Drug Case​: ಡ್ರಗ್​ ಕೇಸ್​ನಲ್ಲಿ CCB ಬಿಜಿಯಾಗಿದ್ದಾಗ ಸ್ಟಾರ್ ಹೋಟೆಲ್​ನಲ್ಲಿ ನಡೆಯುತ್ತಿತ್ತು ಹೈಫೈ ಡ್ರಗ್​ ಪಾರ್ಟಿಗಳು! 5 ಮಂದಿ ಅರೆಸ್ಟ್

Drug Scandal: ಸಿಸಿಬಿ ಅಧಿಕಾರಿಗಳು ಮತ್ತು ಬೆಂಗಳೂರು ಪೊಲೀಸರ ಖಡಕ್ ಕಾರ್ಯಾಚರಣೆ ನಡುವೆಯೂ ಸದ್ದಿಲ್ಲದೆ ಹೈಫೈ ಡ್ರಗ್​ ಪಾರ್ಟಿಗಳು ನಡೆಯುತ್ತಿದ್ದು, ನಶೆಯಲ್ಲಿ ತೇಲಿಸುತಿದ್ದ ಡ್ರಗ್​ ಪೆಡ್ಲರ್​ ಗ್ಯಾಂಗ್ ಅನ್ನು ಇದೀಗ ಜೆಪಿ ನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

Drug Case​: ಡ್ರಗ್​ ಕೇಸ್​ನಲ್ಲಿ CCB ಬಿಜಿಯಾಗಿದ್ದಾಗ ಸ್ಟಾರ್ ಹೋಟೆಲ್​ನಲ್ಲಿ ನಡೆಯುತ್ತಿತ್ತು ಹೈಫೈ ಡ್ರಗ್​ ಪಾರ್ಟಿಗಳು! 5 ಮಂದಿ ಅರೆಸ್ಟ್
ಡೋಸಾ ಖಲಿಫಾ, ಶೋಹಿಬ್ ಉದ್ದಿನ್, ಮುಜಾಮಿಲ್ ಮತ್ತು ಬಿಡಿಎ ರವಿ
Follow us
| Updated By: Digi Tech Desk

Updated on:Feb 11, 2021 | 2:32 PM

ಬೆಂಗಳೂರು: ಸಿಸಿಬಿ ಅಧಿಕಾರಿಗಳು ಮತ್ತು ಬೆಂಗಳೂರು ಪೊಲೀಸರ ಖಡಕ್ ಕಾರ್ಯಾಚರಣೆ ನಡುವೆಯೂ ರಾಜಧಾನಿಯ ಸ್ಟಾರ್ ಹೋಟೆನಲ್ಲಿ ಸದ್ದಿಲ್ಲದೆ ಹೈಫೈ ಡ್ರಗ್​ ಪಾರ್ಟಿಗಳು ನಡೆಯುತ್ತಿದ್ದು, ನಶೆಯಲ್ಲಿ ತೇಲಿಸುತಿದ್ದ ಡ್ರಗ್​ ಪೆಡ್ಲರ್​ ಗ್ಯಾಂಗ್ ಅನ್ನು ಇದೀಗ ಜೆಪಿ ನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸಿಸಿಬಿ ಪೊಲೀಸರು ಡ್ರಗ್​ ಕೇಸ್​ನಲ್ಲಿ ಹೆಚ್ಚು ಸುದ್ದಿಯಾಗಿದ್ದಾಗ ಡ್ರಗ್​ ಪೆಡ್ಲರ್​ ಗ್ಯಾಂಗ್ ಸದ್ದಿಲ್ಲದೆ ಕುಮಾರಸ್ವಾಮಿ ಲೇಔಟ್​ನಲ್ಲಿ ಡ್ರಗ್ಸ್ ಪಾರ್ಟಿ ನಡೆಸುತ್ತಿದ್ದರು. ಪೊಲೀಸರು ಸದ್ಯ ಒಟ್ಟು ಐದು ಜನರನ್ನು ಅರೆಸ್ಟ್ ಮಾಡಿದ್ದಾರೆ. ಇನ್ನಷ್ಟು ಜನರು ಅರೆಸ್ಟ್ ಅಗುವ ಸಾಧ್ಯೆತೆಯಿದೆ ಎಂದು ಜೆಪಿ ನಗರ ಪೊಲೀಸರು ತಿಳಿಸಿದ್ದಾರೆ.

ಬಂಧಿತ ಗ್ಯಾಂಗ್ ಸದಸ್ಯರು ಮೂರು ತಿಂಗಳಿಂದ ಸ್ಟಾರ್ ಹೋಟೆಲ್​ನಲ್ಲಿ ಪಾರ್ಟಿ ಆಯೋಜಿಸುತ್ತಿದ್ದರು. ಜೆ.ಪಿ. ನಗರದ ಹರಿಕ್ ಬೋಟೆಕ್ ಹೋಟೆಲ್​ನಲ್ಲಿ ಈ ಪಾರ್ಟಿ ಮಾಡ್ತಿದ್ರು. ವಿಶೇಷವಾಗಿ ಪ್ರತಿ ಶುಕ್ರವಾರದಂದು ಹೋಟೆಲ್​ನಲ್ಲಿ ಡ್ರಗ್​ ಪಾರ್ಟಿ ನಡೆಯುತಿತ್ತು. ಪಾರ್ಟಿಗಾಗಿ ಹೋಟೆಲಿನಲ್ಲಿ ಹಲವಾರು ರೂಂಗಳನ್ನು ಬುಕ್ ಮಾಡುತಿದ್ದ ಗ್ಯಾಂಗ್, ಹೋಟೆಲ್ ರೂಮ್​ನಲ್ಲಿ ಡ್ರಗ್ಸ್ ನೀಡ್ತಿದ್ದರು. ಕಸ್ಟಮರ್​ಗಳು ರೂಮ್​ನಲ್ಲಿ ಇದ್ದುಕೊಂಡು ಡ್ರಗ್ಸ್ ಪಡೆದು ಮಜಾ ಮಾಡ್ತಿದ್ರು.

Drug racket kingpin ಮುಜಾಮಿಲ್ ಅಲ್ಬಬ್ ಸಾಂಗ್​ನಲ್ಲಿ ನಟಿಸಿದ್ದ

ಮಹಮದ್ ಮೆಜಾಮಿಲ್ ಈ ಡ್ರಗ್​ ರಾಕೆಟ್​ನ ಕಿಂಗ್ ಪಿನ್. ಟೂರಿಸ್ಟ್ ಏಜೆನ್ಸಿಯಲ್ಲಿ ಕೆಲಸ ಮಾಡ್ತಿದ್ದ ಈ ಎ1 ಅರೋಪಿಯು ಮಸ್ತ್ ಪ್ಲಾನ್ ಮಾಡುತ್ತಿದ್ದ. ನಾಲ್ಕು ವರ್ಷಗಳಿಂದ ಶ್ರೀಲಂಕಾದಲ್ಲಿ ಟೂರಿಸ್ಟ್ ಏಜೆನ್ಸಿಯಲ್ಲಿ ಕೆಲಸ ಮಾಡಿದ್ದ ಅರೋಪಿ ಮಹಮದ್ ಮೆಜಾಮಿಲ್. ಶ್ರೀಲಂಕಾದ ಕಾಸಿನೊಗೂ ಲಿಂಕ್ ಹೊಂದಿದ್ದ ಮಜಾಮಿಲ್ ಕೊವಿಡ್ ನಂತ್ರ ಬೆಂಗಳೂರಿಗೆ ತನ್ನ ಠಿಕಾಣಿ ಬದಲಿಸಿದ್ದ. ಬಳಿಕ ಇಲ್ಲಿಯೇ ಪ್ಲಾನ್ ಮಾಡಿ ಡ್ರಗ್ಸ್ ದಂದೆ ನಡೆಸುತ್ತಿದ್ದ.

ಅರೋಪಿ ಮುಜಾಮಿಲ್ ಅಲ್ಬಬ್ ಸಾಂಗ್​ನಲ್ಲಿ ನಟಿಸಿದ್ದ. ಒಂದು ವರ್ಷದ ಹಿಂದೆ ಹಿಂದಿ ಭಾಷೆಯಲ್ಲಿ ಒಂದು ಅಲ್ಬಂ ಸಾಂಗ್ ಮಾಡಿದ್ದ. ಈ ಹಾಡು ಒಂದು ವರ್ಷ 2019 ಫೆಬ್ರವರಿ ತಿಂಗಳಲ್ಲಿ ಅಪ್​ಲೋಡ್ ಅಗಿತ್ತು. ಎರಡು ವರ್ಷಗಳ ಹಿಂದೆ ಅರೋಪಿ ಮುಜಾಮಿಲ್ ಮಾಲ್ಡೀವ್ಸ್ ನಲ್ಲಿ ಸಾಂಗ್ ಚಿತ್ರೀಕರಣ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಜಾಲದಲ್ಲಿ ಸಿಕ್ಕಿಬಿದ್ದ ಬಿಡಿಎ ರವಿಕುಮಾರ್ ಡ್ರಗ್ಸ್ ಮಾರಾಟ ಜಾಲದಲ್ಲಿ ಸಿಕ್ಕಿಬಿದ್ದ ಬಿಡಿಎ ರವಿಕುಮಾರ್ ಅಲಿಯಾಸ್ ಬಿಡಿಎ ರವಿ ಬಂಧಿತ ಅರೋಪಿ. ಈ ಹಿಂದೆ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ರವಿ. ನಂತರದಲ್ಲಿ ಬಿಡಿಎ ಬ್ರೋಕರ್ ಅಗಿ ಹಂತ ಹಂತವಾಗಿ ಹಣ ಗಳಿಸಿದ್ದ. ಈ ಪ್ರಭಾವಿಗಳೊಂದಿಗೆ ಸ್ನೇಹ ಬಳಸಿ ವಿಲಾಸಿ ಜೀವನ ನಡೆಸುತಿದ್ದ. ಕೊಲೊಂಬೋದ ಕ್ಯಾಸಿನೋಗೂ ರವಿ ಹೋಗ್ತಿದ್ದ. ಈ ನಡುವೆ ಮುಜಾಮಿಲ್ ಪರಿಚಯ ಮಾಡಿಕೊಂಡಿದ್ದ. ನಂತರ ಪ್ಲಾನ್ ಮಾಡಿ ಇಂಟರ್​ ನ್ಯಾಷನಲ್ ಡ್ರಗ್ಸ್ ತರಿಸುತ್ತಿದ್ದ.

ಜಾಲದಲ್ಲಿ ವಿದೇಶಿ ಫುಟ್ಬಾಲ್ ಆಟಗಾರನೂ ಅರೆಸ್ಟ್

ಡ್ರಗ್ಸ್ ಜಾಲದಲ್ಲಿ ವಿದೇಶಿ ಫುಟ್ಬಾಲ್ ಆಟಗಾರನೊಬ್ಬನ ಬಂಧನವೂ ಆಗಿದೆ. ಐವರಿ ಕೋಸ್ಟ್ ದೇಶದ ಡೊಸ್ಸೊ ಖಲೀಫಾ ಬಂಧಿತ ಅರೋಪಿ. 2015 ರಲ್ಲಿ ಅರೋಪಿಯು ಕ್ರೀಡಾ ವೀಸಾ ಪಡೆದು ಭಾರತಕ್ಕೆ ಅಗಮಿಸಿದ್ದ. ಅರೋಪಿಯು ದೆಹಲಿ ಮತ್ತು ಕೋಲ್ಕತ್ತಾದಲ್ಲಿ ಹಲವು ದಿನಗಳ ಕಾಲ ವಾಸ ಮಾಡಿದ್ದ ಎಂದು ತಿಳಿದುಬಂದಿದೆ.

2018 ರಲ್ಲಿ ಬೆಂಗಳೂರಿಗೆ ಬಂದಿದ್ದ ಖಲಿಫಾ ಡ್ರಗ್ಸ್ ಜಾಲದಲ್ಲಿ ಸಕ್ರಿಯನಾಗತೊಡಗಿದ್ದ. ಇದೇ ಫುಟ್ಬಾಲ್ ಆಟಗಾರ ಬಿಡಿಎ ರವಿ ಹಾಗೂ ಶೋಹೆಬ್ ಬುದ್ದಿನ್​ಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ. ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ಭಾರತದಲ್ಲಿ ನೆಲಸಿದ್ದ. ಡ್ರಗ್ಸ್ ಪಾರ್ಟಿಯಲ್ಲಿ ಶ್ರೀಮಂತ ಉದ್ಯಮಿಗಳ ಮಕ್ಕಳು, ರಿಯಲ್ ಎಸ್ಟೇಟ್ ಉದ್ಯಮಿಗಳು ಹಾಗೂ ಅವರ ಮಕ್ಕಳು ಭಾಗಿಯಾಗುತ್ತಿದ್ದರು ಎನ್ನಲಾಗಿದೆ.

ಇದನ್ನೂ ಓದಿ: Nigerian drug peddler arrested ಬೆಂಗಳೂರಿನಲ್ಲಿ ಡ್ರಗ್ಸ್ ಮಾರುತ್ತಿದ್ದ ವಿದೇಶಿ ಪ್ರಜೆ ಬಂಧನ, ಕಾರು ಜಪ್ತಿ

Published On - 12:26 pm, Thu, 11 February 21

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ