ‘ಥ್ಯಾಂಕ್ಯು ಮೈ ಡಿಯರೆಸ್ಟ್​… ನಿಮ್ಮ ಶುಭಾಶಯ ಎಂದರೆ ನನ್ನ ಪಾಲಿಗೆ ಇಡೀ ಜಗತ್ತು ಇದ್ದಂತೆ’ ಎಂದು ಟ್ವೀಟ್​ ಮಾಡಿದ್ದಾರೆ. ರಕ್ಷಿತಾ ಮತ್ತು ದರ್ಶನ್​ ಅವರದ್ದು ಬಹುಕಾಲದ ಗೆಳತನ. ಈಗಲೂ ಅವರ ನಡುವೆ ಅಷ್ಟೇ ಆಪ್ತತೆ ಇದೆ.

ದರ್ಶನ್​ ಅವರ ಸಿನಿಮಾಗಳ ಬಗ್ಗೆ ರಕ್ಷಿತಾ ಒಳ್ಳೆಯ ಮಾತುಗಳನ್ನು ಹೇಳುತ್ತಲೇ ಬಂದಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ‘ರಾಬರ್ಟ್​’ ಚಿತ್ರಕ್ಕೂ ಅವರು ಶುಭ ಕೋರಿದ್ದರು. ಮೊದಲ ದಿನವೇ ಈ ಸಿನಿಮಾಗೆ ಒಳ್ಳೆಯ ವಿಮರ್ಶೆಗಳು ಸಿಕ್ಕಿದ್ದರಿಂದ ಖುಷಿಯಾಗಿದ್ದ ರಕ್ಷಿತಾ ಅವರು ಇಡೀ ಚಿತ್ರತಂಡಕ್ಕೆ ಅಭಿನಂದನೆ ಸಲ್ಲಿಸಿದ್ದರು. ದರ್ಶನ್​ ಅವರ ಪ್ರತಿ ಯಶಸ್ಸನ್ನೂ ಅವರು ಸಂಭ್ರಮಿಸುತ್ತ, ತಮ್ಮ ಸ್ನೇಹಿತನನ್ನು ಸದಾ ಹುರಿದುಂಬಿಸುತ್ತಿದ್ದಾರೆ.

ಸ್ಯಾಂಡಲ್​ವುಡ್​ನ ಯಶಸ್ವಿ ಜೋಡಿಗಳಲ್ಲಿ ರಕ್ಷಿತಾ ಮತ್ತು ದರ್ಶನ್​ ಕೂಡ ಪ್ರಮುಖರು. ಅವರಿಬ್ಬರ ಕೆಮಿಸ್ಟ್ರೀಯನ್ನು ಪ್ರೇಕ್ಷಕರು ತುಂಬ ಇಷ್ಟಪಟ್ಟಿದ್ದರು. ಸುಂಟರಗಾಳಿ, ಮಂಡ್ಯ, ಕಲಾಸಿಪಾಳ್ಯ, ಅಯ್ಯ ಸಿನಿಮಾಗಳಲ್ಲಿ ದರ್ಶನ್​ ಮತ್ತು ರಕ್ಷಿತಾ ಜೊತೆಯಾಗಿ ಮೋಡಿ ಮಾಡಿದ್ದರು. ಅಂದಿನಿಂದಲೂ ಇಬ್ಬರ ನಡುವೆ ಒಳ್ಳೆಯ ಸ್ನೇಹ ಮನೆ ಮಾಡಿದೆ.

ಇದನ್ನೂ ಓದಿ: 100 ಕೋಟಿ ರೂ. ಬಾಚಿಕೊಂಡ ರಾಬರ್ಟ್​! ಸ್ಯಾಂಡಲ್​ವುಡ್​ನಲ್ಲಿ ದರ್ಶನ್​ ಹೊಸ ದಾಖಲೆ

ಕ್ರಿಕೆಟ್​ ಆಡುವಾಗ ಮೈದಾನದಲ್ಲೇ ಕಿತ್ತಾಡಿಕೊಂಡ ದರ್ಶನ್​-ಅಭಿಷೇಕ್​; ಅಸಲಿಗೆ ಅಲ್ಲಿ ನಡೆದಿದ್ದೇನು?

ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ