ಕನ್ನಡ ಹಾಡಿಗೆ ಮತ್ತೆ ಸೊಂಟ ಬಳುಕಿಸೋಕೆ ಬಂದ ಸನ್ನಿ ಲಿಯೋನ್​..

ಸನ್ನಿ ಲಿಯೋನ್​ ಕೂಡ ನಾಲ್ಕೈದು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅವರ ನಟನೆಯ ವೀರ ಮಹಾದೇವಿ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ.

ಕನ್ನಡ ಹಾಡಿಗೆ ಮತ್ತೆ ಸೊಂಟ ಬಳುಕಿಸೋಕೆ ಬಂದ ಸನ್ನಿ ಲಿಯೋನ್​..
ಸನ್ನಿ ಲಿಯೋನ್​
Follow us
ರಾಜೇಶ್ ದುಗ್ಗುಮನೆ
| Updated By: Lakshmi Hegde

Updated on:Mar 24, 2021 | 4:48 PM

ಬಾಲಿವುಡ್​ನಲ್ಲಿ ಮಿಂಚಿರುವ ನಟಿ ಸನ್ನಿ ಲಿಯೋನ್​ ಕನ್ನಡದ ಲವ್​ ಯು ಆಲಿಯಾ ಹಾಗೂ ಡಿಕೆ ಸಿನಿಮಾದ ಹಾಡುಗಳಿಗೆ ಸೊಂಟ ಬಳುಕಿಸಿದ್ದಾರೆ. ನಂತರ ಅವರು ಕನ್ನಡದಲ್ಲಿ ಕಾಣಿಸಿಕೊಂಡಿಲ್ಲ. ಈಗ ಅವರು ಮತ್ತೆ ಕನ್ನಡದ ಹಾಡಿಗೆ ಹೆಜ್ಜೆ ಹಾಕೋಕೆ ರೆಡಿ ಆಗಿದ್ದಾರೆ. ಅಷ್ಟಕ್ಕೂ ಸನ್ನಿ ಕನ್ನಡಕ್ಕೆ ಮತ್ತೆ ಬರೋಕೆ ಕಾರಣ ಏನು? ಯಾವುದು ಆ ಸಿನಿಮಾ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ. ಸಚಿನ್​ ಧನಪಾಲ್- ನಟಿ ಅದಿತಿ ಪ್ರಭುದೇವ ನಟಿಸುತ್ತಿರುವ ‘ಚಾಂಪಿಯನ್’​ ಸಿನಿಮಾದಲ್ಲಿ ಸನ್ನಿ ಲಿಯೋನ್​ ಐಟಮ್​ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಈ ಹಾಡಿನ ಶೂಟಿಂಗ್​ ನಡೆಯುತ್ತಿದೆ. ಇನ್ನು, ಈ ಸಿನಿಮಾದಲ್ಲಿ ಸನ್ನಿ ಲಿಯೋನ್​ ನಟಿಸುತ್ತಿರುವ ವಿಚಾರವನ್ನು ನಟಿ ಅದಿತಿ ಪ್ರಭುದೇವ ಕೂಡ ಖಚಿತಪಡಿಸಿದ್ದಾರೆ.

ಈ ಚಿತ್ರ ಕ್ರೀಡೆಯ ಸುತ್ತ ಹೆಣೆದಿರುವ ಚಿತ್ರ. ಈ ಹಾಡಿನಲ್ಲಿ ಬರುವ ಐಟಂ ಸಾಂಗ್​ನಲ್ಲಿ ಸನ್ನಿ ಲಿಯೋನ್​ ಸಖತ್​ ಆಗಿ ಹೆಜ್ಜೆ ಹಾಕುತ್ತಿದ್ದಾರೆ. ಸಿನಿಮಾದ ಶೂಟಿಂಗ್​ ಈಗಾಗಲೇ ಬಹುತೇಕ ಪೂರ್ಣಗೊಂಡಿದೆ ಎನ್ನಲಾಗಿದೆ. ಸಚಿನ್​ ಧನಪಾಲ್​ ಚಿತ್ರದ ನಾಯಕ. ಅದಿತಿ ಪ್ರಭುದೇವ ಚಿತ್ರದ ನಾಯಕಿ. ಈ ಸಿನಿಮಾ ಇದೇ ವರ್ಷ ತೆರೆಗೆ ಬರುವ ನಿರೀಕ್ಷೆ ಇದೆ. ಸದ್ಯ, ಈ ಸಿನಿಮಾ ಬಹಳಷ್ಟು ನಿರೀಕ್ಷೆ ಮೂಡಿಸಿದೆ.

ನಟಿ ಅದಿತಿ ಪ್ರಭುದೇವ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅವರ ಕೈಯಲ್ಲಿ 10ಕ್ಕೂ ಹೆಚ್ಚು ಸಿನಿಮಾಗಳಿವೆ. ಗಣೇಶ್​ ನಟನೆಯ ತ್ರಿಬಲ್​ ರೈಡಿಂಗ್​ ಚಿತ್ರಕ್ಕೆ ಅದಿತಿ ನಾಯಕಿ. ಇದಲ್ಲದೆ, ತೋತಾಪುರಿ, ತೋತಾಪುರಿ 2, ಓಲ್ಡ್​ ಮಾಂಕ್​, ಒಂಭತ್ತನೆ ದಿಕ್ಕು, ದಿಲ್​ಮಾರ್​ ಮೊದಲಾದ ಸಿನಿಮಾಗಳಲ್ಲಿ ಅದಿತಿ ನಟಿಸುತ್ತಿದ್ದಾರೆ.

ಸನ್ನಿ ಲಿಯೋನ್​ ಕೂಡ ನಾಲ್ಕೈದು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅವರ ನಟನೆಯ ವೀರ ಮಹಾದೇವಿ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಈ ಚಿತ್ರದ ಶೂಟಿಂಗ್​ ಕೂಡ ಸಾಗುತ್ತಿದ್ದು, ಈ ವರ್ಷ ಸಿನಿಮಾ ರಿಲೀಸ್​ ಆಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ಬಿಹಾರದ ವಿದ್ಯಾರ್ಥಿಗೆ ಸನ್ನಿ ಲಿಯೋನ್ ಅಮ್ಮ, ಇಮ್ರಾನ್ ಹಶ್ಮಿ ಅಪ್ಪ!

Published On - 4:45 pm, Wed, 24 March 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ