AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನನ್ನ ಜೀವನದಲ್ಲಿ ದಿವ್ಯಾಗೆ ಶಾಶ್ವತ ಸ್ಥಾನ; ಮೊದಲು ಇವರೇ, ಕೊನೆಯೂ ಇವರೇ’! ಮಂಜು ಲವ್​ ಇನ್ನಷ್ಟು ಸೀರಿಯಸ್​

Bigg Boss Kannada: ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್​ ನಡುವಿನ ಪ್ರೇಮ್​ ಕಹಾನಿ ಬೇರೊಂದು ಹಂತಕ್ಕೆ ತಲುಪಿದೆ. ಹಾಗಾಗಿ ಇಬ್ಬರೂ ವೈಷ್ಣವಿ ಬಳಿ ಕೌನ್ಸಲಿಂಗ್​ ಪಡೆದುಕೊಂಡಿದ್ದಾರೆ!

‘ನನ್ನ ಜೀವನದಲ್ಲಿ ದಿವ್ಯಾಗೆ ಶಾಶ್ವತ ಸ್ಥಾನ; ಮೊದಲು ಇವರೇ, ಕೊನೆಯೂ ಇವರೇ’! ಮಂಜು ಲವ್​ ಇನ್ನಷ್ಟು ಸೀರಿಯಸ್​
ಮಂಜು ಪಾವಗಡ - ದಿವ್ಯಾ ಸುರೇಶ್​
ಮದನ್​ ಕುಮಾರ್​
|

Updated on: Mar 30, 2021 | 12:41 PM

Share

ಬಿಗ್​ ಬಾಸ್​ ಕನ್ನಡ ಸೀಸನ್​ 8ರಲ್ಲಿ ಅತಿ ಹೆಚ್ಚು ಗಮನ ಸೆಳೆಯುತ್ತಿರುವ ಜೋಡಿ ಎಂದರೆ ಅದು ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್​. ಮೊದಲ ದಿನದಿಂದಲೂ ಇವರಿಬ್ಬರು ಕೈಕೈ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಈಗ ಒಂದು ಹೆಜ್ಜೆ ಮುಂದೆ ಹೋಗಿ ತಾವಿಬ್ಬರು ಗಂಡ-ಹೆಂಡತಿ ಎಂದೇ ಭಾವಿಸಿಕೊಂಡಿದ್ದಾರೆ! ಹಾಗಾಗಿ ನಟಿ ವೈಷ್ಣವಿ ಗೌಡ ಬಳಿಗೆ ಬಂದು ತಮ್ಮಿಬ್ಬರ ನಡುವಿನ ಕೆಲವೊಂದು ಸಮಸ್ಯೆಗಳಿಗೆ ಕೌನ್ಸಲಿಂಗ್​ ಪಡೆದುಕೊಂಡಿದ್ದಾರೆ. ಈ ಮೂವರ ನಡುವೆ ನಡೆದ ಸಂಭಾಷಣೆ ತುಂಬ ಇಂಟರೆಸ್ಟಿಂಗ್​ ಆಗಿತ್ತು.

‘ಇವಳು ಸುಮ್ಮನೆ ಸಿಟ್ಟು ಮಾಡಿಕೊಳ್ಳುತ್ತಾಳೆ’ ಎಂದು ದಿವ್ಯಾ ಸುರೇಶ್​ ಮೇಲೆ ಮಂಜು ಆರೋಪ ಮಾಡಿದ್ದಾರೆ. ‘ಇವರಿಗೆ ಅನುಸರಿಸಿಕೊಂಡು ಹೋಗುವ ಭಾವನೆಯೇ ಇಲ್ಲ’ ಎಂದು ಮಂಜು ಪಾವಗಡ ಬಗ್ಗೆ ದಿವ್ಯಾ ದೂರಿದ್ದಾರೆ. ಪ್ರೀತಿ ಹೆಚ್ಚಾದಾಗ ಸಿಟ್ಟು ಸಹಜ. ನೀವಿಬ್ಬರು ಮಾದರಿ ಕಪಲ್​. ನಿಮ್ಮನ್ನು ನೋಡಿದರೆ ಹೀಗೆಯೇ ಬದುಕಬೇಕು ಅಂತ ಪ್ರತಿಯೊಬ್ಬರಿಗೂ ಅನಿಸುತ್ತದೆ. ಒಬ್ಬರನ್ನೊಬ್ಬರು ಬಿಟ್ಟುಕೊಡಬಾರದು ಎಂದು ವೈಷ್ಣವಿ ಸಮಾಧಾನ ಮಾಡಲು ಪ್ರಯತ್ನಿಸಿದ್ದಾರೆ.

‘ನನ್ ಪ್ರೀತಿ ಯಾರಿಗ್​ ಕಮ್ಮಿ’ ಎಂದು ಹಾಡಿನ ಮೂಲಕ ದಿವ್ಯಾಳ ಮನವೊಲಿಸಲು ಮಂಜು ಯತ್ನಿಸಿದರು. ‘ನಿನ್ನ ಪ್ರೀತಿ ಎಲ್ಲರಿಗೂ ಜಾಸ್ತಿ. ಅದೇ ತೊಂದರೆ ಆಗುತ್ತಿರುವುದು’ ಎಂದು ದಿವ್ಯಾ ಕಾಲೆಳೆದರು. ‘ಕಟ್ಟಿಕೊಂಡ ಹೆಂಡತಿ ಬಿಟ್ಟು ಊರವರಿಗೆಲ್ಲ ಪ್ರೀತಿ ಕೊಟ್ಟರೆ ಹೆಂಗೆ’ ಎಂದು ಉರಿಯುವ ಬೆಂಕಿಗೆ ವೈಷ್ಣವಿ ತುಪ್ಪ ಸುರಿದರು.

ಅವರ ಜಾಗದಲ್ಲಿ ನಾನು ಎಲ್ಲಿದ್ದೀನಿ? ಯಾವ ಸ್ಥಾನ ತೆಗೆದುಕೊಳ್ಳುತ್ತಿದ್ದೇನೆ ಎಂಬುದೇ ನನಗೆ ಅರ್ಥ ಆಗುತ್ತಿಲ್ಲ ಅಂತ ದಿವ್ಯಾ ಗೊಂದಲ ತೋಡಿಕೊಂಡರು. ‘ನಿನಗೆ ಪ್ರಥಮ ಸ್ಥಾನ ಕೊಟ್ಟಿದ್ದೇನೆ’ ಎಂದರು ಮಂಜು. ‘ನಾನು ಈ ಜಾಗದಿಂದ ಎದ್ದು ಹೋದ ತಕ್ಷಣ ಬೇರೆ ಯಾರಾದರೂ ಬಂದು ಕುಳಿತುಕೊಂಡರೆ ಅವರಿಗೂ ಪ್ರಥಮ ಸ್ಥಾನ ಕೊಡುತ್ತೀಯ’ ಎಂದು ದಿವ್ಯಾ ಪುನಃ ಛಾಟಿ ಬೀಸಿದರು. ‘ನನ್ನ ಜೀವನದಲ್ಲಿ ಶಾಶ್ವತ ಸ್ಥಾನ ಇವರಿಗೆ. ಮೊದಲು ಇವರೇ, ಕೊನೆಯೂ ಇವರೇ. ಸ್ವಲ್ಪ ಪೊಸೆಸಿವ್​ನೆಸ್​ ಇದೆ. ನನಗೆ ಫ್ರೆಂಡ್ಸ್​ ಇದ್ದಾರೆ ಗರ್ಲ್​ಫ್ರೆಂಡ್ಸ್​ ಇಲ್ಲ. ಇಷ್ಟು ಚೆನ್ನಾಗಿ ಇರುವ ಹುಡುಗಿ ನನ್ನ ಜೀವನದಲ್ಲಿ ಸಿಗುವುದಿಲ್ಲ’ ಎಂದು ಮಂಜು ಹೇಳಿದ್ದಾರೆ.

ಇದನ್ನೆಲ್ಲ ನೋಡುತ್ತಿರುವ ವೀಕ್ಷಕರಿಗೆ ಮಂಜು-ದಿವ್ಯಾ ಲವ್​ ಟ್ರ್ಯಾಕ್​ ಎತ್ತೆತ್ತಲೋ ಸಾಗುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ. ಆದರೂ ದಿವ್ಯಾ ನಡವಳಿಕೆ ಕೆಲವೊಮ್ಮೆ ಇದಕ್ಕೆಲ್ಲ ತೀರಾ ವ್ಯತಿರಿಕ್ತ ಆಗಿರುತ್ತದೆ. ಎಲ್ಲರ ಗಮನವನ್ನು ತಮ್ಮತ್ತ ಸೆಳೆದುಕೊಳ್ಳಲು ಅವರು ಈ ರೀತಿ ಡ್ರಾಮಾ ಮಾಡುತ್ತಿದ್ದಾರಾ ಎಂಬ ಅನುಮಾನ ಕೂಡ ಮೂಡದೇ ಇರದು.

ಇದನ್ನೂ ಓದಿ: ಕನ್ನಡ ಬಿಗ್​ ಬಾಸ್​ ಮನೆಗೆ ಬಂದ ಈ ಶೋಭಾ ಯಾರು?; ಸ್ಪರ್ಧಿಗಳಿಗೂ ಕನ್​ಫ್ಯೂಷನ್​!

ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ಸಂಬರಗಿ-ಮಂಜು ನಡುವೆ ಘನಘೋರ ಫೈಟ್​; ಕಾರಣ ಮಾತ್ರ ವಿಚಿತ್ರ!

ನವರಾತ್ರಿ 2ನೇ ದಿನ: ಬ್ರಹ್ಮಚಾರಿಣಿ ಪೂಜೆಯ ಮಹತ್ವ, ಫಲಗಳೇನು? ಇಲ್ಲಿದೆ ನೋಡಿ
ನವರಾತ್ರಿ 2ನೇ ದಿನ: ಬ್ರಹ್ಮಚಾರಿಣಿ ಪೂಜೆಯ ಮಹತ್ವ, ಫಲಗಳೇನು? ಇಲ್ಲಿದೆ ನೋಡಿ
ನವರಾತ್ರಿ ಎರಡನೇ ದಿನದ ದ್ವಾದಶ ರಾಶಿ ಭವಿಷ್ಯ ಹೇಗಿದೆ? ಇಲ್ಲಿದೆ ನೋಡಿ
ನವರಾತ್ರಿ ಎರಡನೇ ದಿನದ ದ್ವಾದಶ ರಾಶಿ ಭವಿಷ್ಯ ಹೇಗಿದೆ? ಇಲ್ಲಿದೆ ನೋಡಿ
ಪಂಜಾಬ್‌ಗೆ ಕೂಡಲೆ ಪ್ರವಾಹ ಪರಿಹಾರ ಪ್ಯಾಕೇಜ್ ಘೋಷಿಸಿ;ರಾಹುಲ್ ಗಾಂಧಿ ಒತ್ತಾಯ
ಪಂಜಾಬ್‌ಗೆ ಕೂಡಲೆ ಪ್ರವಾಹ ಪರಿಹಾರ ಪ್ಯಾಕೇಜ್ ಘೋಷಿಸಿ;ರಾಹುಲ್ ಗಾಂಧಿ ಒತ್ತಾಯ
ಸ್ವದೇಶಿ ಉತ್ಪನ್ನ ಬಳಸಿ; ಭಾರತೀಯರಿಗೆ ಕರೆ ನೀಡಿದ ಸಚಿವ ಅಶ್ವಿನಿ ವೈಷ್ಣವ್
ಸ್ವದೇಶಿ ಉತ್ಪನ್ನ ಬಳಸಿ; ಭಾರತೀಯರಿಗೆ ಕರೆ ನೀಡಿದ ಸಚಿವ ಅಶ್ವಿನಿ ವೈಷ್ಣವ್
ಮುಕಳಪ್ಪ ಹಿಂದೂ ಹುಡ್ಗಿಯನ್ನು ಕರೆದೊಯ್ದು ಮದ್ವೆಯಾಗಿದ್ದೆಲ್ಲಿ?
ಮುಕಳಪ್ಪ ಹಿಂದೂ ಹುಡ್ಗಿಯನ್ನು ಕರೆದೊಯ್ದು ಮದ್ವೆಯಾಗಿದ್ದೆಲ್ಲಿ?
‘ಕಾಂತಾರ’ ಸಿನಿಮಾಗೆ ಅಂಚೆ ಇಲಾಖೆ ಗೌರವ: ವಿಶೇಷ ಅಂಚೆ ಲಕೋಟೆ ಬಿಡುಗಡೆ
‘ಕಾಂತಾರ’ ಸಿನಿಮಾಗೆ ಅಂಚೆ ಇಲಾಖೆ ಗೌರವ: ವಿಶೇಷ ಅಂಚೆ ಲಕೋಟೆ ಬಿಡುಗಡೆ
ಮೈಸೂರು ಬಿಜೆಪಿ ಟಿಕೆಟ್ ಸಿಕ್ಕಿದ್ಹೇಗೆ? ಗುಟ್ಟು ಬಿಚ್ಚಿಟ್ಟ ಯದುವೀರ್​​
ಮೈಸೂರು ಬಿಜೆಪಿ ಟಿಕೆಟ್ ಸಿಕ್ಕಿದ್ಹೇಗೆ? ಗುಟ್ಟು ಬಿಚ್ಚಿಟ್ಟ ಯದುವೀರ್​​
ಅರಮನೆ ದರ್ಬಾರ್‌ ಹಾಲ್‌ನಲ್ಲಿ ಮೇಳೈಸಿದ ರಾಜ ಪರಂಪರೆಯ ಭವ್ಯ ದೃಶ್ಯ
ಅರಮನೆ ದರ್ಬಾರ್‌ ಹಾಲ್‌ನಲ್ಲಿ ಮೇಳೈಸಿದ ರಾಜ ಪರಂಪರೆಯ ಭವ್ಯ ದೃಶ್ಯ
ಭರ್ಜರಿ ಮೆಚ್ಚುಗೆ ಪಡೆದ ಕಾಂತಾರ ಟ್ರೇಲರ್​: ರಿಷಬ್ ಶೆಟ್ಟಿ ಸುದ್ದಿಗೋಷ್ಠಿ
ಭರ್ಜರಿ ಮೆಚ್ಚುಗೆ ಪಡೆದ ಕಾಂತಾರ ಟ್ರೇಲರ್​: ರಿಷಬ್ ಶೆಟ್ಟಿ ಸುದ್ದಿಗೋಷ್ಠಿ
ಹುಬ್ಬಳ್ಳಿಯಲ್ಲಿ ಬೈಕ್‌ ಖರೀದಿಗೆ ಮುಗಿಬಿದ್ದ ಗ್ರಾಹಕರು
ಹುಬ್ಬಳ್ಳಿಯಲ್ಲಿ ಬೈಕ್‌ ಖರೀದಿಗೆ ಮುಗಿಬಿದ್ದ ಗ್ರಾಹಕರು