AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫಾರೂಕ್ ಸನದಿ ಕೊಲೆ ರಹಸ್ಯ ಬಯಲು: ಪ್ರೇಯಸಿ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಕ್ಕೆ ಹತ್ಯೆಗೈದ ಪ್ರಿಯಕರ

ಯುವಕನ ಕತ್ತು ಕೊಯ್ದು ಭೀಕರ ಹತ್ಯೆ ಮಾಡಿರುವ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಸಮೀಪದ ಜಮೀನೊಂದರಲ್ಲಿ ನಡೆದಿದ್ದು, ಈ ಘಟನೆ ಗ್ರಾಮಸ್ಥರನ್ನು ಬಿಚ್ಚಿಬೀಳಿಸಿದೆ. ಹೊಸ ಬಾಳಿಗೆ ಕಾಲುಡುತ್ತಿದ್ದ ಫಾರೂಕ್ ಸನದಿ ಎನ್ನುವ ಯುವಕನನ್ನ ಬರ್ಬರವಾಗಿ ಹತ್ಯೆ ಮಾಡಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದಾಗ ಕೊಲೆ ರಹಸ್ಯ ಬಯಲಿಗೆ ಬಂದಿದೆ. ಹಾಗಾದ್ರೆ, ಫಾರೂಕ್ ಸನದಿಯನ್ನು ಕೊಲೆ ಮಾಡಿದ್ಯಾರು? ಕಾರಣವೇನು ಎನ್ನುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ಫಾರೂಕ್ ಸನದಿ ಕೊಲೆ ರಹಸ್ಯ ಬಯಲು: ಪ್ರೇಯಸಿ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಕ್ಕೆ ಹತ್ಯೆಗೈದ ಪ್ರಿಯಕರ
Faruq Sanadi
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Edited By: |

Updated on: Mar 01, 2026 | 5:59 PM

Share

ಗದಗ, (ಮಾರ್ಚ್ 01): ಜಿಲ್ಲೆಯ ಲಕ್ಷ್ಮೇಶ್ವರ ಹೊರವಲಯದ ಜಮೀನಲ್ಲಿ ಯುವಕ ಫಾರೂಕ್ ಸನದಿ (faruq sanadi Murder Case) ಎನ್ನುವಾತನನ್ನು ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ್ದು, ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ನಿಶ್ವಿತಾರ್ಥ ಮಾಡಿಕೊಂಡಿದ್ದ ಹುಡುಗಿ ಪ್ರಿಯಕರನೇ ಫಾರೂಕ್ ಸನದಿಯನ್ನು ಕೊಲೆ ಮಾಡಿರುವುದು ಎಂದು ಗೊತ್ತಾಗಿದೆ. ಪ್ರಿಯಕರ ದಾವಲಸಾಬ್ ಹಾಗೂ ಸ್ನೇಹಿತ ಮಕ್ಕಬೂಲ್ ಸಾಬ್ ಹಾಗೂ ಇಬ್ಬರು ಅಪ್ರಾಪ್ತರು ಸೇರಿಕೊಂಡು ಕೊಲೆ ಮಾಡಿರುವುದು ಬೆಳಕಿಗೆ ಬಂದಿದ್ದು, ಹತ್ಯೆ ನಡೆದ 24 ಗಂಟೆಯಲ್ಲಿ ನಾಲ್ಕು ಜನರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಪೊಲೀಸರು ತಮ್ಮದೇ ಶೈಲಿಯಲ್ಲಿ ಹಂತಕರನ್ನು ವಿಚಾರಣೆಗೊಳಪಡಿಸಿದಾಗ ತನ್ನ ಹುಡುಗಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಕ್ಕೆ ಫಾರೂಕ್ ಸನದಿ ಕೊಲೆ ಮಾಡಿದ್ದಾಗಿ ದಾವಲಸಾಬ್ ಬಾಯ್ಬಿಟ್ಟಿದ್ದಾನೆ.

ಗದಗ ಜಿಲ್ಲೆ ಲಕ್ಷ್ಮೇಶ್ವರ ಶಿಗ್ಲಿ ಗ್ರಾಮದ ನಿವಾಸಿಯಾದ‌ 25 ವರ್ಷದ ಫಾರೂಕ್ ಸನದಿ ಎನ್ನುವಾತ ಮೂರು ತಿಂಗಳ ಹಿಂದೆ ಯುವತಿ ಜೊತೆಗೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದ. ಆದ್ರೆ ಯುವತಿ ಹಾಗೂ ಧಾರವಾಡ ಜಿಲ್ಲೆ ಅಣ್ಣಿಗೇರಿ ಪಟ್ಟಣದ ನಿವಾಸಿಯಾದ ದಾವಲಸಾಬ್ ಮಕಂದಾರ್ ಲವ್ ಮಾಡುತ್ತಿದ್ದಳು. ಹೀಗಾಗಿ ದಾವಲಸಾಬ್, ನಿಶ್ವಿತಾರ್ಥ ಮಾಡಿಕೊಡಿದ್ದ ಫಾರೂಕ್ ಸನದಿಯನ್ನು ಮಾತನಾಡಲೆಂದು ಜಮೀನಿಗೆ ಕರೆಯಿಸಿಕೊಂಡಿದ್ದು, ಈ ವೇಳೆ ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಗಲಾಟೆಯಾಗಿದೆ. ಬಳಿಕ ಗಲಾಟ ವಿಕೋಪಕ್ಕೆ ತಿರುಗಿದ್ದು, ಇದೇ ಕೋಪದಲ್ಲಿ ಕೊಡಲಿಯಿಂದ ಫಾರೂಕ್ ಸವದಿಯನ್ನು ಕೊಚ್ಚಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದರು.

ಇದನ್ನೂ ಓದಿ: ಭೀಕರ ಅಪಘಾತ : ದೇವರ ದರ್ಶನಕ್ಕೆ ಹೋಗಿ ಬರುತ್ತಿದ್ದ ನವದಂಪತಿ ಸ್ಥಳದಲ್ಲೇ ಸಾವು

ಘಟನೆ ಹಿನ್ನೆಲೆ

ಗದಗ ಜಿಲ್ಲೆಯ ಲಕ್ಷ್ಮೇಶ್ವರ ಸಮೀಪದ ಜಮೀನುವೊಂದರಲ್ಲಿ ನಿನ್ನೆ (ಫೆಬ್ರವರಿ 28) ಫಾರೂಕ್ ಸನದಿಯನ್ನು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದರು. ಕತ್ತು ಕೊಯ್ದು ಬಳಿಕ ಹತ್ಯೆ ಮಾಡಿದ್ದರು. ಕೊಲೆ ಮಾಹಿತಿ ಸಿಕ್ಕ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಪೊಲೀಸ್ರು ಹಂತಕರ ಸುಳಿವಿಗಾಗಿ ತೀವ್ರ ಶೋಧ ನಡೆಸಿದ್ದರು. ಸ್ಥಳಕ್ಕೆ ಗದಗ ಎಸ್ಪಿ ರೋಹನ‌್ ಜಗದೀಶ್, ಡಿವೈಎಸ್ಪಿ ಮುರ್ತುಜ ಖಾದ್ರಿ ಸೇರಿ ಅಧಿಕಾರಿಗಳು ದೌಡಾಯಿಸಿ ಹಂತಕರ ಪತ್ತೆಗೆ ತಂಡಗಳು ರಚನೆ ಮಾಡಿದ್ದರು. ಬಳಿಕ ಪೊಲೀಸರು ಎಲ್ಲಾ ಆಯಾಮಾಗಳಲ್ಲಿ ತನಿಖೆ ನಡೆಸಿ ಅಂತಿಮವಾಗಿ ಘಟನೆ ನಡೆದ 24 ಗಂಟೆಗಳಲ್ಲಿ ಹಂತಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮದುವೆಯಾಗಿ ಸುಂದರ ಜೀವನ ಮಾಡಬೇಕು ಎಂದು ಕನಸು ಕಂಡಿದ್ದ ಫಾರೂಕ್ ಸಾವಿನ ಮನೆ ಸೇರಿದ್ದಾನೆ. ಏನು ತಪ್ಪು ಮಾಡದ ಯುವಕ ಹತ್ಯೆಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಸಂಜೀವ ಕುಮಾರ್​ ಪಾಂಡ್ರೆ, ಗದಗ
ಸಂಜೀವ ಕುಮಾರ್​ ಪಾಂಡ್ರೆ, ಗದಗ

ಸಂಜೀವಕುಮಾರ. ರಾ. ಪಾಂಡ್ರೆ, ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದವರು. ಸಧ್ಯ ಟಿರ್ವಿ ವಾಹಿನಿಯ ಗದಗ ಜಿಲ್ಲಾ ಹಿರಿಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಎ., ಡಿಪ್ಲೋಮಾ ಇನ್ ಜರ್ನಲಿಸಮ್ ಹಾಗೂ ಅಪ್ಟೇಕ್ ನಲ್ಲಿ ಕಂಪ್ಯೂಟರ್ (HDSE) ಓದಿರುವ ಇವರು. ವಿಜಯಪುರದ‌‌ ಪಿಡಿಜೆ ಹೈಸ್ಕೂಲ್ ನಲ್ಲಿ ಎರಡು ವರ್ಷ ಕಂಪ್ಯೂಟರ್ ಶಿಕ್ಷಕನಾಗಿ ಕಾರ್ಯ ನಿರ್ವಹಿಸಿದ್ದಾರೆ. 20 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದು, 2004ರಲ್ಲಿ ಮುದ್ರಣ ಮಾಧ್ಯಮದ‌ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ್ದು, ನಂತರ 2007ರಿಂದ ಎಲೇಕ್ಟ್ರಾನಿಕ್‌ ಮಾಧ್ಯಮದಲ್ಲಿ ಸೇವೆ ಆರಂಭಿಸಿದ್ದಾರೆ. ಟಿರ್ವಿ ವಾಹಿನಿಯಲ್ಲಿ ಬಾಗಲಕೋಟೆ, ವಿಜಯಪುರ ನಂತರ ಗದಗ ಜಿಲ್ಲೆಯ ವರದಿಗಾರರಾಗಿ 15 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಕ್ರೀಡೆ, ಸಂಗೀತ ಹವ್ಯಾಸವಾಗಿದೆ...

Read More
ಕೊಲ್ಲೂರಿಗೆ ತಮಿಳುನಾಡು ಸಿಎಂ: ಅರ್ಚಕ ನಿತ್ಯಾನಂದ ಅಡಿಗ ಮಹತ್ವದ ಮಾಹಿತಿ
ಕೊಲ್ಲೂರಿಗೆ ತಮಿಳುನಾಡು ಸಿಎಂ: ಅರ್ಚಕ ನಿತ್ಯಾನಂದ ಅಡಿಗ ಮಹತ್ವದ ಮಾಹಿತಿ
ಕಬಿನಿ ಡ್ಯಾಂ ನೀರಿನಮಟ್ಟ ಭಾರೀ ಕುಸಿತ: ಭೀಕರ ಬರಗಾಲದ ಮುನ್ಸೂಚನೆಯಾ?
ಕಬಿನಿ ಡ್ಯಾಂ ನೀರಿನಮಟ್ಟ ಭಾರೀ ಕುಸಿತ: ಭೀಕರ ಬರಗಾಲದ ಮುನ್ಸೂಚನೆಯಾ?
ತುಂಗಭದ್ರಾ ಒಡಲು ಖಾಲಿ ಖಾಲಿ! ಜಲಾಶಯಲ್ಲಿ ಕೇವಲ 9 TMC ನೀರು ಸಂಗ್ರಹ
ತುಂಗಭದ್ರಾ ಒಡಲು ಖಾಲಿ ಖಾಲಿ! ಜಲಾಶಯಲ್ಲಿ ಕೇವಲ 9 TMC ನೀರು ಸಂಗ್ರಹ
ಗಂಡು ಮಕ್ಕಳಿಗೆ ಕಿವಿ ಚುಚ್ಚಿಸುವುದು ಯಾಕೆ ಗೊತ್ತಾ?
ಗಂಡು ಮಕ್ಕಳಿಗೆ ಕಿವಿ ಚುಚ್ಚಿಸುವುದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಆರ್ಥಿಕ ವಿಷಯದಲ್ಲಿ ಸ್ವಲ್ಪ ತೊಂದರೆ ಕಾಡಬಹುದು
ಇಂದು ಈ ರಾಶಿಯವರ ಆರ್ಥಿಕ ವಿಷಯದಲ್ಲಿ ಸ್ವಲ್ಪ ತೊಂದರೆ ಕಾಡಬಹುದು
ಎತ್ತಿನ ಬದಲು ಹೆಂಡತಿಯನ್ನೇ ನೊಗಕ್ಕೆ ಕಟ್ಟಿ ಹೊಲ ಉಳುಮೆ ಮಾಡಿದ ರೈತ!
ಎತ್ತಿನ ಬದಲು ಹೆಂಡತಿಯನ್ನೇ ನೊಗಕ್ಕೆ ಕಟ್ಟಿ ಹೊಲ ಉಳುಮೆ ಮಾಡಿದ ರೈತ!
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!