ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ಸಂಬರಗಿ-ಮಂಜು ನಡುವೆ ಘನಘೋರ ಫೈಟ್​; ಕಾರಣ ಮಾತ್ರ ವಿಚಿತ್ರ!

ಬಿಗ್​ ಬಾಸ್​ ಮನೆಯಲ್ಲಿ ಚದುರಂಗದ ಟಾಸ್ಕ್​ ನೀಡಲಾಗಿದೆ. ಅಂದರೆ, ಒಂದು ತಂಡದವರು ಬಿಳಿ ಬಣ್ಣದ ಕಾಯಿಗಳಾದರೆ, ಮತ್ತೊಂದು ತಂಡದವರು ಕಪ್ಪು ಬಣ್ಣದ ಕಾಯಿಗಳು.

ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ಸಂಬರಗಿ-ಮಂಜು ನಡುವೆ ಘನಘೋರ ಫೈಟ್​; ಕಾರಣ ಮಾತ್ರ ವಿಚಿತ್ರ!
ಪ್ರಶಾಂತ್ ಸಂಬರಗಿ
Follow us
ರಾಜೇಶ್ ದುಗ್ಗುಮನೆ
|

Updated on:Mar 24, 2021 | 3:28 PM

ಬಿಗ್​ ಬಾಸ್​ ಮನೆಯಲ್ಲಿ ಜಗಳಗಳು ಆಗೋದು ಸಾಮಾನ್ಯ. ಇಂದು ಒಟ್ಟಾಗಿದ್ದವರ ನಡುವೆ ನಾಳೆ ಘರ್ಷಣೆ ಏರ್ಪಡಬಹುದು. ಇಂದು ಜಗಳ ಆಡಿಕೊಂಡವರು ನಾಳೆ ಒಂದಾಗಬಹುದು. ಈಗ ಬಿಗ್​ ಬಾಸ್​ ಮನೆಯಲ್ಲಿ ಹಾಗೆಯೇ ಆಗಿದೆ. ಮಾವ-ಅಳಿಯ ಎಂದು ಕರೆದೆಕೊಳ್ಳುತ್ತಿದ್ದ ಪ್ರಶಾಂತ್​ ಸಂಬರಗಿ ಹಾಗೂ ಮಂಜು ಪಾವಗಡ ನಡುವೆ ಯಾರೂ ಊಹಿಸದಷ್ಟು ದೊಡ್ಡ ಮಟ್ಟದಲ್ಲಿ ಜಗಳ ಒಂದು ಏರ್ಪಟ್ಟಿದೆ. ಬಿಗ್​ ಬಾಸ್​ ಮನೆಯಲ್ಲಿ ಚದುರಂಗದ ಟಾಸ್ಕ್​ ನೀಡಲಾಗಿದೆ. ಅಂದರೆ, ಒಂದು ತಂಡದವರು ಬಿಳಿ ಬಣ್ಣದ ಕಾಯಿಗಳಾದರೆ, ಮತ್ತೊಂದು ತಂಡದವರು ಕಪ್ಪು ಬಣ್ಣದ ಕಾಯಿಗಳು. ಇಬ್ಬರ ನಡುವೆ ಬಿಗ್​ ಬಾಸ್​ ಟಾಸ್ಕ್​ ನೀಡುತ್ತಾರೆ. ಈ ಟಾಸ್ಕ್​ಗೆ ತಲೆ ಉಪಯೋಗಿಸಬೇಕು. ಒಂದೊಮ್ಮೆ ಇದರಲ್ಲಿ ಸೋತವರು ಪಂದ್ಯದಿಂದ ಹೊರಗುಳಿಯಬೇಕು.

ಮ್ಯಾಚ್​ ನಡೆಯುವಾಗ ಪಂದ್ಯ ಆಡುವವನು ಮಾತ್ರ ಹೊರಗಿರಬೇಕು. ಉಳಿದ ಸದಸ್ಯರು ಮನೆ ಒಳಗೆ ಇರಬೇಕು. ತಮ್ಮ ತಂಡದ ಸ್ಪರ್ಧಿ ಗೆದ್ದು ಅಥವಾ ಸೋತ ನಂತರವೇ ಉಳಿದವರು ಹೊರಗೆ ಬರಬೇಕು. ಆದರೆ, ಪ್ರಶಾಂತ್​ ಸಂಬರಗಿ ಬೆಲ್​ ಆಗುವ ಮೊದಲೇ ಹೊರ ಬಂದುಬಿಟ್ಟಿದ್ದರು.

ಇದನ್ನು ನೋಡಿದ ಮಂಜುಗೆ ಸಿಟ್ಟು ಬಂದಿದೆ. ಇದನ್ನು ಅವರು ಪ್ರಶ್ನೆ ಕೂಡ ಮಾಡಿದ್ದಾರೆ. ಇದನ್ನು ಸಹಿಸಿಕೊಳ್ಳದ ಸಂಬರಗಿ ಸಿಟ್ಟಾಗಿದ್ದಾರೆ. ನಂಗೂ ಜವಾಬ್ದಾರಿ ಇದೆ. ನಿಂಗೆ ಮಾತ್ರ ಜವಾಬ್ದಾರಿ ಇದೆ ಎಂದುಕೊಳ್ಳಬೇಡ. ಹೌದು, ನೀನೆಕೆ ಆಚೆ ಬಂದೆ ಎಂದು ಪ್ರಶಾಂತ್​ ಸಿಟ್ಟಾಗಿ ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಹೋಗಲೋ ಗುಬಾಲ್​ ಎಂದು ಸಿಟ್ಟಾಗಿದ್ದಾರೆ.

ಈ ವಿಡಿಯೋವನ್ನು ಕಲರ್ಸ್​ ಕನ್ನಡ ವಾಹಿನಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಸದ್ಯ ಈ ವಿಡಿಯೋ ಸಾಕಷ್ಟು ವೈರಲ್​ ಆಗಿದೆ. ಮಾರ್ಚ್​ 24ರ ಸಂಚಿಕೆಯಲ್ಲಿ ಈ ಜಗಳದ ಫುಲ್​ ಡಿಟೇಲ್ಸ್​ ಸಿಗಲಿದೆ.

ಇದನ್ನೂ ಓದಿ: Bigg Boss Kannada: ಬಿಗ್​ ಬಾಸ್ ಕೇಳಿದ 10 ಜನರಲ್​ ನಾಲೆಡ್ಜ್​ ಪ್ರಶ್ನೆಗೆ ಉತ್ತರಿಸದೇ ಸೋತ ಶಮಂತ್​! ನಿಮಗೆ ಉತ್ತರ ಗೊತ್ತಾ?

Published On - 3:28 pm, Wed, 24 March 21

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು