AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BBK8: ನಿಧಿ-ಶುಭಾ ಬಿಗ್​ ಬಾಸ್​ ಮನೆಯ ಗಾಸಿಪ್​ ರಾಣಿಯರು! ಮಲಗುವ ಮುನ್ನ ಬರೀ ಇಂಥ ಮಾತುಗಳೇ

Bigg Boss Kannada: ನಿಧಿ ಸುಬ್ಬಯ್ಯ ಮತ್ತು ಶುಭಾ ಪೂಂಜಾ ನಡುವೆ ಒಳ್ಳೆಯ ಗೆಳತನ ಇದೆ. ಹಾಗಾಗಿ ಅವರು ಬಿಗ್​ ಬಾಸ್​ನಲ್ಲಿ ಜೊತೆಯಾಗಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಗಾಸಿಪ್​ ಮಾಡುವಲ್ಲಿಯೂ ಅವರು ಹಿಂದೆ ಬಿದ್ದಿಲ್ಲ.

BBK8: ನಿಧಿ-ಶುಭಾ ಬಿಗ್​ ಬಾಸ್​ ಮನೆಯ ಗಾಸಿಪ್​ ರಾಣಿಯರು! ಮಲಗುವ ಮುನ್ನ ಬರೀ ಇಂಥ ಮಾತುಗಳೇ
ಶುಭಾ ಪೂಂಜಾ - ನಿಧಿ ಸುಬ್ಬಯ್ಯ
ಮದನ್​ ಕುಮಾರ್​
| Edited By: |

Updated on:Mar 24, 2021 | 5:21 PM

Share

ಬಿಗ್​ ಬಾಸ್​ ಎಂದರೆ ಬರೀ ಟಾಸ್ಕ್​ ಮತ್ತು ಮನರಂಜನೆ ಮಾತ್ರವಲ್ಲ. ಅಲ್ಲಿ ಜಗಳ, ವಿವಾದ, ಗಾಸಿಪ್​ಗಳು ಇದ್ದೇ ಇರುತ್ತವೆ. ಇನ್ನು, ಪ್ರೀತಿ-ಪ್ರೇಮದ ಗುಸುಗುಸು ಕೂಡ ಸಿಕ್ಕಾಪಟ್ಟೆ ಕೇಳಿಬರುತ್ತವೆ. ಸದ್ಯಕ್ಕೆ ಬಿಗ್​ ಬಾಸ್​ ಕನ್ನಡ ಸೀಸನ್​ 8ರಲ್ಲಿ ನಟಿಯರಾದ ಶುಭಾ ಪೂಂಜಾ ಮತ್ತು ನಿಧಿ ಸುಬ್ಬಯ್ಯ ಇಂಥ ಗಾಸಿಪ್​ ಮಾಡುವುದರಲ್ಲಿ ಹೆಚ್ಚು ತೊಡಗಿಕೊಂಡಿದ್ದಾರೆ.

ಬಿಗ್​ ಬಾಸ್​ ಮನೆಯೊಳಗೆ ನಿಧಿ ಮತ್ತು ಶುಭಾ ಪೂಂಜಾ ಯಾರ ಜೊತೆಗೂ ಫ್ಲರ್ಟ್​ ಮಾಡುತ್ತಿಲ್ಲ. ಪ್ರೀತಿ-ಪ್ರೇಮದ ವಿಚಾರದಲ್ಲಿ ಅವರು ಕಟ್ಟುನಿಟ್ಟಾಗಿದ್ದಾರೆ. ಆದರೆ ಕಂಡವರ ಲವ್​ ಸ್ಟೋರಿ ಬಗ್ಗೆ ಮಾತನಾಡುವುದು ಎಂದರೆ ಅವರಿಗೆ ಎಲ್ಲಿಲ್ಲದ ಆಸಕ್ತಿ. ಅದರಲ್ಲೂ ಪ್ರತಿ ರಾತ್ರಿ ಮಲಗುವ ಮುನ್ನ ಅವರಿಬ್ಬರು ಕಂಡ-ಕಂಡವರ ಬಗ್ಗೆ ಮಾತನಾಡುತ್ತ ಗಾಸಿಪ್​ ಮಾಡುತ್ತಿದ್ದಾರೆ.

ಹಾಗಂತ ಈ ಮಾತುಗಳನ್ನು ಅವರು ಎಲ್ಲರ ಎದುರು ಹೇಳುವುದಕ್ಕಿಂತಲೂ ಹೆಚ್ಚಾಗಿ ತಮ್ಮತಮ್ಮಲ್ಲೇ ಗುಗುಗುಸು ಮಾಡುತ್ತಿದ್ದಾರೆ. ರಾತ್ರಿ ಬೆಡ್​ ರೂಮ್​ ಲೈಟ್​ ಆಫ್​ ಆದ ಬಳಿಕ ಶುಭ ಮತ್ತು ನಿಧಿ ಬರೀ ಇಂಥ ವಿಚಾರಗಳನ್ನು ಇಟ್ಟುಕೊಂಡು ಚರ್ಚೆ ಮಾಡುತ್ತಿದ್ದಾರೆ. ಇದು ಬೇರೆಯವರ ಗಮನಕ್ಕೆ ಬರುತ್ತಿಲ್ಲ. ಆದರೆ ಬಿಗ್​ ಕ್ಯಾಮರಾದಲ್ಲಿ ಎಲ್ಲವೂ ಸೆರೆಯಾಗುತ್ತಿದೆ. ಅವರು ಆಡಿದ ಮಾತುಗಳು ಆಗಾಗ ಪ್ರಸಾರ ಆಗುತ್ತಿವೆ.

ಮೊದಲು ಮಂಜು ಮತ್ತು ದಿವ್ಯಾ ಸುರೇಶ್​ ನಡುವಿನ ಒಡನಾಟದ ಬಗ್ಗೆ ನಿಧಿ-ಶುಭಾ ಮಾತನಾಡುತ್ತಿದ್ದರು. ಈಗ ಅವರ ಗಾಸಿಪ್​ಗೆ ಅರವಿಂದ್​ ಕೆ.ಪಿ. ಮತ್ತು ದಿವ್ಯಾ ಉರುಡುಗ ಆಹಾರ ಆಗುತ್ತಿದ್ದಾರೆ. ತಮ್ಮದು ನೇರ ನಡೆ-ನಡಿ ಎಂದು ಹೇಳುಕೊಳ್ಳುವ ಶುಭಾ ಪೂಂಜಾ ರಾತ್ರಿ ಲೈಟ್​ ಆಫ್​ ಆದ ಬಳಿಕ ಹೀಗೆ ಕದ್ದುಮುಚ್ಚಿ ಮಾತನಾಡುವುದನ್ನು ವೀಕ್ಷಕರು ಗಮನಿಸುತ್ತಿದ್ದಾರೆ.

‘ದಿವ್ಯಾ ಉರುಡುಗ ಮತ್ತು ಅರವಿಂದ್​ ಕ್ಲೋಸ್​ ಆಗಿರುವುದು ದಿವ್ಯಾ ಸುರೇಶ್​ಗೆ ಕಿರಿಕಿರಿ ಆಗುತ್ತಿದೆ. ದಿವ್ಯಾ ಬೇಕಂತಲೇ ಅರವಿಂದ್​ ಮೇಲೆ ಹೋಗಿ ಬೀಳ್ತಾ ಇದಾಳೆ. ಆದರೆ ಅರವಿಂದ್​ ದೂರ ದೂರ ಹೋಗುತ್ತಿದ್ದಾನೆ. ಅವಳದ್ದು ಅತಿ ಆಗುತ್ತಿದೆ. ಎಲ್ಲರಿಗೂ ಇದೆಲ್ಲ ನೋಡಿ ಕಿರಿಕಿರಿ ಆಗುತ್ತಿದೆ’ ಎಂದು ನಿಧಿ ಮತ್ತು ಶುಭಾ ಗೊಣಗಿಕೊಂಡಿದ್ದಾರೆ.

ಇದನ್ನೂ ಓದಿ: ಬಾಯ್​ಫ್ರೆಂಡ್​​ ಸುಮಂತ್​ ಮೇಲೆ ಶುಭಾ ಪೂಂಜಾಗೆ ಶುರುವಾಗಿದೆ ಅನುಮಾನ; ಡೌಟ್​ ಡಬಲ್​ ಮಾಡಿದ ಸುದೀಪ್​

ಅಧಿಕಪ್ರಸಂಗ ನಂಗೆ ಇಷ್ಟ ಆಗಲ್ಲ; ತಮ್ಮದೇ ಟೀಂನವರಿಗೆ ಎಚ್ಚರಿಕೆ ಕೊಟ್ಟ ನಿಧಿ ಸುಬ್ಬಯ್ಯ

Published On - 4:10 pm, Wed, 24 March 21

ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ