AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರಿಕೆಟ್​ ಆಡುವಾಗ ಮೈದಾನದಲ್ಲೇ ಕಿತ್ತಾಡಿಕೊಂಡ ದರ್ಶನ್​-ಅಭಿಷೇಕ್​; ಅಸಲಿಗೆ ಅಲ್ಲಿ ನಡೆದಿದ್ದೇನು?

ದರ್ಶನ್​ಅವರಿಗೆ ಕ್ರಿಕೆಟ್​ ಆಡುವುದು ಎಂದರೆ ತುಂಬಾನೇ ಪ್ರೀತಿ. ಸಮಯ ಸಿಕ್ಕಾಗೆಲ್ಲ, ಗೆಳೆಯರ ಜತೆ ಅವರು ಕ್ರಿಕೆಟ್​ ಆಡುತ್ತಾರೆ.

ಕ್ರಿಕೆಟ್​ ಆಡುವಾಗ ಮೈದಾನದಲ್ಲೇ ಕಿತ್ತಾಡಿಕೊಂಡ ದರ್ಶನ್​-ಅಭಿಷೇಕ್​; ಅಸಲಿಗೆ ಅಲ್ಲಿ ನಡೆದಿದ್ದೇನು?
ಕ್ಯೂಟ್​ ಕ್ಯೂಟ್​ ಆಗಿ ಕಿತ್ತಾಡಿಕೊಂಡ ದರ್ಶನ್​-ಅಭಿಷೇಕ್​
ರಾಜೇಶ್ ದುಗ್ಗುಮನೆ
|

Updated on:Mar 27, 2021 | 4:56 PM

Share

ನಟ ಅಭಿಷೇಕ್​ ಅಂಬರೀಷ್​​ ಹಾಗೂ ಚಾಲೆಂಜಿಂಗ್ ಸ್ಟಾರ್​ ದರ್ಶನ್​ ಈ ಮೊದಲಿನಿಂದಲೂ ಗೆಳೆಯರು. ಅಂಬರೀಷ್​ ಜತೆ ದರ್ಶನ್​ ಒಳ್ಳೆಯ ಒಡನಾಟ ಹೊಂದಿದ್ದರು. ಹೀಗಾಗಿ, ಅಭಿಷೇಕ್​-ದರ್ಶನ್​ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿ ಆಗಿದೆ. ಅನೇಕ ಬಾರಿ ಅಭಿಷೇಕ್​ ನನ್ನ ತಮ್ಮ ಎಂದೇ ಹೇಳಿಕೊಂಡಿದ್ದಾರೆ ದರ್ಶನ್​. ಈಗ ಇದು ಮತ್ತೊಮ್ಮೆ ಸಾಬೀತಾಗಿದೆ. ಕ್ರಿಕೆಟ್​ ಮೈದಾನದಲ್ಲಿ ದರ್ಶನ್​-ಅಭಿಷೇಕ್​ ಅಣ್ಣ ತಮ್ಮಂದಿರಂತೆ ಜಗಳವಾಡಿದ್ದಾರೆ. ಈ ವಿಡಿಯೋ ಈಗ ಸಾಕಷ್ಟು ವೈರಲ್​ ಆಗಿದೆ. ದರ್ಶನ್​ ಆಗಾಗ ಗೆಳೆಯರ ಜತೆ ಕೂಡಿ ಟ್ರಿಪ್​ ಹೋಗುತ್ತಿರುತ್ತಾರೆ. ಫೋಟೋಗ್ರಫಿ ಬಗ್ಗೆ ಪ್ರೀತಿ ಹೆಚ್ಚಿರುವುದರಿಂದ ಕಾಡಿಗೆ ಹೋಗಿ ಛಾಯಾಗ್ರಾಹಣ ಮಾಡುತ್ತಾರೆ. ಇದರ ಜತೆಗೆ ದರ್ಶನ್​ಗೆ ಕ್ರಿಕೆಟ್​ ಆಡುವುದು ಎಂದರೆ ತುಂಬಾನೇ ಪ್ರೀತಿ. ಸಮಯ ಸಿಕ್ಕಾಗೆಲ್ಲ, ಗೆಳೆಯರ ಜತೆ ಅವರು ಕ್ರಿಕೆಟ್​ ಆಡುತ್ತಾರೆ.

ಇತ್ತೀಚೆಗೆ ಕೂಡ ದರ್ಶನ್​-ಅಭಿಷೇಕ್​ ಕ್ರಿಕೆಟ್​ ಆಡೋಕೆ ತೆರಳಿದ್ದಾರೆ. ಕ್ರಿಕೆಟ್​ ಆಡುವ ವೇಳೆ ಇಬ್ಬರೂ ಸಣ್ಣ ವಿಚಾರಕ್ಕೆ ಪರಸ್ಪರ ಕಾಲೆಳೆದುಕೊಂಡಿದ್ದಾರೆ. ಮೋಸ ಮಾಡ್ತಾ ಇರ್ತಾರೆ. ಆದರೂ ಗೆಲ್ಲಬೇಕು. ಇಟ್ಸ್​ ಒಕೆ ಎಂದು ಅಭಿಷೇಕ್​ ಗೆಳೆಯರನ್ನು ಕರೆದುಕೊಂಡು ಹೊರಟಿದ್ದಾರೆ. ಈ ವೇಳೆ ಅಭಿಷೇಕ್​ ಹಿಂಭಾಗಕ್ಕೆ ಒದೆಯೋಕೆ ಹೋಗಿದ್ದಾರೆ ದರ್ಶನ್​. ಆಗ ಅಭಿಷೇಕ್​ ನಗುತ್ತಲೇ ತಪ್ಪಿಸಿಕೊಂಡಿದ್ದಾರೆ.

ಸದ್ಯ, ಈ ಕ್ಯೂಟ್​ ಫೈಟ್​ ವಿಡಿಯೋ ಸಾಕಷ್ಟು ವೈರಲ್​ ಆಗಿದೆ. ದರ್ಶನ್​-ಅಭಿಷೇಕ್​ ಸ್ವಂಥ ಅಣ್ಣ ತಮ್ಮರಂತೆ ನಡೆದುಕೊಳ್ಳುತ್ತಿರುವುದನ್ನು ನೋಡಿ ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ.

ಸಿನಿಮಾ ವಿಚಾರಕ್ಕೆ ಬರುವುದಾದರೆ, ದರ್ಶನ್​ ನಟನೆಯ ರಾಬರ್ಟ್​ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಒಳ್ಳೆಯ ಕಲೆಕ್ಷನ್​ ಮಾಡುತ್ತಿದೆ. ಶೀಘ್ರವೇ ಸಿನಿಮಾ 100 ಕೋಟಿ ಕ್ಲಬ್​ ಸೇರುವ ಎಲ್ಲಾ ಲಕ್ಷಣವಿದೆ. ಅಭಿಷೇಕ್​ ಅಂಬರೀಷ್​, ಬ್ಯಾಡ್​ಮ್ಯಾನರ್ಸ್​ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರಚಿತಾ ರಾಮ್​ ಚಿತ್ರದ ನಾಯಕಿ. ದುನಿಯಾ ಸೂರಿ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಇದನ್ನೂ ಓದಿ: Roberrt: ರಾಜ್ಯಾದ್ಯಂತ ಇನ್ಮೇಲೆ ಡಿ ಬಾಸ್​ ಜಾತ್ರೆ! ಫ್ಯಾನ್ಸ್​ಗೆ ಧನ್ಯವಾದ ಹೇಳಲು ದರ್ಶನ್​ ದೊಡ್ಡ ನಿರ್ಧಾರ!

ದರ್ಶನ್​-ಸುದೀಪ್​ ಒಂದಾಗಿಸಲು ಪಣ ತೊಟ್ಟ ಫ್ಯಾನ್ಸ್​! ಈ ಮನವಿಗೆ ಒಪ್ಪಿಕೊಳ್ತಾರಾ ಕಿಚ್ಚ-ದಚ್ಚು?

Published On - 4:56 pm, Sat, 27 March 21

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More